Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 3:16 - ಕನ್ನಡ ಸಮಕಾಲಿಕ ಅನುವಾದ

16 ಯೆಹೋಯಾಕೀಮನ ಮಕ್ಕಳು: ಇವನ ಮಗನಾದ ಯೆಕೊನ್ಯ; ಇವನ ಮಗನು ಚಿದ್ಕೀಯ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ಯೆಹೋಯಾಕೀಮನ ಮಗ ಯೆಕೊನ್ಯನು; ಯೆಕೊನ್ಯನ ಮಗ ಚಿದ್ಕೀಯನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

16 ಯೆಹೋಯಾಕೀಮನಿಗೆ ಯೆಕೊನ್ಯ ಮತ್ತು ಚಿದ್ಕೀಯ ಎಂಬಿಬ್ಬರು ಮಕ್ಕಳಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ಯೆಹೋಯಾಕೀಮನ ಮಗನು ಯೆಕೊನ್ಯ; ಇವನ ಮಗನು ಚಿದ್ಕೀಯ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ಯೆಹೋಯಾಕೀಮನ ಗಂಡುಮಕ್ಕಳು ಯಾರೆಂದರೆ: ಯೆಕೊನ್ಯ ಮತ್ತು ಚಿದ್ಕೀಯ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 3:16
12 ತಿಳಿವುಗಳ ಹೋಲಿಕೆ  

ಯೋಷೀಯನಿಗೆ ಯೆಕೊನ್ಯ ಮತ್ತು ಅವನ ಸಹೋದರರು ಹುಟ್ಟಿದರು, ಈ ಸಮಯದಲ್ಲಿಯೇ ಯೆಹೂದ್ಯರನ್ನು ಬಾಬಿಲೋನಿಗೆ ಸೆರೆ ಒಯ್ದದ್ದು.


ಯೆಹೋಯಾಕೀಮನು ಮೃತನಾಗಿ ತನ್ನ ಪಿತೃಗಳ ಸಂಗಡ ಸೇರಿದನು. ಅವನಿಗೆ ಬದಲಾಗಿ ಅವನ ಮಗ ಯೆಹೋಯಾಖೀನನು ಅರಸನಾದನು.


“ನನ್ನ ಜೀವದಾಣೆ, ಯೆಹೋಯಾಕೀಮನ ಮಗ ಯೆಹೂದದ ಅರಸನಾದ ಕೊನ್ಯನು ನನ್ನ ಬಲಗೈಯ ಮುದ್ರೆ ಉಂಗುರವಾಗಿದ್ದರೂ, ನಿನ್ನನ್ನು ಅಲ್ಲಿಂದ ಕಿತ್ತುಹಾಕಿ,


ಬಾಬಿಲೋನಿನ ಅರಸನು ಯೆಹೋಯಾಖೀನನ ಚಿಕ್ಕಪ್ಪನಾದ ಮತ್ತನ್ಯನನ್ನು ಅವನಿಗೆ ಬದಲಾಗಿ ಅರಸನನ್ನಾಗಿ ಮಾಡಿ, ಅವನಿಗೆ ಚಿದ್ಕೀಯನೆಂದು ಬೇರೆ ಹೆಸರನ್ನಿಟ್ಟನು.


ಯೆಹೋಯಾಖೀನನು ಅರಸನಾದಾಗ ಹದಿನೆಂಟು ವರ್ಷದವನಾಗಿದ್ದು, ಯೆರೂಸಲೇಮಿನಲ್ಲಿ ಮೂರು ತಿಂಗಳು ಆಳಿದನು. ಅವನ ತಾಯಿಯು ಯೆರೂಸಲೇಮಿನ ಎಲ್ನಾತಾನನ ಮಗಳಾದ ನೆಹುಷ್ಟಾ.


ಕೊನ್ಯನೆಂಬ ಈ ಮನುಷ್ಯನು ಹೀನವಾಗಿ ಒಡೆದುಹೋದ ಮಡಿಕೆಯೆ? ಮೆಚ್ಚುಗೆ ಇಲ್ಲದ ಪಾತ್ರೆಯೆ? ಏಕೆ ಕೊನ್ಯನೂ, ಅವನ ಸಂತಾನವೂ ಬೀದಿಪಾಲಾಗಿದ್ದಾರೆ, ತಮಗೆ ತಿಳಿಯದ ದೇಶಕ್ಕೆ ಗಡಿಪಾರಾಗಿದ್ದಾರೆ?


ಯೆಹೋಯಾಖೀನನು ಅರಸನಾದಾಗ ಹದಿನೆಂಟು ವರ್ಷದವನಾಗಿದ್ದು, ಯೆರೂಸಲೇಮಿನಲ್ಲಿ ಮೂರು ತಿಂಗಳು ಹತ್ತು ದಿವಸ ಆಳಿದನು. ಅವನು ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು.


ಯೋಷೀಯನ ಮಕ್ಕಳು: ಚೊಚ್ಚಲಮಗನಾದ ಯೋಹಾನಾನ್, ಎರಡನೆಯವನಾದ ಯೆಹೋಯಾಕೀಮ್, ಮೂರನೆಯವನಾದ ಚಿದ್ಕೀಯ, ನಾಲ್ಕನೆಯವನಾದ ಶಲ್ಲೂಮ್.


ಯೆಹೂದದ ಅರಸನಾದ ಯೆಹೋಯಾಖೀನನ ಸೆರೆಯ ಮೂವತ್ತೇಳನೆಯ ವರ್ಷದ ಹನ್ನೆರಡನೆಯ ತಿಂಗಳಿನ ಇಪ್ಪತ್ತೇಳನೆಯ ದಿವಸದಲ್ಲಿ, ಬಾಬಿಲೋನಿನ ಅರಸನಾದ ಎವೀಲ್ಮೆರೋದಕನು ತನ್ನ ಆಳ್ವಿಕೆಯ ಮೊದಲನೆಯ ವರ್ಷದಲ್ಲಿ, ಅವನು ಯೆಹೂದದ ಅರಸನಾದ ಯೆಹೋಯಾಖೀನನನ್ನು ಸೆರೆಮನೆಯಿಂದ ಬಿಡಿಸಿದನು.


ಯೆಹೋಯಾಕೀನನು ಸೆರೆಯಲ್ಲಿದ್ದಾಗ ಅವನ ವಂಶಜರು: ಇವನ ಮಗ ಶೆಯಲ್ತಿಯೇಲ್,


ಯೋಷೀಯನ ಮಗ ಚಿದ್ಕೀಯನು ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನಿಂದ ಯೆಹೂದ ದೇಶದ ಅರಸನನ್ನಾಗಿ ಮಾಡಿದನು. ಅವನು ಯೆಹೋಯಾಕೀಮನ ಮಗ ಕೊನ್ಯನಿಗೆ ಬದಲಾಗಿ, ಅರಸನಾಗಿ ಆಳಿದನು.


ಅವರ ಪಿತೃಗಳ ದೇವರಾದ ಯೆಹೋವ ದೇವರು ತಮ್ಮ ಸೇವಕರನ್ನು ಅವನ ಬಳಿಗೆ ಪುನಃ ಕಳುಹಿಸಿದರು. ತಮ್ಮ ಜನರ ಮೇಲೆಯೂ, ತಮ್ಮ ನಿವಾಸ ಸ್ಥಾನದ ಮೇಲೆಯೂ ಅವರು ಕನಿಕರಪಟ್ಟರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು