Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 6:62 - ಕನ್ನಡ ಸಮಕಾಲಿಕ ಅನುವಾದ

62 ಗೇರ್ಷೋಮನ ಪುತ್ರರಿಗೆ ತಮ್ಮ ಕುಟುಂಬಗಳ ಪ್ರಕಾರವೇ ಇಸ್ಸಾಕಾರನ ಗೋತ್ರದಿಂದಲೂ, ಆಶೇರನ ಗೋತ್ರದಿಂದಲೂ, ನಫ್ತಾಲಿಯ ಗೋತ್ರದಿಂದಲೂ, ಬಾಷಾನಿನಲ್ಲಿರುವ ಮನಸ್ಸೆಯ ಗೋತ್ರದಿಂದಲೂ ಹದಿಮೂರು ಪಟ್ಟಣಗಳು ದೊರಕಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

62 ಗೇರ್ಷೋಮ್ಯರ ಕುಟುಂಬಗಳಿಗೆ ಇಸ್ಸಾಕಾರ್, ಆಶೇರ್, ನಫ್ತಾಲಿ, ಬಾಷಾನಿನಲ್ಲಿರುವ ಮನಸ್ಸೆ ಕುಲಗಳ ಸ್ವತ್ತಿನಿಂದ ಹದಿಮೂರು ಪಟ್ಟಣಗಳು ದೊರಕಿದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

62 ಇಸ್ಸಾಕಾರ್, ಆಶೇರ್, ನಫ್ತಾಲಿ ಹಾಗು ಬಾಷಾನಿನ ಪೂರ್ವಮನಸ್ಸೆ ಈ ಪ್ರದೇಶಗಳಲ್ಲಿ ಇದ್ದ ಹದಿಮೂರು ನಗರಗಳನ್ನು ಕುಟುಂಬಗಳಿಗೆ ಅನುಗುಣವಾಗಿ ಗೇರ್ಷೋಮನ ಗೋತ್ರಕ್ಕೆ ಕೊಡಲಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

62 ಗೇರ್ಷೋಮ್ಯರ ಕುಟುಂಬಗಳಿಗೆ ಇಸ್ಸಾಕಾರ್, ಆಶೇರ್, ನಫ್ತಾಲಿ, ಬಾಷಾನಿನಲ್ಲಿರುವ ಅರ್ಧಮನಸ್ಸೆ ಈ ಕುಲಗಳ ಸ್ವಾಸ್ತ್ಯದಿಂದ ಹದಿಮೂರು ಪಟ್ಟಣಗಳು ದೊರಕಿದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

62 ಗೇರ್ಷೋಮ್ಯನ ಸಂತತಿಯವರಿಗೆ ಹದಿಮೂರು ಪಟ್ಟಣಗಳು ದೊರಕಿದವು. ಇವು ಇಸ್ಸಾಕಾರ್, ಆಶೇರ್, ನಫ್ತಾಲಿ ಮತ್ತು ಬಾಷಾನ್ ಪ್ರದೇಶದಲ್ಲಿ ವಾಸವಾಗಿದ್ದ ಅರ್ಧ ಮನಸ್ಸೆ ಕುಲದವರಿಂದ ಆ ಪಟ್ಟಣಗಳು ದೊರೆತವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 6:62
9 ತಿಳಿವುಗಳ ಹೋಲಿಕೆ  

ಆಕೆಯು ಅವನಿಗೆ ಮಗನನ್ನು ಹೆತ್ತಾಗ, ಮೋಶೆಯು ಅವನಿಗೆ ಗೇರ್ಷೋಮ್ ಎಂದು ಹೆಸರಿಟ್ಟನು ಏಕೆಂದರೆ ಅವನು, “ನಾನು ಪರದೇಶದಲ್ಲಿ ಅನ್ಯನಾಗಿದ್ದೇನೆ,” ಎಂದನು.


ಆ ಗೋತ್ರದ ಕುಟುಂಬಗಳಲ್ಲಿ ಉಳಿದ ಕೊಹಾತನ ಪುತ್ರರಿಗೂ ಚೀಟುಹಾಕಿ ಮನಸ್ಸೆಯ ಅರ್ಧ ಗೋತ್ರದಿಂದ ಹತ್ತು ಪಟ್ಟಣಗಳು ದೊರೆತವು.


ಮೆರಾರೀಯ ಪುತ್ರರಿಗೂ ಅವರ ಕುಟುಂಬಗಳ ಪ್ರಕಾರ ಚೀಟುಹಾಕಿ, ರೂಬೇನನ ಗೋತ್ರದಿಂದಲೂ, ಗಾದನ ಗೋತ್ರದಿಂದಲೂ, ಜೆಬುಲೂನನ ಗೋತ್ರದಿಂದಲೂ ಹನ್ನೆರಡು ಪಟ್ಟಣಗಳು ದೊರಕಿದ್ದವು.


ಆ ಎಲ್ಲೆಯು ತಾಬೋರ್, ಶಹಚೀಮಾ, ಬೇತ್ ಷೆಮೆಷ್ ಎಂಬ ಊರುಗಳಿಗೆ ಸೇರಿ ಯೊರ್ದನ್ ನದಿ ತೀರದಲ್ಲಿ ಮುಗಿಯುತ್ತದೆ. ಅಲ್ಲಿ ಹದಿನಾರು ಪಟ್ಟಣಗಳೂ ಅವುಗಳ ಗ್ರಾಮಗಳೂ ಇದ್ದವು.


ಗೇರ್ಷೋನ್ಯರಿಗೆ ಇಸ್ಸಾಕಾರನ ಗೋತ್ರದಲ್ಲಿಯೂ, ಆಶೇರನ ಗೋತ್ರದಲ್ಲಿಯೂ, ನಫ್ತಾಲಿಯ ಗೋತ್ರದಲ್ಲಿಯೂ, ಬಾಷಾನಿನಲ್ಲಿರುವ ಮನಸ್ಸೆಯ ಅರ್ಧ ಗೋತ್ರದಲ್ಲಿಯೂ ಹದಿಮೂರು ಪಟ್ಟಣಗಳು ಚೀಟಿಯಿಂದ ದೊರಕಿದವು.


ಇದಲ್ಲದೆ ಮೆರಾರೀಯರಿಗೆ ಅವರ ಕುಟುಂಬಗಳ ಪ್ರಕಾರ ರೂಬೇನನ ಗೋತ್ರದಲ್ಲಿಯೂ, ಗಾದನ ಗೋತ್ರದಲ್ಲಿಯೂ, ಜೆಬುಲೂನನ ಗೋತ್ರದಲ್ಲಿಯೂ ಹನ್ನೆರಡು ಪಟ್ಟಣಗಳು ದೊರಕಿದವು.


ಅವರ ಸಹೋದರರಾದ ಇತರ ಲೇವಿಯರು ದೇವರ ಮನೆಯ ಗುಡಾರದ ಸಮಸ್ತ ಸೇವೆಗೆ ನೇಮಕವಾಗಿದ್ದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು