1 ಪೂರ್ವಕಾಲ ವೃತ್ತಾಂತ 29:12 - ಕನ್ನಡ ಸಮಕಾಲಿಕ ಅನುವಾದ12 ಐಶ್ವರ್ಯವೂ, ಘನವೂ ನಿಮ್ಮ ಬಳಿಯಿಂದ ಬರುತ್ತವೆ. ನೀವು ಸಮಸ್ತವನ್ನು ಆಳಿಕೆಮಾಡುವವರು. ಶಕ್ತಿಯೂ, ಪರಾಕ್ರಮವೂ ನಿಮ್ಮ ಕೈಯಲ್ಲಿ ಇವೆ. ಎಲ್ಲರಿಗೂ ಉನ್ನತಿಯನ್ನೂ, ಬಲವನ್ನೂ ಕೊಡುವುದು ನಿಮ್ಮ ಕೈಯಲ್ಲಿ ಇದೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201912 ಪ್ರಭಾವ ಐಶ್ವರ್ಯಗಳು ನಿನ್ನ ಸನ್ನಿಧಿಯಿಂದ ಬರುತ್ತವೆ. ನೀನು ಸರ್ವಾಧಿಕಾರಿಯು. ಬಲಪರಾಕ್ರಮಗಳು ನಿನ್ನ ಹಸ್ತದಲ್ಲಿರುತ್ತವೆ. ಎಲ್ಲಾ ಮಹಿಮೆಗೂ, ಶಕ್ತಿಗೂ ನೀನೇ ಮೂಲನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)12 ಆಸ್ತಿ - ಪಾಸ್ತಿ, ಐಶ್ವರ್ಯ ಬರುವುದು ನಿಮ್ಮಿಂದಲೇ. ಸರ್ವಾಧಿಕಾರ, ಬಲಪರಾಕ್ರಮ ಇರುವುದು ನಿಮ್ಮ ಕೈಯಲ್ಲೇ. ಪಟ್ಟ ಪದವಿಗೆ, ಸರ್ವಶಕ್ತಿ ಸಾಹಸಕ್ಕೆ ಮೂಲ ನೀವೇ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)12 ಪ್ರಭಾವೈಶ್ವರ್ಯಗಳು ನಿನ್ನ ಸನ್ನಿಧಿಯಿಂದ ಬರುತ್ತವೆ; ನೀನು ಸರ್ವಾಧಿಕಾರಿಯು; ಬಲಪರಾಕ್ರಮಗಳು ನಿನ್ನ ಹಸ್ತದಲ್ಲಿರುತ್ತವೆ; ಎಲ್ಲಾ ದೊಡ್ಡಸ್ತಿಕೆಗೂ ಶಕ್ತಿಗೂ ನೀನೇ ಮೂಲನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್12 ಗೌರವವೂ ಐಶ್ವರ್ಯವೂ ನಿನ್ನಿಂದಲೇ ಹೊರಡುವವು. ಎಲ್ಲವನ್ನು ಆಳುವಾತನು ನೀನೇ. ನಿನ್ನ ಬಾಹುಗಳಲ್ಲಿ ಶಕ್ತಿಸಾಮರ್ಥ್ಯವು ತುಂಬಿವೆ. ಯಾರನ್ನೇ ಆಗಲಿ ಮಹಾಪುರುಷರನ್ನಾಗಿಯೂ ಪ್ರಬಲರನ್ನಾಗಿಯೂ ಮಾಡುವ ಶಕ್ತಿಯಿರುವುದು ನಿನ್ನ ಕೈಗಳಲ್ಲಿಯೇ. ಅಧ್ಯಾಯವನ್ನು ನೋಡಿ |