1 ಪೂರ್ವಕಾಲ ವೃತ್ತಾಂತ 12:8 - ಕನ್ನಡ ಸಮಕಾಲಿಕ ಅನುವಾದ8 ಇದಲ್ಲದೆ ಮರುಭೂಮಿಯಲ್ಲಿ ಬಲವಾದ ಸ್ಥಳದಲ್ಲಿರುವ ದಾವೀದನ ಬಳಿಯಲ್ಲಿ ತಮ್ಮನ್ನು ಪ್ರತ್ಯೇಕಿಸಿಕೊಂಡಿದ್ದ ಗಾದ್ಯರು ಇದ್ದರು. ಇವರು ಖೇಡ್ಯವನ್ನೂ, ಭಲ್ಲೆಯನ್ನೂ ಹಿಡಿದು ಪರಾಕ್ರಮಶಾಲಿಗಳಾಗಿಯೂ, ಯುದ್ಧಕ್ಕೆ ತಕ್ಕ ಸೈನಿಕರಾಗಿಯೂ ಇದ್ದರು. ಅವರ ಮುಖಗಳು ಸಿಂಹಗಳಂತೆ ಭೀಕರವಾಗಿದ್ದವು. ಪರ್ವತಗಳ ಮೇಲೆ ಇವರು ಜಿಂಕೆಗಳ ಹಾಗೆ ವೇಗವುಳ್ಳವರಾಗಿದ್ದರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20198 ಯುದ್ಧವೀರರೂ ಯುದ್ಧನಿಪುಣರೂ, ಗುರಾಣಿಬರ್ಜಿಗಳಲ್ಲಿ ಪ್ರವೀಣರೂ, ಸಿಂಹಮುಖರೂ, ಬೆಟ್ಟದ ಜಿಂಕೆಯಂತೆ ಓಡುವ ಚುರುಕು ಕಾಲಿನವರು ಆಗಿದ್ದು, ದಾವೀದನು ಅರಣ್ಯ ದುರ್ಗದಲ್ಲಿದ್ದಾಗ ಅವನನ್ನು ಸೇರಿಕೊಂಡ ಗಾದ್ಯರು: ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)8 ದಾವೀದನು ಮರುಭೂಮಿಯ ಕೋಟೆಯಲ್ಲಿದ್ದಾಗ ಅವನ ಪಡೆಗಳಲ್ಲಿ ಬಂದು ಸೇರಿದ ಗಾದ್ ಗೋತ್ರದ ಪ್ರಸಿದ್ಧರೂ ಅನುಭವಶಾಲಿಗಳೂ ಆದ ಯುದ್ಧವೀರರ ಹೆಸರುಗಳು: ಇವರು ನೋಡಲು ಸಿಂಹಗಳಂತೆ ಭೀಕರರೂ ಪರ್ವತದ ಜಿಂಕೆಗಳಂತೆ ಚುರುಕಾದವರೂ ಗುರಾಣಿ, ಈಟಿಗಳನ್ನು ಉಪಯೋಗಿಸುವುದರಲ್ಲಿ ನಿಪುಣರೂ ಆಗಿದ್ದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)8 ರಣವೀರರೂ ಯುದ್ಧನಿಪುಣರೂ ಗುರಾಣಿಬರ್ಜಿಗಳಲ್ಲಿ ಪ್ರವೀಣರೂ ಸಿಂಹಮುಖರೂ ಬೆಟ್ಟದ ಜಿಂಕೆಯಂತೆ ಪಾದತ್ವರಿತರೂ ಆಗಿದ್ದು ದಾವೀದನು ಅರಣ್ಯ ದುರ್ಗದಲ್ಲಿದ್ದಾಗ ಅವನನ್ನು ಕೂಡಿಕೊಂಡ ಗಾದ್ಯರು - ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್8 ಅರಣ್ಯದಲ್ಲಿದ್ದ ಕೋಟೆಯಲ್ಲಿ ಗಾದ್ ಕುಲದ ಕೆಲವರು ದಾವೀದನನ್ನು ಸೇರಿಕೊಂಡರು. ಇವರು ಯುದ್ಧದಲ್ಲಿ ನುರಿತ ಸೈನಿಕರಾಗಿದ್ದರು. ಈಟಿ ಬರ್ಜಿಗಳಲ್ಲಿ ಪರಿಣಿತರು; ಸಿಂಹಗಳಂತೆ ಕ್ರೂರಿಗಳು; ಬೆಟ್ಟದ ಮೇಲೆ ಜಿಂಕೆಯ ತರಹ ವೇಗವಾಗಿ ಓಡಬಲ್ಲವರು. ಅಧ್ಯಾಯವನ್ನು ನೋಡಿ |
ಇದಲ್ಲದೆ ಅಮಚ್ಯನು ಯೆಹೂದದವರನ್ನು ಕೂಡಿಸಿಕೊಂಡು, ಯೆಹೂದ ಬೆನ್ಯಾಮೀನ್ಯರೆಲ್ಲರಲ್ಲಿ ತಮ್ಮ ಪಿತೃಗಳ ಮನೆಗಳ ಪ್ರಕಾರ ಅವರನ್ನು ಸಾವಿರ ಜನರ ಮೇಲೆ ಅಧಿಪತಿಗಳಾಗಿಯೂ, ನೂರು ಜನರ ಮೇಲೆ ಅಧಿಪತಿಗಳಾಗಿಯೂ ಮಾಡಿದನು. ಅವನು ಇಪ್ಪತ್ತು ವರ್ಷ ಮೊದಲುಗೊಂಡು ಹೆಚ್ಚಿನ ಪ್ರಾಯವುಳ್ಳವರನ್ನು ಲೆಕ್ಕಿಸಿ ಆಯ್ದುಕೊಂಡನು. ಯುದ್ಧಕ್ಕೆ ಹೋಗತಕ್ಕಂಥ, ಈಟಿಯನ್ನೂ, ಖೇಡ್ಯವನ್ನೂ ಹಿಡಿದುಕೊಂಡಿರುವಂಥ, ಮೂರು ಲಕ್ಷ ಮಂದಿಯನ್ನು ಕೂಡಿಸಿದನು.