Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ತಿಮೊಥೆಯನಿಗೆ 1:16 - ಕನ್ನಡ ಸಮಕಾಲಿಕ ಅನುವಾದ

16 ಆದರೂ ಇನ್ನು ಮುಂದೆ ನಿತ್ಯಜೀವಕ್ಕೆ ತಮ್ಮ ಮೇಲೆ ನಂಬಿಕೆಯಿಡುವವರಿಗೆ ದೃಷ್ಟಾಂತವಾಗಿರಬೇಕೆಂದು ಕ್ರಿಸ್ತ ಯೇಸು ಮುಖ್ಯ ಪಾಪಿಯಾದ ನನ್ನಲ್ಲಿ ತಮ್ಮ ಪೂರ್ಣ ಸಹನೆಯನ್ನು ತೋರ್ಪಡಿಸಿರುವುದಕ್ಕಾಗಿ ನನಗೆ ಕರುಣೆ ದೊರೆಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ಆದರೆ ಇನ್ನು ಮುಂದೆ ನಿತ್ಯಜೀವಕ್ಕಾಗಿ ತನ್ನ ಮೇಲೆ ನಂಬಿಕೆಯಿಡುವವರಿಗೆ, ತನ್ನ ದೀರ್ಘಶಾಂತಿಯ ದೃಷ್ಟಾಂತವಿರಬೇಕೆಂದು ಕ್ರಿಸ್ತ ಯೇಸುವು ಪಾಪಿಗಳಲ್ಲಿ ಪ್ರಮುಖನಾಗಿದ್ದ ನನ್ನನ್ನು ಕರುಣಿಸಿ, ನನ್ನಲ್ಲಿ ತನ್ನ ಪೂರ್ಣ ದೀರ್ಘಶಾಂತಿಯನ್ನು ತೋರ್ಪಡಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

16 ಇದರಿಂದಾಗಿ, ಮುಂದೆ ವಿಶ್ವಾಸಿಗಳಾಗಿ ನಿತ್ಯಜೀವ ಪಡೆಯುವವರಿಗೆ ಆದರ್ಶ ದೊರಕುವಂತೆ ಕ್ರಿಸ್ತಯೇಸು ನನಗೆ ಪೂರ್ಣ ಸಹನೆ ತೋರಿದರು. ಇದು ದೇವರ ಕರುಣೆಯೇ ಸರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ಆದರೆ ಇನ್ನು ಮುಂದೆ ನಿತ್ಯಜೀವಕ್ಕಾಗಿ ತನ್ನ ಮೇಲೆ ನಂಬಿಕೆಯಿಡುವವರಿಗೆ ತನ್ನ ದೀರ್ಘಶಾಂತಿಯ ದೃಷ್ಟಾಂತವಿರಬೇಕೆಂದು ಕ್ರಿಸ್ತ ಯೇಸು ಮುಖ್ಯ ಪಾಪಿಯಾದ ನನ್ನನ್ನು ಕರುಣಿಸಿ ನನ್ನಲ್ಲಿ ತನ್ನ ಪೂರ್ಣದೀರ್ಘಶಾಂತಿಯನ್ನು ತೋರ್ಪಡಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ಆದರೆ ನನಗೆ ಕರುಣೆ ದೊರೆಯಿತು. ಕ್ರಿಸ್ತ ಯೇಸು ತನ್ನ ಅಮಿತವಾದ ತಾಳ್ಮೆಯನ್ನು ನನ್ನಲ್ಲಿ ತೋರ್ಪಡಿಸುವುದಕ್ಕಾಗಿಯೇ ನನಗೆ ಕರುಣೆಯನ್ನು ದಯಪಾಲಿಸಿದನು. ಪಾಪಿಗಳಲ್ಲೆಲ್ಲಾ ಮುಖ್ಯನಾಗಿದ್ದ ನನಗೆ ಕ್ರಿಸ್ತನು ತನ್ನ ತಾಳ್ಮೆಯನ್ನು ತೋರಿದನು. ನಿತ್ಯಜೀವಕ್ಕಾಗಿ ಕ್ರಿಸ್ತನಲ್ಲಿ ನಂಬಿಕೆಯನ್ನಿಡುವ ಜನರಿಗೆ ನಾನು ದೃಷ್ಟಾಂತವಾಗಿರಬೇಕೆಂದೇ ಆತನು ನನ್ನನ್ನು ಕರುಣಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

16 ಖರೆ ದೆವಾನ್ ಮಾಜ್ಯಾ ವೈರ್ ದಯಾ ದಾಕ್ವುಲ್ಯಾನ್ ಹೆಚ್ಯಾ ವೈನಾ ಕ್ರಿಸ್ತ್ ಜೆಜುಚಿ ಪುರಾ ಸೊಸ್ನೆ ಮಾಜ್ಯಾ ವಾಂಗ್ಡಾ ರ್‍ಹಾಂವ್ದಿತ್. ಹೆಚ್ಯಾ ವೈನಾ ಜೆ ಕೊನ್ ಮಾನಾ ವಿಶ್ವಾಸಾತ್ ಯೆವ್ನ್ ಎಕ್ ಮೊಟೊ ಪಾಪ್ ಕರಲ್ಲ್ಯಾ ಸಾರ್ಕೆ ಮಾಕಾ ವಾಪ್ರುನ್ಗೆತ್ ಫಿಡೆ ಜಾವ್ನಗೆತ್, ತೆಚ್ಯಾ ವೈರ್ ವಿಶ್ವಾಸ್ ಥವ್ತಲಿ ಲೊಕಾ ಕೊನ್ ಹಾತ್. ತೆಚ್ಯಾಸಾಟ್ನಿ ತೆಂಕಾ ಶಾಶ್ವತ್ ಜಿವ್ ಗಾವುಸಾಟ್ನಿ ಎಕ್ ಉದಾರನ್ ಕರುನ್ ಮಾಕಾ ರಚುನ್ ಅಪ್ನಾಚ್ಯಾ ಪುರಾ ಸೊಸುನ್ ಘೆವ್ನ್ ಜಾತಲ್ಯಾಚ್ಯಾ ವೈನಾ ಮಾಜ್ಯಾ ವೈರ್ ದಾಕ್ವುಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ತಿಮೊಥೆಯನಿಗೆ 1:16
37 ತಿಳಿವುಗಳ ಹೋಲಿಕೆ  

ಮೊದಲು ದೇವದೂಷಕನೂ ಹಿಂಸಕನೂ ಅಪಮಾನ ಮಾಡುವವನೂ ಆಗಿದ್ದ ನಾನು ಅಜ್ಞಾನಿಯಾಗಿ ಅಪನಂಬಿಕೆಯಲ್ಲಿ ಹಾಗೆ ವರ್ತಿಸಿದ್ದರೂ ದೇವರು ನನಗೆ ಕರುಣೆತೋರಿದರು.


ಮುಂದಣ ಯುಗಗಳಲ್ಲಿ ಕ್ರಿಸ್ತ ಯೇಸುವಿನ ದಯೆಯ ಮೂಲಕ ದೇವರು ತಮ್ಮ ಮಿತಿಯಿಲ್ಲದ ಕೃಪೆಯನ್ನು ನಮಗೆ ತೋರಿಸಬೇಕೆಂದಿದ್ದಾರೆ.


ಬಹಳವಾಗಿರುವ ಇವಳ ಪಾಪಗಳು ಕ್ಷಮಿಸಲಾಗಿವೆ. ಏಕೆಂದರೆ ಇವಳು ಬಹಳವಾಗಿ ಪ್ರೀತಿಸಿದಳು. ಆದರೆ ಕಡಿಮೆ ಕ್ಷಮೆ ಪಡೆದವನು ಕಡಿಮೆ ಪ್ರೀತಿಸುವನು ಎಂದು ನಾನು ನಿನಗೆ ಹೇಳುತ್ತೇನೆ,” ಎಂದರು.


ನಮ್ಮ ಕರ್ತದೇವರ ದೀರ್ಘಶಾಂತಿಯು ನಮ್ಮ ರಕ್ಷಣೆಯ ಕಾರಣಕ್ಕಾಗಿ ಇದೆ ಎಂದು ಎಣಿಸಿಕೊಳ್ಳಿರಿ. ನಮ್ಮ ಪ್ರಿಯ ಸಹೋದರನಾದ ಪೌಲನು ಸಹ ತನಗೆ ಅನುಗ್ರಹಿಸಿರುವ ಜ್ಞಾನದ ಪ್ರಕಾರ ನಿಮಗೆ ಬರೆದಿದ್ದಾನೆ.


ಕರ್ತದೇವರು ತಮ್ಮ ವಾಗ್ದಾನದ ವಿಷಯವಾಗಿ ತಡಮಾಡುತ್ತಾರೆಂಬದಾಗಿ ಕೆಲವರು ಎಣಿಸುವ ಪ್ರಕಾರ ಅವರು ತಡಮಾಡುವವರಲ್ಲ. ಆದರೆ ಯಾವನಾದರೂ ನಾಶವಾಗುವುದರಲ್ಲಿ ಅವರು ಇಷ್ಟಪಡದೆ ಎಲ್ಲರೂ ಪಶ್ಚಾತ್ತಾಪಡಬೇಕೆಂದು ಅಪೇಕ್ಷಿಸುವವರಾಗಿದ್ದು ನಮ್ಮ ಕಡೆಗೆ ದೀರ್ಘಶಾಂತರಾಗಿದ್ದಾರೆ.


ನನ್ನ ಅನ್ಯಾಯವು ಬಹು ಘೋರವಾಗಿದ್ದರೂ ನಿಮ್ಮ ಹೆಸರಿನ ನಿಮಿತ್ತ ಯೆಹೋವ ದೇವರೇ ನನ್ನನ್ನು ಮನ್ನಿಸಿರಿ.


ಅಂದರೆ, ಪೂರ್ವಕಾಲದಲ್ಲಿ ನೋಹನು ನಾವೆಯನ್ನು ಕಟ್ಟುತ್ತಿರಲು, ದೇವರು ದೀರ್ಘಶಾಂತಿಯಿಂದ ಕಾದಿದ್ದಾಗ, ಆ ನಾವೆಯೊಳಗೆ ಎಂಟೇ ಜನರು ನೀರಿನಿಂದ ಸಂರಕ್ಷಣೆ ಹೊಂದಿದರು.


ಆದರೆ ಯೇಸುವೇ ದೇವಪುತ್ರನಾದ ಕ್ರಿಸ್ತನೆಂದು ನೀವು ನಂಬುವಂತೆಯೂ ನಂಬಿ ಅವರ ಹೆಸರಿನ ಮೂಲಕ ನಿತ್ಯಜೀವವನ್ನು ಪಡೆದುಕೊಳ್ಳುವಂತೆಯೂ ಇವುಗಳು ಬರೆಯಲಾಗಿದೆ.


ಯಾರು ದೇವಪುತ್ರ ಆಗಿರುವವರನ್ನು ನಂಬುವರೋ ಅವರು ನಿತ್ಯಜೀವ ಪಡೆದಿರುತ್ತಾರೆ. ದೇವಪುತ್ರ ಆಗಿರುವವರನ್ನು ನಂಬದವರು ನಿತ್ಯಜೀವವನ್ನು ಕಾಣುವುದಿಲ್ಲ. ಆದರೆ ದೇವರ ಕೋಪಾಗ್ನಿಯು ಅವರ ಮೇಲೆ ನೆಲೆಗೊಂಡಿರುವುದು,” ಎಂದು ಹೇಳಿದನು.


ಏಕೆಂದರೆ ಪಾಪವು ಕೊಡುವ ಸಂಬಳ ಮರಣ, ದೇವರ ಉಚಿತ ವರವಾದರೋ ನಮಗೆ ಕರ್ತ ಆಗಿರುವ ಕ್ರಿಸ್ತ ಯೇಸುವಿನಲ್ಲಿ ಇರುವ ನಿತ್ಯಜೀವ.


ಮೋಶೆಯ ನಿಯಮದ ಮೂಲಕವಾಗಿ ನೀತಿವಂತರೆಂದು ನಿರ್ಣಯಿಸಲಾಗದ ಎಲ್ಲಾ ಪಾಪಗಳಿಂದ ಬಿಡುಗಡೆಯಾಗಿ, ಯೇಸುವನ್ನು ನಂಬುವ ಪ್ರತಿಯೊಬ್ಬರೂ ಯೇಸುವಿನ ಮೂಲಕವಾಗಿ ಬಿಡುಗಡೆಹೊಂದಿ ನೀತಿವಂತರಾಗುವರು.


ಯಾರು ನನ್ನ ಮಾಂಸವನ್ನು ತಿಂದು ನನ್ನ ರಕ್ತವನ್ನು ಕುಡಿಯುತ್ತಾರೋ ಅವರು ನಿತ್ಯಜೀವವನ್ನು ಹೊಂದಿದ್ದಾರೆ, ನಾನು ಅವರನ್ನು ಕಡೆಯ ದಿನದಲ್ಲಿ ಎಬ್ಬಿಸುವೆನು.


ನನ್ನ ತಂದೆಯ ಚಿತ್ತವೇನೆಂದರೆ ನನ್ನನ್ನು ನೋಡಿ ನನ್ನಲ್ಲಿ ವಿಶ್ವಾಸವಿಡುವ ಪ್ರತಿಯೊಬ್ಬರೂ ನಿತ್ಯಜೀವವನ್ನು ಪಡೆಯುವುದೇ; ನಾನು ಅವರನ್ನು ಕಡೆಯ ದಿನದಲ್ಲಿ ಎಬ್ಬಿಸುವೆನು,” ಎಂದು ಹೇಳಿದರು.


ದುಷ್ಟನು ತನ್ನ ದುರ್ಮಾರ್ಗವನ್ನೂ, ಅನೀತಿವಂತನು ತನ್ನ ಆಲೋಚನೆಗಳನ್ನೂ ತೊರೆದುಬಿಟ್ಟು, ಯೆಹೋವ ದೇವರ ಕಡೆಗೆ ಹಿಂದಿರುಗಲಿ. ಅವರು ಅವರ ಮೇಲೆ ಕರುಣೆ ಇಡುವರು. ನಮ್ಮ ದೇವರ ಬಳಿಗೂ ಹಿಂದಿರುಗಲಿ. ಏಕೆಂದರೆ ಅವರು ಹೇರಳವಾಗಿ ಕ್ಷಮಿಸುವರು.


“ನಾನಾಗಿ ನಾನೇ, ನನಗೋಸ್ಕರ ನಿನ್ನ ದ್ರೋಹಗಳನ್ನು ಅಳಿಸಿಬಿಡುತ್ತೇನೆ. ನಿನ್ನ ಪಾಪಗಳನ್ನು ನನ್ನ ನೆನಪಿನಲ್ಲಿಡೆನು.


“ಈಗ ಬನ್ನಿರಿ, ನಾವು ಒಟ್ಟಾಗಿ ವಾದಿಸೋಣ,” ಎಂದು ಯೆಹೋವ ದೇವರು ಹೇಳುತ್ತಾರೆ. “ನಿಮ್ಮ ಪಾಪಗಳು ಕಡುಕೆಂಪಾಗಿದ್ದರೂ ಹಿಮದಂತೆ ಬೆಳ್ಳಗಾಗುವುವು. ರಕ್ತದಂತೆ ಕಡುಕೆಂಪಾಗಿದ್ದರೂ ಉಣ್ಣೆಯಂತೆ ಆಗುವುವು.


ಇದಲ್ಲದೆ ಯೇಸು ತಮ್ಮ ಮೂಲಕ ದೇವರ ಕಡೆ ಬರುವವರನ್ನು ಪರಿಪೂರ್ಣವಾಗಿ ರಕ್ಷಿಸುವುದಕ್ಕೆ ಶಕ್ತರಾಗಿದ್ದಾರೆ. ಏಕೆಂದರೆ ಅವರಿಗೋಸ್ಕರ ಯೇಸು ವಿಜ್ಞಾಪನೆ ಮಾಡುವುದಕ್ಕಾಗಿ ಯಾವಾಗಲೂ ಬದುಕುವವರಾಗಿದ್ದಾರೆ.


ಆ ದಿನದಲ್ಲಿ ಕರ್ತ ಯೇಸು ತಮ್ಮ ಪರಿಶುದ್ಧ ಜನರಲ್ಲಿ ಮಹಿಮೆ ಹೊಂದುವವರಾಗಿಯೂ ನಂಬುವವರೆಲ್ಲರನ್ನು ಆಶ್ಚರ್ಯಪಡಿಸುವವರಾಗಿಯೂ ಬರುವರು. ನಮ್ಮ ಸಾಕ್ಷಿಯನ್ನು ನಂಬಿದ್ದರಿಂದ ನಿಮಗೂ ಇವು ಸಂಭವಿಸುವುವು.


ಇದರಿಂದ ಕ್ರಿಸ್ತನಲ್ಲಿ ಮೊದಲು ನಿರೀಕ್ಷೆಯುಳ್ಳವರಾದ ನಾವು ಅವರ ಮಹಿಮೆಯ ಸ್ತುತಿಯಾಗಿರುವಂತೆ ನೇಮಿಸಿದರು.


ತಮ್ಮ ಕೃಪಾ ಮಹಿಮೆಯ ಸ್ತುತಿಗಾಗಿಯೇ ಇವುಗಳನ್ನು ದೇವರು ತಾವು ಪ್ರೀತಿಸುವ ಕ್ರಿಸ್ತನಲ್ಲಿ ನಮಗೆ ಉಚಿತವಾಗಿ ದಯಪಾಲಿಸಿದ್ದಾರೆ.


ದೇವರ ಕರುಣೆಯ ನಿಮಿತ್ತ ನಾವು ಈ ಸೇವೆಯನ್ನು ಹೊಂದಿರುವುದರಿಂದ ನಾವು ಧೈರ್ಯಗೆಡುವವರಲ್ಲ.


ಪವಿತ್ರ ವೇದದಲ್ಲಿ ಮುಂಚಿತವಾಗಿ ಬರೆದಿರುವುದೆಲ್ಲವೂ ನಮ್ಮ ಬೋಧನೆಗಾಗಿಯೇ ಬರೆಯಲಾಗಿದೆ. ನಾವು ಆ ಬೋಧನೆಗಳ ಮೂಲಕ ಸಹನೆಯನ್ನೂ ಉತ್ತೇಜನೆಯನ್ನೂ ಹೊಂದಿಕೊಂಡು ನಿರೀಕ್ಷೆಯುಳ್ಳವರಾಗಿರಬೇಕೆಂದು ಬರೆಯಲಾಗಿದೆ.


ತಂದೆಯು ನನಗೆಂದು ಕೊಟ್ಟಿರುವ ಪ್ರತಿಯೊಬ್ಬರೂ ನನ್ನ ಬಳಿಗೆ ಬರುವರು. ನನ್ನ ಬಳಿಗೆ ಬರುವವರನ್ನು ನಾನು ಎಂದಿಗೂ ತಳ್ಳಿಬಿಡುವುದೇ ಇಲ್ಲ.


“ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನನ್ನ ವಾಕ್ಯವನ್ನು ಕೇಳಿ ನನ್ನನ್ನು ಕಳುಹಿಸಿದ ತಂದೆಯನ್ನು ನಂಬುವವರು ನಿತ್ಯಜೀವವನ್ನು ಹೊಂದಿದ್ದಾರೆ. ಅವರು ನ್ಯಾಯತೀರ್ಪಿಗೆ ಗುರಿಯಾಗುವುದಿಲ್ಲ, ಮರಣದಿಂದ ಪಾರಾಗಿ ಜೀವವನ್ನು ಹೊಂದಿದ್ದಾರೆ.


ಆಗ ಯೇಸು ಅವನಿಗೆ, “ಈ ದಿನವೇ ನೀನು ನನ್ನ ಸಂಗಡ ಪರದೈಸಿನಲ್ಲಿರುವೆ ಎಂದು ನಾನು ನಿನಗೆ ಸತ್ಯವಾಗಿ ಹೇಳುತ್ತೇನೆ,” ಎಂದರು.


ಅದೇ ಪ್ರಕಾರ, ಪಶ್ಚಾತ್ತಾಪಪಟ್ಟು ದೇವರ ಕಡೆ ತಿರುಗುವ ಒಬ್ಬ ಪಾಪಿಯ ವಿಷಯವಾಗಿ ದೇವದೂತರ ಮುಂದೆ ಸಂತೋಷವಾಗುವುದು, ಎಂದು ನಾನು ನಿಮಗೆ ಹೇಳುತ್ತೇನೆ,” ಎಂದರು.


ಇದಲ್ಲದೆ ಅವನ ಪ್ರಾರ್ಥನೆಯೂ, ಅವನು ದೇವರಿಗೆ ಭಿನ್ನವಿಸಿದ್ದೂ, ಅವನ ಸಮಸ್ತ ಪಾಪವೂ, ಅವನ ಅಪನಂಬಿಕೆಯೂ, ಅವನು ತಗ್ಗಿಸಿಕೊಳ್ಳುವುದಕ್ಕಿಂತ ಮುಂಚೆ ಕಟ್ಟಿಸಿದ ಉನ್ನತ ಸ್ಥಳಗಳನ್ನೂ, ನಿಲ್ಲಿಸಿದ ಅಶೇರ ಸ್ತಂಭಗಳೂ, ಕೆತ್ತಿಸಿದ ವಿಗ್ರಹಗಳೂ, ಸ್ಥಾಪಿಸಿದ ಸ್ಥಳಗಳೂ ಪ್ರವಾದಿಗಳ ದಾಖಲೆಗಳಲ್ಲಿ ಬರೆದಿರುತ್ತವೆ.


ಆಗ ಬಿಳಾಮನು ಬಾಲಾಕನಿಗೆ, “ನೀನು ನಿನ್ನ ದಹನಬಲಿಯ ಹತ್ತಿರ ನಿಂತುಕೋ, ನಾನು ಸ್ವಲ್ಪ ದೂರಹೋಗಿ ಬರುತ್ತೇನೆ. ಯೆಹೋವ ದೇವರು ನನಗೆ ದರ್ಶನ ಕೊಡಬಹುದು, ಅವರು ನನಗೆ ಸೂಚಿಸುವ ಸಂಗತಿಗಳನ್ನು ನಿನಗೆ ತಿಳಿಸುವೆನು,” ಎಂದು ಹೇಳಿ, ಒಂದು ಎತ್ತರವಾದ ಸ್ಥಳಕ್ಕೆ ಹೋದನು.


ಆಗ ಮೋಶೆಯು ತ್ವರೆಪಟ್ಟು ನೆಲಕ್ಕೆ ಬಾಗಿ ಅವರನ್ನು ಆರಾಧಿಸಿದನು.


ಕನ್ಯೆಯರನ್ನು ಕುರಿತು ಕರ್ತ ಯೇಸುವಿನಿಂದ ನನಗೆ ಯಾವ ಆಜ್ಞೆಯೂ ಇಲ್ಲ. ಆದರೂ ಕರ್ತ ಯೇಸುವಿನಿಂದ ಕರುಣೆಯನ್ನು ಪಡೆದು ನಂಬಿಗಸ್ತನಾಗಿರುವ ನಾನು ನನ್ನ ಅಭಿಪ್ರಾಯವನ್ನು ಕೊಡುತ್ತೇನೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು