Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಅರಸುಗಳು 6:35 - ಕನ್ನಡ ಸಮಕಾಲಿಕ ಅನುವಾದ

35 ಅದರ ಮೇಲೆ ಕೆರೂಬಿಗಳ, ಖರ್ಜೂರ ಗಿಡಗಳ, ಅರಳಿದ ಹೂವುಗಳ ಚಿತ್ರಗಳನ್ನು ಕೆತ್ತಿಸಿದನು. ಈ ಕೆತ್ತನೆಗಳ ಮೇಲೆ ಸಮವಾಗಿ ಬಂಗಾರದ ತಗಡನ್ನು ಹೊದಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

35 ಈ ಬಾಗಿಲುಗಳಲ್ಲಿ ಕೆರೂಬಿ, ಖರ್ಜೂರವೃಕ್ಷ ಮತ್ತು ಅರಳಿದ ಹೂವು ಇವುಗಳ ಚಿತ್ರಗಳನ್ನು ಕೆತ್ತಿಸಿ, ಅವುಗಳಿಗೆ ಬಂಗಾರದ ತಗಡನ್ನು ಹೊದಿಸಿ, ಕೆತ್ತನೆಯಿದ್ದಲ್ಲಿ ಆ ತಗಡನ್ನು ಇಡಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

35 ಈ ಕದಗಳಲ್ಲಿ ಕೆರೂಬಿ, ಖರ್ಜೂರವೃಕ್ಷ, ಹೂವು, ಇವುಗಳ ಚಿತ್ರಗಳನ್ನು ಕೆತ್ತಿಸಿ ಅವುಗಳಿಗೆ ಬಂಗಾರದ ತಗಡನ್ನು ಹೊದಿಸಿ ಕೆತ್ತನೆ ಇದ್ದಲ್ಲಿ ಆ ತಗಡನ್ನು ಬಡಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

35 ಈ ಕದಗಳಲ್ಲಿ ಕೆರೂಬಿ, ಖರ್ಜೂರವೃಕ್ಷ, ಹೂವು ಇವುಗಳ ಚಿತ್ರಗಳನ್ನು ಕೆತ್ತಿಸಿ ಅವುಗಳಿಗೆ ಬಂಗಾರದ ತಗಡನ್ನು ಹೊದಿಸಿ ಕೆತ್ತನೆಯಿದ್ದಲ್ಲಿ ಆ ತಗಡನ್ನು ಬಡಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

35 ಅವರು ಕೆರೂಬಿಗಳ, ಖರ್ಜೂರವೃಕ್ಷಗಳ ಮತ್ತು ಹೂಗಳ ಚಿತ್ರಗಳನ್ನು ಬಾಗಿಲುಗಳ ಮೇಲೆ ಕೆತ್ತಿದ್ದರು. ಅವರು ಅವುಗಳಿಗೆ ಚಿನ್ನವನ್ನು ಹೊದಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಅರಸುಗಳು 6:35
11 ತಿಳಿವುಗಳ ಹೋಲಿಕೆ  

ಆಲಯದ ಒಳಗಿರುವ ದೇವದಾರು ಮೊಗ್ಗುಗಳೂ, ಅರಳಿದ ಹೂವುಗಳೂ ಕೆತ್ತಿದ ಕೆಲಸಗಳಾಗಿದ್ದವು. ಒಂದು ಕಲ್ಲಾದರೂ ಕಾಣಿಸದ ಹಾಗೆ ಎಲ್ಲಾ ದೇವದಾರದ್ದಾಗಿತ್ತು.


ಅದಕ್ಕೆ ತುರಾಯಿ ಮರದ ಎರಡು ಬಾಗಿಲುಗಳನ್ನು ಇಡಿಸಿದನು. ಪ್ರತಿಯೊಂದು ಬಾಗಿಲು ಎರಡು ಭಾಗವುಳ್ಳದ್ದಾಗಿ ಮಡಚಬಹುದಾಗಿತ್ತು.


ಅವನು ಒಳಗಿನ ಅಂಗಳವನ್ನು ಕೆತ್ತಿದ ಕಲ್ಲುಗಳಿಂದ ಮೂರು ಸಾಲುಗಳಾಗಿಯೂ ದೇವದಾರಿನ ಸ್ತಂಭಗಳಿಂದ ಒಂದು ಸಾಲಾಗಿಯೂ ಕಟ್ಟಿಸಿದನು.


ಅದರ ದಪ್ಪವು ಅಂಗೈ ಅಗಲದಷ್ಟಾಗಿಯೂ, ಅದರ ಅಂಚು ಪಾತ್ರೆಯ ಅಂಚಿನ ಹಾಗೆಯೂ, ತಾವರೆ ಪುಷ್ಪದ ಹಾಗೆಯೂ ಇತ್ತು. ಅದು ನಾಲ್ವತ್ತು ನಾಲ್ಕು ಸಾವಿರ ಲೀಟರ್ ನೀರನ್ನು ಹಿಡಿಯುತ್ತಿತ್ತು.


ಅದರದರ ಪ್ರಮಾಣದ ಪ್ರಕಾರ ಹಲಗೆಗಳ ಕೈಹಿಡಿಗಳ ಮೇಲೆಯೂ ಅಂಚುಗಳ ಮೇಲೆಯೂ ಕೆರೂಬಿ, ಸಿಂಹ ಖರ್ಜೂರ ವೃಕ್ಷಗಳನ್ನು ಚಿತ್ರಿಸಿದನು. ಸುತ್ತಲೂ ಅದರದರ ಪ್ರಮಾಣದ ಪ್ರಕಾರ ಪುಷ್ಪ ತೋರಣಗಳನ್ನು ಚಿತ್ರಿಸಿದನು.


ಹೂವುಗಳನ್ನೂ, ದೀಪಗಳ ಚಿಮಟಿಗಳನ್ನೂ ಶುದ್ಧ ಬಂಗಾರದಿಂದ ಮಾಡಿಸಿದನು.


ಶುದ್ಧ ಬಂಗಾರದಿಂದ ಕತ್ತರಿಗಳು, ಬೋಗುಣಿಗಳು, ಅಗ್ನಿಪಾತ್ರೆಗಳು, ಅಗ್ಗಿಷ್ಟಿಗೆ ಇವುಗಳನ್ನು ಮಾಡಿಸಿದನು. ಇದಲ್ಲದೆ ಆಲಯದ ಪ್ರವೇಶ ದ್ವಾರವೂ, ಮಹಾಪರಿಶುದ್ಧ ಸ್ಥಳವಾದ ಗರ್ಭಗುಡಿಯ ಬಾಗಿಲುಗಳೂ, ಮಂದಿರದ ಮನೆ ಬಾಗಿಲುಗಳೂ ಬಂಗಾರದವುಗಳಾಗಿದ್ದವು.


ಈಗ ಚಿತ್ರ ಕೆಲಸಗಳನ್ನು ತಕ್ಷಣ ಕೊಡಲಿಯಿಂದಲೂ ಸುತ್ತಿಗೆಯಿಂದಲೂ ಅವರು ಹೊಡೆದು ಹಾಕುತ್ತಿದ್ದಾರೆ.


ಕೋಣೆಯ ಉಪವಿಭಾಗಗಳು ಮತ್ತು ಬಾಗಿಲ ಚೌಕಟ್ಟಿನ ಒಳಗಡೆ ಇರುವ ಅವುಗಳ ಕಂಬಗಳಲ್ಲಿಯೂ ಇಕ್ಕಟ್ಟಾದ ಕಿಟಕಿಗಳಿದ್ದವು. ಕೈಸಾಲೆಗಳಿಗೂ ಸಹ ಒಳಗಡೆ ಸುತ್ತಲೂ ಕಿಟಕಿಗಳಿದ್ದವು. ಒಂದೊಂದು ಕಂಬದ ಮೇಲೆ ಖರ್ಜೂರದ ಮರಗಳಿಂದ ಅಲಂಕರಿಸಲಾಗಿದ್ದವು.


ಅದರ ಕಿಟಕಿಗಳೂ ಅದರ ಕೈಸಾಲೆಗಳೂ ಅದರ ಖರ್ಜೂರದ ಗಿಡಗಳೂ ಪೂರ್ವ ಕಡೆಯ ಬಾಗಿಲಿನ ಕಡೆಗೆ ಅಭಿಮುಖವಾಗಿದ್ದವು. ಅವರು ಏಳು ಮೆಟ್ಟಲುಗಳನ್ನು ಏರಿದಾಗ, ಅದರ ಕೈಸಾಲೆಗಳು ಅದರ ಮುಂದಿದ್ದವು.


ಅದು ಕೆರೂಬಿಗಳು ಮತ್ತು ಖರ್ಜೂರದ ಮರಗಳ ಚಿತ್ರಗಳಿಂದ ಕೂಡಿತ್ತು. ಕೆರೂಬಿ ಮತ್ತು ಕೆರೂಬಿಗಳ ಮಧ್ಯೆ ಖರ್ಜೂರದ ಮರವಿತ್ತು ಮತ್ತು ಪ್ರತಿಯೊಂದು ಕೆರೂಬಿಗೂ ಎರಡೆರಡು ಮುಖಗಳು ಇದ್ದವು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು