Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 13:2 - ಕನ್ನಡ ಸಮಕಾಲಿಕ ಅನುವಾದ

2 ನನಗೆ ಪ್ರವಾದನ ವರವಿದ್ದರೂ ನಾನು ಎಲ್ಲಾ ರಹಸ್ಯಗಳನ್ನೂ, ಸಕಲ ವಿದ್ಯೆಯನ್ನು ತಿಳಿದಿದ್ದರೂ ಬೆಟ್ಟಗಳನ್ನು ಕದಲಿಸುವಷ್ಟು ನಂಬಿಕೆಯಿದ್ದರೂ ನನಗೆ ಪ್ರೀತಿಯಿಲ್ಲದಿದ್ದರೆ, ಶೂನ್ಯನಾಗಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ನನಗೆ ಪ್ರವಾದನ ವರವಿದ್ದರೂ, ಎಲ್ಲಾ ರಹಸ್ಯಗಳೂ, ಸಕಲ ವಿಧವಾದ ವಿದ್ಯೆಗಳನ್ನು ತಿಳಿದ್ದರೂ, ಬೆಟ್ಟಗಳನ್ನೂ ತೆಗೆದಿಡುವುಷ್ಟು ನಂಬಿಕೆಯಿದ್ದರೂ, ಪ್ರೀತಿಯಿಲ್ಲದವನಾಗಿದ್ದರೆ ನಾನು ಏನೂ ಅಲ್ಲದವನಾಗಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 ಪ್ರವಾದನೆಯ ವರವೆನಗಿರಬಹುದು ಇರಬಹುದು ನಿಗೂಢ ರಹಸ್ಯಗಳರಿವು ಎಲ್ಲದರ ಪರಿಜ್ಞಾನ, ಪರ್ವತವನೇ ಕದಲಿಪ ವಿಶ್ವಾಸ ಪ್ರೀತಿಯೊಂದಿಲ್ಲದಿರೆ ನಾ ಶೂನ್ಯಸಮಾನ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ನನಗೆ ಪ್ರವಾದನವರವಿದ್ದರೂ ಎಲ್ಲಾ ರಹಸ್ಯಗಳೂ ಸಕಲ ವಿಧವಾದ ವಿದ್ಯೆಯೂ ತಿಳಿದರೂ, ಬೆಟ್ಟಗಳನ್ನು ತೆಗೆದಿಡುವದಕ್ಕೆ ಬೇಕಾದಷ್ಟು ನಂಬಿಕೆಯಿದ್ದರೂ ನಾನು ಪ್ರೀತಿಯಿಲ್ಲದವನಾಗಿದ್ದರೆ ಏನೂ ಅಲ್ಲದವನಾಗಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ಪ್ರವಾದಿಸುವ ವರ ನನಗಿರಬಹುದು; ದೇವರ ರಹಸ್ಯ ಸಂಗತಿಗಳನ್ನೆಲ್ಲಾ ಮತ್ತು ಜ್ಞಾನವನ್ನೆಲ್ಲಾ ನಾನು ಅರ್ಥಮಾಡಿಕೊಂಡಿರಬಹುದು ಮತ್ತು ಬೆಟ್ಟಗಳನ್ನು ಚಲಿಸಬಲ್ಲಂಥ ಮಹಾನಂಬಿಕೆ ನನಗಿರಬಹುದು. ಇವುಗಳೆಲ್ಲಾ ನನ್ನಲ್ಲಿ ಇದ್ದರೂ ಪ್ರೀತಿಯು ಇಲ್ಲದಿದ್ದರೆ, ನಾನು ನಿಷ್ಪ್ರಯೋಜಕನಾಗಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

2 ಪ್ರವಾದ್ ಕರ್‍ತಲೆ ವರು ಮಾಕಾ ಅಸಿಲ್ ಅನಿ ಘುಟಾನ್ ಹೊತ್ತ್ಯಾ ಸಂಗ್ತಿಯಾಂಚೆ ಸಗ್ಳೆ ಶಾನ್‍ಪಾನ್ ಮಾಕಾ ಅಸಿಲ್, ನಾ ಹೊಲ್ಯಾರ್ ಎಕಾಕ್ಲಿ ಮಡ್ಡಿ ಅನಿ ಎಕಾಕ್ಡೆ ಜಾಯ್ ಸಾರ್ಕೆ ಕರುಕ್ ಹೊತಾ ತಸ್ಲೊ ವಿಶ್ವಾಸ್ ಮಾಕಾ ಅಸಿಲ್, ಜಾಲ್ಯಾರ್ಬಿ ಮಾಜ್ಯಾ ಭುತ್ತುರ್ ಪ್ರೆಮ್ ನಾ ಹೊಲ್ಯಾರ್ ಮಿಯಾ ಕಾಯ್ಬಿ ನ್ಹಯ್.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 13:2
38 ತಿಳಿವುಗಳ ಹೋಲಿಕೆ  

ಪ್ರೀತಿಯಿಲ್ಲದವರು ದೇವರನ್ನು ಬಲ್ಲವರಲ್ಲ. ಏಕೆಂದರೆ ದೇವರು ಪ್ರೀತಿಯಾಗಿದ್ದಾರೆ.


ನಾನು ನನ್ನ ಎಲ್ಲಾ ಆಸ್ತಿಯನ್ನು ದಾನಮಾಡಿದರೂ, ನಾನು ಹೊಗಳಿಕೊಳ್ಳುವಂತೆ ನನ್ನ ದೇಹವನ್ನು ಸುಡುವುದಕ್ಕಾಗಿ ಒಪ್ಪಿಸಿಕೊಟ್ಟರೂ ಪ್ರೀತಿಯು ನನಗಿಲ್ಲದಿದ್ದರೆ, ನನಗೇನೂ ಪ್ರಯೋಜನವಾಗುವುದಿಲ್ಲ.


ಯೇಸು ಅವರಿಗೆ, “ನಿಮ್ಮ ಅಪೂರ್ಣನಂಬಿಕೆಯೇ ಇದಕ್ಕೆ ಕಾರಣ. ಸಾಸಿವೆ ಕಾಳಿನಷ್ಟು ನಂಬಿಕೆ ನಿಮಗಿರುವುದಾದರೆ ನೀವು ಈ ಬೆಟ್ಟಕ್ಕೆ, ‘ಇಲ್ಲಿಂದ ಆ ಸ್ಥಳಕ್ಕೆ ಹೋಗು’ ಎಂದು ಹೇಳಿದರೆ ಅದು ಹೋಗುವುದು. ಯಾವುದೂ ನಿಮಗೆ ಅಸಾಧ್ಯವಾಗಿರುವುದಿಲ್ಲ.


ಯಾವನಾದರೂ ಕರ್ತನನ್ನು ಪ್ರೀತಿಸದಿದ್ದರೆ, ಅವನು ಶಾಪಗ್ರಸ್ತನಾಗಲಿ! ಕರ್ತನೇ, ಬಾ!


ಯೇಸು ಉತ್ತರವಾಗಿ ಅವರಿಗೆ, “ನಾನು ನಿಮಗೆ ನಿಜವಾಗಿ ಹೇಳುತ್ತೇನೆ: ಸಂದೇಹ ಪಡದೆ ನಂಬಿದರೆ, ನಾನು ಈ ಅಂಜೂರದ ಮರಕ್ಕೆ ಮಾಡಿದಂತೆಯೇ ನೀವೂ ಮಾಡುವಿರಿ. ಇದಲ್ಲದೆ ನೀವು ಈ ಬೆಟ್ಟಕ್ಕೆ, ‘ನೀನು ಕಿತ್ತುಕೊಂಡು ಹೋಗಿ ಸಮುದ್ರದಲ್ಲಿ ಬೀಳು’ ಎಂದು ಹೇಳಿದರೂ ಅದು ಹಾಗೆಯೇ ಆಗುವುದು.


ಅದನ್ನು ನೀವು ಓದಿದರೆ ಕ್ರಿಸ್ತನ ರಹಸ್ಯದ ಕುರಿತಾಗಿ ನನಗಿರುವ ಒಳನೋಟವನ್ನು ನೀವೇ ಅರ್ಥಮಾಡಿಕೊಳ್ಳುವಿರಿ.


ನಾನು ಮನುಷ್ಯರ ಭಾಷೆಗಳನ್ನೂ, ದೇವದೂತರ ಭಾಷೆಗಳನ್ನೂ ಮಾತನಾಡುವವನಾದರೂ ನನಗೆ ಪ್ರೀತಿಯಿಲ್ಲದಿದ್ದರೆ, ನಾದ ಕೊಡುವ ಕಂಚೂ ಗಣಗಣಿಸುವ ತಾಳವೂ ಆಗಿದ್ದೇನೆ.


ನಾನು ಹೇಳುವುದೇನೆಂದರೆ, ಪವಿತ್ರಾತ್ಮರ ನಡೆಸುವಿಕೆಯಿಂದ ಬಾಳಿರಿ, ಆಗ ನೀವು ದೈಹಿಕ ಆಸೆಗಳನ್ನು ಎಂದೂ ಪೂರೈಸಲಾರಿರಿ.


ಆ ರಹಸ್ಯವು ಹಿಂದಿನ ಯುಗಗಳಿಂದಲೂ ತಲತಲಾಂತರಗಳಿಂದಲೂ ಮರೆಯಾಗಿತ್ತು. ಆದರೂ ಈಗ ಅದು ಕರ್ತ ಯೇಸುವಿನ ಜನರಿಗೆ ಪ್ರಕಟವಾಗಿದೆ.


ಏನೂ ಅಲ್ಲದವನೊಬ್ಬನು ತಾನು ಏನೋ ಆಗಿದ್ದೇನೆಂದು ಭಾವಿಸಿಕೊಂಡರೆ, ತನ್ನನ್ನು ತಾನೇ ವಂಚಿಸಿಕೊಳ್ಳುತ್ತಾನೆ.


ಪವಿತ್ರಾತ್ಮರ ಫಲವೇನೆಂದರೆ: ಪ್ರೀತಿ, ಆನಂದ, ಸಮಾಧಾನ, ಸಹನೆ, ದಯೆ, ಸದ್ಗುಣ, ನಂಬಿಗಸ್ತಿಕೆ,


ದೇವರು ತಮ್ಮ ಸಭೆಯಲ್ಲಿ ಮೊದಲನೆಯದಾಗಿ ಅಪೊಸ್ತಲರನ್ನು, ಎರಡನೆಯದಾಗಿ ಪ್ರವಾದಿಗಳನ್ನು, ಮೂರನೆಯದಾಗಿ ಬೋಧಕರನ್ನು ನೇಮಿಸಿದ್ದಾರೆ. ಅನಂತರ ಅದ್ಭುತಕಾರ್ಯಗಳನ್ನು ಮಾಡುವವರನ್ನು, ರೋಗಗಳನ್ನು ಗುಣಪಡಿಸುವ ವರವನ್ನು, ಪರೋಪಕಾರಿಗಳನ್ನು, ಆಡಳಿತಗಾರರನ್ನು, ವಿವಿಧ ವಾಣಿಗಳನ್ನಾಡುವವರನ್ನು ನೇಮಿಸಿದ್ದಾರೆ.


ಸುನ್ನತಿಯಿದ್ದರೂ ಪ್ರಯೋಜನವಿಲ್ಲ, ಸುನ್ನತಿಯಿಲ್ಲದಿದ್ದರೂ ಪ್ರಯೋಜನವಿಲ್ಲ. ದೇವರ ಆಜ್ಞೆಗಳನ್ನು ಕೈಗೊಳ್ಳುವುದೇ ಪ್ರಯೋಜನಕರ.


ಎಲ್ಲಾ ಪ್ರಶ್ನೆಗಳಿಂದ ಹೆಚ್ಚಾಗಿ ದೈವ ಭಕ್ತಿಯ ರಹಸ್ಯವು ದೊಡ್ಡದಾದದ್ದು ಅದು ಯಾವುದೆಂದರೆ: “ದೇವರು ಮನುಷ್ಯ ರೂಪದಲ್ಲಿ ಪ್ರತ್ಯಕ್ಷರಾದರು. ಆತ್ಮದಲ್ಲಿ ರುಜುಪಡಿಸಲಾದರು. ದೂತರಿಗೆ ಕಾಣಿಸಿಕೊಂಡರು, ಯೆಹೂದ್ಯರಲ್ಲದವರಿಗೆ ಸಾರಲಾದರು, ಲೋಕದಲ್ಲಿ ನಂಬಲಾದರು, ಮಹಿಮೆಗೆ ಒಯ್ಯಲಾದರು!”


ನಾನು ಬಾಯಿ ತೆರೆಯುವಾಗ ಸುವಾರ್ತೆಯ ರಹಸ್ಯವನ್ನು ಧೈರ್ಯವಾಗಿ ತಿಳಿಯಪಡಿಸುವುದಕ್ಕೆ ಮಾತನ್ನು ನನಗೆ ದಯಪಾಲಿಸಬೇಕೆಂದು ಪ್ರಾರ್ಥಿಸಿರಿ.


ಆದ್ದರಿಂದ ನೀವು ಈ ರೀತಿಯಾಗಿ ನಮ್ಮನ್ನು ಪರಿಗಣಿಸಬೇಕು: ನಾವು ಕ್ರಿಸ್ತ ಯೇಸುವಿನ ದಾಸರೆಂತಲೂ ದೇವರ ರಹಸ್ಯಗಳ ನಂಬಿಗಸ್ತ ನಿರ್ವಾಹಕರೆಂದೂ ಪರಿಗಣಿಸಿರಿ.


ನನ್ನ ಸುವಾರ್ತೆಯು ಹೇಳುವಂತೆಯೇ ನಿಮ್ಮನ್ನು ಬಲಪಡಿಸುವ ದೇವರಿಗೆ ಈಗ ಎಲ್ಲಾ ಮಹಿಮೆಯಾಗಲಿ. ಕ್ರಿಸ್ತ ಯೇಸುವಿನ ಕುರಿತಾಗಿರುವ ಈ ಸಂದೇಶವು ಆದಿಯಿಂದಲೂ ಗುಪ್ತವಾಗಿರುವ ರಹಸ್ಯದ ದೇವರ ಯೋಜನೆಯು ಯೆಹೂದ್ಯರಲ್ಲದವರಾದ ನಿಮಗಾಗಿ ಈಗ ಪ್ರಕಟವಾಗಿದೆ.


ಪ್ರಿಯರೇ, ನೀವು ಈ ಮರ್ಮದ ಬಗ್ಗೆ ಅಜ್ಞಾನಿಗಳಾಗಿರಬೇಕೆಂದು ನಾನು ಬಯಸುವುದಿಲ್ಲ. ಅದೇನೆಂದರೆ, ಯೆಹೂದ್ಯರಲ್ಲದವರು ಪೂರ್ಣಸಂಖ್ಯೆಯಲ್ಲಿ ದೇವರ ಬಳಿಗೆ ಬರುವವರೆಗೆ ಮಾತ್ರ ಇಸ್ರಾಯೇಲರು ತಮ್ಮ ಹೃದಯದ ಕಾಠಿಣ್ಯಕ್ಕೆ ತಾತ್ಕಾಲಿಕವಾಗಿ ಒಳಗಾಗಿರುವರು.


ಯೇಸು ದಾರಿಯಲ್ಲಿ ಒಂದು ಅಂಜೂರದ ಮರವನ್ನು ಕಂಡು, ಅದರ ಹತ್ತಿರಕ್ಕೆ ಬಂದಾಗ ಎಲೆಗಳನ್ನೇ ಹೊರತು ಮತ್ತೇನೂ ಕಾಣಲಿಲ್ಲ. ಆಗ ಯೇಸು, ಆ ಮರಕ್ಕೆ, “ಇನ್ನು ಮೇಲೆ ಎಂದೆಂದಿಗೂ ನಿನ್ನಲ್ಲಿ ಫಲವು ಬಾರದಿರಲಿ,” ಎಂದರು. ತಕ್ಷಣವೇ ಅಂಜೂರದ ಮರವು ಒಣಗಿ ಹೋಯಿತು.


ಯೇಸು ಅದಕ್ಕೆ ಉತ್ತರವಾಗಿ ಹೇಳಿದ್ದು: “ಪರಲೋಕ ರಾಜ್ಯದ ರಹಸ್ಯಗಳನ್ನು ತಿಳಿದುಕೊಳ್ಳುವ ಜ್ಞಾನವು ನಿಮಗೆ ಕೊಡಲಾಗಿದೆ, ಆದರೆ ಅವರಿಗಲ್ಲ.


ನೀವೇ ನನ್ನನ್ನು ಹೊಗಳಿಕೊಳ್ಳುವಂತೆ ಮಾಡಿ, ನಾನು ಬುದ್ಧಿಹೀನನಾಗಿ ನಡೆಯಲು ಒತ್ತಾಯಿಸಿದ್ದೀರಿ. ನನಗೆ ನಿಮ್ಮಿಂದಲೇ ಹೊಗಳಿಕೆಯು ಬೇಕಾಗಿತ್ತು. ಏಕೆಂದರೆ ನಾನು ಕೇವಲ ಅತ್ಯಲ್ಪನಾದರೂ “ಅತಿಶ್ರೇಷ್ಠರಾದ ಅಪೊಸ್ತಲರಿಗಿಂತ” ಕಡಿಮೆ ಅಲ್ಲ.


ಆದಕಾರಣ ನನ್ನ ಪ್ರಿಯರೇ, ಪ್ರವಾದಿಸುವ ವರಕ್ಕಾಗಿ ಆಸಕ್ತರಾಗಿರಿ. ಅನ್ಯಭಾಷೆಯನ್ನಾಡುವುದಕ್ಕೆ ಅಡ್ಡಿಮಾಡಬೇಡಿರಿ.


ಹಾಗಾದರೆ, ವಿಗ್ರಹಗಳಿಗೆ ನೈವೇದ್ಯ ಮಾಡಿದ ಆಹಾರ ಪದಾರ್ಥಗಳನ್ನು ತಿನ್ನುವುದರ ವಿಷಯ: “ಲೋಕದಲ್ಲಿ ವಿಗ್ರಹವು ಏನೂ ಅಲ್ಲ. ಒಬ್ಬ ದೇವರೇ ಹೊರತು ಬೇರೆ ದೇವರಿಲ್ಲ,” ಎಂದು ನಮಗೆ ಗೊತ್ತಿದೆ.


ಅಂತಿಯೋಕ್ಯದ ಸಭೆಯಲ್ಲಿ, ಪ್ರವಾದಿಗಳೂ ಬೋಧಕರೂ ಇದ್ದರು. ಅವರು ಯಾರೆಂದರೆ ಬಾರ್ನಬನು, ನೀಗರ ಎಂದು ಕರೆಯಲಾಗುತ್ತಿದ್ದ ಸಿಮೆಯೋನ, ಕುರೇನೆದ ಲೂಕ್ಯ, ಚತುರಾಧಿಪತಿ ಹೆರೋದನೊಂದಿಗೆ ಬೆಳೆದ ಮೆನಹೇನ ಮತ್ತು ಸೌಲ ಮುಂತಾದವರೇ.


ನನ್ನ ಪ್ರಿಯರೇ, ನೀವು ಒಳ್ಳೆಯತನದಿಂದ ಪೂರ್ಣವಾದವರೂ ಸಕಲ ತಿಳುವಳಿಕೆಯಿಂದ ತುಂಬಿದವರೂ ಆಗಿದ್ದು, ಒಬ್ಬರಿಗೊಬ್ಬರು ಬುದ್ಧಿ ಹೇಳುವುದಕ್ಕೆ ಶಕ್ತರಾಗಿದ್ದೀರೆಂದು ನಿಮ್ಮ ಬಗ್ಗೆ ನನಗೆ ಭರವಸೆ ಇದೆ.


ತನ್ನ ತಲೆಯನ್ನು ಮುಚ್ಚಿಕೊಂಡು ಪ್ರಾರ್ಥನೆ ಮಾಡುವ ಇಲ್ಲವೆ, ಪ್ರವಾದನೆ ಹೇಳುವ ಪ್ರತಿ ಪುರುಷನೂ ತನ್ನ ತಲೆಯನ್ನು ಅವಮಾನಪಡಿಸುತ್ತಾನೆ.


ಪ್ರೀತಿಯು ಎಂದಿಗೂ ಅಳಿದುಹೋಗುವುದಿಲ್ಲ, ಪ್ರವಾದನೆಗಳಾದರೋ ಇಲ್ಲದಂತಾಗುವುವು, ಅನ್ಯ ಭಾಷೆಗಳು ಗತಿಸಿ ಹೋಗುವುವು, ವಿದ್ಯೆಯೋ ಇಲ್ಲದಂತಾಗುವುವು.


ಅನ್ಯಭಾಷೆಗಳನ್ನಾಡುವವನು ತನಗೆ ಭಕ್ತಿವೃದ್ಧಿಯನ್ನುಂಟುಮಾಡಿಕೊಳ್ಳುವನು. ಆದರೆ ಪ್ರವಾದಿಸುವವನು ಸಭೆಗೆ ಭಕ್ತಿವೃದ್ಧಿಯನ್ನುಂಟುಮಾಡಿಕೊಳ್ಳುತ್ತಾನೆ.


ಪ್ರವಾದಿಗಳು ಇಬ್ಬರಾಗಲಿ, ಮೂವರಾಗಲಿ ಮಾತಾಡಲಿ, ಇತರರರು ವಿವೇಚನೆ ಮಾಡಲಿ.


ನಾನು ರಹಸ್ಯವಾಗಿದ್ದ ಸಂಗತಿಯನ್ನು ನಿಮಗೆ ಹೇಳುತ್ತೇನೆ ಕೇಳಿರಿ: ನಾವೆಲ್ಲರೂ ನಿದ್ರೆ ಹೋಗುವುದಿಲ್ಲ, ನಾವೆಲ್ಲರೂ ರೂಪಾಂತರವಾಗುವೆವು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು