Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 12:23 - ಕನ್ನಡ ಸಮಕಾಲಿಕ ಅನುವಾದ

23 ಯೆಹೋವ ದೇವರ ವಾಕ್ಯದ ಪ್ರಕಾರ ಸೌಲನ ರಾಜ್ಯವನ್ನು ದಾವೀದನ ಕಡೆಗೆ ತಿರುಗಿಸುವುದಕ್ಕೆ, ಹೆಬ್ರೋನಿನಲ್ಲಿರುವ ದಾವೀದನ ಬಳಿಗೆ ಯುದ್ಧಕ್ಕೆ ಆಯುಧಗಳನ್ನು ಧರಿಸಿಕೊಂಡು ಬಂದ ದಂಡುಗಳ ಸಂಖ್ಯೆ ಇದು:

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

23 ಯೆಹೋವನ ಆಜ್ಞೆಯಂತೆ ಸೌಲನ ರಾಜ್ಯವನ್ನು ದಾವೀದನಿಗೆ ಒಪ್ಪಿಸುವುದಕ್ಕೋಸ್ಕರ ಹೆಬ್ರೋನಿನಲ್ಲಿದ್ದ ಅವನ ಬಳಿಗೆ ಗುಂಪುಗುಂಪುಗಳಾಗಿ ಬಂದ ಯುದ್ಧಸನ್ನದ್ಧರಾಗಿದ್ದವರ ಲೆಕ್ಕ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

23 ಸರ್ವೇಶ್ವರಸ್ವಾಮಿ ವಾಗ್ದಾನ ಮಾಡಿದಂತೆ ಸೌಲನಿಗೆ ಬದಲಾಗಿ ದಾವೀದನನ್ನು ಅರಸನನ್ನಾಗಿ ಮಾಡಲು, ಅನೇಕ ಸಿದ್ಧಸೈನಿಕರು ಹೆಬ್ರೋನಿಗೆ ಬಂದು ದಾವೀದನ ಸೈನ್ಯದಲ್ಲಿ ಸೇರಿದರು. ಅವರ ಸಂಖ್ಯೆಗಳು ಈ ಕೆಳಕಂಡಂತಿವೆ:

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

23 ಯೆಹೋವನ ಆಜ್ಞೆಯಂತೆ ಸೌಲನ ರಾಜ್ಯವನ್ನು ದಾವೀದನಿಗೆ ಒಪ್ಪಿಸುವದಕ್ಕೋಸ್ಕರ ಹೆಬ್ರೋನಿನಲ್ಲಿದ್ದ ಅವನ ಬಳಿಗೆ ಗುಂಪು ಗುಂಪುಗಳಾಗಿ ಬಂದ ಯುದ್ಧಸನ್ನದ್ಧರ ಲೆಕ್ಕ -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

23 ದಾವೀದನು ಹೆಬ್ರೋನಿನಲ್ಲಿದ್ದಾಗ ಯುದ್ಧಸನ್ನದ್ಧರಾಗಿದ್ದವರು ದಾವೀದನಿಗೆ ಸೌಲನ ರಾಜ್ಯವನ್ನು ಕೊಡಲು ಬಂದರು. ಇದು ಯೆಹೋವನು ಮುಂತಿಳಿಸಿದಂತೆ ಆಯಿತು. ಅವರ ಸಂಖ್ಯೆಯು ಹೀಗಿದೆ:

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 12:23
13 ತಿಳಿವುಗಳ ಹೋಲಿಕೆ  

ದಾವೀದನ ಬಳಿಯಲ್ಲಿದ್ದ ಮುಖ್ಯಸ್ಥರಾದ ಪರಾಕ್ರಮಶಾಲಿಗಳು ಇವರೇ. ಇಸ್ರಾಯೇಲನ್ನು ಕುರಿತು ಯೆಹೋವ ದೇವರು ಹೇಳಿದ ವಾಕ್ಯದ ಪ್ರಕಾರ, ಅವನನ್ನು ಅರಸನನ್ನಾಗಿ ಮಾಡುವುದಕ್ಕೆ ಅವರು ಸಮಸ್ತ ಇಸ್ರಾಯೇಲಿನ ಸಂಗಡ ಅವನ ರಾಜ್ಯದಲ್ಲಿ ತಮ್ಮ ಸಂಪೂರ್ಣ ಸಹಾಯ ನೀಡಿದರು.


ಯೆಹೋವ ದೇವರು ಸಮುಯೇಲನಿಗೆ, “ಇಸ್ರಾಯೇಲಿನ ಅರಸನಾಗಿರದ ಹಾಗೆ ನಾನು ಅಲಕ್ಷ್ಯಮಾಡಿದ ಸೌಲನಿಗೋಸ್ಕರ ನೀನು ಎಷ್ಟರವರೆಗೆ ದುಃಖವುಳ್ಳವನಾಗಿರುವೆ? ನೀನು ನಿನ್ನ ಕೊಂಬನ್ನು ತೈಲದಿಂದ ತುಂಬಿಸಿಕೊಂಡು ಬಾ. ಬೇತ್ಲೆಹೇಮಿನವನಾದ ಇಷಯನ ಬಳಿಗೆ ನಿನ್ನನ್ನು ಕಳುಹಿಸುವೆನು. ಏಕೆಂದರೆ ಅವನ ಮಕ್ಕಳಲ್ಲಿ ನಾನು ಒಬ್ಬನನ್ನು ಅರಸನಾಗಿ ಆಯ್ದುಕೊಂಡೆನು,” ಎಂದರು.


ಇಷಯನನ್ನು ಯಜ್ಞವನ್ನು ಅರ್ಪಿಸುವುದಕ್ಕೆ ಕರೆಯಬೇಕು; ಆಗ ನೀನು ಮಾಡಬೇಕಾದದ್ದನ್ನು ನಾನು ನಿನಗೆ ತಿಳಿಸುವೆನು. ನಾನು ನಿನಗೆ ಯಾರನ್ನು ತೋರಿಸುತ್ತೇನೋ, ಅವನನ್ನು ನೀನು ನನಗೋಸ್ಕರ ಅಭಿಷೇಕಿಸಬೇಕು,” ಎಂದರು.


“ನಾನು ನನ್ನ ಅರಸನನ್ನು ನನ್ನ ಪರಿಶುದ್ಧ ಪರ್ವತವಾದ ಚೀಯೋನಿನ ಮೇಲೆ ಸ್ಥಾಪಿಸಿದ್ದೇನೆ.”


ಯೆಹೋವ ದೇವರು ಅವನನ್ನು ಕೊಂದುಹಾಕಿ, ರಾಜ್ಯವನ್ನು ಇಷಯನ ಮಗನಾದ ದಾವೀದನ ಕಡೆಗೆ ತಿರುಗಿಸಿದರು.


ಆದರೆ ಈಗ ಅದನ್ನು ಮಾಡಿರಿ. ಏಕೆಂದರೆ, ‘ನಾನು ನನ್ನ ದಾಸನಾದ ದಾವೀದನ ಕೈಯಿಂದ ಜನರಾದ ಇಸ್ರಾಯೇಲರನ್ನು ಫಿಲಿಷ್ಟಿಯರ ಕೈಯಿಂದಲೂ, ಅವರ ಸಮಸ್ತ ಶತ್ರುಗಳ ಕೈಯಿಂದಲೂ ತಪ್ಪಿಸಿ ರಕ್ಷಿಸುವೆನು,’ ಎಂದು ಯೆಹೋವ ದೇವರು ದಾವೀದನ ವಿಷಯದಲ್ಲಿ ಹೇಳಿದ್ದಾರೆ,” ಎಂದನು.


ಖೇಡ್ಯವನ್ನೂ, ಭಲ್ಲೆಯನ್ನೂ ಹಿಡಿದುಕೊಂಡು, ಯುದ್ಧಕ್ಕೆ ಸಿದ್ಧರಾದ ಯೆಹೂದನ ಮಕ್ಕಳು 6,800 ಮಂದಿ.


ಯಾಕೋಬನು ಎದೋಮ್ಯರ ದೇಶವಾದ ಸೇಯೀರನ ಸೀಮೆಯಲ್ಲಿರುವ ತನ್ನ ಅಣ್ಣನಾದ ಏಸಾವನ ಬಳಿಗೆ ದೂತರನ್ನು ತನ್ನ ಮುಂದಾಗಿ ಕಳುಹಿಸಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು