Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 22:16 - ಕನ್ನಡ ಸಮಕಾಲಿಕ ಅನುವಾದ

16 ಚಿನ್ನ, ಬೆಳ್ಳಿ, ಕಂಚು, ಕಬ್ಬಿಣ, ಮುಂತಾದವುಗಳಲ್ಲಿ ನಿಪುಣರು ಲೆಕ್ಕವಿಲ್ಲದಷ್ಟು ಇದ್ದಾರೆ. ಎದ್ದು ಕೆಲಸ ಮಾಡು, ಯೆಹೋವ ದೇವರು ನಿನ್ನ ಸಂಗಡ ಇರಲಿ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ಬಡಗಿಗಳೂ, ಬಂಗಾರ, ಬೆಳ್ಳಿ, ತಾಮ್ರ, ಕಬ್ಬಿಣಗಳ ಎಲ್ಲಾ ತರಹದ ಕೆಲಸವನ್ನು ಮಾಡುವುದರಲ್ಲಿ ಜಾಣರು ನಿನ್ನೊಂದಿಗಿರುತ್ತಾರೆ. ಅವರನ್ನು ಎಣಿಸಲು ಸಾಧ್ಯವಿಲ್ಲ. ಎದ್ದು ಸಿದ್ಧನಾಗಿ ಕೆಲಸಕ್ಕೆ ಕೈ ಹಾಕು, ಯೆಹೋವನು ನಿನ್ನ ಸಂಗಡ ಇರಲಿ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

16 ಏಳು, ಕೆಲಸಕ್ಕೆ ಕೈಹಾಕು; ಸರ್ವೇಶ್ವರ ನಿನ್ನೊಂದಿಗಿರಲಿ!” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ಶಿಲ್ಪಿಗರೂ ಬಡಗಿಯವರೂ ಬಂಗಾರ ಬೆಳ್ಳಿ ತಾಮ್ರ ಕಬ್ಬಿಣಗಳ ಎಲ್ಲಾ ತರದ ಕೆಲಸವನ್ನು ಮಾಡುವದರಲ್ಲಿ ಜಾಣರೂ ನಿನಗಿರುತ್ತಾರೆ; ಅವರನ್ನು ಲೆಕ್ಕಿಸುವದಕ್ಕಾಗುವದಿಲ್ಲ. ಏಳು, ಕೆಲಸಕ್ಕೆ ಕೈಹಾಕು; ಯೆಹೋವನು ನಿನ್ನ ಸಂಗಡ ಇರಲಿ ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ಬಂಗಾರದ ಕೆಲಸಗಾರರೂ ಬೆಳ್ಳಿ, ತಾಮ್ರ, ಕಬ್ಬಿಣದ ಕೆಲಸಗಾರರೂ ಲೆಕ್ಕವಿಲ್ಲದಷ್ಟು ಇದ್ದಾರೆ. ಈಗ ನೀನು ಕೆಲಸ ಪ್ರಾರಂಭಿಸು. ದೇವರು ನಿನ್ನ ಸಂಗಡವಿರಲಿ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 22:16
22 ತಿಳಿವುಗಳ ಹೋಲಿಕೆ  

“ನನ್ನ ಮಗನೇ, ಯೆಹೋವ ದೇವರು ನಿನ್ನನ್ನು ಕುರಿತು ಹೇಳಿದ ಪ್ರಕಾರ, ನೀನು ಕೃತಾರ್ಥನಾಗಿ, ನೀನು ನಿನ್ನ ದೇವರಾದ ಯೆಹೋವ ದೇವರ ಆಲಯವನ್ನು ಕಟ್ಟಿಸುವಂತೆ ಅವರು ನಿನ್ನ ಸಂಗಡ ಇರಲಿ.


ನನಗೆ ಶಕ್ತಿನೀಡುವ ಕ್ರಿಸ್ತ ಯೇಸುವಿನ ಮೂಲಕ ನಾನು ಎಲ್ಲವನ್ನೂ ಮಾಡಲು ಶಕ್ತನಾಗಿದ್ದೇನೆ.


ಆದ್ದರಿಂದ ಹೀಗೆ ಹೇಳಲಾಗಿದೆ: “ನಿದ್ರೆ ಮಾಡುವವನೇ, ಎಚ್ಚರವಾಗು, ಸತ್ತವರಿಂದ ಎದ್ದೇಳು, ಕ್ರಿಸ್ತನು ನಿನ್ನ ಮೇಲೆ ಪ್ರಕಾಶಿಸುವನು.”


ಆದ್ದರಿಂದ, ನನ್ನ ಪ್ರಿಯ ಸಹೋದರರೇ, ಸ್ಥಿರವಾಗಿ ನಿಲ್ಲಿರಿ. ಯಾವುದೂ ನಿಮ್ಮನ್ನು ಕದಲಿಸದಿರಲಿ. ಕರ್ತನಲ್ಲಿ ನಿಮ್ಮ ಪ್ರಯಾಸವು ನಿಷ್ಫಲವಾಗುವುದಿಲ್ಲವೆಂದು ತಿಳಿದು, ಕರ್ತನ ಕೆಲಸಕ್ಕೆ ಯಾವಾಗಲೂ ನಿಮ್ಮನ್ನು ಸಂಪೂರ್ಣವಾಗಿ ಒಪ್ಪಿಸಿಕೊಡಿರಿ.


ಯೆಹೋವ ದೇವರು ಯೆಹೋಶುವನಿಗೆ, “ನೀನು ಎದ್ದೇಳು, ನೀನು ಈ ಪ್ರಕಾರ ಬೋರಲು ಬಿದ್ದಿರುವುದೇನು?


ನಾನು ನಿನಗೆ ಆಜ್ಞಾಪಿಸಿದ್ದೇನಲ್ಲಾ, ಬಲಿಷ್ಠನಾಗಿರು. ಧೈರ್ಯದಿಂದಿರು, ಭಯಪಡಬೇಡ, ನಿರುತ್ಸಾಹಗೊಳ್ಳಬೇಡ. ಏಕೆಂದರೆ ನೀನು ಹೋಗುವ ಕಡೆಯೆಲ್ಲಾ ನಿನ್ನ ದೇವರಾದ ಯೆಹೋವ ದೇವರು ನಿನ್ನ ಸಂಗಡ ಇದ್ದಾರೆ,” ಎಂದು ಹೇಳಿದರು.


ನೀನು ಜೀವಿಸುವ ದಿವಸಗಳಲ್ಲೆಲ್ಲಾ ಒಬ್ಬನೂ ನಿನ್ನ ಮುಂದೆ ನಿಲ್ಲನು. ನಾನು ಮೋಶೆಯ ಸಂಗಡ ಇದ್ದ ಹಾಗೆಯೇ ನಿನ್ನ ಸಂಗಡ ಇರುವೆನು. ನಾನು ನಿನ್ನನ್ನು ಮರೆಯುವುದಿಲ್ಲ, ನಿನ್ನನ್ನು ತೊರೆಯುವುದಿಲ್ಲ.


“ಇಗೋ, ಕಷ್ಟಪಟ್ಟು ನಾನು ಯೆಹೋವ ದೇವರ ಆಲಯಕ್ಕೋಸ್ಕರ ಮೂರು ಸಾವಿರದ ನಾನೂರ ಎಪ್ಪತ್ತು ಮೆಟ್ರಿಕ್ ಟನ್ ಬಂಗಾರವನ್ನೂ, ಮೂವತ್ತ ನಾಲ್ಕು ಸಾವಿರದ ಐನೂರು ಮೆಟ್ರಿಕ್ ಟನ್ ಬೆಳ್ಳಿಯನ್ನೂ, ಲೆಕ್ಕವಿಲ್ಲದಷ್ಟು ಕಂಚನ್ನೂ, ಕಬ್ಬಿಣವನ್ನೂ ಮರಗಳನ್ನೂ, ಕಲ್ಲುಗಳನ್ನೂ ಸಿದ್ಧಮಾಡಿದ್ದೇನೆ. ನೀನು ಅವುಗಳಿಗೆ ಸೇರಿಸಬಹುದು.


ದಾವೀದನು ಬಾಗಿಲುಗಳ ಕದಗಳನ್ನು ಜೋಡಿಸುವುದಕ್ಕೆ ಬೇಕಾದ ಮೊಳೆಗಳಿಗೋಸ್ಕರ ಬಹಳ ಕಬ್ಬಿಣವನ್ನೂ, ಲೆಕ್ಕವಿಲ್ಲದಷ್ಟು ಕಂಚನ್ನೂ ಸಿದ್ಧಮಾಡಿಸಿದನು.


ಆದರೆ ನಿನಗೆ ಕೇಡು ಮಾಡಲು ನನ್ನ ತಂದೆಗೆ ಮನಸ್ಸಾಗಿದ್ದರೆ, ಅದನ್ನು ನಿನಗೆ ತಿಳಿಸಿ ನೀನು ಸಮಾಧಾನದಿಂದ ಹೋಗುವಹಾಗೆ ನಿನ್ನನ್ನು ಕಳುಹಿಸುವೆನು. ಯೆಹೋವ ದೇವರು ನನ್ನ ತಂದೆಯ ಸಂಗಡ ಇದ್ದ ಹಾಗೆಯೇ ನಿನ್ನ ಸಂಗಡ ಇರಲಿ.


ಇದಲ್ಲದೆ ದಾವೀದನು, “ನನ್ನನ್ನು ಸಿಂಹದ ಕೈಗೂ, ಕರಡಿಯ ಕೈಗೂ ತಪ್ಪಿಸಿಬಿಟ್ಟ ಯೆಹೋವ ದೇವರು, ಈ ಫಿಲಿಷ್ಟಿಯನ ಕೈಗೂ ನನ್ನನ್ನು ತಪ್ಪಿಸಿಬಿಡುವರು,” ಎಂದನು. ಆಗ ಸೌಲನು ದಾವೀದನಿಗೆ, “ನೀನು ಹೋಗು, ಯೆಹೋವ ದೇವರು ನಿನ್ನ ಸಂಗಡ ಇರಲಿ,” ಎಂದನು.


ಆಗ ದೆಬೋರಳು ಬಾರಾಕನಿಗೆ, “ನೀನು ಏಳು. ಏಕೆಂದರೆ ಯೆಹೋವ ದೇವರು ಸೀಸೆರನನ್ನು ನಿನ್ನ ಕೈಯಲ್ಲಿ ಒಪ್ಪಿಸಿಕೊಡುವ ದಿನವು ಇದೇ. ಯೆಹೋವ ದೇವರು ನಿನ್ನ ಮುಂದೆ ಹೊರಡಲಿಲ್ಲವೋ?” ಎಂದಳು. ಹೀಗೆ ಬಾರಾಕನು ತನ್ನ ಹಿಂದೆ ಹತ್ತು ಸಾವಿರ ಜನರನ್ನು ತೆಗೆದುಕೊಂಡು, ತಾಬೋರ್ ಬೆಟ್ಟದಿಂದ ಇಳಿದನು.


“ನನ್ನ ಸೇವಕನಾದ ಮೋಶೆಯು ಮರಣಹೊಂದಿದನು. ಈಗ ನೀನು ಇಸ್ರಾಯೇಲರಾದ ಈ ಜನರೆಲ್ಲರ ಸಹಿತವಾಗಿ ಎದ್ದು, ಯೊರ್ದನ್ ನದಿಯನ್ನು ದಾಟಿ, ಇಸ್ರಾಯೇಲರಿಗೆ ನಾನು ಕೊಡುವ ದೇಶಕ್ಕೆ ಹೋಗು.


ಇದರಲ್ಲಿ ನೀವು ಯುದ್ಧಮಾಡಲು ಅವಶ್ಯವಲ್ಲ. ನೀವು ನೆಲೆಯಾಗಿ ನಿಂತುಕೊಂಡು, ಯೆಹೋವ ದೇವರು ನಿಮಗೆ ಕೊಡುವ ಬಿಡುಗಡೆಯನ್ನು ನೋಡಿರಿ. ಯೆಹೂದದವರೇ, ಯೆರೂಸಲೇಮಿನವರೇ, ಭಯಪಡಬೇಡಿರಿ, ಹೆದರಬೇಡಿರಿ. ಮೂರನೇ ದಿವಸ ಅವರೆದುರಿಗೆ ಹೊರಟು ಹೋಗಿರಿ. ಯೆಹೋವ ದೇವರು ನಿಮ್ಮ ಸಂಗಡ ಇದ್ದಾರೆ,” ಎಂದನು.


ಇದಲ್ಲದೆ ನಿನ್ನ ಬಳಿಯಲ್ಲಿ ಕೆಲಸದವರೂ, ಕಲ್ಲು ಕೆಲಸದವರೂ, ಕಲ್ಲುಕುಟಿಗರೂ, ಬಡಗಿಯವರೂ, ಸಮಸ್ತ ವಿವಿಧ ಕೆಲಸದ ಪ್ರವೀಣರೂ ಅನೇಕ ಮಂದಿ ಇದ್ದಾರೆ.


“ಭೂಮಿಯಲ್ಲಿರುವವರೆಲ್ಲರು ಹೋಗುವ ಮಾರ್ಗವಾಗಿ ನಾನು ಹೋಗುತ್ತೇನೆ. ನೀನು ಬಲಗೊಂಡು ಶೂರನಾಗಿರು.


ಸೊಲೊಮೋನನು ಮಾಡಿಸಿದ ಈ ಸಲಕರಣೆಗಳೆಲ್ಲಾ ಬಹು ಹೆಚ್ಚಾಗಿದ್ದರಿಂದ ಅವುಗಳನ್ನು ಎಣಿಸದೆ ಬಿಟ್ಟನು, ಹೀಗಾಗಿ ಕಂಚಿನ ತೂಕವು ಎಷ್ಟೆಂದು ನಿರ್ಧರಿಸಲಾಗಲಿಲ್ಲ.


ಆದ್ದರಿಂದ ಜಾಗ್ರತೆಯಾಗಿರು. ಏಕೆಂದರೆ, ಯೆಹೋವ ದೇವರು ಪರಿಶುದ್ಧ ಆಲಯವನ್ನು ಕಟ್ಟಬೇಕೆಂದು ನಿನ್ನನ್ನು ಆರಿಸಿಕೊಂಡಿದ್ದಾರೆ. ನೀನು ಧೈರ್ಯದಿಂದ ಕೆಲಸಕ್ಕೆ ಕೈ ಹಚ್ಚು,” ಎಂದನು.


ಆದರೆ ನಾನು ನನ್ನ ಸಮಸ್ತ ಶಕ್ತಿಯಿಂದ ನನ್ನ ದೇವರ ಮನೆಯ ನಿಮಿತ್ತ, ಬಂಗಾರದ ಕೆಲಸಕ್ಕೋಸ್ಕರ ಬಂಗಾರವನ್ನೂ, ಬೆಳ್ಳಿಯ ಕೆಲಸಕ್ಕೋಸ್ಕರ ಬೆಳ್ಳಿಯನ್ನೂ, ಕಂಚಿನ ಕೆಲಸಕ್ಕೋಸ್ಕರ ಕಂಚನ್ನೂ, ಕಬ್ಬಿಣದ ಕೆಲಸಕ್ಕೋಸ್ಕರ ಕಬ್ಬಿಣವನ್ನೂ, ಮರದ ಕೆಲಸಕ್ಕೋಸ್ಕರ ಮರವನ್ನೂ, ಗೋಮೇಧಿಕ ರತ್ನಗಳನ್ನೂ; ಕೆತ್ತುವುದಕ್ಕೆ ರತ್ನ ವಿಚಿತ್ರವಾದಂಥ ಕಲ್ಲುಗಳನ್ನೂ; ಸಕಲ ಅಮೂಲ್ಯವಾದ ಕಲ್ಲುಗಳನ್ನೂ. ಅಮೃತ ಶಿಲೆಗಳನ್ನೂ ಬಹಳಷ್ಟು ಸಿದ್ಧಮಾಡಿದ್ದೇನೆ.


ದಾವೀದನ ಮಗ ಸೊಲೊಮೋನನು ತನ್ನ ರಾಜ್ಯದಲ್ಲಿ ಬಲಗೊಂಡನು ಮತ್ತು ಅವನ ದೇವರಾದ ಯೆಹೋವ ದೇವರು ಅವನ ಸಂಗಡ ಇದ್ದು, ಅವನನ್ನು ಉನ್ನತನನ್ನಾಗಿ ಮಾಡಿದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು