1 ಕೊರಿಂಥದವರಿಗೆ 7:14 - ಕನ್ನಡ ಸಮಕಾಲಿಕ ಅನುವಾದ14 ಏಕೆಂದರೆ, ಅವಿಶ್ವಾಸಿಯಾದ ಗಂಡನು ವಿಶ್ವಾಸಿಯಾದ ತನ್ನ ಹೆಂಡತಿಯಿಂದ ಮತ್ತು ಅವಿಶ್ವಾಸಿಯಾದ ಹೆಂಡತಿಯು ವಿಶ್ವಾಸಿಯಾದ ತನ್ನ ಗಂಡನಿಂದ ದೇವಜನರೊಂದಿಗೆ ಸಂಬಂಧವುಳ್ಳವರಾಗಿದ್ದಾರೆ. ಹಾಗಲ್ಲದಿದ್ದರೆ, ನಿಮ್ಮ ಮಕ್ಕಳು ಅಪವಿತ್ರರಾಗುತ್ತಿದ್ದರು. ಈಗಲಾದರೋ ಅವರು ದೇವರಿಗಾಗಿ ಪವಿತ್ರರಾಗಿದ್ದಾರೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201914 ಯಾಕೆಂದರೆ ಕ್ರಿಸ್ತ ನಂಬಿಕೆಯಿಲ್ಲದ ಗಂಡನು ತನ್ನ ಹೆಂಡತಿಯ ನಿಮಿತ್ತ ಪವಿತ್ರನಾದನು ಮತ್ತು ಕ್ರಿಸ್ತ ನಂಬಿಕೆಯಿಲ್ಲದ ಹೆಂಡತಿಯು ತನ್ನ ಗಂಡನ ನಿಮಿತ್ತ ಪವಿತ್ರಳಾದಳು. ಹಾಗಲ್ಲದಿದ್ದರೆ ನಿಮ್ಮ ಮಕ್ಕಳು ಅಪವಿತ್ರರಾಗುತ್ತಿದ್ದರು. ಈಗಲಾದರೋ ಅವರು ಪವಿತ್ರರೇ ಆಗಿದ್ದಾರೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)14 ಏಕೆಂದರೆ, ಕ್ರೈಸ್ತವಿಶ್ವಾಸಿಯಾದ ಸತಿಯ ಮುಖಾಂತರ ಪತಿ ದೇವಜನರೊಂದಿಗೆ ಸಂಬಂಧಪಡೆಯುತ್ತಾನೆ. ಅಂತೆಯೇ ಕ್ರೈಸ್ತವಿಶ್ವಾಸಿಯಾದ ಪತಿಯ ಮುಖಾಂತರ ಸತಿ ದೇವಜನರೊಂದಿಗೆ ಸಂಬಂಧಪಡೆಯುತ್ತಾಳೆ. ಇಲ್ಲದಿದ್ದರೆ ನಿಮ್ಮ ಮಕ್ಕಳು ಅಪವಿತ್ರರಾಗುತ್ತಿದ್ದರು. ಈಗಲಾದರೋ ಅವರು ದೇವಜನರೊಂದಿಗೆ ಸಂಬಂಧ ಉಳ್ಳವರಾಗಿದ್ದಾರೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)14 ಯಾಕಂದರೆ ಕ್ರಿಸ್ತನಂಬಿಕೆಯಿಲ್ಲದ ಗಂಡನು ತನ್ನ ಹೆಂಡತಿಯಲ್ಲಿ ದೇವಜನಕ್ಕೆ ಸಂಬಂಧಪಟ್ಟವನಾದನು; ಮತ್ತು ಕ್ರಿಸ್ತನಂಬಿಕೆಯಿಲ್ಲದ ಹೆಂಡತಿಯು ನಮ್ಮ ಸಹೋದರನಾದ ತನ್ನ ಗಂಡನಲ್ಲಿ ದೇವಜನಕ್ಕೆ ಸಂಬಂಧಪಟ್ಟವಳಾದಳು. ಹಾಗಲ್ಲದಿದ್ದರೆ ನಿಮ್ಮ ಮಕ್ಕಳು ಅಪವಿತ್ರರಾಗುತ್ತಿದ್ದರು; ಈಗಲಾದರೋ ಅವರು ದೇವಜನರಲ್ಲಿ ಸೇರಿದವರೇ ಆಗಿದ್ದಾರೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್14 ಕ್ರಿಸ್ತ ವಿಶ್ವಾಸಿಯಲ್ಲದ ಗಂಡನು ತನ್ನ ಕ್ರೈಸ್ತ ಹೆಂಡತಿಯ ಮೂಲಕ ಪವಿತ್ರನಾಗುತ್ತಾನೆ. ಅದೇರೀತಿ, ಕ್ರಿಸ್ತ ವಿಶ್ವಾಸಿಯಲ್ಲದ ಹೆಂಡತಿಯು ತನ್ನ ಕ್ರೈಸ್ತ ಗಂಡನ ಮೂಲಕ ಪವಿತ್ರಳಾಗುತ್ತಾಳೆ. ಇದು ಸತ್ಯವಾಗಿಲ್ಲದಿದ್ದರೆ, ನಿಮ್ಮ ಮಕ್ಕಳು ಪವಿತ್ರರಾಗುತ್ತಿರಲಿಲ್ಲ. ಆದರೆ ಈಗ ನಿಮ್ಮ ಮಕ್ಕಳು ಪವಿತ್ರರಾಗಿದ್ದಾರೆ. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್14 ಕಶ್ಯಾಕ್ ಮಟ್ಲ್ಯಾರ್ ಅಪ್ನಾಚ್ಯಾ ವಿಶ್ವಾಸಾತ್ ಹೊತ್ತ್ಯಾ ಬಾಯ್ಕೊಚ್ಯಾ ವೈನಾ ಎಕ್ ವಿಶ್ವಾಸಾತ್ ನಸಲ್ಲೊ ಘೊವ್ ಕಸೊ ಪವಿತ್ರ್ ಹೊತಾ. ತಸೆಚ್ ಅಪ್ನಾಚ್ಯಾ ವಿಶ್ವಾಸಾತ್ ಹೊತ್ತ್ಯಾ ಘೊವಾಚ್ಯಾ ವೈನಾ ಎಕ್ ವಿಶ್ವಾಸಾತ್ ನಸಲ್ಲಿ ಬಾಯ್ಕೊ ಪವಿತ್ರ್ ಹೊತಾ, ಅಶೆ ನಸ್ಲ್ಯಾರ್ ತುಮ್ಚಿ ಪೊರಾ ಅಪವಿತ್ರ್ ಹೊಯ್ ಹೊತ್ತಿ, ಖರೆ ತಿ ಖರೆಚ್ ಪವಿತ್ರ್ ಹಾತ್. ಅಧ್ಯಾಯವನ್ನು ನೋಡಿ |