Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 12:40 - ಕನ್ನಡ ಸಮಕಾಲಿಕ ಅನುವಾದ

40 ಇದಲ್ಲದೆ ಅವರ ನೆರೆಯವನಾದ ಇಸ್ಸಾಕಾರ್, ಜೆಬುಲೂನ್, ನಫ್ತಾಲಿಯರು ಮೊದಲುಗೊಂಡು ಎಲ್ಲರೂ ತಮ್ಮ ಎತ್ತು, ಕತ್ತೆ, ಹೇಸರಗತ್ತೆ ಮತ್ತು ಒಂಟೆಗಳ ಮೇಲೆಯೂ ರೊಟ್ಟಿಗಳನ್ನೂ ಆಹಾರವನ್ನೂ, ಹಿಟ್ಟನ್ನೂ ಅಂಜೂರದ ಉಂಡೆಗಳನ್ನೂ ಒಣಗಿದ ದ್ರಾಕ್ಷಿ ಗೊಂಚಲುಗಳನ್ನೂ ದ್ರಾಕ್ಷಾರಸವನ್ನೂ ಎಣ್ಣೆಯನ್ನೂ ದನಕುರಿಗಳನ್ನೂ ಬಹಳವಾಗಿ ತಂದರು. ಇಸ್ರಾಯೇಲಿನಲ್ಲಿ ಸಂತೋಷವಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

40 ಇದಲ್ಲದೆ ಇಸ್ಸಾಕಾರ್, ಜೆಬುಲೂನ್, ನಫ್ತಾಲಿ ಮೊದಲುಗೊಂಡು ಎಲ್ಲಾ ಸಮೀಪ ಪ್ರಾಂತ್ಯಗಳವರು ಎತ್ತು, ಕತ್ತೆ, ಹೇಸರಗತ್ತೆ, ಒಂಟೆ ಇವುಗಳ ಮೇಲೆ ಆಹಾರ ಪದಾರ್ಥಗಳನ್ನು ಹೊತ್ತುಕೊಂಡು ಬಂದರು. ಅವರು ತರತರದ ರೊಟ್ಟಿ, ಅಂಜೂರಹಣ್ಣಿನ ಉಂಡೆ, ಒಣಗಿದ ದ್ರಾಕ್ಷಿಗೊಂಚಲು, ದ್ರಾಕ್ಷಾರಸ, ಎಣ್ಣೆ, ಅನೇಕ ದನಕುರಿಗಳು ಇವುಗಳನ್ನು ತಂದರು. ಇಸ್ರಾಯೇಲರೊಳಗೆ ಮಹಾ ಸಂಭ್ರಮ ಸಂತೋಷವಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

40 ದೂರದ ಉತ್ತರದಲ್ಲಿದ್ದ ಇಸ್ಸಾಕಾರ್, ಜೆಬುಲೂನ್, ನಫ್ತಾಲಿ ಗೋತ್ರಗಳ ಜನರು ತಮ್ಮ ಎತ್ತು, ಕತ್ತೆ, ಹೇಸರಗತ್ತೆ, ಒಂಟೆ ಇವುಗಳ ಮೇಲೆ ರೊಟ್ಟಿ, ಅಂಜೂರ, ಒಣದ್ರಾಕ್ಷಿ, ದ್ರಾಕ್ಷಾರಸ, ಎಣ್ಣೆಗಳನ್ನು ಹೊತ್ತುತಂದರು. ಭೋಜನಕ್ಕೆ ಕುರಿದನಗಳನ್ನು ಸಹ ತೆಗೆದುಕೊಂಡು ಬಂದರು. ನಾಡಿನಲ್ಲೆಲ್ಲಾ ಸಂತೋಷ ಸಂಭ್ರಮವಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

40 ಇದಲ್ಲದೆ ಇಸ್ಸಾಕಾರ್ ಜೆಬುಲೂನ್ ನಫ್ತಾಲಿ ಮೊದಲುಗೊಂಡು ಎಲ್ಲಾ ಸಮೀಪ ಪ್ರಾಂತಗಳವರು ಎತ್ತು, ಕತ್ತೆ, ಹೇಸರಕತ್ತೆ, ಒಂಟೆ ಇವುಗಳ ಮೇಲೆ ಆಹಾರಪದಾರ್ಥಗಳನ್ನು ಹೇರಿಕೊಂಡು ಬಂದರು. ಅವರು ತಂದವುಗಳಾವವಂದರೆ - ತರತರದ ರೊಟ್ಟಿ, ಅಂಜೂರ ಹಣ್ಣಿನ ಉಂಡೆ, ಒಣಗಿದ ದ್ರಾಕ್ಷೇಗೊಂಚಲು, ದ್ರಾಕ್ಷಾರಸ, ಎಣ್ಣೆ, ಅನೇಕ ದನಕುರಿಗಳು ಇವೇ. ಇಸ್ರಾಯೇಲ್ಯರೊಳಗೆ ಮಹಾ ಸಂತೋಷವಿತ್ತಷ್ಟೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

40 ಇದಲ್ಲದೆ ಇವರ ನೆರೆಹೊರೆಯವರಾದ ಇಸ್ಸಾಕಾರ್, ನಫ್ತಾಲಿ, ಜೆಬುಲೂನ್ ಕುಲದವರು ಸಹ ಅಡಿಗೆ ಮಾಡಿಸಿ ಒಂಟೆಗಳ, ಹೇಸರಕತ್ತೆಗಳ, ಎತ್ತುಗಳ ಮತ್ತು ದನಕರುಗಳ ಮೇಲೆ ಹೇರಿಕೊಂಡು ಬಂದು ಒದಗಿಸಿದರು. ಅವರು ಬೇಕಾದಷ್ಟು ಗೋಧಿಹಿಟ್ಟನ್ನು, ಒಣಅಂಜೂರವನ್ನು, ದ್ರಾಕ್ಷಿಯನ್ನು, ದ್ರಾಕ್ಷಾರಸವನ್ನು, ಎಣ್ಣೆಯನ್ನು, ದನಕರುಗಳನ್ನು ಮತ್ತು ಕುರಿಗಳನ್ನು ಒದಗಿಸಿದರು. ಇಸ್ರೇಲರೆಲ್ಲರೂ ಹರ್ಷದಿಂದ ತುಂಬಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 12:40
14 ತಿಳಿವುಗಳ ಹೋಲಿಕೆ  

ಆಗ ಅಬೀಗೈಲಳು ತೀವ್ರವಾಗಿ ಇನ್ನೂರು ರೊಟ್ಟಿಗಳನ್ನೂ ಎರಡು ಬುದ್ದಲಿ ದ್ರಾಕ್ಷಾರಸವನ್ನೂ ಬೇಯಿಸಿದ ಐದು ಕುರಿಗಳ ಮಾಂಸವನ್ನೂ ಐವತ್ತು ಸೇರು ಹುರಿದ ಧಾನ್ಯವನ್ನೂ ಒಣಗಿದ ನೂರು ದ್ರಾಕ್ಷಿ ಗೊನೆಗಳನ್ನೂ ಒಣಗಿದ ಇನ್ನೂರು ಅಂಜೂರದ ಉಂಡೆಗಳನ್ನೂ ಕತ್ತೆಗಳ ಮೇಲೆ ಹೇರಿಸಿಕೊಂಡು,


ದಾವೀದನು ಬೆಟ್ಟದ ತುದಿಯಿಂದ ಸ್ವಲ್ಪ ದೂರ ಹೋದಾಗ, ಮೆಫೀಬೋಶೆತನ ಸೇವಕ ಚೀಬನು ತಡಿಹಾಕಿದ ಎರಡು ಕತ್ತೆಗಳನ್ನು ಹೊಡೆದುಕೊಂಡು ಬಂದು, ಅವನನ್ನು ಎದುರುಗೊಂಡನು. ಅವುಗಳ ಮೇಲೆ ಇನ್ನೂರು ರೊಟ್ಟಿಗಳೂ, ಒಣಗಿದ ನೂರು ದ್ರಾಕ್ಷಿ ಗೊಂಚಲುಗಳೂ, ಬೇಸಿಗೆ ಕಾಲದ ನೂರು ಹಣ್ಣುಗಳೂ, ಒಂದು ಬುದ್ದಲಿ ದ್ರಾಕ್ಷಾರಸವೂ ಇದ್ದವು.


ಶಿಷ್ಟರು ಅಧಿಕಾರಕ್ಕೆ ಬಂದರೆ ಜನರು ಹರ್ಷಿಸುತ್ತಾರೆ. ಆದರೆ ದುಷ್ಟರು ಆಳಿದರೆ, ಜನರಿಗೆ ನರಳಾಟ.


ನೀತಿವಂತರು ಅಭಿವೃದ್ಧಿಹೊಂದಿದರೆ, ಪಟ್ಟಣವು ಉಲ್ಲಾಸಿಸುತ್ತದೆ; ದುಷ್ಟರು ನಾಶವಾದರೆ, ಜಯೋತ್ಸವ ಉಂಟಾಗುತ್ತದೆ.


ಅತಲ್ಯಳನ್ನು ಅರಮನೆಯ ಬಳಿಯಲ್ಲಿ ಖಡ್ಗದಿಂದ ಕೊಂದುಹಾಕಿದ್ದರಿಂದ ದೇಶದ ಜನರೆಲ್ಲರೂ ಸಂತೋಷಪಟ್ಟರು, ಪಟ್ಟಣವು ಶಾಂತವಾಯಿತು.


ಇದಲ್ಲದೆ ಜನರೆಲ್ಲರೂ ಅವನನ್ನು ಹಿಂಬಾಲಿಸಿದರು. ಜನರು ಕೊಳಲು ಊದಿ ಮಹಾ ಆನಂದದಿಂದ ಸಂತೋಷಿಸಿದರು. ಅವರ ಶಬ್ದದಿಂದ ಭೂಮಿಯು ಕಂಪಿಸಿತು.


ಅವರು ಅಲ್ಲಿ ದಾವೀದನ ಸಂಗಡ ಮೂರು ದಿವಸ ಅವರ ಕುಟುಂಬದವರು ಅವರಿಗೋಸ್ಕರ ಸಿದ್ಧಮಾಡಿದ ಆಹಾರವನ್ನು ತಿನ್ನುತ್ತಾ, ಕುಡಿಯುತ್ತಾ ಇದ್ದರು.


ದಾವೀದನು ಸಾವಿರ ಮಂದಿಗೂ, ನೂರು ಮಂದಿಗೂ ಪ್ರಧಾನರಾದವರ ಸಂಗಡ, ಎಲ್ಲಾ ನಾಯಕರ ಸಂಗಡ ಆಲೋಚನೆ ಮಾಡಿದನು.


ತರುವಾಯ ಯೆಹೋವ ದೇವರು ನನಗೆ, “ಬೇರೆ ದೇವತೆಗಳ ಕಡೆಗೆ ತಿರುಗಿಕೊಂಡು, ದ್ರಾಕ್ಷಿ ಉಂಡೆಗಳನ್ನು ಪ್ರೀತಿಸುವ ಇಸ್ರಾಯೇಲರನ್ನು ಯೆಹೋವ ದೇವರು ಪ್ರೀತಿಸುವ ಪ್ರಕಾರ, ನೀನು ಹೋಗಿ ನಿನ್ನ ಹೆಂಡತಿ ವ್ಯಭಿಚಾರಿಣಿಯಾಗಿದ್ದರೂ ಆಕೆಯನ್ನು ಪುನಃ ಪ್ರೀತಿಸು,” ಎಂದು ಹೇಳಿದನು.


ಆ ದಿವಸದಲ್ಲಿ ಮಹಾ ಸಂತೋಷದಿಂದ ಯೆಹೋವ ದೇವರ ಮುಂದೆ ತಿಂದು ಕುಡಿದರು. ಎರಡನೆಯ ಸಾರಿ ದಾವೀದನ ಮಗ ಸೊಲೊಮೋನನನ್ನು ಅರಸನನ್ನಾಗಿ ಸ್ವೀಕರಿಸಿದರು. ಯೆಹೋವ ದೇವರ ಮುಂದೆ ಅವನನ್ನು ನಾಯಕನಾಗಿಯೂ ಚಾದೋಕನನ್ನು ಯಾಜಕನಾಗಿಯೂ ಅಭಿಷೇಕಿಸಿದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು