Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 28:20 - ಕನ್ನಡ ಸಮಕಾಲಿಕ ಅನುವಾದ

20 ದಾವೀದನು ತನ್ನ ಮಗ ಸೊಲೊಮೋನನಿಗೆ, “ನೀನು ಬಲಗೊಂಡು, ಧೈರ್ಯದಿಂದ ಮಾಡು; ಭಯಪಡಬೇಡ, ನಿರಾಶನಾಗಬೇಡ. ಏಕೆಂದರೆ ನನ್ನ ದೇವರಾಗಿರುವ ಯೆಹೋವ ದೇವರು ನಿನ್ನ ಸಂಗಡ ಇರುತ್ತಾರೆ. ಯೆಹೋವ ದೇವರ ಆಲಯದ ಸೇವೆಯ ಕಾರ್ಯವನ್ನೆಲ್ಲಾ ನೀನು ತೀರಿಸುವವರೆಗೂ, ಅವರು ನಿನ್ನನ್ನು ತೊರೆಯುವುದಿಲ್ಲ, ಕೈಬಿಡುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 ಆ ಮೇಲೆ ದಾವೀದನು ತನ್ನ ಮಗನಾದ ಸೊಲೊಮೋನನಿಗೆ, “ಸ್ಥಿರಚಿತ್ತನಾಗಿರು, ಧೈರ್ಯದಿಂದಿರು, ಕೆಲಸಕ್ಕೆ ಕೈಹಾಕು, ಅಂಜಬೇಡ, ಕಳವಳಗೊಳ್ಳಬೇಡ, ನನ್ನ ದೇವರಾದ ಯೆಹೋವ ದೇವರು ನಿನ್ನ ಸಂಗಡ ಇರುತ್ತಾನೆ. ಆತನು ತನ್ನ ಆಲಯದ ಎಲ್ಲಾ ಕೆಲಸಗಳು ತೀರುವವರೆಗೂ ನಿನ್ನನ್ನು ಕೈಬಿಡುವುದಿಲ್ಲ ತೊರೆಯುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

20 ಆಮೇಲೆ ದಾವೀದನು ತನ್ನ ಮಗ ಸೊಲೊಮೋನನಿಗೆ, “ಸ್ಥಿರಚಿತ್ತನಾಗಿರು, ಧೈರ್ಯದಿಂದಿರು, ಕೆಲಸಕ್ಕೆ ಕೈಹಾಕು; ಅಂಜಬೇಡ, ಕಳವಳಗೊಳ್ಳಬೇಡ. ನನ್ನ ದೇವರಾಗಿರುವ ಸರ್ವೇಶ್ವರಸ್ವಾಮಿ ನಿನ್ನೊಂದಿಗೆ ಇರುತ್ತಾರೆ; ಅವರು ತಮ್ಮ ಆಲಯದ ಎಲ್ಲಾ ಕೆಲಸ ತೀರುವವರೆಗೂ ನಿನ್ನನ್ನು ಕೈಬಿಡುವುದಿಲ್ಲ, ತೊರೆಯುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

20 ಆಮೇಲೆ ದಾವೀದನು ತನ್ನ ಮಗನಾದ ಸೊಲೊಮೋನನಿಗೆ - ಸ್ಥಿರಚಿತ್ತನಾಗಿರು, ಧೈರ್ಯದಿಂದಿರು, ಕೆಲಸಕ್ಕೆ ಕೈಹಾಕು; ಅಂಜಬೇಡ, ಕಳವಳಗೊಳ್ಳಬೇಡ. ನನ್ನ ದೇವರಾಗಿರುವ ಯೆಹೋವದೇವರು ನಿನ್ನ ಸಂಗಡ ಇರುತ್ತಾನೆ; ಆತನು ತನ್ನ ಆಲಯದ ಎಲ್ಲಾ ಕೆಲಸವು ತೀರುವವರೆಗೂ ನಿನ್ನನ್ನು ಕೈ ಬಿಡುವದಿಲ್ಲ, ತೊರೆಯುವದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

20 ದಾವೀದನು ತನ್ನ ಮಗನಾದ ಸೊಲೊಮೋನನಿಗೆ, “ಧೈರ್ಯವಾಗಿದ್ದು ಬಲಗೊಳ್ಳು ಮತ್ತು ಈ ಕಾರ್ಯವನ್ನು ಮಾಡಿ ಮುಗಿಸು. ನನ್ನ ದೇವರಾದ ಯೆಹೋವನು ನಿನ್ನ ಸಂಗಡ ಇರುವದರಿಂದ ನೀನು ಭಯಪಡುವ ಕಾರಣವೇ ಇಲ್ಲ. ಆತನು ನಿನ್ನೊಂದಿಗಿದ್ದು ಆಲಯವನ್ನು ಸಂಪೂರ್ಣ ಮಾಡುವಂತೆ ನಿನ್ನನ್ನು ನಡೆಸುತ್ತಾನೆ. ನೀನು ಯೆಹೋವನ ಆಲಯವನ್ನು ಕಟ್ಟುವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 28:20
17 ತಿಳಿವುಗಳ ಹೋಲಿಕೆ  

ಯೆಹೋವ ದೇವರು ಇಸ್ರಾಯೇಲನ್ನು ಕುರಿತು ಮೋಶೆಗೆ ಆಜ್ಞಾಪಿಸಿದ ನ್ಯಾಯವಿಧಿಗಳನ್ನು ಕೈಗೊಳ್ಳಲು ನೀನು ಜಾಗ್ರತೆಯಾಗಿರು. ಆಗ ಸಫಲನಾಗುವಿ. ಬಲವಾಗಿರು, ದೃಢವಾಗಿರು. ಭಯಪಡಬೇಡ, ಹೆದರಬೇಡ.


ನೀನಂತೂ ಹೆದರಬೇಡ, ಏಕೆಂದರೆ ನಾನೇ ನಿನ್ನ ದೇವರು, ನಾನು ನಿನ್ನನ್ನು ಬಲಪಡಿಸುತ್ತೇನೆ. ನಾನು ನಿನಗೆ ಸಹಾಯ ಮಾಡುತ್ತೇನೆ. ನನ್ನ ನೀತಿಯ ಬಲಗೈಯಿಂದ ನಿನ್ನನ್ನು ಎತ್ತಿಹಿಡಿಯುತ್ತೇನೆ.


ಹಣದಾಶೆಯಿಂದ ನಿಮ್ಮ ಜೀವನ ದೂರವಾಗಿರಲಿ, ನಿಮಗಿರುವವುಗಳಲ್ಲಿ ತೃಪ್ತರಾಗಿರಿ. ಏಕೆಂದರೆ ದೇವರು ಹೀಗೆ ಹೇಳಿದ್ದಾರೆ, “ನಾನು ನಿನ್ನನ್ನು ಎಂದಿಗೂ ಕೈಬಿಡುವುದಿಲ್ಲ, ಎಂದಿಗೂ ತೊರೆಯುವುದಿಲ್ಲ!”


ಎಚ್ಚರವಾಗಿರಿ, ವಿಶ್ವಾಸದಲ್ಲಿ ಸ್ಥಿರವಾಗಿ ನಿಲ್ಲಿರಿ, ಧೈರ್ಯವಾಗಿರಿ, ಬಲಗೊಳ್ಳಿರಿ.


ಹಾಗಾದರೆ, ಈ ವಿಷಯಗಳಲ್ಲಿ ನಾವು ಏನು ಹೇಳೋಣ? ದೇವರು ನಮ್ಮ ಪರವಾಗಿ ಇದ್ದರೆ ನಮ್ಮನ್ನು ವಿರೋಧಿಸುವವರು ಯಾರು?


ನೀನಂತೂ ಹೆದರಬೇಡ; ಏಕೆಂದರೆ ಯೆಹೋವ ದೇವರಾದ ನಾನೇ ನಿನಗೆ ಸಹಾಯ ಮಾಡುತ್ತೇನೆ, ನಿನ್ನ ದೇವರಾಗಿರುವ ನಾನೇ ನಿನ್ನ ಕೈಹಿಡಿಯುತ್ತೇನಲ್ಲಾ!


ಆದ್ದರಿಂದ ಜಾಗ್ರತೆಯಾಗಿರು. ಏಕೆಂದರೆ, ಯೆಹೋವ ದೇವರು ಪರಿಶುದ್ಧ ಆಲಯವನ್ನು ಕಟ್ಟಬೇಕೆಂದು ನಿನ್ನನ್ನು ಆರಿಸಿಕೊಂಡಿದ್ದಾರೆ. ನೀನು ಧೈರ್ಯದಿಂದ ಕೆಲಸಕ್ಕೆ ಕೈ ಹಚ್ಚು,” ಎಂದನು.


ನಿಮ್ಮ ದೇವರಾದ ಯೆಹೋವ ದೇವರು ಕರುಣೆಯುಳ್ಳ ದೇವರು, ಅವರು ನಿಮ್ಮನ್ನು ಕೈಬಿಡುವುದಿಲ್ಲ, ನಾಶಮಾಡುವುದಿಲ್ಲ, ಅವರು ನಿಮ್ಮ ಪಿತೃಗಳಿಗೆ ಪ್ರಮಾಣ ಮಾಡಿದ ಒಡಂಬಡಿಕೆಯನ್ನು ಮರೆಯುವುದಿಲ್ಲ.


“ಮುಖ್ಯಯಾಜಕನಾದ ಅಮರ್ಯನು ಯೆಹೋವ ದೇವರ ಸಮಸ್ತ ಕಾರ್ಯಗಳಲ್ಲಿಯೂ, ಯೆಹೂದದ ಮನೆಯ ನಾಯಕನಾಗಿರುವ ಇಷ್ಮಾಯೇಲನ ಮಗ ಜೆಬದ್ಯನು ಅರಸನ ಸಮಸ್ತ ಕಾರ್ಯಗಳಲ್ಲಿಯೂ ಇರುವರು. ಇದಲ್ಲದೆ ಲೇವಿಯರು ನಿಮ್ಮ ಮುಂದೆ ಅಧಿಕಾರಿಗಳಾಗಿರುವರು. ನೀವು ಬಲಗೊಂಡು ಕೆಲಸ ನಡೆಸಿರಿ. ಯೆಹೋವ ದೇವರು ಒಳ್ಳೆಯವರ ಸಂಗಡ ಇರುವರು,” ಎಂದನು.


ಆದರೂ ಈಗ ಯೆಹೋವ ದೇವರು ಹೀಗೆ ಹೇಳಿದರು: ‘ಜೆರುಬ್ಬಾಬೆಲನೇ, ಬಲವಾಗಿರು. ಯೆಹೋಚಾದಾಕನ ಮಗ ಮತ್ತು ಮಹಾಯಾಜಕನಾದ ಯೆಹೋಶುವನೇ, ಬಲವಾಗಿರು. ದೇಶದ ಜನರೆಲ್ಲರೇ, ಬಲವಾಗಿರಿ,’ ಕೆಲಸಮಾಡಿರಿ. ‘ನಾನು ನಿಮ್ಮ ಸಂಗಡ ಇದ್ದೇನೆ’ ಎಂದು ಸರ್ವಶಕ್ತರಾದ ಯೆಹೋವ ದೇವರು ಹೇಳುತ್ತಾರೆ.


ಶಕ್ತಿಶಾಲಿಗಳಾಗಿರಿ, ಧೈರ್ಯವಾಗಿರಿ, ಭಯಪಡಬೇಡಿರಿ, ಅವರಿಗೆ ಹೆದರಬೇಡಿರಿ. ಏಕೆಂದರೆ ನಿಮ್ಮ ದೇವರಾದ ಯೆಹೋವ ದೇವರು ತಾವೇ ನಿಮ್ಮ ಮುಂದೆ ಹೋಗುತ್ತಾರೆ. ಅವರು ನಿಮ್ಮನ್ನು ಕೈಬಿಡುವುದಿಲ್ಲ, ತೊರೆಯುವುದೂ ಇಲ್ಲ.”


ಹನ್ನೊಂದನೆಯ ವರ್ಷದ, ಎಂಟನೆಯ ತಿಂಗಳಾದ ಬೂಲ್ ಎಂಬ ಕಾರ್ತಿಕ ತಿಂಗಳಲ್ಲಿ ಆ ದೇವಾಲಯದ ಎಲ್ಲಾ ಭಾಗಗಳೂ ಯೋಜನೆಯ ಪ್ರಕಾರ ಕಟ್ಟಲಾಯಿತು. ಹೀಗೆ ಅವನು ಏಳು ವರುಷಗಳಲ್ಲಿ ಅದನ್ನು ಕಟ್ಟಿಸಿದನು.


ನೀನು ಏಳು, ಏಕೆಂದರೆ ಈ ಕಾರ್ಯ ನಿನಗೆ ಸಂಬಂಧಿಸಿದೆ. ನಾವು ನಿನ್ನ ಸಂಗಡ ನಿಲ್ಲುತ್ತೇವೆ. ಧೈರ್ಯದಿಂದ ಅದನ್ನು ಮಾಡು,” ಎಂದನು.


ಆಗ ಯೆಹೋವ ದೇವರ ಸೇವಕನಾದ ಹಗ್ಗಾಯನು, ಯೆಹೋವ ದೇವರ ಜನರಿಗೆ, “ನಾನು ನಿಮ್ಮ ಸಂಗಡ ಇದ್ದೇನೆ” ಎಂದು ಯೆಹೋವ ದೇವರು ಹೇಳುತ್ತಾರೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು