Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 22:11 - ಕನ್ನಡ ಸಮಕಾಲಿಕ ಅನುವಾದ

11 “ನನ್ನ ಮಗನೇ, ಯೆಹೋವ ದೇವರು ನಿನ್ನನ್ನು ಕುರಿತು ಹೇಳಿದ ಪ್ರಕಾರ, ನೀನು ಕೃತಾರ್ಥನಾಗಿ, ನೀನು ನಿನ್ನ ದೇವರಾದ ಯೆಹೋವ ದೇವರ ಆಲಯವನ್ನು ಕಟ್ಟಿಸುವಂತೆ ಅವರು ನಿನ್ನ ಸಂಗಡ ಇರಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ನನ್ನ ಮಗನೇ, ನೀನು ಸಫಲನಾಗಿರುವಂತೆಯೂ, ನಿನ್ನ ದೇವರಾದ ಯೆಹೋವನು ನಿನ್ನ ವಿಷಯದಲ್ಲಿ ಮಾಡಿದ ವಾಗ್ದಾನದ ಪ್ರಕಾರ ನೀನು ದೇವಾಲಯವನ್ನು ಕಟ್ಟುವಂತೆಯೂ ಆತನು ನಿನ್ನ ಸಂಗಡ ಇರಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 “ನನ್ನ ಮಗನೇ, ನೀನು ಕೃತಾರ್ಥನಾಗಬೇಕು; ನಿನ್ನ ದೇವರಾದ ಸರ್ವೇಶ್ವರ ನನ್ನ ವಿಷಯದಲ್ಲಿ ಮಾಡಿದ ವಾಗ್ದಾನದ ಪ್ರಕಾರ ನೀನು ದೇವಾಲಯವನ್ನು ಕಟ್ಟಬೇಕು. ಆ ಸರ್ವೇಶ್ವರ ನಿನ್ನೊಂದಿಗಿರಲಿ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ನನ್ನ ಮಗನೇ, ನೀನು ಕೃತಾರ್ಥನಾಗುವಂತೆಯೂ ನಿನ್ನ ದೇವರಾದ ಯೆಹೋವನು ನಿನ್ನ ವಿಷಯದಲ್ಲಿ ಮಾಡಿದ ವಾಗ್ದಾನದ ಪ್ರಕಾರ ನೀನು ದೇವಾಲಯವನ್ನು ಕಟ್ಟುವಂತೆಯೂ ಆತನು ನಿನ್ನ ಸಂಗಡ ಇರಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 “ಮಗನೇ, ನೀನು ದೇವಾಲಯವನ್ನು ಕಟ್ಟುವಾಗ ಯೆಹೋವನು ನಿನ್ನ ಸಂಗಡವಿದ್ದು ನಿನಗೆ ಯಶಸ್ಸನ್ನು ದಯಪಾಲಿಸಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 22:11
11 ತಿಳಿವುಗಳ ಹೋಲಿಕೆ  

ಚಿನ್ನ, ಬೆಳ್ಳಿ, ಕಂಚು, ಕಬ್ಬಿಣ, ಮುಂತಾದವುಗಳಲ್ಲಿ ನಿಪುಣರು ಲೆಕ್ಕವಿಲ್ಲದಷ್ಟು ಇದ್ದಾರೆ. ಎದ್ದು ಕೆಲಸ ಮಾಡು, ಯೆಹೋವ ದೇವರು ನಿನ್ನ ಸಂಗಡ ಇರಲಿ,” ಎಂದನು.


ಕರ್ತ ಯೇಸು ನಿನ್ನ ಆತ್ಮದೊಂದಿಗೆ ಇರಲಿ. ಕೃಪೆಯು ನಿಮ್ಮೆಲ್ಲರೊಂದಿಗಿರಲಿ.


ಸಮಾಧಾನದ ದೇವರು ನಿಮ್ಮೆಲ್ಲರೊಂದಿಗಿರಲಿ. ಆಮೆನ್.


ನಾನು ನಿಮಗೆ ಆಜ್ಞಾಪಿಸಿದ್ದೆಲ್ಲವನ್ನು ಅನುಸರಿಸುವ ಹಾಗೆ ಅವರಿಗೆ ಬೋಧಿಸಿರಿ. ಇಗೋ, ಲೋಕಾಂತ್ಯದವರೆಗೂ ಎಲ್ಲಾ ದಿವಸ ನಾನು ನಿಮ್ಮ ಸಂಗಡ ಇರುತ್ತೇನೆ,” ಎಂದರು.


“ಇಗೋ ಒಬ್ಬ ಕನ್ನಿಕೆಯು ಗರ್ಭಿಣಿಯಾಗಿ ಮಗನನ್ನು ಹೆರುವಳು, ಆ ಮಗುವಿಗೆ, ‘ಇಮ್ಮಾನುಯೇಲ್’ ಎಂದು ಹೆಸರಿಡುವರು.” ಈ ಹೆಸರಿನ ಅರ್ಥ, “ದೇವರು ನಮ್ಮ ಸಂಗಡ ಇದ್ದಾರೆ,” ಎಂಬುದು.


ಯೆಹೋವ ದೇವರೇ, ನಮಗೆ ಸಮಾಧಾನವನ್ನು ವಿಧಿಸುವಿರಿ. ಏಕೆಂದರೆ ನೀವು ನಮ್ಮ ಕ್ರಿಯೆಗಳನ್ನೆಲ್ಲಾ ನಮಗೋಸ್ಕರ ನಡೆಸಿದ್ದೀರಿ.


ದಾವೀದನು ತನ್ನ ಮಗ ಸೊಲೊಮೋನನಿಗೆ, “ನೀನು ಬಲಗೊಂಡು, ಧೈರ್ಯದಿಂದ ಮಾಡು; ಭಯಪಡಬೇಡ, ನಿರಾಶನಾಗಬೇಡ. ಏಕೆಂದರೆ ನನ್ನ ದೇವರಾಗಿರುವ ಯೆಹೋವ ದೇವರು ನಿನ್ನ ಸಂಗಡ ಇರುತ್ತಾರೆ. ಯೆಹೋವ ದೇವರ ಆಲಯದ ಸೇವೆಯ ಕಾರ್ಯವನ್ನೆಲ್ಲಾ ನೀನು ತೀರಿಸುವವರೆಗೂ, ಅವರು ನಿನ್ನನ್ನು ತೊರೆಯುವುದಿಲ್ಲ, ಕೈಬಿಡುವುದಿಲ್ಲ.


ಇದಲ್ಲದೆ ದಾವೀದನು, “ನನ್ನನ್ನು ಸಿಂಹದ ಕೈಗೂ, ಕರಡಿಯ ಕೈಗೂ ತಪ್ಪಿಸಿಬಿಟ್ಟ ಯೆಹೋವ ದೇವರು, ಈ ಫಿಲಿಷ್ಟಿಯನ ಕೈಗೂ ನನ್ನನ್ನು ತಪ್ಪಿಸಿಬಿಡುವರು,” ಎಂದನು. ಆಗ ಸೌಲನು ದಾವೀದನಿಗೆ, “ನೀನು ಹೋಗು, ಯೆಹೋವ ದೇವರು ನಿನ್ನ ಸಂಗಡ ಇರಲಿ,” ಎಂದನು.


ಆದರೆ ನಿನಗೆ ಕೇಡು ಮಾಡಲು ನನ್ನ ತಂದೆಗೆ ಮನಸ್ಸಾಗಿದ್ದರೆ, ಅದನ್ನು ನಿನಗೆ ತಿಳಿಸಿ ನೀನು ಸಮಾಧಾನದಿಂದ ಹೋಗುವಹಾಗೆ ನಿನ್ನನ್ನು ಕಳುಹಿಸುವೆನು. ಯೆಹೋವ ದೇವರು ನನ್ನ ತಂದೆಯ ಸಂಗಡ ಇದ್ದ ಹಾಗೆಯೇ ನಿನ್ನ ಸಂಗಡ ಇರಲಿ.


ದಾವೀದನ ಮಗ ಸೊಲೊಮೋನನು ತನ್ನ ರಾಜ್ಯದಲ್ಲಿ ಬಲಗೊಂಡನು ಮತ್ತು ಅವನ ದೇವರಾದ ಯೆಹೋವ ದೇವರು ಅವನ ಸಂಗಡ ಇದ್ದು, ಅವನನ್ನು ಉನ್ನತನನ್ನಾಗಿ ಮಾಡಿದರು.


“ಈಗ ಯೆಹೋವ ದೇವರು ತಾವು ಹೇಳಿದ ವಾಗ್ದಾನವನ್ನು ನೆರವೇರಿಸಿದ್ದಾರೆ. ನಾನು ನನ್ನ ತಂದೆಯಾದ ದಾವೀದನಿಗೆ ಬದಲಾಗಿ, ಯೆಹೋವ ದೇವರು ಮಾತುಕೊಟ್ಟ ಪ್ರಕಾರ ಇಸ್ರಾಯೇಲಿನ ಸಿಂಹಾಸನದ ಮೇಲೆ ಕುಳಿತುಕೊಂಡು, ಇಸ್ರಾಯೇಲಿನ ದೇವರಾದ ಯೆಹೋವ ದೇವರ ಹೆಸರಿಗೋಸ್ಕರ ಈ ಆಲಯವನ್ನು ಕಟ್ಟಿಸಿದ್ದೇನೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು