Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 12:3 - ಕನ್ನಡ ಸಮಕಾಲಿಕ ಅನುವಾದ

3 ಅವರ ಮುಖ್ಯಸ್ಥ ಅಹೀಗೆಜೆರ್, ಇವನ ನಂತರ ಯೋವಾಷ್. ಇವರಿಬ್ಬರೂ ಗಿಬೆಯ ಊರಿನ ಶೇಮಾನ ಪುತ್ರರು. ಅಜ್ಮಾವೆತನ ಪುತ್ರರಾದ ಯೆಜಿಯೇಲ್ ಮತ್ತು ಪೆಲೆಟ್, ಅನಾತೋತ್ ಊರಿನವರಾದ ಬೆರಾಕಾ, ಯೇಹು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಸೌಲನ ಕುಲಬಂಧುಗಳಾದ ಬೆನ್ಯಾಮೀನ್ಯರಲ್ಲಿ ಮುಖ್ಯಸ್ಥನಾದ ಅಹೀಯೆಜೆರ್ ಮತ್ತು ಯೋವಾಷ ಎಂಬ ಗಿಬೆಯ ಊರಿನ ಹಷ್ಷೆಮಾಹನ ಮಕ್ಕಳು. ಅಜ್ಮಾವೆತನ ಮಕ್ಕಳಾದ ಯೆಜೀಯೇಲ್ ಪೆಲೆಟರು. ಅನತೋತ್ ಊರಿನವರಾದ ಯೇಹು ಬೇರಾಕಾರು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3-7 ಅವರು ಗಿಬೇಯದ ಶೇಮಾನ ಮಕ್ಕಳಾದ ಅಹೀಯೆಜೆರ್ ಮತ್ತು ಯೋವಾಷ ಎಂಬವರ ನೇತೃತ್ವದಲ್ಲಿ ಇದ್ದರು. ಆ ಸೈನಿಕರ ಹೆಸರುಗಳು :- ಯೇಜೀಯೇಲ್ ಮತ್ತು ಪೆಲೆಟ - ಅಜ್ಮಾವೆತನ ಮಕ್ಕಳು. ಯೇಹು ಮತ್ತು ಬೆರಾಕ - ಅನತೋತ ಊರಿನವರು. ಇಷ್ಮಾಯ - ಗಿಬ್ಯೋನಿನವನು; ಪ್ರಸಿದ್ಧನಾದ ಸೈನಿಕ, ‘ಮೂವತ್ತು ಪ್ರಮುಖರ’ ಪಟಾಲಮಿನಲ್ಲಿ ಒಬ್ಬ. ಯೆರೆಮೀಯ, ಯಹಜೀಯೇಲ್, ಯೋಹಾನಾನ್, ಯೋಜಾಬಾದ್ - ಗೆದೇರಾ ಊರಿನವರು. ಎಲ್ಲೂಜೈ, ಯೆರೀಮೋತ್, ಬೆಯಲ್ಯ, ಶೆಮರ್ಯ, ಶೆಫಟ್ಯ - ಇವರು ಹರೀಫ್ಯದವರು. ಎಲ್ಕಾನ, ಇಷೀಯ, ಅಜರೇಲ್, ಯೋವೆಜೆರ್ ಮತ್ತು ಯಾಷೊಬ್ಬಮ - ಇವರು ಕೋರಹನ ಗೋತ್ರದವರು. ಯೋವೇಲ ಮತ್ತು ಜೆಬದ್ಯ - ಗೆದೋರಿನ ಯೆರೋಹಾಮನ ಮಕ್ಕಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ಸೌಲನ ಕುಲಬಂಧುಗಳಾದ ಬೆನ್ಯಾಮೀನ್ಯರಲ್ಲಿ - ಮುಖ್ಯಸ್ಥನಾದ ಅಹೀಯೆಜೆರ್ ಮತ್ತು ಯೋವಾಷ ಎಂಬ ಹೆಸರುಗಳುಳ್ಳ ಗಿಬೆಯ ಊರಿನ ಹಷ್ಷೆಮಾಹನ ಮಕ್ಕಳು, ಅಜ್ಮಾವೆತನ ಮಕ್ಕಳಾದ ಯೆಜೀಯೇಲ್ ಪೆಲೆಟರು, ಅನತೋತ ಊರಿನವರಾದ ಯೇಹು ಬೆರಾಕಾರು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ಅವರ ನಾಯಕರು ಅಹೀಯೆಜೆರ್ ಮತ್ತು ಯೋವಾಷ್ (ಇವರಿಬ್ಬರೂ ಗಿಬೆಯದವನಾದ ಹಷ್ಷೆಮಾಹನ ಗಂಡುಮಕ್ಕಳು); ಅಜ್ಮಾವೆತನ ಗಂಡುಮಕ್ಕಳಾದ ಯೆಜೀಯೇಲ್ ಮತ್ತು ಪೆಲೆಟ; ಅನತೋತ್ ಊರಿನವರಾದ ಬೆರಾಕಾ ಮತ್ತು ಯೇಹು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 12:3
8 ತಿಳಿವುಗಳ ಹೋಲಿಕೆ  

ತೆಕೋವದ ಇಕ್ಕೇಷನ ಮಗನಾದ ಈರನು; ಅನಾತೋತಿನವನಾದ ಅಬೀಯೆಜೆರನು;


ಬಹರೂಮ್ಯನಾದ ಅಜ್ಮಾವೆತನು; ಶಾಲ್ಬೋನ್ಯನಾದ ಎಲೆಯಖ್ಬಾನು;


ಅವನ ಪುತ್ರರಲ್ಲಿ ಏಳುಮಂದಿಯನ್ನು ನಮಗೆ ಒಪ್ಪಿಸು. ಆಗ ನಾವು ಯೆಹೋವ ದೇವರು ಆಯ್ದುಕೊಂಡ ಸೌಲನ ಊರಾದ ಗಿಬೆಯದಲ್ಲಿ ಅವರನ್ನು ಯೆಹೋವ ದೇವರಿಗೋಸ್ಕರ ಗಲ್ಲಿಗೆ ಹಾಕುವೆವು,” ಎಂದರು. ಅದಕ್ಕೆ ಅರಸನು, “ನಾನು ಒಪ್ಪಿಸಿಕೊಡುವೆನು,” ಎಂದನು.


ದೂತರು ಸೌಲನು ಇರುವ ಗಿಬೆಯಕ್ಕೆ ಬಂದು ಜನರಿಗೆ ಆ ಮಾತುಗಳನ್ನು ಹೇಳಿದರು. ಆಗ ಜನರೆಲ್ಲರೂ ಸ್ವರವನ್ನೆತ್ತಿ ಅತ್ತರು.


ಎಡಬಲ ಕೈಗಳಿಂದ ಕಲ್ಲುಗಳನ್ನು ಎಸೆಯಲೂ, ಬಿಲ್ಲುಗಳಿಂದ ಬಾಣಗಳನ್ನು ಎಸೆಯಲೂ, ಇವರು ಬೆನ್ಯಾಮೀನನ ಗೋತ್ರದ ಸೌಲನ ಸಂಬಂಧಿಕರೂ ಆಗಿದ್ದರು.


ಗಿಬ್ಯೋನ್ಯನಾದ ಇಷ್ಮಾಯನು ಮೂವತ್ತು ಮಂದಿಯಲ್ಲಿ ಪರಾಕ್ರಮಶಾಲಿಯಾಗಿದ್ದ ಮತ್ತು ಮೂವತ್ತು ಮಂದಿಯ ಮುಖ್ಯಸ್ಥನಾಗಿದ್ದ; ಯೆರೆಮೀಯ, ಯಹಜಿಯೇಲ್, ಯೋಹಾನಾನ್, ಗೆದೇರದವನಾದ ಯೋಜಾಬಾದ್,


ನಾಲ್ಕನೆಯ ದಿವಸದಲ್ಲಿ ಅವರು ಬೆರಾಕವೆಂಬ ತಗ್ಗಿನಲ್ಲಿ ಕೂಡಿಕೊಂಡರು. ಅಲ್ಲಿ ಯೆಹೋವ ದೇವರನ್ನು ಸ್ತುತಿಸಿದರು. ಆದಕಾರಣ ಇಂದಿನವರೆಗೂ ಆ ಸ್ಥಳಕ್ಕೆ ಬೆರಾಕ ತಗ್ಗು ಎಂದು ಕರೆಯುತ್ತಾರೆ.


ಅರಾಬಾ ತಗ್ಗಿನವನಾದ ಅಬೀ ಅಲ್ಬೋನನು; ಬಹರೂಮ್ಯನಾದ ಅಜ್ಮಾವೆತನು;


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು