Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 27:1 - ಕನ್ನಡ ಸಮಕಾಲಿಕ ಅನುವಾದ

1 ಇಸ್ರಾಯೇಲರು ತಮ್ಮ ಲೆಕ್ಕದ ಪ್ರಕಾರವಾಗಿ ಹೀಗೆಯೇ ಇದ್ದರು. ಹೇಗೆಂದರೆ, ಕುಟುಂಬಗಳ ಮುಖ್ಯಸ್ಥರೂ ಸಹಸ್ರಾಧಿಪತಿಗಳೂ, ಶತಾಧಿಪತಿಗಳೂ, ಅಧಿಪತಿಗಳೂ ವರ್ಷದ ಎಲ್ಲಾ ತಿಂಗಳುಗಳಲ್ಲಿ ಪ್ರತಿ ತಿಂಗಳು ಸರತಿಯಂತೆ ಬರುತ್ತಿದ್ದ ವರ್ಗಗಳ ಕಾರ್ಯಗಳಲ್ಲಿ ಅರಸನನ್ನು ಸೇವಿಸಿದ ಅವರ ಪಾರುಪತ್ಯಗಾರರೂ ಪ್ರತಿವರ್ಗದಲ್ಲಿ 24,000 ಮಂದಿಯಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಇಸ್ರಾಯೇಲರ ಕುಲಪ್ರಧಾನರು, ಸಹಸ್ರಾಧಿಪತಿಗಳು, ಶತಾಧಿಪತಿಗಳೂ, ಅರಸನ ವಿಧವಿಧವಾದ ಸೇವೆಯನ್ನು ಮಾಡಬೇಕಾದ ವರ್ಗಗಳ ಅಧಿಪತಿಗಳ ವಿವರ: ವರ್ಷದ ಎಲ್ಲಾ ತಿಂಗಳುಗಳಲ್ಲಿ ತಿಂಗಳಿಗೆ ಒಂದು ವರ್ಗದಂತೆ ಸರದಿಯ ಪ್ರಕಾರ ಕೆಲಸಕ್ಕಾಗಿ ಬರುವ ಪ್ರತಿಯೊಂದು ವರ್ಗದಲ್ಲಿ ಇಪ್ಪತ್ತನಾಲ್ಕು ಸಾವಿರ ಜನರು ಇದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

1 ಇಸ್ರಯೇಲರ ಕುಲಪ್ರಧಾನರು, ಸಹಸ್ರಾಧಿಪತಿಗಳು, ಶತಾಧಿಪತಿಗಳು, ಅರಸನ ವಿವಿಧ ಸೇವೆಯನ್ನು ಮಾಡಬೇಕಾಗಿದ್ದ ವರ್ಗಗಳ ಅಧಿಪತಿಗಳು ಹಾಗು ಇವರ ಕಾರ್ಯಕ್ರಮಗಳ ಪಟ್ಟಿ: ವರ್ಷದ ಎಲ್ಲಾ ತಿಂಗಳುಗಳಲ್ಲಿ, ತಿಂಗಳಿಗೆ ಒಂದು ವರ್ಗದಂತೆ, ಸರದಿಯ ಮೇಲೆ ಕೆಲಸಕ್ಕಾಗಿ ಬರುತ್ತಿದ್ದ ಪ್ರತಿಯೊಂದು ವರ್ಗದಲ್ಲಿ ಇಪ್ಪತ್ತನಾಲ್ಕು ಸಾವಿರ ಮಂದಿ ಇದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ಇಸ್ರಾಯೇಲ್ಯರ ಕುಲಪ್ರಧಾನರು, ಸಹಸ್ರಾಧಿಪತಿಗಳು, ಶತಾಧಿಪತಿಗಳು, ಅರಸನ ವಿಧವಿಧವಾದ ಸೇವೆಯನ್ನು ಮಾಡಬೇಕಾದ ವರ್ಗಗಳ ಅಧಿಪತಿಗಳು ಇವರ ಲೆಕ್ಕ. ವರುಷದ ಎಲ್ಲಾ ತಿಂಗಳುಗಳಲ್ಲಿ ತಿಂಗಳಿಗೆ ಒಂದು ವರ್ಗದಂತೆ ಸರತಿಯ ಮೇಲೆ ಕೆಲಸಕ್ಕೋಸ್ಕರ ಬರುವ ಪ್ರತಿಯೊಂದು ವರ್ಗದಲ್ಲಿ ಇಪ್ಪತ್ತನಾಲ್ಕು ಸಾವಿರ ಮಂದಿ ಇದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ಅರಸನ ಸೈನ್ಯದಲ್ಲಿ ಸೇವೆಮಾಡಿದವರ ಪಟ್ಟಿ. ಒಂದೊಂದು ತಂಡದವರು, ಇಸ್ರೇಲಿನ ಸೈನ್ಯಾಧಿಕಾರಿಗಳು, ಸಹಸ್ರಾಧಿಪತಿಗಳು ಮತ್ತು ಇತರ ಅಧಿಕಾರಿಗಳು ವರ್ಷದ ಆಯಾ ತಿಂಗಳಲ್ಲಿ ತಮ್ಮ ತಂಡದ ಸರದಿಯ ಪ್ರಕಾರ ಅರಸನ ವಿವಿಧ ಸೇವೆಮಾಡುತ್ತಿದ್ದರು. ಸೈನ್ಯದ ಪ್ರತಿಯೊಂದು ತಂಡದಲ್ಲಿ ಇಪ್ಪತ್ತನಾಲ್ಕು ಸಾವಿರ ಪುರುಷರಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 27:1
18 ತಿಳಿವುಗಳ ಹೋಲಿಕೆ  

ಆದರೆ ಎಫ್ರಾತದ ಬೇತ್ಲೆಹೇಮೇ, ನೀನು ಯೆಹೂದದ ಗೋತ್ರಗಳಲ್ಲಿ ಸಣ್ಣದಾಗಿದ್ದರೂ ಇಸ್ರಾಯೇಲಿನಲ್ಲಿ ದೊರೆತನ ಮಾಡತಕ್ಕವನು ನಿನ್ನೊಳಗಿಂದ ನನಗಾಗಿ ಹೊರಡುವನು. ಆತನ ಮೂಲವು ಪೂರ್ವದಿಂದಲೂ ಅನಾದಿ ಕಾಲದಿಂದಲೂ ಆದದ್ದು.


ದಾವೀದನು ಇಸ್ರಾಯೇಲಿನ ಸಮಸ್ತ ಪ್ರಧಾನ ಗೋತ್ರಗಳ ಪ್ರಧಾನರನ್ನೂ, ವರ್ಗ ವರ್ಗವಾಗಿ ಅರಸನನ್ನು ಸೇವೆಮಾಡಿದ ಸಭೆಗಳ ಪ್ರಧಾನರನ್ನೂ, ಸಹಸ್ರಾಧಿಪತಿಗಳನ್ನೂ, ಶತಾಧಿಪತಿಗಳನ್ನೂ ಅರಸನ ಸ್ವತ್ತಿನ ಮೇಲೆಯೂ, ಅವನ ಪುತ್ರರ ಸ್ವತ್ತಿನ ಮೇಲೆಯೂ ಪಶುಗಳ ಮೇಲೆಯೂ ಇರುವ ಪ್ರಧಾನರನ್ನೂ, ಅಧಿಕಾರಿಗಳನ್ನೂ, ಪರಾಕ್ರಮಶಾಲಿಗಳನ್ನೂ, ಶೂರರನ್ನೂ ಯೆರೂಸಲೇಮಿನಲ್ಲಿ ಕೂಡಿ ಬರಲು ಕರೆಸಿದನು.


ದಾವೀದನು ಸಾವಿರ ಮಂದಿಗೂ, ನೂರು ಮಂದಿಗೂ ಪ್ರಧಾನರಾದವರ ಸಂಗಡ, ಎಲ್ಲಾ ನಾಯಕರ ಸಂಗಡ ಆಲೋಚನೆ ಮಾಡಿದನು.


ಅವನು ಅವರನ್ನು ಲೆಬನೋನಿಗೆ ಕಳುಹಿಸಿದನು. ತಿಂಗಳು ತಿಂಗಳಿಗೂ ನೇಮಕದ ಪ್ರಕಾರ, ಹತ್ತು ಸಾವಿರ ಜನರನ್ನು ಕಳುಹಿಸಿದನು. ಅವರು ಒಂದು ತಿಂಗಳು ಲೆಬನೋನಿನಲ್ಲಿದ್ದು, ಎರಡು ತಿಂಗಳು ತಮ್ಮ ಮನೆಗಳಲ್ಲಿದ್ದರು. ಅದೋನೀರಾಮನು ಆಳುಗಳ ಮೇಲೆ ಯಜಮಾನನಾಗಿದ್ದನು.


ಆ ಅಧಿಪತಿಗಳು ತಮಗೆ ನೇಮಕವಾದ ತಿಂಗಳಲ್ಲಿ ಅರಸನಾದ ಸೊಲೊಮೋನನಿಗೋಸ್ಕರವೂ, ಅರಸನ ಮೇಜಿಗೆ ಬರುವವರೆಲ್ಲರಿಗೋಸ್ಕರವೂ ಸಿದ್ಧಮಾಡಿದ್ದರು. ಅವರಿಗೆ ಕೊರತೆಯಾದದ್ದು ಒಂದೂ ಇರಲಿಲ್ಲ.


ಇದಲ್ಲದೆ ಅರಸನಿಗೂ, ಅವನ ಮನೆಗೂ ಆಹಾರವನ್ನು ಸಿದ್ಧಮಾಡಿಸುವುದಕ್ಕೋಸ್ಕರ ಸೊಲೊಮೋನನಿಗೆ ಸಮಸ್ತ ಇಸ್ರಾಯೇಲಿನ ಮೇಲೆ ಹನ್ನೆರಡು ಜಿಲ್ಲಾಧಿಕಾರಿಗಳು ಇದ್ದರು. ಪ್ರತಿಯೊಬ್ಬನೂ ತನಗೆ ವರುಷದಲ್ಲಿ ನೇಮಕವಾದ ತಿಂಗಳು ಬಂದಾಗ, ದವಸಧಾನ್ಯಗಳನ್ನು ಒದಗಿಸುತ್ತಿದ್ದನು.


ಅವನು ಸಾವಿರ ಜನಕ್ಕೆ ಅಧಿಪತಿಗಳಾಗಿಯೂ ಐವತ್ತು ಜನಕ್ಕೆ ಅಧಿಪತಿಗಳಾಗಿಯೂ, ತನ್ನ ಭೂಮಿಯನ್ನು ಊಳುವವರಾಗಿಯೂ ತನ್ನ ಪೈರನ್ನು ಕೊಯ್ಯುವವರಾಗಿಯೂ ತನ್ನ ಯುದ್ಧದ ಆಯುಧಗಳನ್ನು ಹಾಗು ತನ್ನ ರಥಸಾಮಗ್ರಿಗಳನ್ನು ಮಾಡುವವರಾಗಿಯೂ ನೇಮಿಸುವನು.


ಆಗ ನಾನು ನಿಮ್ಮಲ್ಲಿ ಪ್ರಸಿದ್ಧರಾದ ಜ್ಞಾನಿಗಳನ್ನು ಕರೆಯಿಸಿ, ಒಂದೊಂದು ಗೋತ್ರದಲ್ಲಿ ಸಾವಿರ ಮಂದಿಯ ಮೇಲೆ, ನೂರು ಮಂದಿಯ ಮೇಲೆ, ಐವತ್ತು ಮಂದಿಯ ಮೇಲೆ, ಹತ್ತು ಮಂದಿಯ ಮೇಲೆ ಅಧಿಕಾರಿಗಳನ್ನಾಗಿ ನೇಮಿಸಿದೆನು.


ಮೋಶೆಯು ಇಸ್ರಾಯೇಲರಲ್ಲಿ ಇರುವ ಸಮರ್ಥರನ್ನು ಆರಿಸಿಕೊಂಡು, ಅವರನ್ನು ಜನರ ಮೇಲೆ ಮುಖ್ಯಸ್ಥರನ್ನಾಗಿ ಮಾಡಿ, ಸಾವಿರ ಮಂದಿಯ ಮೇಲೆ, ನೂರು ಮಂದಿಯ ಮೇಲೆ, ಐವತ್ತು ಮಂದಿಯ ಮೇಲೆ, ಹತ್ತು ಮಂದಿಯ ಮೇಲೆ ಅಧಿಕಾರಿಗಳನ್ನಾಗಿ ನೇಮಿಸಿದನು.


ಇದಲ್ಲದೆ ಬಲವುಳ್ಳವರಾದ ಯೆರೀಯನ ಸಹೋದರರು ಎರಡು ಸಾವಿರದ ಏಳು ನೂರು ಮಂದಿ ಕುಟುಂಬಗಳ ಮುಖ್ಯಸ್ಥರಾಗಿದ್ದರು. ಅರಸನಾದ ದಾವೀದನು ಇವರನ್ನು ದೇವರ ಸಮಸ್ತ ಕಾರ್ಯಗಳ ನಿಮಿತ್ತವಾಗಿಯೂ ರೂಬೇನ್ಯರ ಮೇಲೆಯೂ, ಗಾದ್ಯರ ಮೇಲೆಯೂ, ಮನಸ್ಸೆಯ ಅರ್ಧ ಗೋತ್ರದ ಮೇಲೆಯೂ ಅಧಿಪತಿಗಳಾಗಿ ಮಾಡಿದನು.


ಮೊದಲನೆಯ ತಿಂಗಳಿಗೋಸ್ಕರ ಮೊದಲನೆಯ ವರ್ಗದ ಮೇಲೆ ಜಬ್ದಿಯೇಲನ ಮಗ ಯಾಷೊಬ್ಬಾಮನು. ಅವನ ವರ್ಗದಲ್ಲಿ ಇಪ್ಪತ್ತನಾಲ್ಕು ಸಾವಿರ ಜನರು.


ಆಗ ಪಿತೃಗಳ ಪ್ರಧಾನರೂ, ಇಸ್ರಾಯೇಲ್ ಗೋತ್ರಗಳ ಪ್ರಧಾನರೂ, ಸಹಸ್ರಾಧಿಪತಿಗಳೂ ಶತಾಧಿಪತಿಗಳೂ, ಅರಸನ ಕೆಲಸದ ಯಜಮಾನರೂ ಇಷ್ಟಪೂರ್ವಕವಾಗಿ ಕಾಣಿಕೆಗಳನ್ನು ತಂದು,


ಯೆಹೋವ ದೇವರು ಇಸ್ರಾಯೇಲರನ್ನು ಸುತ್ತಲಿರುವ ಎಲ್ಲಾ ಶತ್ರುಗಳಿಂದ ತಪ್ಪಿಸಿ, ಅವರಿಗೆ ವಿಶ್ರಾಂತಿಕೊಟ್ಟ ಬಹಳ ದಿವಸಗಳ ತರುವಾಯ ಯೆಹೋಶುವನ ದಿವಸಗಳು ಗತಿಸಿ ವೃದ್ಧನಾದನು.


ದಾವೀದನ ಪರಾಕ್ರಮಶಾಲಿಗಳ ಹೆಸರುಗಳು ಇವೇ: ಮೂರು ಜನ ಮುಖ್ಯಸ್ಥರಲ್ಲಿ ಒಬ್ಬನು ತಹ್ಕೆಮೋನ್ಯನಾದ ಯೋಷೆಬ್ ಬಷ್ಷೆಬೆತ ಎಂಬವನು; ಇವನು ತನ್ನ ಈಟಿಯಿಂದ ಎಂಟುನೂರು ಮಂದಿಗೆ ವಿರೋಧವಾಗಿ ಹೋರಾಡಿ ಅವರನ್ನು ಒಂದೇ ಕಾಳಗದಲ್ಲಿ ಕೊಂದುಹಾಕಿದನು.


ದಾವೀದನ ಬಳಿಯಲ್ಲಿದ್ದ ಮುಖ್ಯಸ್ಥರಾದ ಪರಾಕ್ರಮಶಾಲಿಗಳು ಇವರೇ. ಇಸ್ರಾಯೇಲನ್ನು ಕುರಿತು ಯೆಹೋವ ದೇವರು ಹೇಳಿದ ವಾಕ್ಯದ ಪ್ರಕಾರ, ಅವನನ್ನು ಅರಸನನ್ನಾಗಿ ಮಾಡುವುದಕ್ಕೆ ಅವರು ಸಮಸ್ತ ಇಸ್ರಾಯೇಲಿನ ಸಂಗಡ ಅವನ ರಾಜ್ಯದಲ್ಲಿ ತಮ್ಮ ಸಂಪೂರ್ಣ ಸಹಾಯ ನೀಡಿದರು.


ಆಗ ಸೊಲೊಮೋನನು ಸಮಸ್ತ ಇಸ್ರಾಯೇಲರ ಶತಾಧಿಪತಿಗಳೊಂದಿಗೂ, ಸಹಸ್ರಾಧಿಪತಿಗಳೊಂದಿಗೂ, ನ್ಯಾಯಾಧಿಪತಿಗಳೊಂದಿಗೂ, ಪ್ರಧಾನರಾದವರೊಂದಿಗೂ, ಸಮಸ್ತ ಇಸ್ರಾಯೇಲರ ಪಿತೃಗಳ ಶ್ರೇಷ್ಠರಾದ ಸಮಸ್ತ ಪ್ರಭುಗಳೊಂದಿಗೂ ಮಾತನಾಡಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು