1 ಥೆಸಲೋನಿಕದವರಿಗೆ 5:8 - ಕನ್ನಡ ಸಮಕಾಲಿಕ ಅನುವಾದ8 ನಾವಾದರೋ ಹಗಲಿಗೆ ಸೇರಿದವರಾಗಿ ಇರುವುದರಿಂದ ನಂಬಿಕೆ ಹಾಗೂ ಪ್ರೀತಿಯನ್ನು ಕವಚವನ್ನಾಗಿಯೂ ರಕ್ಷಣೆಯ ನಿರೀಕ್ಷೆಯನ್ನು ಶಿರಸ್ತ್ರಾಣವನ್ನಾಗಿಯೂ ಧರಿಸಿಕೊಂಡು ಸ್ವಸ್ಥಚಿತ್ತರಾಗಿರೋಣ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20198 ನಾವಾದರೋ ಹಗಲಿನವರಾಗಿರಲಾಗಿ ನಂಬಿಕೆ ಪ್ರೀತಿಗಳೆಂಬ ಎದೆಕವಚವನ್ನೂ, ರಕ್ಷಣೆಯ ನಿರೀಕ್ಷೆಯೆಂಬ ಶಿರಸ್ತ್ರಾಣವನ್ನೂ ಧರಿಸಿಕೊಂಡು ಸ್ವಸ್ಥಚಿತ್ತರಾಗಿರೋಣ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)8 ನಾವು ಹಗಲಿಗೆ ಸೇರಿದವರಾದುದರಿಂದ ಸ್ವಸ್ಥಚಿತ್ತದಿಂದ ಇರೋಣ. ವಿಶ್ವಾಸ ಹಾಗೂ ಪ್ರೀತಿ ನಮಗೆ ವಕ್ಷಕವಚವಾಗಬೇಕು. ಜೀವೋದ್ಧಾರದ ನಿರೀಕ್ಷೆ ನಮಗೆ ಶಿರಸ್ತ್ರಾಣವಾಗಿರಬೇಕು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)8 ನಾವಾದರೋ ಹಗಲಿನವರಾಗಿರಲಾಗಿ ವಿಶ್ವಾಸಪ್ರೀತಿಗಳೆಂಬ ವಜ್ರಕವಚವನ್ನೂ ರಕ್ಷಣೆಯ ನಿರೀಕ್ಷೆಯೆಂಬ ಶಿರಸ್ತ್ರಾಣವನ್ನೂ ಧರಿಸಿಕೊಂಡು ಸ್ವಸ್ಥಚಿತ್ತರಾಗಿರೋಣ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್8 ಆದರೆ ನಾವು ಹಗಲಿಗೆ ಸೇರಿದವರಾದ್ದರಿಂದ ನಮ್ಮನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬೇಕು. ನಾವು ನಮ್ಮನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಪ್ರೀತಿಯನ್ನೂ ನಂಬಿಕೆಯನ್ನೂ ಧರಿಸಿಕೊಳ್ಳಬೇಕು. ರಕ್ಷಣೆಯ ನಿರೀಕ್ಷೆಯು ನಮಗೆ ಶಿರಸ್ತ್ರಾಣವಾಗಿರಬೇಕು. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್8 ಖರೆ ಅಮಿ ದಿಸಾಕ್ ಸಮಂದ್ ಪಡಲ್ಲಿ ಲೊಕಾ ಅನಿ ಅಮಿ ಕನ್ನಾಬಿ ತಯಾರಿತ್ ರ್‍ಹಾವ್ಚೆ. ಅಮಿ ವಿಶ್ವಾಸ್ ಅನಿ ಪ್ರೆಮ್ ಹಿರ್ದ್ಯಾಚೆ ಕವಚ್ ಕರುನ್ ಘೆವ್ನ್ ನೆಸುಚೆ ಅನಿ ಅಮ್ಚ್ಯಾ ಸುಟ್ಕೆಚೊ ಬರೊಸೊ ಅಮ್ಚ್ಯಾ ಟಕ್ಲ್ಯಾಚೆ ಕವಚ್ ಕರುನ್ ಘೆವ್ಚೆ. ಅಧ್ಯಾಯವನ್ನು ನೋಡಿ |