Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 28:6 - ಕನ್ನಡ ಸಮಕಾಲಿಕ ಅನುವಾದ

6 ಇದಲ್ಲದೆ ದೇವರು ನನಗೆ, ‘ನಿನ್ನ ಮಗ ಸೊಲೊಮೋನನು ತಾನೇ ನನ್ನ ಆಲಯವನ್ನೂ, ನನ್ನ ಅಂಗಳಗಳನ್ನೂ ಕಟ್ಟಿಸುವನು. ಏಕೆಂದರೆ ಅವನನ್ನು ನನಗೆ ಮಗನಾಗಿರಲು ಆಯ್ದುಕೊಂಡೆನು. ನಾನು ಅವನಿಗೆ ತಂದೆಯಾಗಿರುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ಆತನು ನನಗೆ, ‘ನಿನ್ನ ಮಗನಾದ ಸೊಲೊಮೋನನೇ ನನ್ನ ಆಲಯವನ್ನೂ, ಅದರ ಪ್ರಾಕಾರಗಳನ್ನೂ ಕಟ್ಟಿಸುವನು. ಅವನು ನನಗೆ ಮಗನಾಗಿರಬೇಕೆಂದು ಅವನನ್ನು ಆರಿಸಿಕೊಂಡಿದ್ದೇನೆ. ನಾನು ಅವನಿಗೆ ತಂದೆಯಾಗಿರುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

6 ‘ನಿನ್ನ ಮಗ ಸೊಲೊಮೋನನೇ ನನ್ನ ಆಲಯವನ್ನೂ ಅದರ ಪ್ರಾಕಾರಗಳನ್ನೂ ಕಟ್ಟಿಸುವನು. ಅವನು ನನಗೆ ಮಗನಾಗಿ ಇರಬೇಕೆಂದು ಅವನನ್ನು ಆರಿಸಿಕೊಂಡಿದ್ದೇನೆ; ನಾನು ಅವನಿಗೆ ತಂದೆಯಾಗಿ ಇರುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ಆತನು ನನಗೆ - ನಿನ್ನ ಮಗನಾದ ಸೊಲೊಮೋನನೇ ನನ್ನ ಆಲಯವನ್ನೂ ಅದರ ಪ್ರಾಕಾರಗಳನ್ನೂ ಕಟ್ಟಿಸುವನು. ಅವನು ನನಗೆ ಮಗನಾಗಿರಬೇಕೆಂದು ಅವನನ್ನು ಆರಿಸಿಕೊಂಡಿದ್ದೇನೆ; ನಾನು ಅವನಿಗೆ ತಂದೆಯಾಗಿರುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ಯೆಹೋವನು ನನಗೆ, ‘ದಾವೀದನೇ, ನಿನ್ನ ಮಗನಾದ ಸೊಲೊಮೋನನು ದೇವಾಲಯವನ್ನು ಮತ್ತು ಅದರ ಸುತ್ತಮುತ್ತಲಿನ ಕಟ್ಟಡಗಳನ್ನು ಕಟ್ಟುವನು. ಯಾಕೆಂದರೆ ಸೊಲೊಮೋನನನ್ನು ನಾನು ಆರಿಸಿಕೊಂಡಿದ್ದೇನೆ. ಅವನು ನನಗೆ ಮಗನಾಗಿರುವನು; ನಾನು ಅವನಿಗೆ ತಂದೆಯಾಗಿರುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 28:6
11 ತಿಳಿವುಗಳ ಹೋಲಿಕೆ  

ಕ್ರಿಸ್ತ ಯೇಸುವಾದರೋ ಮಗನಾಗಿ ದೇವರ ಮನೆಯ ಮೇಲೆ ನಂಬಿಗಸ್ತರಾಗಿದ್ದಾರೆ. ಆದುದರಿಂದ ನಾವು ನಮ್ಮ ಧೈರ್ಯವನ್ನೂ ನಾವು ಹೊಗಳಿಕೊಳ್ಳುವ ನಿರೀಕ್ಷೆಯನ್ನೂ ಕಡೆಯತನಕ ದೃಢವಾಗಿ ಹಿಡಿದುಕೊಂಡಿದ್ದರೆ ನಾವೇ ದೇವರ ಮನೆಯಾಗಿರುತ್ತೇವೆ.


ಮೇಲಿನ ವಾಕ್ಯಕ್ಕೆ ಸಂಬಂಧಿಸಿ, “ಇವರು ನನ್ನ ವಿಶ್ರಾಂತಿಯಲ್ಲಿ ಸೇರುವುದೇ ಇಲ್ಲ,” ಎಂದೂ ದೇವರು ಇನ್ನೊಂದು ಕಡೆ ಹೇಳಿದ್ದಾರೆ.


ಮನೆಗಿಂತ ಮನೆಕಟ್ಟಿದವನಿಗೆ ಹೆಚ್ಚಾದ ಗೌರವವಿರುವುದರಿಂದ, ಮೋಶೆಗಿಂತ ಯೇಸು ಹೆಚ್ಚಾದ ಮಹಿಮೆಗೆ ಯೋಗ್ಯರೆಂದು ಎಣಿಸಿಕೊಂಡಿದ್ದಾರೆ.


ಈಗ ಯೆಹೋವ ದೇವರೇ, ನೀವು ನನ್ನ ತಂದೆ ದಾವೀದನಿಗೆ ಮಾಡಿದ ವಾಗ್ದಾನವು ದೃಢವಾಗಲಿ. ಏಕೆಂದರೆ ಭೂಮಿಯ ಧೂಳಿನಷ್ಟು ಅಸಂಖ್ಯಾತ ಜನರ ಮೇಲೆ ನನ್ನನ್ನು ಅರಸನನ್ನಾಗಿ ಮಾಡಿದ್ದೀರಿ.


ಆದ್ದರಿಂದ, ನನ್ನ ದೇವರಾದ ಯೆಹೋವ ದೇವರ ಹೆಸರಿಗೆ ಆಲಯವನ್ನು ಕಟ್ಟಿಸಬೇಕೆಂದಿದ್ದೇನೆ. ಅದರ ವಿಷಯವಾಗಿ ಯೆಹೋವ ದೇವರು ನನ್ನ ತಂದೆಯಾದ ದಾವೀದನಿಗೆ, ‘ನಿನಗೆ ಬದಲಾಗಿ ನಿನ್ನ ಸಿಂಹಾಸನದ ಮೇಲೆ ನಾನು ಕುಳ್ಳಿರಿಸುವ ನಿನ್ನ ಮಗನೇ ನನ್ನ ಹೆಸರಿಗೆ ದೇವಾಲಯವನ್ನು ಕಟ್ಟಿಸುವನು,’ ಎಂದು ಹೇಳಿದ್ದಾರಲ್ಲವೇ.


“ಈಗ ಯೆಹೋವ ದೇವರು ತಾವು ಹೇಳಿದ ವಾಗ್ದಾನವನ್ನು ನೆರವೇರಿಸಿದ್ದಾರೆ. ನಾನು ನನ್ನ ತಂದೆಯಾದ ದಾವೀದನಿಗೆ ಬದಲಾಗಿ ಯೆಹೋವ ದೇವರು ಮಾತುಕೊಟ್ಟ ಪ್ರಕಾರ, ಇಸ್ರಾಯೇಲಿನ ಸಿಂಹಾಸನದ ಮೇಲೆ ಕುಳಿತುಕೊಂಡು, ಇಸ್ರಾಯೇಲಿನ ದೇವರಾದ ಯೆಹೋವ ದೇವರ ಹೆಸರಿಗೋಸ್ಕರ ಈ ಆಲಯವನ್ನು ಕಟ್ಟಿಸಿದ್ದೇನೆ.


ಬಾಗಿಲಿನ ಚೌಕಟ್ಟಿನ ಕಂಬಗಳನ್ನು ಅಳತೆಮಾಡಲು ಸುಮಾರು ಮೂವತ್ತೆರಡು ಮೀಟರ್ ಇದ್ದವು. ಅದು ಬಾಗಿಲಿನ ಸುತ್ತಮುತ್ತಲಿರುವ ಕಂಬದವರೆಗೂ ಇತ್ತು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು