Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಥೆಸಲೋನಿಕದವರಿಗೆ 2:18 - ಕನ್ನಡ ಸಮಕಾಲಿಕ ಅನುವಾದ

18 ಆದ್ದರಿಂದ ನಿಮ್ಮ ಬಳಿಗೆ ಬರುವುದಕ್ಕೆ ನಮಗೆ ಮನಸ್ಸಿತ್ತು. ಪೌಲನಾದ ನಾನಂತೂ ಮತ್ತೆ ಮತ್ತೆ ಬರಲು ಬಯಸಿದೆನು. ಆದರೆ ಸೈತಾನನು ನಮಗೆ ಅಭ್ಯಂತರ ಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

18 ಯಾಕೆಂದರೆ ನಿಮ್ಮ ಬಳಿಗೆ ಬರುವುದಕ್ಕೆ ನಮಗೆ ಮನಸ್ಸಿತ್ತು. ಹೇಗೂ ಪೌಲನೆಂಬ ನಾನು ಒಂದೆರಡು ಸಾರಿ ಬರುವುದಕ್ಕೆ ಪ್ರಯತ್ನ ಮಾಡಿದ್ದೆನು. ಆದರೆ ಸೈತಾನನು ನನಗೆ ಅಡ್ಡಿ ಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

18 ನಿಮ್ಮಲ್ಲಿಗೆ ಹಿಂದಿರುಗಲು ನಮಗೆ ಮನಸ್ಸಿತ್ತು. ಪೌಲನೆಂಬ ನಾನಂತೂ, ನಿಮ್ಮ ಬಳಿಗೆ ಬರಲು ಅನೇಕ ಸಾರಿ ಪ್ರಯಾಸಪಟ್ಟೆ. ಆದರೆ ಸೈತಾನನು ನಮಗೆ ಅಡ್ಡಿ ಆತಂಕವನ್ನೊಡ್ಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

18 ಯಾಕಂದರೆ ನಿಮ್ಮ ಬಳಿಗೆ ಬರುವದಕ್ಕೆ ನಮಗೆ ಮನಸ್ಸಿತ್ತು; ಹೇಗೂ ಪೌಲನೆಂಬ ನಾನು ಒಂದೆರಡು ಸಾರಿ ಬರುವದಕ್ಕಿದ್ದೆನು; ಆದರೆ ಸೈತಾನನು ನಮಗೆ ಅಭ್ಯಂತರ ಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

18 ಹೌದು, ನಾವು ನಿಮ್ಮಲ್ಲಿಗೆ ಬರಬೇಕೆಂದಿದ್ದೆವು. ಪೌಲನಾದ ನಾನು, ನಿಜವಾಗಿಯೂ ಅನೇಕ ಸಲ ಬರಲು ಪ್ರಯತ್ನಿಸಿದೆನು, ಆದರೆ ನಮ್ಮನ್ನು ಸೈತಾನನು ನಿಲ್ಲಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

18 ಹೆಚ್ಯಾಸಾಟ್ನಿ ಮಿಯಾ ಪಾವ್ಲು ತುಮ್ಕಾ ಯೆವ್ನ್ ಭೆಟುಚೆಚ್ ಮನುನ್ ಲೈ ಖಟ್ಪಟ್ಲೊ, ಖರೆ ಸೈತಾನಾನ್ ಮಾಕಾ ಯೆವ್ಕುಚ್ ಸೊಡುಕ್ ನಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಥೆಸಲೋನಿಕದವರಿಗೆ 2:18
13 ತಿಳಿವುಗಳ ಹೋಲಿಕೆ  

ಈ ಕಾರಣದಿಂದಲೇ ನಾನು ನಿಮ್ಮ ಬಳಿಗೆ ಬರುವುದಕ್ಕೆ ಅನೇಕಬಾರಿ ಅಭ್ಯಂತರವಾಯಿತು.


ಪ್ರಿಯರೇ, ನನ್ನ ಸೇವೆಯು ಯೆಹೂದ್ಯರಲ್ಲದವರಲ್ಲಿ ಫಲಉಂಟಾದಂತೆ ನಿಮ್ಮಲ್ಲಿಯೂ ಫಲಉಂಟಾಗಬೇಕೆಂದು ನಿಮ್ಮ ಬಳಿಗೆ ಬರುವುದಕ್ಕೆ ಅನೇಕಾವರ್ತಿ ಉದ್ದೇಶಿಸಿದೆನು. ಆದರೆ ಅದಕ್ಕೆ ಇಂದಿನವರೆಗೂ ಅಡ್ಡಿಯಾಯಿತೆಂದು ನಿಮಗೆ ತಿಳಿದಿರಬೇಕೆಂಬುದು ನನ್ನ ಅಪೇಕ್ಷೆ.


ನಿನಗೆ ಸಂಭವಿಸುವುದಕ್ಕಿರುವ ಬಾಧೆಗಳಿಗೆ ಭಯಪಡಬೇಡ. ಇಗೋ, ನಿಮ್ಮನ್ನು ಪರೀಕ್ಷಿಸಲು, ಸೈತಾನನು ನಿಮ್ಮಲ್ಲಿ ಕೆಲವರನ್ನು ಸೆರೆಮನೆಯೊಳಗೆ ಹಾಕುವುದಕ್ಕೆ ಇದ್ದಾನೆ. ಹತ್ತು ದಿವಸಗಳ ತನಕ ನಿಮಗೆ ಸಂಕಟವಿರುವುದು. ನೀನು ಸಾಯುವವರೆಗೆ ನಂಬಿಗಸ್ತನಾಗಿರು. ನಾನು ನಿನಗೆ ಜೀವದ ಕಿರೀಟವನ್ನು ಕೊಡುವೆನು.


ಏಕೆಂದರೆ ದೇವರು ಮಾತನಾಡುತ್ತಾರೆ. ಹೌದು, ವಿವಿಧ ರೀತಿಯಿಂದ ಮಾತನಾಡುತ್ತಾರೆ; ಆದರೂ ಯಾರು ದೇವರ ಸ್ವರವನ್ನು ಗ್ರಹಿಸಿಕೊಳ್ಳುವುದಿಲ್ಲ.


ಯೇಸು ಅವನಿಗೆ, “ಸೈತಾನನೇ, ತೊಲಗು. ಏಕೆಂದರೆ, ‘ನಿನ್ನ ಕರ್ತದೇವರನ್ನು ಆರಾಧಿಸಿ, ಅವರಿಗೆ ಮಾತ್ರವೇ ಸೇವೆ ಸಲ್ಲಿಸಬೇಕು,’ ಎಂದು ಪವಿತ್ರ ವೇದದಲ್ಲಿ ಬರೆದಿದೆ,” ಎಂದರು.


ಇದು ಪೌಲನಾದ ನಾನೇ ನನ್ನ ಕೈಯಿಂದ ಬರೆದ ವಂದನೆ. ನಾನು ಸೆರೆಯಲ್ಲಿದ್ದೇನೆಂಬುದನ್ನು ಜ್ಞಾಪಕಮಾಡಿಕೊಳ್ಳಿರಿ. ಕೃಪೆಯು ನಿಮ್ಮೊಂದಿಗಿರಲಿ.


ಹಾಗೆ ಆಜ್ಞಾಪಿಸದೆ, ಈಗ ಕ್ರಿಸ್ತ ಯೇಸುವಿನ ಸೆರೆಯಾಳೂ ಮುದುಕನೂ ಆಗಿರುವ ಪೌಲನೆಂಬ ನಾನು ಪ್ರೀತಿಯ ನಿಮಿತ್ತವೇ ನಿನ್ನನ್ನು ಬೇಡಿಕೊಳ್ಳುತ್ತೇನೆ.


ನಾನು ಥೆಸಲೋನಿಕದಲ್ಲಿದ್ದಾಗಲೂ ನನಗೆ ಕೊರತೆಯಾದಾಗ ನೀವು ಒಂದೆರಡು ಬಾರಿ ಸಹಾಯ ಕಳುಹಿಸಿದಿರಿ.


ಪೌಲನೆಂಬ ನಾನು ಸ್ವತಃ ನನ್ನ ಕೈಯಿಂದ ಬರೆದ ವಂದನೆಯಿದು. ನನ್ನ ಎಲ್ಲಾ ಪತ್ರಗಳಲ್ಲಿಯೂ ಇದೇ ಗುರುತು. ನಾನು ಹೀಗೆಯೇ ಬರೆಯುತ್ತೇನೆ.


ಪೌಲನೆಂಬ ನಾನು, ಸ್ವಂತ ಕೈಯಿಂದ ಈ ವಂದನೆಯನ್ನು ಬರೆದಿದ್ದೇನೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು