Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಅರಸುಗಳು 3:2 - ಕನ್ನಡ ಸಮಕಾಲಿಕ ಅನುವಾದ

2 ಆ ಕಾಲದವರೆಗೂ ಯೆಹೋವ ದೇವರ ಹೆಸರಿಗಾಗಿ ಆಲಯ ಇರಲಿಲ್ಲ. ಆದುದರಿಂದ, ಜನರು ಎತ್ತರದ ಸ್ಥಳಗಳಲ್ಲಿ ಬಲಿ ಅರ್ಪಿಸುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ಆ ವರೆಗೂ ಯೆಹೋವನ ನಾಮಕ್ಕೋಸ್ಕರ ಆಲಯವಿರಲಿಲ್ಲವಾದುದರಿಂದ ಜನರು ಪೂಜಾಸ್ಥಳಗಳಲ್ಲಿ ಯಜ್ಞವನ್ನು ಆರ್ಪಿಸುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 ಅಲ್ಲಿಯವರೆಗೂ ಸರ್ವೇಶ್ವರಸ್ವಾಮಿಯ ನಾಮಕ್ಕೋಸ್ಕರ ಆಲಯವೇ ಇರಲಿಲ್ಲ. ಆದುದರಿಂದ ಜನರು ಪೂಜಾಸ್ಥಳಗಳಲ್ಲಿ ಬಲಿಯರ್ಪಣೆ ಮಾಡುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ಆವರೆಗೂ ಯೆಹೋವನಾಮಕ್ಕೋಸ್ಕರ ಆಲಯವಿರಲಿಲ್ಲವಾದದರಿಂದ ಜನರು ಪೂಜಾಸ್ಥಳಗಳಲ್ಲಿ ಯಜ್ಞಮಾಡುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ದೇವಾಲಯದ ನಿರ್ಮಾಣವು ಇನ್ನೂ ಪೂರ್ಣಗೊಂಡಿರಲಿಲ್ಲ. ಆದ್ದರಿಂದ ಜನರು ಅದುವರೆವಿಗೂ ಎತ್ತರವಾದ ಸ್ಥಳಗಳಲ್ಲಿ ಯಜ್ಞವೇದಿಕೆಯ ಮೇಲೆ ಪಶುಗಳ ಯಜ್ಞಗಳನ್ನು ಸಮರ್ಪಿಸುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಅರಸುಗಳು 3:2
17 ತಿಳಿವುಗಳ ಹೋಲಿಕೆ  

ಅವನು ತನ್ನ ತಂದೆ ಆಸನ ಮಾರ್ಗಗಳಲ್ಲಿ ನಡೆದು, ಅದನ್ನು ಬಿಟ್ಟು ತೊಲಗದೇ, ಯೆಹೋವ ದೇವರ ದೃಷ್ಟಿಯಲ್ಲಿ ಸರಿಯಾದದ್ದನ್ನು ಮಾಡಿದನು. ಆದರೂ ಪೂಜಾಸ್ಥಳಗಳನ್ನು ತೆಗೆದುಹಾಕಲಿಲ್ಲ ಆದ್ದರಿಂದ ಜನರು ಪೂಜಾಸ್ಥಳಗಳ ಮೇಲೆ ಬಲಿಗಳನ್ನೂ ಧೂಪಗಳನ್ನೂ ಅರ್ಪಿಸುವುದನ್ನು ಮುಂದುವರೆಸಿದ್ದರು.


ಜನರು ತಮ್ಮ ದೇವರಾದ ಯೆಹೋವ ದೇವರಿಗೆ ಮಾತ್ರ ಬಲಿಯನ್ನರ್ಪಿಸುವಾಗ, ಇನ್ನೂ ಉನ್ನತ ಸ್ಥಳಗಳಲ್ಲಿಯೇ ಬಲಿಯನ್ನು ಅರ್ಪಿಸುತ್ತಾ ಇದ್ದರು.


ಇದಲ್ಲದೆ ನಾನು ನಿಮ್ಮ ಉನ್ನತ ಸ್ಥಳಗಳನ್ನು ಹಾಳು ಮಾಡಿ, ನಿಮ್ಮ ಧೂಪವೇದಿಗಳನ್ನು ಕಡಿದುಹಾಕಿ, ನಿಮ್ಮ ಹೆಣಗಳನ್ನು ನಿಮ್ಮ ವಿಗ್ರಹಗಳ ಮೇಲೆ ಹಾಕುವೆನು. ನಿಮ್ಮ ಬಗ್ಗೆ ನಾನು ಅಸಹ್ಯಪಡುವೆನು.


“ನನ್ನ ತಂದೆ ದಾವೀದನು ತನ್ನ ದೇವರಾದ ಯೆಹೋವ ದೇವರ ನಾಮಕ್ಕೆ ಆಲಯವನ್ನು ಕಟ್ಟಿಸಲಾರದೆ ಇದ್ದನೆಂದು ನೀನು ಬಲ್ಲೆ. ಏಕೆಂದರೆ ಯೆಹೋವ ದೇವರು ಅವನ ಶತ್ರುಗಳನ್ನು ಅವನ ಪಾದದ ಕೆಳಗೆ ಹಾಕುವವರೆಗೂ, ಅವನ ಸುತ್ತಲಿರುವ ಸಮಸ್ತ ದಿಕ್ಕುಗಳಲ್ಲಿ ಯುದ್ಧ ಉಂಟಾಯಿತು.


ನೀವು ಕಂಡ ಎಲ್ಲಾ ಸ್ಥಳಗಳಲ್ಲಿ ನಿಮ್ಮ ದಹನಬಲಿಗಳನ್ನು ಅರ್ಪಿಸದಂತೆ ನೋಡಿಕೊಳ್ಳಿರಿ.


ಅವರು ಇವರಿಗೆ ಉತ್ತರವಾಗಿ, “ಅವನು ಇದ್ದಾನೆ, ನಿಮ್ಮ ಮುಂದೆ ಇದ್ದಾನೆ, ಈಗ ಬೇಗ ಹೋಗಿರಿ, ಏಕೆಂದರೆ ಈ ಹೊತ್ತು ಗುಡ್ಡದ ಮೇಲೆ ಜನರು ಬಲಿಯನ್ನು ಅರ್ಪಿಸುವುದರಿಂದ ಅವನು ಈ ಹೊತ್ತು ಪಟ್ಟಣಕ್ಕೆ ಬಂದಿದ್ದಾನೆ.


ತಮ್ಮ ಉನ್ನತ ಸ್ಥಳಗಳಿಂದ ದೇವರಿಗೆ ಬೇಸರಗೊಳಿಸಿದರು. ತಮ್ಮ ಮೂರ್ತಿಗಳಿಂದ ದೇವರಿಗೆ ದುಃಖಪಡಿಸಿದರು.


ಅವರು ಅಶೇರ ಸ್ತಂಭಗಳನ್ನೂ, ವಿಗ್ರಹಗಳನ್ನೂ, ಉನ್ನತ ಸ್ಥಳಗಳನ್ನೂ ಎತ್ತರವಾದ ಪ್ರತಿ ಗುಡ್ಡದ ಮೇಲೆಯೂ, ಹಸುರಾದ ಪ್ರತಿ ಗಿಡದ ಕೆಳಗೂ ತಮಗಾಗಿ ಮಾಡಿಕೊಂಡರು.


ಅವನು ಪೂಜಾಸ್ಥಳಗಳನ್ನು ತೆಗೆದು ಹಾಕದಿದ್ದರೂ ಆಸನ ಹೃದಯವು ತನ್ನ ಜೀವಮಾನದಲ್ಲೆಲ್ಲಾ ಯೆಹೋವ ದೇವರ ದೃಷ್ಟಿಯಲ್ಲಿ ದೋಷವಿಲ್ಲದ್ದಾಗಿತ್ತು.


ಯೆಹೋಷಾಫಾಟನು ಇಸ್ರಾಯೇಲಿನ ಅರಸನ ಸಂಗಡ ಸಮಾಧಾನ ಮಾಡಿಕೊಂಡನು.


ಯೋವಾಷನು ಯಾಜಕರಿಗೆ, “ಯೆಹೋವ ದೇವರ ಆಲಯಕ್ಕೆ ಪವಿತ್ರ ಅರ್ಪಣೆಗಳಾಗಿ ತರಲಾದ ಜನಗಣತಿಯಲ್ಲಿ ಸಂಗ್ರಹಿಸಿದ ಹಣ, ವೈಯಕ್ತಿಕ ಪ್ರತಿಜ್ಞೆಗಳಿಂದ ಪಡೆದ ಹಣ ಮತ್ತು ದೇವಾಲಯಕ್ಕೆ ಸ್ವಯಂಪ್ರೇರಣೆಯಿಂದ ತಂದ ಹಣವನ್ನು ಸಂಗ್ರಹಿಸಿರಿ ಎಂದನು.


ಇಸ್ರಾಯೇಲಿನೊಳಗಿಂದ ಪೂಜಾಸ್ಥಳಗಳನ್ನು ತೆಗೆದು ಹಾಕದಿದ್ದರೂ ಆಸನ ಹೃದಯವು ತನ್ನ ಜೀವಮಾನದಲ್ಲೆಲ್ಲಾ ಯೆಹೋವ ದೇವರಿಗೆ ಸಮರ್ಪಿತವಾಗಿತ್ತು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು