1 ಪೂರ್ವಕಾಲ ವೃತ್ತಾಂತ 3:2 - ಕನ್ನಡ ಸಮಕಾಲಿಕ ಅನುವಾದ2 ಗೆಷೂರಿನ ಅರಸನಾಗಿರುವ ತಲ್ಮಾಯನ ಮಗಳಾದ ಮಾಕಳಿಂದ ಹುಟ್ಟಿದ ಅವನ ಮೂರನೆಯ ಮಗ ಅಬ್ಷಾಲೋಮನು, ಹಗ್ಗೀತಳಿಂದ ಹುಟ್ಟಿದ ನಾಲ್ಕನೆಯ ಮಗ ಅದೋನೀಯನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20192 ಮೂರನೆಯವನು ಅಬ್ಷಾಲೋಮ್, ಇವನು ಗೆಷೂರಿನ ಅರಸನಾದ ತಲ್ಮೈ ಎಂಬುವನ ಮಗಳಾದ ಮಾಕಳ ಮಗನು. ನಾಲ್ಕನೆಯವನು ಅದೋನೀಯ. ಇವನು ಹಗ್ಗೀತಳ ಪುತ್ರನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)2 ಅಬ್ಷಾಲೋಮ - ಗೆಷೂರಿನ ಅರಸ ತಲ್ಮೈಯ ಮಗಳು ಮಾಕ ಇವನ ತಾಯಿ. ಅದೋನಿಯ - ಹಗ್ಗೀತ್ ಇವನ ತಾಯಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)2 ಮೂರನೆಯವನು ಅಬ್ಷಾಲೋಮನು; ಇವನು ಗೆಷೂರಿನ ಅರಸನಾದ ತಲ್ಮೈ ಎಂಬವನ ಮಗಳಾದ ಮಾಕಳ ಪುತ್ರನು. ನಾಲ್ಕನೆಯವನು ಅದೋನೀಯ; ಇವನು ಹಗ್ಗೀತಳ ಮಗನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್2 ಅಬ್ಷಾಲೋಮನು ದಾವೀದನ ಮೂರನೆಯ ಮಗನು. ಇವನ ತಾಯಿ ಮಾಕಳು. ಈಕೆಯು ಗೆಷೂರಿನ ಅರಸನಾದ ತಲ್ಮೈಯ ಮಗಳು. ನಾಲ್ಕನೆಯವನು ಅದೋನೀಯನು. ಇವನು ಹಗ್ಗೀತಳ ಮಗನು. ಅಧ್ಯಾಯವನ್ನು ನೋಡಿ |