1 ಪೂರ್ವಕಾಲ ವೃತ್ತಾಂತ 17:18 - ಕನ್ನಡ ಸಮಕಾಲಿಕ ಅನುವಾದ18 “ನಿಮ್ಮ ಸೇವಕನ ಘನತೆಯ ನಿಮಿತ್ತ, ದಾವೀದನು ಇನ್ನೂ ಹೆಚ್ಚಾಗಿ ಹೇಳಿಕೊಳ್ಳುವುದೇನಿದೆ? ಏಕೆಂದರೆ ನೀವು ನಿಮ್ಮ ಸೇವಕನನ್ನು ಚೆನ್ನಾಗಿ ಬಲ್ಲಿರಿ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201918 ನೀನು ನಿನ್ನ ಸೇವಕನಾದ ದಾವೀದನನ್ನು ಬಲ್ಲೆ. ಅವನು ತನಗುಂಟಾದ ಘನತೆಯನ್ನು ಕುರಿತು ಇನ್ನೇನು ಹೇಳಾನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)18 ನೀವು ನಿಮ್ಮ ದಾಸ ದಾವೀದನನ್ನು ಚೆನ್ನಾಗಿ ಬಲ್ಲಿರಿ; ನಾನು ನನ್ನ ಘನತೆಯನ್ನು ಕುರಿತು ಇನ್ನೇನು ಹೇಳಲಿ? ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)18 ನೀನು ನಿನ್ನ ಸೇವಕನಾದ ದಾವೀದನನ್ನು ಬಲ್ಲೆ; ಅವನು ತನಗುಂಟಾದ ಘನತೆಯನ್ನು ಕುರಿತು ಇನ್ನೇನು ಹೇಳಾನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್18 ನೀನು ನನಗೆಷ್ಟೋ ಸಹಾಯ ಮಾಡಿರುವೆ. ನಾನು ಕೇವಲ ನಿನ್ನ ಸೇವಕನಷ್ಟೇ. ಅಧ್ಯಾಯವನ್ನು ನೋಡಿ |
ಯೇಸು ಮೂರನೆಯ ಸಾರಿ ಪೇತ್ರನಿಗೆ, “ಯೋಹಾನನ ಮಗನಾದ ಸೀಮೋನನೇ, ನೀನು ನನ್ನ ಮೇಲೆ ಮಮತೆ ಇಟ್ಟಿದ್ದೀಯೋ?” ಎಂದು ಕೇಳಿದರು. ಯೇಸು ಮೂರನೆಯ ಸಾರಿ, “ನೀನು ನನ್ನ ಮೇಲೆ ಮಮತೆ ಇಟ್ಟಿದ್ದೀಯೋ?” ಎಂದು ತನ್ನನ್ನು ಕೇಳಿದ್ದಕ್ಕೆ ಪೇತ್ರನು ದುಃಖಪಟ್ಟು, “ಕರ್ತನೇ, ನಿಮಗೆ ಎಲ್ಲವೂ ತಿಳಿದಿದೆ. ನಾನು ನಿಮ್ಮ ಮೇಲೆ ಎಷ್ಟು ಮಮತೆ ಇಟ್ಟಿದ್ದೇನೆಂದು ನಿಮಗೆ ತಿಳಿದಿದೆ,” ಎಂದನು. ಆಗ ಯೇಸು ಪೇತ್ರನಿಗೆ, “ನನ್ನ ಕುರಿಗಳನ್ನು ಮೇಯಿಸು,” ಎಂದರು.
“ಆದ್ದರಿಂದ ಇಸ್ರಾಯೇಲಿನ ದೇವರಾದ ಯೆಹೋವ ದೇವರು ಹೇಳುವುದೇನೆಂದರೆ, ‘ನಿನ್ನ ಮನೆಯವರೂ ನಿನ್ನ ತಂದೆಯ ಮನೆಯವರೂ ಎಂದೆಂದಿಗೂ ನನ್ನ ಸನ್ನಿಧಿಯಲ್ಲಿ ನಡೆದುಕೊಳ್ಳುವರೆಂದು ನಾನು ನಿಜವಾಗಿ ಹೇಳಿದ್ದೆನು. ಆದರೆ ಈಗ ಯೆಹೋವ ದೇವರು ಹೇಳುವುದೇನೆಂದರೆ: ನನಗೆ ಅದು ದೂರವಾಗಿರಲಿ. ಏಕೆಂದರೆ ನನ್ನನ್ನು ಸನ್ಮಾನಿಸುವವರನ್ನು ನಾನು ಸನ್ಮಾನಿಸುವೆನು. ನನ್ನನ್ನು ತಿರಸ್ಕರಿಸುವವರನ್ನು ನಾನು ತಿರಸ್ಕರಿಸುವೆನು.