1 ಪೂರ್ವಕಾಲ ವೃತ್ತಾಂತ 12:14 - ಕನ್ನಡ ಸಮಕಾಲಿಕ ಅನುವಾದ14 ಗಾದನ ಪುತ್ರರಾದ ಇವರು ಸೈನ್ಯದಲ್ಲಿ ಅಧಿಪತಿಗಳಾಗಿದ್ದರು. ಕಿರಿಯನು ನೂರು ಮಂದಿಯ ಮೇಲೆಯೂ ಹಿರಿಯನು ಸಾವಿರ ಮಂದಿಯ ಮೇಲೆಯೂ ಇದ್ದರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201914 ಗಾದ್ಯರಾದ ಇವರು ಸೇನಾಧಿಪತಿಗಳಾಗಿದ್ದರು. ಇವರಲ್ಲಿ ಕನಿಷ್ಠನಾದವನು ನೂರು ಜನರ ಮೇಲೆಯೂ, ಶ್ರೇಷ್ಠನಾದವನು ಸಾವಿರ ಜನರ ಮೇಲೆಯೂ ಇದ್ದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)14 ಗಾದ್ ಗೋತ್ರದ ಈ ಕೆಲವು ಪುರುಷರು ಹಿರಿಯ ಸಹಸ್ರಾಧಿಪತಿಗಳೂ ಕಿರಿಯ ಶತಾಧಿಪತಿಗಳೂ ಆಗಿದ್ದರು . ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)14 ಗಾದ್ಯರಾದ ಇವರು ಸೈನ್ಯಾಧಿಪತಿಗಳಾಗಿದ್ದರು; ಇವರಲ್ಲಿ ಕನಿಷ್ಠನಾದವನು ನೂರು ಮಂದಿಗೆ ಸಮನು; ಶ್ರೇಷ್ಠ ನಾದವನು ಸಾವಿರ ಮಂದಿಗೆ ಸಮಬಲನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್14 ಇವರೆಲ್ಲಾ ಗಾದ್ಯರ ಸೇನಾಧಿಪತಿಗಳಾಗಿದ್ದರು. ಇವರಲ್ಲಿ ಅತಿಬಲಹೀನನಾದವನು ನೂರು ಮಂದಿ ವೈರಿಗಳೊಂದಿಗೆ ಕಾದಾಡಲು ಶಕ್ತನಾಗಿದ್ದನು. ಅವರಲ್ಲಿ ಎಲ್ಲರಿಗಿಂತ ಪರಾಕ್ರಮಿಯು ಒಂದು ಸಾವಿರ ವೈರಿಗಳೊಂದಿಗೆ ಕಾದಾಡಲು ಶಕ್ತನು. ಅಧ್ಯಾಯವನ್ನು ನೋಡಿ |