Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 26:16 - ಕನ್ನಡ ಸಮಕಾಲಿಕ ಅನುವಾದ

16 ಶುಪ್ಪೀಮ್, ಹೋಸ ಎಂಬವರಿಗೆ ಪಶ್ಚಿಮದಲ್ಲಿರುವ ಶೆಲ್ಲೆಕೆತ್ ಎಂಬ ಬಾಗಿಲು ಬಂತು. ಅವು ಮೇಲಕ್ಕೆ ಹೋಗುವ ರಾಜಮಾರ್ಗದ ಬಳಿಯಲ್ಲಿ ಒಂದಕ್ಕೊಂದು ಎದುರಾಗಿ ವರ್ಗಗಳಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ಶುಪ್ಪೀಮ್ ಮತ್ತು ಹೋಸ ಎಂಬುವರಿಗೆ ಪಶ್ಚಿಮದ ಬಾಗಿಲೂ ಅದರ ಸಮೀಪದಲ್ಲಿರುವ ಶಲ್ಲೆಕೆತ್ ಎಂಬ ಬಾಗಿಲು ಚೀಟಿನಿಂದ ನೇಮಕವಾದವು. ಶೆಲ್ಲೆಕೆತ್ ಬಾಗಿಲು ಪಟ್ಟಣದಿಂದ ದೇವಾಲಯಕ್ಕೆ ಏರಿಹೋಗುವ ದಾರಿಯಲ್ಲಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

16 ಶುಪ್ಪೀಮ್, ಹೋಸ ಎಂಬವರಿಗೆ ಪಶ್ಚಿಮ ಬಾಗಿಲೂ ಅದರ ಸಮೀಪದಲ್ಲಿರುವ ಶೆಲ್ಲೆಕೆತೆಂಬ ಬಾಗಿಲೂ ಚೀಟಿನಿಂದ ನೇಮಕವಾಗಿದ್ದವು. ಶೆಲ್ಲೆಕೆತ್ ಬಾಗಿಲು ಪಟ್ಟಣದಿಂದ ದೇವಾಲಯಕ್ಕೆ ಏರಿಹೋಗುವ ದಾರಿಯಲ್ಲಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ಹೋಸ ಎಂಬವರಿಗೆ ಪಡುವಣ ಬಾಗಲೂ ಅದರ ಸಮೀಪದಲ್ಲಿರುವ ಶೆಲ್ಲೆಕೆತೆಂಬ ಬಾಗಲೂ ಚೀಟಿನಿಂದ ನೇಮಕವಾದವು. ಶೆಲ್ಲೆಕೆತ್ ಬಾಗಲು [ಪಟ್ಟಣದಿಂದ ದೇವಾಲಯಕ್ಕೆ] ಏರಿಹೋಗುವ ದಾರಿಯಲ್ಲಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ಶುಪ್ಪೀಮ್ ಮತ್ತು ಹೋಸ ಎಂಬವರಿಗೆ ಪಶ್ಚಿಮದ ಬಾಗಿಲನ್ನು ಮತ್ತು ಮೇಲ್ದಾರಿಯಲ್ಲಿದ್ದ ಶೆಲ್ಲೆಕೆತ್ ಬಾಗಿಲನ್ನು ಕಾಯುವ ಕೆಲಸ ದೊರೆಯಿತು. ಕಾವಲುಗಾರರು ಪಕ್ಕಪಕ್ಕದಲ್ಲಿಯೇ ನಿಂತುಕೊಳ್ಳುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 26:16
8 ತಿಳಿವುಗಳ ಹೋಲಿಕೆ  

ಲೇವಿಯರ ಮುಖ್ಯಸ್ಥರಾದ ಹಷಬ್ಯನೂ, ಶೇರೇಬ್ಯನೂ; ಕದ್ಮಿಯೇಲನ ಮಗನಾದ ಯೇಷೂವನೂ, ಅವರಿಗೆ ಎದುರಾದ ತಂಡವಾಗಿ ನಿಂತ ಅವರ ಸಹೋದರರೂ, ದೇವರ ಮನುಷ್ಯನಾದ ದಾವೀದನ ಆಜ್ಞೆಯ ಪ್ರಕಾರ ಕೃತಜ್ಞತಾಸ್ತುತಿ ಮಾಡುವುದಕ್ಕೆ ವರ್ಗ ವರ್ಗಗಳಾಗಿದ್ದರು.


ಅವನ ಮೇಜಿನ ಭೋಜನವನ್ನೂ, ಅವನ ಅಧಿಪತಿಗಳು ಕುಳಿತಿರುವ ರೀತಿಯನ್ನೂ, ಅವನ ಸೇವಕರು ನಿಂತಿರುವುದನ್ನೂ, ಅವರ ವಸ್ತ್ರಗಳನ್ನೂ, ಅವನ ಪಾನದಾಯಕರನ್ನೂ ಅವರ ವಸ್ತ್ರಗಳನ್ನೂ, ಅವನು ಯೆಹೋವ ದೇವರ ಆಲಯದಲ್ಲಿ ಅರ್ಪಿಸಿದ ದಹನಬಲಿಗಳನ್ನೂ ಕಂಡಾಗ ಅವಳು ವಿಸ್ಮಯಗೊಂಡಳು.


ಇದಲ್ಲದೆ ಹಿರಿಯರು ಕಿರಿಯರ ಹಾಗೆಯೂ, ಶಿಷ್ಯನು ಬೋಧಕನ ಹಾಗೆಯೂ ವರ್ಗಕ್ಕೆ ಎದುರಾಗಿ ವರ್ಗದವರು ಚೀಟುಗಳನ್ನು ಹಾಕಿದರು.


ಅವನ ಮೇಜಿನ ಭೋಜನವನ್ನೂ, ಅವನ ಅಧಿಪತಿಗಳು ಕುಳಿತಿರುವ ರೀತಿಯನ್ನೂ, ಅವನ ಸೇವಕರು ನಿಂತಿರುವುದನ್ನೂ, ಅವರ ವಸ್ತ್ರಗಳನ್ನೂ, ಅವನ ಪಾನದಾಯಕರನ್ನೂ, ಅವನು ಯೆಹೋವ ದೇವರ ಆಲಯದಲ್ಲಿ ಅರ್ಪಿಸಿದ ದಹನಬಲಿಗಳನ್ನೂ ಕಂಡಾಗ ಅವಳು ವಿಸ್ಮಯಗೊಂಡಳು.


ಓಬೇದ್ ಏದೋಮನಿಗೆ ದಕ್ಷಿಣ ಭಾಗ ಬಂತು. ಅವನ ಪುತ್ರರಿಗೆ ಉಗ್ರಾಣ ಮನೆ ಬಂತು.


ಪೂರ್ವ ಕಡೆಯಾಗಿ ಆರು ಮಂದಿ ಲೇವಿಯರಿದ್ದರು. ಉತ್ತರ ಭಾಗವಾಗಿ ದಿನಕ್ಕೆ ನಾಲ್ಕು ಮಂದಿಯೂ, ದಕ್ಷಿಣ ಭಾಗವಾಗಿ ದಿನಕ್ಕೆ ನಾಲ್ಕು ಮಂದಿಯೂ ಉಗ್ರಾಣ ಮಂದಿರದ ಬಳಿಯಲ್ಲಿ ಇಬ್ಬರಿಬ್ಬರಾಗಿಯೂ,


ಪಶ್ಚಿಮ ಭಾಗವಾದ ದೇವಾಲಯದ ಅಂಗಳಕ್ಕೆ ಹೋಗುವ ರಾಜಮಾರ್ಗದಲ್ಲಿ ನಾಲ್ಕು ಮಂದಿಯೂ, ದೇವಾಲಯದ ಅಂಗಳ ಬಳಿಯಲ್ಲಿ ಇಬ್ಬರೂ ಇದ್ದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು