Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 10:33 - ಕನ್ನಡ ಸಮಕಾಲಿಕ ಅನುವಾದ

33 ನಾನಂತೂ ಎಲ್ಲರನ್ನೂ, ಎಲ್ಲದರಲ್ಲೂ ಮೆಚ್ಚಿಸಲು ಶ್ರಮಿಸುವವನಾಗಿದ್ದೇನೆ. ಏಕೆಂದರೆ, ನಾನು ನನ್ನ ಸ್ವಂತ ಹಿತವನ್ನೇ ಹುಡುಕದೆ, ಅನೇಕರು ರಕ್ಷಣೆ ಹೊಂದಬೇಕೆಂದು ಇತರರ ಹಿತಕ್ಕಾಗಿ ಶ್ರಮಿಸುವವನಾಗಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

33 ನಾನಂತೂ ಸ್ವಪ್ರಯೋಜನಕ್ಕಾಗಿ ಚಿಂತಿಸದೇ ಮನುಷ್ಯರೆಲ್ಲರು ರಕ್ಷಣೆ ಹೊಂದಬೇಕೆಂದು ಅವರ ಪ್ರಯೋಜನಕ್ಕಾಗಿ ಚಿಂತಿಸಿ, ಎಲ್ಲರನ್ನು ಎಲ್ಲಾ ವಿಷಯಗಳಲ್ಲಿ ಮೆಚ್ಚಿಸುವವನಾಗಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

33 ನಾನಂತೂ ನನ್ನ ಸ್ವಂತ ಹಿತವನ್ನು ಲೆಕ್ಕಿಸದೆ ಸರ್ವರ ಉದ್ಧಾರಕ್ಕಾಗಿ ಅವರ ಹಿತವನ್ನು ಅಪೇಕ್ಷಿಸಿ, ಎಲ್ಲರನ್ನೂ ಎಲ್ಲದರಲ್ಲೂ ಮೆಚ್ಚಿಸಲು ಪ್ರಯತ್ನಿಸುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

33 ನಾನಂತೂ ಸ್ವಪ್ರಯೋಜನಕ್ಕಾಗಿ ಚಿಂತಿಸದೆ ಮನುಷ್ಯರೆಲ್ಲರೂ ರಕ್ಷಣೆಹೊಂದಬೇಕೆಂದು ಅವರ ಪ್ರಯೋಜನಕ್ಕಾಗಿ ಚಿಂತಿಸಿ ಎಲ್ಲರನ್ನೂ ಎಲ್ಲಾ ವಿಷಯಗಳಲ್ಲಿ ಮೆಚ್ಚಿಸುವವನಾಗಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

33 ನಾನು ಸಹ ಹಾಗೆಯೇ ಮಾಡುತ್ತೇನೆ. ಎಲ್ಲರನ್ನು ಎಲ್ಲಾ ವಿಷಯಗಳಲ್ಲಿ ಮೆಚ್ಚಿಸಲು ನಾನು ಪ್ರಯತ್ನಿಸುತ್ತೇನೆ. ನನಗೆ ಹಿತಕರವಾದದ್ದನ್ನು ಮಾಡಲು ಇಷ್ಟಪಡದೆ ಬಹು ಜನರಿಗೆ ಹಿತಕರವಾದದ್ದನ್ನೇ ಮಾಡಲು ಪ್ರಯತ್ನಿಸುತ್ತೇನೆ. ಅವರು ರಕ್ಷಣೆ ಹೊಂದಬೇಕೆಂಬುದೇ ನನ್ನ ಅಪೇಕ್ಷೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

33 ಮಿಯಾ ತರ್ ಮಾಜೊ ಸ್ವತಾಚೊ ಫಾಯ್ದೊ ಬಗಿನಸ್ತಾನಾ, ಸಗ್ಳ್ಯಾಕ್ನಿ ಬರೆ ದಿಸಿ ಸಾರ್ಕೆ ಚಲ್ತಾ, ಅಶೆ ಸಗ್ಳೆ ಜಾನಾಕ್ನಿ ಬಚಾವ್ ಕರುಕ್ ಪಾಜೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 10:33
12 ತಿಳಿವುಗಳ ಹೋಲಿಕೆ  

ನಾನು ಈಗ ಯಾರ ಅನುಮೋದವನ್ನು ಗಳಿಸಲು ಯತ್ನಿಸುತ್ತಿದ್ದೇನೆ? ಮಾನವರನ್ನೋ? ದೇವರನ್ನೋ? ನಾನು ಮನುಷ್ಯರನ್ನು ಮೆಚ್ಚಿಸಲು ಪ್ರಯತಿಸುತ್ತಿದ್ದೇನೋ? ಇನ್ನೂ ಮನುಷ್ಯರನ್ನೇ ಮೆಚ್ಚಿಸುವವನಾಗಿದ್ದರೆ, ನಾನು ಕ್ರಿಸ್ತ ಯೇಸುವಿನ ದಾಸನಾಗಿರಲಾರೆ.


ಪ್ರತಿಯೊಬ್ಬನೂ ತನ್ನ ಹಿತವನ್ನು ಮಾತ್ರ ನೋಡಿಕೊಳ್ಳದೆ, ಪರಹಿತವನ್ನೂ ನೋಡಲಿ.


ನಾವು ಇಷ್ಟು ಹೊತ್ತು ನಿಮ್ಮ ಮುಂದೆ ಪ್ರತಿವಾದ ಮಾಡುತ್ತಿದ್ದೇವೆಂದು ನೆನಸುತ್ತೀರೋ? ಹಾಗೆ ಅಲ್ಲ; ಪ್ರಿಯರೇ, ನಾವು ಮಾಡುವುದೆಲ್ಲವೂ ನಿಮ್ಮ ಭಕ್ತಿವೃದ್ಧಿಗಾಗಿ ದೇವರ ದೃಷ್ಟಿಯಲ್ಲಿ ಕ್ರಿಸ್ತ ಯೇಸುವಿನಲ್ಲಿ ಇರುವವರಂತೆ ಮಾತನಾಡುವವರಾಗಿದ್ದೇವೆ.


ಹೇಗೂ ನಾನು ನನ್ನ ಸ್ವಂತ ಜನರಾದ ಯೆಹೂದ್ಯರಲ್ಲಿ ಮತ್ಸರವನ್ನು ಉದ್ರೇಕಿಸಿ ಅವರಲ್ಲಿ ಕೆಲವರನ್ನಾದರೂ ರಕ್ಷಿಸಬೇಕು.


ಅದೇ ರೀತಿಯಲ್ಲಿ, ಅನೇಕರಾಗಿರುವ ನಾವು ಕ್ರಿಸ್ತನಲ್ಲಿ ಒಂದೇ ದೇಹವಾಗುತ್ತೇವೆ ಮತ್ತು ಪ್ರತಿಯೊಬ್ಬನೂ ಒಬ್ಬರಿಗೊಬ್ಬರು ಅಂಗಗಳಾಗಿರುತ್ತೇವೆ.


ಪ್ರೀತಿಯು ಇತರರನ್ನು ಅವಮಾನಪಡಿಸುವುದಿಲ್ಲ, ಸ್ವಹಿತವನ್ನೇ ಹುಡುಕುವುದಿಲ್ಲ, ಸುಲಭವಾಗಿ ಸಿಟ್ಟುಗೊಳ್ಳುವುದಿಲ್ಲ, ಅಪಕಾರವನ್ನು ಎಣಿಸುವುದಿಲ್ಲ,


ಇಗೋ, ನಾನು ನಿಮ್ಮ ಬಳಿಗೆ ಬರುವುದಕ್ಕೆ ಸಿದ್ದನಾಗಿರುವುದು ಇದು ಮೂರನೆಯ ಸಾರಿ. ನಾನು ಬಂದಾಗ ನಿಮಗೆ ಭಾರವಾಗಲು ಬಿಡುವುದಿಲ್ಲ. ನಾನು ನಿಮ್ಮ ಸೊತ್ತನ್ನು ಆಶಿಸುವುದಿಲ್ಲ. ನಿಮ್ಮನ್ನೇ ಆಶಿಸುತ್ತೇನೆ. ಮಕ್ಕಳು ತಂದೆತಾಯಿಗಳಿಗೋಸ್ಕರ ನಿಕ್ಷೇಪವನ್ನು ಕೂಡಿಸಿಡುವುದಿಲ್ಲ. ತಂದೆತಾಯಿಗಳು ಮಕ್ಕಳಿಗೋಸ್ಕರ ಕೂಡಿಸಿಡುತ್ತಾರಷ್ಟೇ.


ಎಲ್ಲರೂ ಸ್ವಕಾರ್ಯಗಳನ್ನೇ ಹುಡುಕುತ್ತಾರೆಯೇ ಹೊರತು ಕ್ರಿಸ್ತ ಯೇಸುವಿನ ಕಾರ್ಯಗಳನ್ನು ಹುಡುಕುವುದಿಲ್ಲ.


ಯೆಹೂದ್ಯರಲ್ಲದವರಿಗೆ ರಕ್ಷಣೆಯಾಗುವಂತೆ ಮಾತನಾಡುವ ನಮಗೆ ಅವರು ಅಡ್ಡಿ ಮಾಡುತ್ತಾರೆ. ಹೀಗೆ ತಮ್ಮ ಪಾಪಗಳನ್ನು ಯಾವಾಗಲೂ ಹೆಚ್ಚೆಚ್ಚಾಗಿ ಕೂಡಿಸಿಕೊಳ್ಳುತ್ತಾ ಹೋಗುತ್ತಾರೆ. ಕೊನೆಗೆ ಕೋಪಾಗ್ನಿಯೂ ಅವರ ಮೇಲೆ ಬರಲಿದೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು