Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 9:12 - ಕನ್ನಡ ಸಮಕಾಲಿಕ ಅನುವಾದ

12 ಇತರರಿಗೆ ನಿಮ್ಮ ಸಹಾಯದಲ್ಲಿ ಪಾಲು ಇದ್ದರೆ, ಅದರಲ್ಲಿ ನಮಗೂ ಹೆಚ್ಚು ಪಾಲು ಇರಬೇಕಲ್ಲಾ? ಆದರೆ ನಾವು ಈ ಅಧಿಕಾರವನ್ನು ಚಲಾಯಿಸಿಲ್ಲ. ಕ್ರಿಸ್ತ ಯೇಸುವಿಗೆ ಸೇರಿದ ಸುವಾರ್ತೆಗೆ ಅಡ್ಡಿಯಾಗಬಾರದೆಂದು ಎಲ್ಲವನ್ನೂ ಸಹಿಸಿಕೊಂಡೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಈ ಅಧಿಕಾರ ಇತರರಿಗೆ ನಿಮ್ಮ ಮೇಲೆ ಇದ್ದರೆ ನಮಗೆ ಎಷ್ಟೋ ಹೆಚ್ಚಾಗಿ ಇರಬೇಕಲ್ಲಾ? ಆದರೂ ನಾವು ಆ ಅಧಿಕಾರವನ್ನು ಚಲಾಯಿಸಲಿಲ್ಲ, ಕ್ರಿಸ್ತನ ಸುವಾರ್ತೆಗೆ ಅಡ್ಡಿಮಾಡಬಾರದೆಂದು ಎಲ್ಲವನ್ನು ಸಹಿಸಿಕೊಂಡೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ಇತರರಿಗೆ ನಿಮ್ಮ ಮೇಲೆ ಇಂಥ ಹಕ್ಕಿದ್ದರೆ ಅದಕ್ಕಿಂತಲೂ ಹೆಚ್ಚು ಹಕ್ಕು ನಮಗಿರಬೇಕಲ್ಲವೇ? ಆದರೂ ನಾವು ಈ ಹಕ್ಕನ್ನು ಚಲಾಯಿಸಲೇ ಇಲ್ಲ. ಬದಲಿಗೆ, ಕ್ರಿಸ್ತಯೇಸುವಿನ ಶುಭಸಂದೇಶಕ್ಕೆ ಯಾವ ಅಡ್ಡಿಯೂ ಬಾರದಿರಲೆಂದು ಎಲ್ಲವನ್ನು ಸಹಿಸಿಕೊಂಡೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ಈ ಹಕ್ಕು ಇತರರಿಗೆ ನಿಮ್ಮ ಮೇಲೆ ಇದ್ದರೆ ನಮಗೆ ಎಷ್ಟೋ ಹೆಚ್ಚಾಗಿ ಇರಬೇಕಲ್ಲಾ. ಆದರೂ ನಾವು ಈ ಹಕ್ಕನ್ನು ನಡಿಸದೆ ಕ್ರಿಸ್ತನ ಸುವಾರ್ತೆಗೆ ಅಡ್ಡಿಮಾಡಬಾರದೆಂದು ಎಲ್ಲವನ್ನೂ ಸಹಿಸಿಕೊಂಡೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ತಮಗೆ ಅಗತ್ಯವಾದುವುಗಳನ್ನು ನಿಮ್ಮಿಂದ ಪಡೆದುಕೊಳ್ಳಲು ಇತರರಿಗೆ ಹಕ್ಕಿದೆ. ಆದ್ದರಿಂದ ಖಂಡಿತವಾಗಿ ನಮಗೂ ಈ ಹಕ್ಕಿದೆ. ಆದರೆ ನಾವು ಈ ಹಕ್ಕನ್ನು ಉಪಯೋಗಿಸುವುದಿಲ್ಲ. ಕ್ರಿಸ್ತನ ಸುವಾರ್ತೆಗೆ ವಿಧೇಯರಾಗಲು ಯಾರಿಗೂ ತೊಂದರೆ ಆಗಕೂಡದೆಂದು ನಾವು ಪ್ರತಿಯೊಂದನ್ನು ಸಹಿಸಿಕೊಳ್ಳುತ್ತೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

12 ದುಸ್ರ್ಯಾಕ್ನಿ ತುಮ್ಚ್ಯಾ ವೈರ್ ಹೊ ಹಕ್ಕ್ ಹಾಯ್ ಹೊಲ್ಯಾರ್, ಅಮ್ಕಾ ಉಲ್ಲೊಸೊ ಜಾಸ್ತಿಚೊ ಹಕ್ಕ್ ಹಾಯ್ ನ್ಹಯ್? ಖರೆ ಅಮಿ ಹ್ಯೊ ಹಕ್ಕ್ ವಾಪ್ರುಕ್ ನಾವ್, ಹೆಚ್ಯಾ ಬದ್ಲಾಕ್, ಕ್ರಿಸ್ತಾಚ್ಯಾ ಬರ್‍ಯಾ ಖಬ್ರೆಕ್ ಕಸ್ಲಿಬಿ ಅಡ್ಕಳ್ ಯೆವ್ಚೆ ನ್ಹಯ್ ಮನುನ್ ಸಗ್ಳ್ಯಾ ಸಂಗ್ತಿಯಾ ಅಮಿ ಸೊಸುನ್ ಘೆವ್ನ್ ಜಾತಾಂವ್.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 9:12
23 ತಿಳಿವುಗಳ ಹೋಲಿಕೆ  

ತಾವು ಮಾಡುವ ಕಾರ್ಯಗಳ ಬಗ್ಗೆ ನಮ್ಮೊಂದಿಗೆ ಸರಿಸಮಾನವೆಂದು ಹೊಗಳಿಕೊಳ್ಳಲು ಅವಕಾಶವನ್ನು ಹುಡುಕುವವರಿಗೆ, ಯಾವ ಆಸ್ಪದವೂ ಸಿಗದಂತೆ ನಾನು ಮಾಡುತ್ತಿರುವುದನ್ನು ನಿಲ್ಲಿಸದೆ, ಇನ್ನು ಮುಂದೆಯೂ ಮಾಡುತ್ತಿರುವೆನು.


ಹಾಗಾದರೆ ನನಗೆ ದೊರೆಯುವ ಬಹುಮಾನವೇನು? ನಾನು ಸುವಾರ್ತೆಯನ್ನು ಸಾರುವಾಗ, ಅದನ್ನು ಉಚಿತವಾಗಿ ಸಾರುತ್ತಾ, ಸುವಾರ್ತೆಯ ಪ್ರಸಂಗಿಯಾಗಿ ನನ್ನ ಪೂರ್ಣ ಹಕ್ಕನ್ನು ಉಪಯೋಗಿಸದಿರುವುದೇ ನನ್ನ ಬಹುಮಾನ.


ಆದರೆ ನಾನಂತೂ ಇವುಗಳಲ್ಲಿ ಒಂದು ಹಕ್ಕನ್ನೂ ಉಪಯೋಗಿಸಿಕೊಂಡಿಲ್ಲ. ಅಂಥವುಗಳನ್ನು ನನಗೆ ನೀವು ಮಾಡಬೇಕೆಂಬ ಅಪೇಕ್ಷೆಯಿಂದ ಈ ಸಂಗತಿಗಳನ್ನು ನಾನು ಬರೆಯಲಿಲ್ಲ. ಯಾರಾದರೂ ಈ ಹೆಮ್ಮೆಯನ್ನು ನನ್ನಿಂದ ಅಪಹರಿಸುವುದಕ್ಕಿಂತಲೂ ಸಾಯುವುದೇ ಲೇಸು.


ಇತರರಿಗೆ ನಾನು ಅಪೊಸ್ತಲನಲ್ಲದಿದ್ದರೂ ನಿಮಗೆ ನಾನು ಅಪೊಸ್ತಲನಾಗಿದ್ದೇನೆ! ನನ್ನ ಅಪೊಸ್ತಲ ಸೇವೆಯ ಮುದ್ರೆಯು ಕರ್ತ ದೇವರಲ್ಲಿ ನೀವೇ ಆಗಿದ್ದೀರಷ್ಟೇ.


ನಿಜವಾಗಿ ಹೇಳಬೇಕಾದರೆ, ಯಾರಾದರೂ ನಿಮ್ಮನ್ನು ಗುಲಾಮರನ್ನಾಗಿ ಮಾಡಿಕೊಂಡರೂ, ನಿಮ್ಮನ್ನು ಮರುಳುಗೊಳಿಸಿದರೂ, ತಮ್ಮ ಸ್ವಂತ ಪ್ರಯೋಜನಕ್ಕಾಗಿ ಬಳಸಿಕೊಂಡರೂ, ನಿಮ್ಮ ಕೆನ್ನೆಗೆ ಬಾರಿಸಿದರೂ, ನೀವು ಸಹಿಸಿಕೊಳ್ಳುತ್ತೀರಲ್ಲಾ.


ನಮ್ಮ ಸೇವೆಯು ಅಪವಾದಕ್ಕೆ ಗುರಿಯಾಗದಂತೆ ನಾವು ಯಾರಿಗೂ ಅಡ್ಡಿಯನ್ನು ಒಡ್ಡಲಿಲ್ಲ.


ನಿಮ್ಮ ನಿಮ್ಮಲ್ಲಿ ವ್ಯಾಜ್ಯವಿರುವುದೇ, ನೀವು ಈಗಾಗಲೇ ಸಂಪೂರ್ಣವಾಗಿ ಸೋತವರೆಂಬುದಕ್ಕೆ ಸೂಚನೆಗಳಾಗಿವೆ. ಆದರೆ ಅನ್ಯಾಯವನ್ನು ಏಕೆ ಸಹಿಸಬಾರದು? ಏಕೆ ಮೋಸಹೊಂದಬಾರದು?


ಈ ಕಾರಣದಿಂದಲೇ ನಾನು ನಿಮ್ಮ ಬಳಿಗೆ ಬರುವುದಕ್ಕೆ ಅನೇಕಬಾರಿ ಅಭ್ಯಂತರವಾಯಿತು.


ಅವರು ತನ್ನಂತೆಯೇ ಗುಡಾರಮಾಡುವ ಕೆಲಸದವರಾದ್ದರಿಂದ ಪೌಲನು ಅವರೊಂದಿಗಿದ್ದು ಅವರೊಂದಿಗೆ ಗುಡಾರ ಕೆಲಸ ಮಾಡುತ್ತಿದ್ದನು.


“ನಿಯಮ ಪಂಡಿತರೇ, ನಿಮಗೆ ಕಷ್ಟ, ಏಕೆಂದರೆ ನೀವು ಜ್ಞಾನದ ಬೀಗದ ಕೈಯನ್ನು ತೆಗೆದುಕೊಂಡಿದ್ದೀರಿ. ನೀವಂತೂ ಒಳಗೆ ಪ್ರವೇಶಿಸಲಿಲ್ಲ; ಒಳಗೆ ಪ್ರವೇಶಿಸುತ್ತಿರುವವರಿಗೂ ನೀವು ತಡೆಗಟ್ಟುತ್ತೀರಿ,” ಎಂದು ಹೇಳಿದರು.


ಅವರು ಯೆರೂಸಲೇಮಿಗೆ ವಿರೋಧವಾಗಿ ಯುದ್ಧ ಮಾಡುವುದಕ್ಕೂ, ಅಭ್ಯಂತರಿಸುವುದಕ್ಕೂ ಬರಲು ಏಕವಾಗಿ ಒಳಸಂಚು ಮಾಡಿದರು.


ಆಗ ಅವನು ಅವರಿಗೆ, “ನನ್ನನ್ನು ತಡೆಯಬೇಡಿರಿ, ಯೆಹೋವ ದೇವರು ನನ್ನ ಮಾರ್ಗವನ್ನು ಸಫಲ ಮಾಡಿದ್ದಾರಲ್ಲಾ. ನನ್ನ ಯಜಮಾನನ ಬಳಿಗೆ ಹೋಗುವಂತೆ ನನ್ನನ್ನು ಕಳುಹಿಸಿರಿ,” ಎಂದನು.


ಅದೇ ರೀತಿಯಾಗಿ ಸುವಾರ್ತೆಯನ್ನು ಸಾರುವವರು, ಸುವಾರ್ತೆಯಿಂದಲೇ ಜೀವನ ಮಾಡಬೇಕೆಂದು ಕರ್ತದೇವರು ಸಹ ಆಜ್ಞಾಪಿಸಿದ್ದಾರೆ.


ನಾನು ಸುವಾರ್ತೆಯನ್ನು ಸಾರಿದರೂ ಹೊಗಳಿಸಿಕೊಳ್ಳುವ ಯಾವ ಆಸೆಯೂ ನನಗೆ ಇಲ್ಲ. ಸಾರಲೇಬೇಕೆಂಬ ಕರ್ತವ್ಯಕ್ಕೆ ನಾನು ಸಾಲಗಾರನಾಗಿದ್ದೇನೆ. ಸುವಾರ್ತೆಯನ್ನು ಸಾರದಿದ್ದರೆ, ನನ್ನ ಗತಿ ಏನೆಂದು ಹೇಳಲಿ!


ಯಾವಾಗಲೂ ಸಂರಕ್ಷಿಸುತ್ತದೆ, ಯಾವಾಗಲೂ ನಂಬುತ್ತದೆ, ಯಾವಾಗಲೂ ನಿರೀಕ್ಷಿಸುತ್ತದೆ, ಯಾವಾಗಲೂ ಸಹಿಸಿಕೊಳ್ಳುತ್ತದೆ.


ಕ್ರಿಸ್ತ ಯೇಸುವಿನ ಸುವಾರ್ತೆಯನ್ನು ಸಾರುವುದಕ್ಕೆ ನಾನು ತ್ರೋವಕ್ಕೆ ಹೋದಾಗ, ಅಲ್ಲಿ ಕರ್ತ ಯೇಸುವು ನನಗೆ ಬಾಗಿಲು ತೆರೆದಿರುವುದನ್ನು ಕಂಡೆನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು