Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 25:1 - ಕನ್ನಡ ಸಮಕಾಲಿಕ ಅನುವಾದ

1 ಇದಲ್ಲದೆ ದಾವೀದನೂ, ಸೈನ್ಯಾಧಿಪತಿಗಳೂ ಆಸಾಫ್, ಹೇಮಾನ್, ಯೆದುತೂನ್; ಇವರ ಪುತ್ರರಲ್ಲಿ ಕಿನ್ನರಿಗಳಿಂದಲೂ, ವೀಣೆಗಳಿಂದಲೂ, ತಾಳಗಳಿಂದಲೂ ಪ್ರವಾದಿಸಲು ತಕ್ಕವರನ್ನು ಸೇವೆಗೆ ಪ್ರತ್ಯೇಕಿಸಿದರು. ಕೆಲಸದವರ ಲೆಕ್ಕವು ಅವರ ಸೇವೆಯ ಪ್ರಕಾರವಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಆಮೇಲೆ ದಾವೀದನು ಮತ್ತು ಗುಡಾರದ ಸೇವೆ ಸಲ್ಲಿಸುತ್ತಿದ್ದ ಪ್ರಧಾನರು ಆಸಾಫ್ಯ, ಹೇಮಾನ್ಯ ಮತ್ತು ಯೆದುತೂನ್ಯರ ಮಕ್ಕಳನ್ನು ಸೇವೆ ಮಾಡುವುದಕ್ಕೋಸ್ಕರ ಆಯ್ಕೆಮಾಡಿದರು. ಇವರು ಕಿನ್ನರಿ, ಸ್ವರಮಂಡಲ, ತಾಳ, ಇವುಗಳನ್ನು ನುಡಿಸುತ್ತಾ, ಪ್ರವಾದಿಸುತ್ತ, ಗಾಯನಮಾಡುತ್ತಿದ್ದರು. ಆ ಸೇವೆಯನ್ನು ಮಾಡತಕ್ಕ ಪುರುಷರ ಪಟ್ಟಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

1 ದಾವೀದನು ಹಾಗೂ ಆರಾಧಕ ಮಂಡಲಿಯ ಮುಖ್ಯಸ್ಥರು ಕಿನ್ನರಿ, ಸ್ವರಮಂಡಲ, ತಾಳ ಇವುಗಳನ್ನು ಬಾರಿಸುತ್ತಾ, ಪರವಶರಾಗಿ ಗಾಯನ ಸೇವೆ ಮಾಡುವುದಕ್ಕಾಗಿ ಆಸಾಫ್ಯರನ್ನೂ ಹೇಮಾನ್ಯರನ್ನೂ ಯೆದುತೂನ್ಯರನ್ನೂ ಆರಿಸಿದರು. ಈ ಸೇವೆಯನ್ನು ಮಾಡಬೇಕಾಗಿದ್ದ ಪುರುಷರ ಪಟ್ಟಿ:

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ಆಮೇಲೆ ದಾವೀದನೂ ಆರಾಧಕಮಂಡಲಿಯವರ ಪ್ರಧಾನರೂ ಕಿನ್ನರಿ ಸ್ವರಮಂಡಲ ತಾಳ ಇವುಗಳನ್ನು ಬಾರಿಸುತ್ತಾ ಪರವಶರಾಗಿ ಗಾಯನ ಸೇವೆಮಾಡುವದಕ್ಕೋಸ್ಕರ ಆಸಾಫ್ಯರನ್ನೂ ಹೇಮಾನ್ಯರನ್ನೂ ಯೆದುತೂನ್ಯರನ್ನೂ ಆರಿಸಿದರು. ಈ ಸೇವೆಯನ್ನು ಮಾಡತಕ್ಕ ಪುರುಷರ ಪಟ್ಟಿ -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ದಾವೀದನೂ ಸೇನಾಪತಿಗಳೂ ಆಸಾಫನ ಸಂತತಿಯವರನ್ನು ವಿಶೇಷವಾದ ಸೇವೆಗೆ ಪ್ರತ್ಯೇಕಿಸಿದರು. ಆಸಾಫನ ಗಂಡುಮಕ್ಕಳು ಹೇಮಾನ್ ಮತ್ತು ಯೆದುತೂನ್. ಹಾರ್ಪ್ ವಾದ್ಯಗಳನ್ನು, ಲೈರ್ ವಾದ್ಯಗಳನ್ನು ಮತ್ತು ತಾಳಗಳನ್ನು ಬಾರಿಸುತ್ತಾ ದೇವರ ಸಂದೇಶವನ್ನು ಪ್ರವಾದಿಸುವುದೇ ಇವರ ಸೇವೆಯಾಗಿತ್ತು. ಈ ರೀತಿಯಾಗಿ ದೇವರ ಸೇವೆಯನ್ನು ಮಾಡಿದವರು ಯಾರೆಂದರೆ:

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 25:1
46 ತಿಳಿವುಗಳ ಹೋಲಿಕೆ  

ಸೇವೆಗೆ ಆಯ್ಕೆಯಾದ ವ್ಯಕ್ತಿಗಳು ಮತ್ತು ಅವರ ಪುತ್ರರ ಹೆಸರುಗಳು ಹೀಗಿವೆ: ಕೊಹಾತ್ಯರ ಮಕ್ಕಳಲ್ಲಿ ಸಂಗೀತಗಾರನಾದ ಹೇಮಾನನು. ಅವನು ಯೋಯೇಲನ ಮಗನು, ಅವನು ಸಮುಯೇಲನ ಮಗನು,


ಆದರೆ ಈಗ ವಾದ್ಯಗಾರನನ್ನು ನನ್ನ ಬಳಿಗೆ ಕರೆದುಕೊಂಡು ಬಾ,” ಎಂದನು. ಆ ವಾದ್ಯ ಬಾರಿಸುವವನು ಬಾರಿಸಿದಾಗ, ಯೆಹೋವ ದೇವರ ಕೈ ಎಲೀಷನ ಮೇಲೆ ಬಂತು.


“ತರುವಾಯ ಫಿಲಿಷ್ಟಿಯರ ತಾಣವಿರುವ ದೇವರ ಗಿಬೆಯ ಗುಡ್ಡಕ್ಕೆ ಹೋಗುವಿ. ಅಲ್ಲಿಂದ ನೀನು ಪಟ್ಟಣಕ್ಕೆ ಪ್ರವೇಶಿಸುವಾಗ, ನಿನಗೆದುರಾಗಿ ವೀಣೆ, ದಮ್ಮಡಿ, ಕೊಳಲು, ಕಿನ್ನರಿಗಳನ್ನು ತಮ್ಮ ಮುಂದೆ ಇಟ್ಟುಕೊಂಡು ಮೇಲಿನಿಂದ ಇಳಿದು ಬರುವ ಪ್ರವಾದಿಗಳ ಗುಂಪು ಬರುವುದು. ಅವರು ಪ್ರವಾದಿಸುವರು.


ಹೇಮಾನನ ಬಲಗಡೆಯಲ್ಲಿ ನಿಲ್ಲುತ್ತಿದ್ದ ಅವನ ಸಹೋದರನಾದ ಆಸಾಫನು ಜೊತೆಸೇವಕನಾಗಿದ್ದನು. ಈ ಆಸಾಫನು ಬೆರೆಕ್ಯನ ಮಗನು, ಅವನು ಶಿಮ್ಮನ ಮಗನು.


ಯೆರೂಸಲೇಮಿನ ಗೋಡೆಯನ್ನು ಪ್ರತಿಷ್ಠೆ ಮಾಡುವಾಗ ಸ್ತುತಿಗಳಿಂದಲೂ, ಹಾಡುವುದರಿಂದಲೂ, ತಾಳಗಳಿಂದಲೂ, ವೀಣೆಗಳಿಂದಲೂ, ಕಿನ್ನರಿಗಳಿಂದಲೂ ಪ್ರತಿಷ್ಠೆಯನ್ನು ಸಂತೋಷವಾಗಿ ಆಚರಿಸುವುದಕ್ಕೆ ಲೇವಿಯರನ್ನು ಯೆರೂಸಲೇಮಿಗೆ ಬರಮಾಡುವ ನಿಮಿತ್ತವಾಗಿ ಅವರನ್ನು ಅವರ ಸಮಸ್ತ ಸ್ಥಳಗಳಲ್ಲಿ ಹುಡುಕಿದರು.


ಈ ಮನುಷ್ಯರು ಕೆಲಸವನ್ನು ನಂಬಿಕೆಯಿಂದ ಮಾಡಿದರು. ಅವರ ವಿಚಾರಣೆಯ ಮೇಲ್ವಿಚಾರಕರು ಯಾರೆಂದರೆ ಮೆರಾರೀಯ ಪುತ್ರರಲ್ಲಿ ಲೇವಿಯರಾದ ಯಹಾತನೂ, ಓಬದ್ಯನೂ; ಕೊಹಾತ್ಯರ ಮಕ್ಕಳಲ್ಲಿ ಜೆಕರ್ಯನೂ, ಮೆಷುಲ್ಲಾಮನೂ; ಗೀತವಾದ್ಯಗಳಲ್ಲಿ ಬುದ್ಧಿಯುಳ್ಳವರಾದ ಲೇವಿಯರೆಲ್ಲರೂ ಅದನ್ನು ನಡೆಸುತ್ತಾ ಇದ್ದರು.


ಅರಸನು ಪ್ರವೇಶಿಸುವ ಸ್ಥಳದಲ್ಲಿ ತನ್ನ ಸ್ತಂಭದ ಬಳಿಯಲ್ಲಿ ನಿಂತಿದ್ದನು. ಪ್ರಧಾನರೂ, ತುತೂರಿ ಊದುವವರೂ, ಅರಸನ ಬಳಿಯಲ್ಲಿ ನಿಂತಿದ್ದರು. ಇದಲ್ಲದೆ ದೇಶದ ಜನರೆಲ್ಲರೂ ಸಂತೋಷಪಟ್ಟು ತುತೂರಿಗಳನ್ನು ಊದುತ್ತಿದ್ದರು. ಹಾಗೆಯೇ ಹಾಡುಗಾರರು ಗೀತವಾದ್ಯಗಳನ್ನು ಹಿಡಿದು ಸ್ತುತಿಸುವವರೂ ಬೋಧಿಸುವವರೂ ಇದ್ದರು. ಇದನ್ನು ಕಂಡ ಕೂಡಲೆ ಅತಲ್ಯಳು ತನ್ನ ವಸ್ತ್ರಗಳನ್ನು ಹರಿದುಕೊಂಡು, “ದ್ರೋಹ, ದ್ರೋಹ,” ಎಂದು ಕೂಗಿದಳು.


ಯೆದುತೂನನ ಪುತ್ರರಲ್ಲಿ ಗೆದಲ್ಯ, ಚೆರೀ, ಯೆಶಾಯ, ಶಿಮ್ಮೀ, ಹಷಬ್ಯ, ಮತ್ತಿತ್ಯ. ಈ ಆರು ಮಂದಿಯು ಯೆದುತೂನನ ಪುತ್ರರು. ತಮ್ಮ ತಂದೆ ಯೆದುತೂನನ ಕೈಕೆಳಗೆ ಕಿನ್ನರಿಗಳನ್ನು ಬಾರಿಸಿ, ಯೆಹೋವ ದೇವರನ್ನು ಕೊಂಡಾಡಿ, ಸ್ತುತಿಸಿ ಪ್ರವಾದಿಸುತ್ತಿದ್ದರು.


ವಾದ್ಯ ಪ್ರಾರಂಭಿಸಿರಿ; ದಮ್ಮಡಿಯನ್ನೂ, ರಮ್ಯವಾದ ಕಿನ್ನರಿಯನ್ನೂ ವೀಣೆಯ ಸಂಗಡ ಬಾರಿಸಿರಿ.


ಲೇವಿಯರ ಮುಖ್ಯಸ್ಥರಾದ ಹಷಬ್ಯನೂ, ಶೇರೇಬ್ಯನೂ; ಕದ್ಮಿಯೇಲನ ಮಗನಾದ ಯೇಷೂವನೂ, ಅವರಿಗೆ ಎದುರಾದ ತಂಡವಾಗಿ ನಿಂತ ಅವರ ಸಹೋದರರೂ, ದೇವರ ಮನುಷ್ಯನಾದ ದಾವೀದನ ಆಜ್ಞೆಯ ಪ್ರಕಾರ ಕೃತಜ್ಞತಾಸ್ತುತಿ ಮಾಡುವುದಕ್ಕೆ ವರ್ಗ ವರ್ಗಗಳಾಗಿದ್ದರು.


ಹಿಜ್ಕೀಯನು ಅವನವನ ಸೇವೆಯ ಪ್ರಕಾರ ಯಾಜಕರ, ಲೇವಿಯರ ಸರತಿಗಳನ್ನು ನೇಮಿಸಿದನು. ದಹನಬಲಿಗಳನ್ನೂ ಮತ್ತು ಸಮಾಧಾನದ ಬಲಿಗಳನ್ನೂ ಅರ್ಪಿಸುವುದಕ್ಕೂ, ಸೇವಿಸುವುದಕ್ಕೂ ಯೆಹೋವ ದೇವರ ಪಾಳೆಯದ ಬಾಗಿಲುಗಳಲ್ಲಿ ಸ್ತೋತ್ರ ಮಾಡುವುದಕ್ಕೂ, ಕೊಂಡಾಡುವುದಕ್ಕೂ ಯಾಜಕರನ್ನೂ, ಲೇವಿಯರನ್ನೂ ನೇಮಿಸಿದನು.


ಇದಲ್ಲದೆ ಯಾಜಕನಾದ ಯೆಹೋಯಾದನು ದೇವರ ಆಲಯದಲ್ಲಿದ್ದ ಅರಸನಾದ ದಾವೀದನ ಈಟಿಗಳನ್ನೂ, ದೊಡ್ಡ ಮತ್ತು ಸಣ್ಣ ಗುರಾಣಿಗಳನ್ನೂ ಶತಾಧಿಪತಿಗಳಾದವರಿಗೆ ಕೊಟ್ಟು,


ಏಳನೆಯ ವರ್ಷದಲ್ಲಿ ಯೆಹೋಯಾದಾವನು ತನ್ನನ್ನು ಬಲಪಡಿಸಿಕೊಂಡು ಶತಾಧಿಪತಿಗಳಾಗಿರುವ ಯೆರೋಹಾಮನ ಮಗ ಅಜರ್ಯನನ್ನೂ, ಯೆಹೋಹಾನಾನನ ಮಗ ಇಷ್ಮಾಯೇಲನನ್ನೂ, ಓಬೇದನ ಮಗ ಅಜರ್ಯನನ್ನೂ, ಅದಾಯನ ಮಗ ಮಾಸೇಯನನ್ನೂ, ಜಿಕ್ರಿಯ ಮಗ ಎಲಿಷಾಫಾಟನನ್ನೂ ಕರೆದುಕೊಂಡು, ಅವರ ಸಂಗಡ ಒಡಂಬಡಿಕೆಯನ್ನು ಮಾಡಿದನು.


ಇದಲ್ಲದೆ ತಾನು ಇಸ್ರಾಯೇಲಿನ ಸಮಸ್ತ ಪ್ರಧಾನರನ್ನೂ ಯಾಜಕರನ್ನೂ ಲೇವಿಯರನ್ನೂ ಒಟ್ಟುಗೂಡಿಸಿ ಬರಮಾಡಿದನು.


ಇದಲ್ಲದೆ ಬಲವುಳ್ಳ ಪರಾಕ್ರಮಶಾಲಿಯಾದ ಪ್ರಾಯಸ್ತನಾಗಿದ್ದ ಚಾದೋಕನೂ, ಅವನ ತಂದೆಯ ಮನೆಯಿಂದ 22 ಮಂದಿ ಪ್ರಧಾನರೂ.


ಅವರ ಸಹೋದ್ಯೋಗಿ ಮೆರಾರೀಯ ಪುತ್ರರು ಎಡಗಡೆಯಲ್ಲಿ ನಿಂತಿದ್ದರು. ಏತಾನನು ಕೀಷೀಯ ಮಗನು, ಅವನು ಅಬ್ದೀಯ ಮಗನು, ಅವನು ಮಲ್ಲೂಕನ ಮಗನು,


ಇದಲ್ಲದೆ ಲೇವಿಯರ ಕುಟುಂಬಗಳಲ್ಲಿ ಮುಖ್ಯಸ್ಥರಾದ ಇವರು ಹಾಡುಗಾರರಾಗಿದ್ದು, ಸ್ವತಂತ್ರವಾದ ಕೊಠಡಿಗಳಲ್ಲಿ ವಾಸವಾಗಿದ್ದರು. ಏಕೆಂದರೆ ಅವರು ರಾತ್ರಿ ಹಗಲು ಅದೇ ಕಾರ್ಯದಲ್ಲಿದ್ದರು.


ಅವರು ಯಾರೆಂದರೆ: ಆಸಾಫನ ಪುತ್ರರಲ್ಲಿ ಜಕ್ಕೂರ್, ಯೋಸೇಫ, ನೆತನ್ಯ, ಅಶರೇಲ; ಇವರು ಆಸಾಫನ ಕೈಕೆಳಗೆ ಪ್ರವಾದಿಸಿದರು. ಇವರು ಅರಸನ ಮೇಲ್ವಿಚಾರಣೆಯಲ್ಲಿದ್ದರು.


ತಮ್ಮನ್ನು ಪ್ರತಿಷ್ಠಿಸಿಕೊಂಡಿದ್ದ ಯಾಜಕರು ಪರಿಶುದ್ಧ ಸ್ಥಳದಿಂದ ಹೊರಟಾಗ, ನಯವಾದ ನಾರು ಬಟ್ಟೆಗಳನ್ನು ಧರಿಸಿಕೊಂಡಿದ್ದ ಲೇವಿಯ ಗಾಯಕರಾದ ಆಸಾಫ್, ಹೇಮಾನ್, ಯೆದುತೂನ್ ಹಾಗೂ ಇವರ ಮಕ್ಕಳೂ ಸಹೋದರರೂ ತುತೂರಿಗಳನ್ನು ಊದತಕ್ಕ ನೂರಿಪ್ಪತ್ತು ಮಂದಿ ಯಾಜಕರೂ ಬಲಿಪೀಠದ ಪೂರ್ವದಿಕ್ಕಿನಲ್ಲಿ ನಿಂತುಕೊಂಡರು.


ಅವನು ತನ್ನ ತಂದೆಯಾದ ದಾವೀದನ ಕ್ರಮದ ಪ್ರಕಾರ, ಅವರ ಸೇವೆಗೆ ಯಾಜಕ ವರ್ಗಗಳವರನ್ನೂ ಪ್ರತಿ ದಿವಸಕ್ಕೆ ಬೇಕಾದ ಕಾರ್ಯದ ಪ್ರಕಾರ, ಯಾಜಕರ ಮುಂದೆ ಸ್ತುತಿಸುವುದಕ್ಕೂ, ಸೇವೆ ಮಾಡುವುದಕ್ಕೂ ತಮ್ಮ ವಿಚಾರಗಳಲ್ಲಿ ಲೇವಿಯರನ್ನೂ, ಸೇವೆಯ ಬಾಗಿಲಲ್ಲಿ ತಮ್ಮ ವರ್ಗಗಳ ಸರದಿಯ ಪ್ರಕಾರವಾಗಿ ದ್ವಾರಪಾಲಕರನ್ನೂ ನೇಮಿಸಿದನು. ಏಕೆಂದರೆ ದೇವರ ಮನುಷ್ಯನಾದ ದಾವೀದನು ಹಾಗೆಯೇ ನೇಮಿಸಿದ್ದನು.


ಆಗ ಯೆಹೋಯಾದಾವನು ಲೇವಿಯರಾದ ಯಾಜಕರ ಕೈಕೆಳಗೆ ಯೆಹೋವ ದೇವರ ಆಲಯದ ಪರಿಚಾರಕರನ್ನು ನೇಮಿಸಿದನು. ದಾವೀದನು ಆ ಯಾಜಕರನ್ನು ಯೆಹೋವ ದೇವರ ಆಲಯದ ಸೇವೆಗಾಗಿ ವರ್ಗವರ್ಗಗಳಾಗಿ ಬೇರ್ಪಡಿಸಿದ್ದನು. ದಾವೀದನಿಂದ ನೇಮಕವಾದ ಪ್ರಕಾರ ಸಂತೋಷದಿಂದ ಹಾಡುತ್ತಾ ಮೋಶೆಯ ನಿಯಮದಲ್ಲಿ ಬರೆದಿರುವಂತೆ ಯೆಹೋವ ದೇವರಿಗೆ ದಹನಬಲಿಗಳನ್ನು ಅರ್ಪಿಸುವುದು ಅವರ ಕರ್ತವ್ಯವಾಗಿತ್ತು.


ದಾವೀದನೂ, ಆಸಾಫನೂ, ಹೇಮಾನನೂ, ಅರಸನ ಪ್ರವಾದಿಯಾದ ಯೆದುತೂನನೂ ಇವರ ಆಜ್ಞೆಯ ಪ್ರಕಾರ ಆಸಾಫನ ಮಕ್ಕಳಾದ ಹಾಡುಗಾರರು ತಮ್ಮ ಸ್ಥಳದಲ್ಲಿದ್ದರು. ದ್ವಾರಪಾಲಕರು ಬಾಗಿಲಲ್ಲಿ ಇದ್ದರು. ಅವರು ತಮ್ಮ ಸೇವೆಯನ್ನು ಬಿಡಲು ಆಗದೆ ಇತ್ತು. ಏಕೆಂದರೆ ಅವರ ಸಹೋದರರಾದ ಲೇವಿಯರಿಗೋಸ್ಕರ ಭೋಜನವನ್ನು ಸಿದ್ಧಮಾಡುತ್ತಿದ್ದರು.


ಅನಂತರ ಅವನು ನನ್ನನ್ನು ಒಳಗಿನ ಪ್ರಾಕಾರಕ್ಕೆ ಕರೆತಂದರು. ಅಲ್ಲಿ ಎರಡು ಕೊಠಡಿಗಳು ಇದ್ದವು. ಒಂದು ಉತ್ತರದ ಬಾಗಿಲಿನ ಕಡೆಗೆ ದಕ್ಷಿಣಕ್ಕೆ ಅಭಿಮುಖವಾಗಿತ್ತು; ಮತ್ತೊಂದು ಪೂರ್ವದ ಬಾಗಿಲಿನ ಕಡೆಗೆ ಉತ್ತರಕ್ಕೆ ಅಭಿಮುಖವಾಗಿತ್ತು.


ಅರಸನು ಆ ಸುಗಂಧದ ಮರಗಳಿಂದ ಯೆಹೋವ ದೇವರ ಆಲಯಕ್ಕೋಸ್ಕರವೂ ಅರಮನೆಗೋಸ್ಕರವೂ ಸ್ತಂಭಗಳನ್ನು ಮಾಡಿಸಿದನು. ಇದಲ್ಲದೆ ಅವುಗಳಿಂದ ಹಾಡುವವರಿಗೋಸ್ಕರ ಕಿನ್ನರಿಗಳನ್ನೂ, ವೀಣೆಗಳನ್ನೂ ಮಾಡಿಸಿದನು. ಅಂದಿನಿಂದ ಈ ದಿನದವರೆಗೂ ಅಂಥಾ ಸುಗಂಧದ ಮರಗಳು ಬಂದದ್ದೂ ಇಲ್ಲ, ಕಂಡದ್ದೂ ಇಲ್ಲ.


ಲೇವಿಯ ಪುತ್ರರು: ಗೇರ್ಷೋಮ್, ಕೊಹಾತ್, ಮೆರಾರೀ ಎಂಬುವರು.


ಆಗ ದಾವೀದನೂ, ಸಮಸ್ತ ಇಸ್ರಾಯೇಲರೂ ಸಕಲ ವಾದ್ಯಗಳಾದ ಕಿನ್ನರಿ, ವೀಣೆ, ದಮ್ಮಡಿ, ತಾಳ, ತುತೂರಿ ಇವುಗಳನ್ನು ತಮ್ಮ ಸಮಸ್ತ ಬಲದಿಂದ ಬಾರಿಸುತ್ತಾ, ಹಾಡುತ್ತಾ ದೇವರ ಮುಂದೆ ಹೋದರು.


ಹೀಗೆ ಇಸ್ರಾಯೇಲರೆಲ್ಲರೂ ಯೆಹೋವ ದೇವರ ಒಡಂಬಡಿಕೆಯ ಮಂಜೂಷವನ್ನು ಆರ್ಭಟದಿಂದಲೂ, ಕೊಂಬಿನ ಶಬ್ದದಿಂದಲೂ, ತುತೂರಿಗಳಿಂದಲೂ, ತಾಳಗಳಿಂದಲೂ ವೀಣೆಗಳನ್ನೂ, ಕಿನ್ನರಿಗಳನ್ನೂ ಬಾರಿಸುತ್ತಾ ತೆಗೆದುಕೊಂಡು ಬಂದರು.


ಆಸಾಫನಿಗೋಸ್ಕರ ಮೊದಲನೆಯ ಚೀಟು ಯೋಸೇಫನಿಗೆ ಬಂತು. ಎರಡನೆಯದು ಗೆದಲ್ಯನಿಗೆ; ಅವನೂ, ಅವನ ಸಹೋದರರೂ, ಅವನ ಪುತ್ರರೂ ಹನ್ನೆರಡು ಮಂದಿ.


ಎಲೀಚಾಫಾನ್ಯರಲ್ಲಿ ಶಿಮ್ರೀ, ಯೆಹೀಯೇಲ್, ಆಸಾಫ್ಯರಲ್ಲಿ ಜೆಕರ್ಯ, ಮತ್ತನ್ಯ,


ಹೇಮಾನ್ಯರಲ್ಲಿ ಯೆಹೀಯೇಲ್, ಶಿಮ್ಮಿ; ಯೆದುತೂನ್ಯರಲ್ಲಿ ಶೆಮಾಯ ಹಾಗೂ ಉಜ್ಜೀಯೇಲ್.


ಹಾಡುಗಾರರು: ಆಸಾಫನ ವಂಶಜರು 128.


ಮೋಶೆಯ ಗ್ರಂಥದಲ್ಲಿ ಬರೆದ ಹಾಗೆ ಯೆರೂಸಲೇಮಿನಲ್ಲಿ ವಾಸವಾಗಿರುವ ದೇವರ ಆರಾಧನೆಗೋಸ್ಕರ ಯಾಜಕರನ್ನು ಮತ್ತು ಲೇವಿಯರನ್ನು ಅವರ ಸರತಿಯ ಪ್ರಕಾರವೂ ನೇಮಿಸಿದರು.


ಇದಲ್ಲದೆ ಆಸಾಫನ ಮಗ ಜಬ್ದೀಯ ಮಗ, ಮೀಕನ ಮಗ ಮತ್ತನ್ಯನು ಪ್ರಾರ್ಥನೆಯನ್ನು ಮತ್ತು ಕೃತಜ್ಞತಾಸ್ತುತಿಯನ್ನು ಪ್ರಾರಂಭಿಸಲು ಮುಖ್ಯಸ್ಥನಾಗಿದ್ದನು. ಅವನ ಸಂಗಡಿಗರಲ್ಲಿ ಎರಡನೆಯವನು ಬಕ್ಬುಕ್ಯನು, ಅವನ ಸಂಗಡ ಯೆದುತೂನನ ಮಗ, ಗಲಾಲನ ಮಗ, ಶಮ್ಮೂವನ ಮಗ ಅಬ್ದನು.


ಅಮಾವಾಸ್ಯೆಯಲ್ಲಿಯೂ ಉತ್ಸವ ದಿವಸವಾಗಿರುವ ಪೂರ್ಣಿಮೆಯಲ್ಲಿಯೂ ಕೊಂಬನ್ನು ಊದಿರಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು