Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 16:11 - ಕನ್ನಡ ಸಮಕಾಲಿಕ ಅನುವಾದ

11 ಯಾರೂ ಅವನನ್ನು ಹೀನಾಯವಾಗಿ ಕಾಣಬಾರದು. ಆದರೆ ಅವನು ನನ್ನ ಬಳಿಗೆ ಬರುವಂತೆ ಅವನನ್ನು ಸಮಾಧಾನದಿಂದ ಕಳುಹಿಸಿಕೊಡಿರಿ. ಅವನು ಸಹೋದರರೊಂದಿಗೆ ಬರುವುದನ್ನು ಎದುರು ನೋಡುತ್ತಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಆದ್ದರಿಂದ ಯಾರೂ ಅವನನ್ನು ತಿರಸ್ಕರಿಸಬಾರದು. ಅವನು ನನ್ನ ಬಳಿಗೆ ಬರುವಂತೆ ಅವನನ್ನು ಸಮಾಧಾನದಿಂದ ಕಳುಹಿಸಿರಿ; ಅವನು ಸಹೋದರರೊಂದಿಗೆ ಬರುವುದನ್ನು ಎದುರುನೋಡುತ್ತಾ ಇದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 ಯಾರೂ ಆತನನ್ನು ತಾತ್ಸಾರ ಮಾಡದಿರಲಿ. ಸಮಾಧಾನದಿಂದ ಆತನು ನನ್ನ ಬಳಿಗೆ ಬರುವಂತೆ ಕಳುಹಿಸಿಕೊಡಿ. ಆತನ ಆಗಮನವನ್ನು ನಾನು ಇತರ ಸಹೋದರರೊಡನೆ ಎದುರುನೋಡುತ್ತಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ಆದದರಿಂದ ಯಾರೂ ಅವನನ್ನು ಹೀನೈಸಬಾರದು. ಮತ್ತು ಅವನು ನನ್ನ ಬಳಿಗೆ ಬರುವಂತೆ ಅವನನ್ನು ಸಮಾಧಾನದಿಂದ ಸಾಗಕಳುಹಿಸಿರಿ; ಅವನು ಸಹೋದರರೊಂದಿಗೆ ಬರುವದನ್ನು ಎದುರುನೋಡುತ್ತಾ ಇದ್ದೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ಆದ್ದರಿಂದ ನಿಮ್ಮಲ್ಲಿ ಯಾರೂ ಅವನನ್ನು ತಿರಸ್ಕರಿಸಬಾರದು. ಅವನನ್ನು ನನ್ನ ಬಳಿಗೆ ಸಮಾಧಾನದಿಂದ ಕಳುಹಿಸಿಕೊಡಿರಿ. ಅವನು ಸಹೋದರರೊಂದಿಗೆ ಬರುವುದನ್ನು ನಾನು ಎದುರು ನೋಡುತ್ತಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

11 ತೆಚೆಸಾಟ್ನಿ ಕೊನ್‍ಬಿ ತೆಚಿ ಪರ್ವಾ ಕರುಚ್ಯಾ ಅದ್ದಿ ರ್‍ಹಾತಲೆ ನಕ್ಕೊ, ತೆಚ್ಯಾ ಬದ್ಲಾಕ್, ತೊ ಸಮಾದಾನಾನ್ ಅನಿ ಶಾಬಿತ್ ಮಾಜ್ಯಾಕ್ಡೆ ಯೆವ್ನ್ ಪಾವಿ ಸರ್ಕೆ ತೆಚ್ಯಾ ವಾಟೆಕ್ ಲಾವುನ್ ದಿವಾ; ಅಮ್ಚ್ಯಾ ಭಾವಾ ಭೆನಿಯಾಂಚ್ಯಾ ವಾಂಗ್ಡಾ ಮಿಯಾ ತೆಚಿ ವಾಟ್ ಬಗುನ್ಗೆತ್ ರ್‍ಹಾತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 16:11
10 ತಿಳಿವುಗಳ ಹೋಲಿಕೆ  

ನಿನ್ನ ಯೌವನವನ್ನೂ ಯಾರೂ ತಾತ್ಸಾರ ಮಾಡದಿರಲಿ. ಆದರೆ ನಂಬುವವರಿಗೆ ನುಡಿಯಲ್ಲಿ, ನಡೆಯಲ್ಲಿ, ಪ್ರೀತಿಯಲ್ಲಿ, ವಿಶ್ವಾಸದಲ್ಲಿ, ಶುದ್ಧತ್ವದಲ್ಲಿ ನೀನೇ ಆದರ್ಶನಾಗಿರು.


ಅವರು ಕೆಲವು ದಿನಗಳು ಇದ್ದ ನಂತರ ಅಲ್ಲಿಯ ವಿಶ್ವಾಸಿಗಳನ್ನು ಬೀಳ್ಕೊಟ್ಟು ತಮ್ಮನ್ನು ಕಳುಹಿಸಿಕೊಟ್ಟವರ ಬಳಿಗೆ ಹಿಂದಿರುಗಿದರು.


ಈ ಕಾರ್ಯಗಳ ವಿಷಯದಲ್ಲಿ, ನೀನು ಉಪದೇಶಿಸುತ್ತಾ ಇರು. ಪ್ರೋತ್ಸಾಹಮಾಡುತ್ತಾ ಪೂರ್ಣ ಅಧಿಕಾರದಿಂದ ಖಂಡಿಸುತ್ತಾ ಇರು. ಯಾರೂ ನಿನ್ನನ್ನು ತಿರಸ್ಕರಿಸದಿರಲಿ.


ನನ್ನ ಹಾಗೆಯೇ ತಿಮೊಥೆ ಕರ್ತನ ಸೇವೆ ಮಾಡುತ್ತಿದ್ದಾನೆ. ಅವನು ಬಂದರೆ, ಅವನು ನಿಮ್ಮೊಂದಿಗಿರುವಾಗ ಅವನಿಗೆ ಯಾವ ಭಯವೂ ಇಲ್ಲದಂತೆ ನೋಡಿಕೊಳ್ಳಿರಿ.


ಬಹುಶಃ ನಾನು ಸ್ವಲ್ಪ ಸಮಯ ನಿಮ್ಮೊಂದಿಗೆ ಇದ್ದ ಮೇಲೆ ಅಥವಾ ಚಳಿಗಾಲವನ್ನು ಪೂರ್ತಿಯಾಗಿ ನಿಮ್ಮೊಂದಿಗೆ ಕಳೆಯಲು ಬಯಸುತ್ತೇನೆ. ಹೀಗೆ ನಾನು ಹೋಗಬೇಕಾದ ಸ್ಥಳಗಳಲ್ಲಿ ನೀವು ನನಗೆ ಸಹಾಯ ಮಾಡಬಹುದು.


ಅವರು ಸಭೆಯ ಮುಂದೆ ನಿನ್ನ ಪ್ರೀತಿಗೆ ಸಾಕ್ಷಿ ಹೇಳಿದರು. ಅವರನ್ನು ನೀನು ದೇವರು ಮೆಚ್ಚುವ ರೀತಿಯಲ್ಲಿ ಸಾಗಕಳುಹಿಸಿದರೆ ನೀನು ಒಳ್ಳೆಯದನ್ನು ಮಾಡುತ್ತೀ.


ಆದ್ದರಿಂದ, ಈ ಆಜ್ಞೆಗಳನ್ನು ತಿರಸ್ಕರಿಸುವವನು ಮನುಷ್ಯನನ್ನಲ್ಲ ದೇವರನ್ನು ಅಂದರೆ, ತಮ್ಮ ಪವಿತ್ರಾತ್ಮರನ್ನು ನಮಗೆ ಕೊಡುವ ದೇವರನ್ನೇ ತಿರಸ್ಕರಿಸುತ್ತಾನೆ.


“ನಿಮ್ಮ ಮಾತನ್ನು ಕೇಳುವವರು ನನ್ನ ಮಾತನ್ನು ಕೇಳುತ್ತಾರೆ; ನಿಮ್ಮನ್ನು ತಿರಸ್ಕರಿಸುವವರು ನನ್ನನ್ನು ತಿರಸ್ಕರಿಸುತ್ತಾರೆ; ಆದರೆ ನನ್ನನ್ನು ತಿರಸ್ಕರಿಸುವವರು ನನ್ನನ್ನು ಕಳುಹಿಸಿದಾತನನ್ನೇ ತಿರಸ್ಕರಿಸುತ್ತಾರೆ,” ಎಂದರು.


ಆದ್ದರಿಂದ ಸಭೆಯವರು ಅವರನ್ನು ಸಾಗಕಳುಹಿಸಲು, ಅವರು ಫೊಯಿನಿಕೆಯ ಮತ್ತು ಸಮಾರ್ಯದ ಮಾರ್ಗವಾಗಿ ಪ್ರಯಾಣ ಮಾಡುವಾಗ, ಯೆಹೂದ್ಯರಲ್ಲದವರ ಪರಿವರ್ತನೆಯನ್ನು ವಿವರವಾಗಿ ಅಲ್ಲಿಯವರೆಗೆ ತಿಳಿಸುತ್ತಾ ಸಹೋದರರೆಲ್ಲರಿಗೂ ಮಹಾಸಂತೋಷವನ್ನುಂಟುಮಾಡಿದರು.


ಮಕೆದೋನ್ಯಕ್ಕೆ ಹೋಗುವಾಗ ನಾನು ನಿಮ್ಮನ್ನು ಸಂದರ್ಶಿಸುವೆನು, ಅಲ್ಲಿಂದ ಹಿಂದಿರುಗಿ ಬರುವಾಗಲೂ ನಿಮ್ಮನ್ನು ಸಂದರ್ಶಿಸಲು ನಾನೇ ಯೂದಾಯಕ್ಕೆ ಬರುವಂತೆ ಯೋಚನೆ ಮಾಡಿದ್ದೆನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು