Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 22:4 - ಕನ್ನಡ ಸಮಕಾಲಿಕ ಅನುವಾದ

4 ಲೆಕ್ಕವಿಲ್ಲದಷ್ಟು ದೇವದಾರು ಮರಗಳನ್ನು ಸಿದ್ಧಮಾಡಿಸಿದನು. ಏಕೆಂದರೆ ಸೀದೋನ್ಯರೂ, ಟೈರಿನವರೂ ದಾವೀದನಿಗೆ ಹೆಚ್ಚಾಗಿ ದೇವದಾರು ಮರಗಳನ್ನು ತಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಲೆಕ್ಕವಿಲ್ಲದ್ದಷ್ಟು ತಾಮ್ರವನ್ನೂ, ಎಣಿಸಲಾರದಷ್ಟು ದೇವದಾರುಮರಗಳನ್ನೂ ಸಿದ್ಧಪಡಿಸಿದನು. ಚೀದೋನ್ಯರು ಮತ್ತು ತೂರ್ಯರೂ ಅವನಿಗೆ ದೇವದಾರುಮರಗಳನ್ನು ತಂದುಕೊಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ಎಣಿಸಲಾಗದಷ್ಟು ದೇವದಾರು ಮರಗಳನ್ನೂ ಸಿದ್ಧಪಡಿಸಿದನು; ಸಿದೋನ್ ಹಾಗು ಟೈರಿನ ಜನರು ಅವನಿಗೆ ದೇವದಾರು ಮರಗಳನ್ನು ಒದಗಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ಲೆಕ್ಕವಿಲ್ಲದಷ್ಟು ತಾಮ್ರವನ್ನೂ ಎಣಿಸಲಾರದಷ್ಟು ದೇವದಾರುಮರಗಳನ್ನೂ ಸಿದ್ಧಪಡಿಸಿದನು; ಚೀದೋನ್ಯರೂ ತೂರ್ಯರೂ ಅವನಿಗೆ ದೇವದಾರು ಮರಗಳನ್ನು ತಂದು ಕೊಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಅಲ್ಲದೆ ಲೆಕ್ಕಮಾಡಲು ಅಸಾಧ್ಯವಾದಷ್ಟು ದೇವದಾರು ಮರಗಳ ದಿಮ್ಮಿಯನ್ನು ಕೂಡಿಸಿಟ್ಟಿದ್ದನು. ತೂರ್ಯರು ಮತ್ತು ಚೀದೋನಿನವರು ಆ ದಿಮ್ಮಿಗಳನ್ನು ದಾವೀದನಿಗೆ ತಂದು ಕೊಟ್ಟಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 22:4
5 ತಿಳಿವುಗಳ ಹೋಲಿಕೆ  

ಅವರು ಕಲ್ಲುಕುಟಿಕರಿಗೂ, ಬಡಗಿಯವರಿಗೂ, ಹಣವನ್ನು ಕೊಟ್ಟು ಪಾರಸಿಯ ಅರಸನಾದ ಕೋರೆಷನಿಂದ ಹೊಂದಿದ ಅಪ್ಪಣೆಯ ಪ್ರಕಾರ, ಲೆಬನೋನಿನಿಂದ ಯೊಪ್ಪದ ಸಮುದ್ರದ ಮಟ್ಟಿಗೂ ದೇವದಾರು ಮರಗಳನ್ನು ತೆಗೆದುಕೊಂಡು ಬರಲು ಸೀದೋನ್ಯರಿಗೂ, ಟೈರಿನವರಿಗೂ ಅನ್ನಪಾನಗಳನ್ನೂ, ಎಣ್ಣೆಯನ್ನೂ ಕೊಟ್ಟರು.


ಸೊಲೊಮೋನನು ಟೈರಿನ ಅರಸನಾದ ಹೀರಾಮನಿಗೆ, “ನೀನು ನನ್ನ ತಂದೆ ದಾವೀದನಿಗೆ ವಾಸವಾಗಿರುವ ಅರಮನೆಯನ್ನು ಕಟ್ಟಿಸಲು, ದೇವದಾರು ಮರಗಳನ್ನು ಕಳುಹಿಸಿ, ಅವನಿಗೋಸ್ಕರ ಹೇಗೆ ಸಹಾಯ ಮಾಡಿದೆಯೋ, ಹಾಗೆಯೇ ನನಗೂ ಮಾಡು.


ಆಗ ಟೈರಿನ ಅರಸನಾದ ಹೀರಾಮನು ದಾವೀದನ ಬಳಿಗೆ ದೂತರನ್ನು, ದೇವದಾರು ಮರಗಳನ್ನು, ಬಡಗಿಯವರನ್ನು ಮತ್ತು ಕಲ್ಲುಕುಟಿಗರನ್ನು ಕಳುಹಿಸಿದನು, ಅವರು ದಾವೀದನಿಗೆ ಅರಮನೆಯನ್ನು ಕಟ್ಟಿದರು.


“ಅವು ಕಣಿವೆಗಳ ಹಾಗೆ ವಿಸ್ತರಿಸಿವೆ. ನದಿತೀರದಲ್ಲಿರುವ ತೋಟಗಳ ಹಾಗೆಯೂ, ಯೆಹೋವ ದೇವರು ನೆಟ್ಟ ಅಗರು ಮರಗಳ ಹಾಗೆಯೂ ನೀರಿನ ಬಳಿಯಲ್ಲಿರುವ ದೇವದಾರುಗಳ ಹಾಗೆಯೂ ಇರುತ್ತವೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು