Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 26:27 - ಕನ್ನಡ ಸಮಕಾಲಿಕ ಅನುವಾದ

27 ಅವರು ಯೆಹೋವ ದೇವರ ಆಲಯವನ್ನು ದುರಸ್ತಿಪಡಿಸುವುದಕ್ಕೆ ಯುದ್ಧಗಳಿಂದಲೂ, ಕೊಳ್ಳೆಯಿಂದಲೂ ಸಂಪಾದಿಸಿದವುಗಳನ್ನು ಪ್ರತಿಷ್ಠೆ ಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

27 ಇವರು ಯೆಹೋವನ ಆಲಯದ ವೃದ್ಧಿಗೋಸ್ಕರ ತಮಗೆ ಯುದ್ಧದಲ್ಲಿ ಸಿಕ್ಕಿದ ಕೊಳ್ಳೆಯ ಒಂದು ಭಾಗವನ್ನು ಯೆಹೋವನಿಗೆಂದು ಮುಡುಪಾಗಿ ಇಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

27 ಅರಸನಾದ ದಾವೀದನೂ ಗೋತ್ರ ಪ್ರಧಾನರೂ ಸಹಸ್ರ ಅಧಿಪತಿಗಳೂ ಶತಾಧಿಪತಿಗಳ ಸೇನಾನಾಯಕರೂ ಸರ್ವೇಶ್ವರನ ಆಲಯದ ವೃದ್ಧಿಗಾಗಿ ತಮಗೆ ಯುದ್ಧದಲ್ಲಿ ಸಿಕ್ಕಿದ ಕೊಳ್ಳೆಯ ಒಂದು ಭಾಗವನ್ನು ಸರ್ವೇಶ್ವರನಿಗೆಂದು ಮುಡಿಪಾಗಿಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

27 ಅರಸನಾದ ದಾವೀದನೂ ಗೋತ್ರಪ್ರಧಾನರೂ ಸಹಸ್ರಾಧಿಪತಿಗಳೂ ಶತಾಧಿಪತಿಗಳೂ ಸೇನಾನಾಯಕರೂ ಯೆಹೋವನ ಆಲಯದ ವೃದ್ಧಿಗೋಸ್ಕರ ತಮಗೆ ಯುದ್ಧದಲ್ಲಿ ಸಿಕ್ಕಿದ ಕೊಳ್ಳೆಯ ಒಂದು ಭಾಗವನ್ನು ಯೆಹೋವನಿಗೆಂದು ಮುಡುಪಾಗಿ ಇಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

27 ಯುದ್ಧದಲ್ಲಿ ಗೆದ್ದ ವಸ್ತುಗಳಲ್ಲಿ ಕೆಲವನ್ನು ದೇವಾಲಯ ಕಟ್ಟಲು ಎತ್ತಿಡಲು ತೀರ್ಮಾನಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 26:27
8 ತಿಳಿವುಗಳ ಹೋಲಿಕೆ  

ಅವರು ಅದನ್ನು ಕೆಲಸದವರಿಗೆ ಕೊಟ್ಟು, ಯೆಹೋವ ದೇವರ ಆಲಯದ ದುರಸ್ತಿ ಮಾಡಿಸಿದರು.


ಎಲ್ಲಾ ಬೆಳ್ಳಿಬಂಗಾರ, ಕಂಚು, ಕಬ್ಬಿಣ ಪಾತ್ರೆಗಳು ಯೆಹೋವ ದೇವರಿಗೆ ಅರ್ಪಿತವಾಗಿರಬೇಕು. ಅವು ಯೆಹೋವ ದೇವರ ಭಂಡಾರಕ್ಕೆ ಸೇರಿರಬೇಕು,” ಎಂದು ಆಜ್ಞಾಪಿಸಿದನು.


ಈ ಶೆಲೋಮೋತನೂ ಅವನ ಸಹೋದರರೂ ಅರಸನಾದ ದಾವೀದನೂ ಮುಖ್ಯಸ್ಥರಾದ ಪಿತೃಗಳೂ ಸೈನ್ಯಾಧಿಪತಿಗಳಾದ ಸಹಸ್ರಗಳ ಮೇಲೆಯೂ ಶತ್ರುಗಳ ಮೇಲೆಯೂ ಅಧಿಪತಿಗಳಾದವರೂ ಪ್ರತಿಷ್ಠೆ ಮಾಡಿದ ಪ್ರತಿಷ್ಠಿತವಾದವುಗಳ ಬೊಕ್ಕಸಗಳನ್ನು ಕಾಯುತ್ತಿದ್ದರು.


ಇದಲ್ಲದೆ ದರ್ಶಿಯಾದ ಸಮುಯೇಲನೂ, ಕೀಷನ ಮಗ ಸೌಲನೂ, ನೇರನ ಮಗ ಅಬ್ನೇರನೂ, ಚೆರೂಯಳ ಮಗ ಯೋವಾಬನೂ ಪ್ರತಿಷ್ಠೆ ಮಾಡಿದ್ದೆಲ್ಲವೂ ಮತ್ತು ಯಾರು ಪ್ರತಿಷ್ಠೆ ಮಾಡಿದ್ದರೋ, ಅದೆಲ್ಲವೂ ಶೆಲೋಮೋತನ ಕೈಕೆಳಗೂ, ಅವನ ಸಹೋದರರ ಕೈಕೆಳಗೂ ಇತ್ತು.


ಅರಸನಾದ ದಾವೀದನು ಚಿನ್ನ, ಬೆಳ್ಳಿ ಮತ್ತು ಕಂಚಿನ ಎಲ್ಲಾ ವಸ್ತುಗಳನ್ನು ಯೆಹೋವ ದೇವರಿಗೆ ಸಮರ್ಪಿಸಿದನು. ಜೊತೆಗೆ ಅವನು ಸೋತ ಎಲ್ಲಾ ದೇಶಗಳಿಂದ ವಶಪಡಿಸಿಕೊಂಡ ವಸ್ತುಗಳನ್ನೂ ಅರ್ಪಿಸಿದನು.


ಇವುಗಳನ್ನು ಅರಸನಾದ ದಾವೀದನು ಎದೋಮ್ಯರು, ಮೋವಾಬ್ಯರು, ಅಮ್ಮೋನ್ಯರು, ಫಿಲಿಷ್ಟಿಯರು, ಅಮಾಲೇಕ್ಯರು ಎಂಬ ಸಕಲ ಜನಾಂಗಗಳ ಬಳಿಯಿಂದ ತೆಗೆದುಕೊಂಡು ಬಂದ ಬೆಳ್ಳಿಬಂಗಾರವನ್ನು ಯೆಹೋವ ದೇವರಿಗೆ ಪ್ರತಿಷ್ಠೆ ಮಾಡಿದನು.


ಹೀಗೆಯೇ ಸೊಲೊಮೋನನು ಯೆಹೋವ ದೇವರ ಆಲಯಕ್ಕೋಸ್ಕರ ಮಾಡಿಸಿದ ಕೆಲಸವೆಲ್ಲಾ ಮುಗಿಯಿತು. ಆಗ ಸೊಲೊಮೋನನು ತನ್ನ ತಂದೆ ದಾವೀದನು ಪ್ರತಿಷ್ಠೆ ಮಾಡಿದ ಬೆಳ್ಳಿಯನ್ನೂ, ಬಂಗಾರವನ್ನೂ, ಎಲ್ಲಾ ಸಲಕರಣೆಗಳನ್ನೂ ದೇವರ ಆಲಯದ ಭಂಡಾರಕ್ಕೆ ಸೇರಿಸಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು