Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 17:13 - ಕನ್ನಡ ಸಮಕಾಲಿಕ ಅನುವಾದ

13 ನಾನು ಅವನ ತಂದೆಯಾಗಿರುವೆನು. ಅವನು ನನಗೆ ಮಗನಾಗಿರುವನು. ನಿನಗಿಂತ ಮುಂಚೆ ಇದ್ದವನ ಮೇಲಿಂದ ನನ್ನ ಪ್ರೀತಿಯನ್ನು ಹಿಂತೆಗೆದುಕೊಂಡ ಹಾಗೆ ಎಂದಿಗೂ ಅವನಿಂದ ಹಿಂತೆಗೆಯುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ನಾನು ಅವನಿಗೆ ತಂದೆಯಾಗಿರುವೆನು, ಅವನು ನನಗೆ ಮಗನಾಗಿರುವನು. ನನ್ನ ಕೃಪೆಯನ್ನು ನಿನಗಿಂತ ಮುಂಚೆ ಇದ್ದವನಿಂದ ತೆಗೆದು ಹಾಕಿದ ಹಾಗೆ ಅವನಿಂದ ತೆಗೆಯುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

13 ನಾನು ಅವನಿಗೆ ತಂದೆಯಾಗಿರುವೆನು, ಅವನು ನನಗೆ ಮಗನಾಗಿರುವನು. ನಿನಗಿಂತ ಮುಂಚೆ ಇದ್ದವನನ್ನು ನನ್ನ ಕೃಪೆ ಬಿಟ್ಟು ಹೋಗದ ಹಾಗೆ ಅವನನ್ನು ಬಿಟ್ಟು ಹೋಗುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ನಾನು ಅವನಿಗೆ ತಂದೆಯಾಗಿರುವೆನು, ಅವನು ನನಗೆ ಮಗನಾಗಿರುವನು. ನನ್ನ ಕೃಪೆಯನ್ನು ನಿನಗಿಂತ ಮುಂಚೆ ಇದ್ದವನಿಂದ ತೆಗೆದುಬಿಟ್ಟ ಹಾಗೆ ಅವನಿಂದ ತೆಗೆಯುವದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ನಾನು ಅವನಿಗೆ ತಂದೆಯಾಗಿರುವೆನು; ಅವನು ನನಗೆ ಮಗನಾಗಿರುವನು. ನಿನಗಿಂತ ಮುಂಚೆ ಸೌಲನು ರಾಜನಾಗಿದ್ದನು. ಆದರೆ ನಾನು ಅವನನ್ನು ತೆಗೆದುಹಾಕಿದೆನು. ಆದರೆ ನನ್ನ ಕೃಪೆ ನಿನ್ನ ಮಗನಿಂದ ತೊಲಗಿಹೋಗುವದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 17:13
16 ತಿಳಿವುಗಳ ಹೋಲಿಕೆ  

ದೇವರು ತಮ್ಮ ದೂತರೊಳಗೆ ಯಾರಿಗಾದರೂ ಹೀಗೆ ಎಂದಾದರೂ ಹೇಳಿದ್ದುಂಟೋ, “ನೀನು ನನ್ನ ಪುತ್ರನು; ಇಂದು ನಾನು ನಿನ್ನ ತಂದೆಯಾಗಿದ್ದೇನೆ!” ಎಂದೂ, “ನಾನು ಆತನ ತಂದೆಯಾಗಿರುವೆನು; ಆತನು ನನಗೆ ಮಗನಾಗಿರುವನು!”


ಕಿವಿಯನ್ನು ಇತ್ತ ತಿರುಗಿಸಿರಿ, ನನ್ನ ಬಳಿಗೆ ಬನ್ನಿರಿ, ಆಲಿಸಿದರೆ ಬದುಕಿ ಬಾಳುವಿರಿ. ದಾವೀದನಿಗೆ ಖಂಡಿತವಾಗಿ ವಾಗ್ದಾನ ಮಾಡಿದ ಕೃಪಾವರಗಳನ್ನು ನಿಮಗೆ ಕೊಡುತ್ತೇನೆಂಬ ಶಾಶ್ವತವಾದ ಒಡಂಬಡಿಕೆಯನ್ನು ನಿಮ್ಮೊಂದಿಗೆ ಮಾಡಿಕೊಳ್ಳುವೆನು.


ಯೆಹೋವ ದೇವರು ಬೇಸರಗೊಂಡು, ನೀವು ನಿಮ್ಮ ಮಾರ್ಗದಲ್ಲಿ ನಾಶವಾಗದಂತೆ ಅವರ ಮಗನನ್ನು ಮುದ್ದಿಸಿರಿ. ಏಕೆಂದರೆ ದೇವರ ರೋಷವು ಕ್ಷಣಮಾತ್ರದಲ್ಲಿ ಜ್ವಾಲಿಸುವುದು. ದೇವರ ಆಶ್ರಯ ಪಡೆಯುವವರೆಲ್ಲಾ ಧನ್ಯರು.


ನಾನು ಯೆಹೋವ ದೇವರ ತೀರ್ಪನ್ನು ಹೀಗೆ ಪ್ರಕಟಿಸುವೆನು: ಅವರು ನನಗೆ ಹೇಳಿದ್ದು, “ನೀನು ನನ್ನ ಪುತ್ರನು; ಇಂದು ನಾನು ನಿನ್ನ ತಂದೆಯಾಗಿದ್ದೇನೆ.


ಅವನೇ ನನಗೆ ದೇವಾಲಯವನ್ನು ಕಟ್ಟುವನು. ನಾನು ಅವನ ರಾಜಸಿಂಹಾಸನವನ್ನು ಸದಾಕಾಲಕ್ಕೂ ಸ್ಥಿರಮಾಡುವೆನು.


ಯೆಹೋವ ದೇವರು ಅವನನ್ನು ಕೊಂದುಹಾಕಿ, ರಾಜ್ಯವನ್ನು ಇಷಯನ ಮಗನಾದ ದಾವೀದನ ಕಡೆಗೆ ತಿರುಗಿಸಿದರು.


ಸಮುಯೇಲನು ಅವನಿಗೆ, “ನಿನ್ನ ಬಳಿಯಿಂದ ಇಸ್ರಾಯೇಲಿನ ರಾಜ್ಯವನ್ನು ಯೆಹೋವ ದೇವರು ಈ ಹೊತ್ತು ಕಿತ್ತು, ನಿನಗಿಂತ ಒಳ್ಳೆಯವನಾಗಿರುವ ನಿನ್ನ ನೆರೆಯವನಿಗೆ ಅದನ್ನು ಕೊಟ್ಟರು.


ಇದಲ್ಲದೆ, “ನಾನು ನಿಮಗೆ ತಂದೆಯಾಗಿರುವೆನು. ನೀವು ನನಗೆ ಪುತ್ರಪುತ್ರಿಯರು ಆಗಿರುವಿರಿ,” ಎಂದು ಸರ್ವಶಕ್ತ ಆಗಿರುವ ಕರ್ತದೇವರು ಹೇಳುತ್ತಾರೆ.


ತಂದೆಯು ಪುತ್ರನನ್ನು ಪ್ರೀತಿಸಿ ಎಲ್ಲವನ್ನೂ ಅವರ ಕೈಯಲ್ಲಿ ಕೊಟ್ಟಿದ್ದಾರೆ.


ಆಗ ಮೇಘದೊಳಗಿಂದ, “ಈತನು, ನಾನು ಆರಿಸಿಕೊಂಡ ನನ್ನ ಮಗನು, ಈತನ ಮಾತನ್ನು ಕೇಳಿರಿ,” ಎಂದು ಹೇಳುವ ಧ್ವನಿಯಾಯಿತು.


ಅವರು ದೊಡ್ಡವರಾಗಿ ಮಹೋನ್ನತರ ಪುತ್ರ ಎಂದು ಎನಿಸಿಕೊಳ್ಳುವರು. ಕರ್ತದೇವರು ಅವರ ತಂದೆ ದಾವೀದನ ಸಿಂಹಾಸನವನ್ನು ಅವರಿಗೆ ಕೊಡುವರು.


ಅಲ್ಲಿ ನನ್ನ ಹೆಸರನ್ನಿಡಲು ನಾನು ಆದುಕೊಂಡ ಪಟ್ಟಣವಾದ ಯೆರೂಸಲೇಮಿನಲ್ಲಿ ನನ್ನ ಮುಂದೆ ನನ್ನ ಸೇವಕನಾದ ದಾವೀದನಿಗೆ ಎಂದಿಗೂ ಬೆಳಕು ಆರಿಹೋಗದ ಹಾಗೆ, ಅವನ ಮಗನಿಗೆ ಒಂದು ಗೋತ್ರವನ್ನು ಕೊಡುವೆನು.


ಅವನನ್ನು ನನ್ನ ಮನೆಯಲ್ಲಿಯೂ, ನನ್ನ ರಾಜ್ಯದಲ್ಲಿಯೂ ಸದಾಕಾಲಕ್ಕೂ ಸ್ಥಿರಗೊಳಿಸುವೆನು. ಅವನ ಸಿಂಹಾಸನವು ಯುಗಯುಗಾಂತರಕ್ಕೂ ಶಾಶ್ವತವಾಗಿರುವುದು,’ ” ಎಂದು ಹೇಳಿದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು