Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಅರಸುಗಳು 22:46 - ಕನ್ನಡ ಸಮಕಾಲಿಕ ಅನುವಾದ

46 ಅವನ ತಂದೆ ಆಸನ ಕಾಲದಲ್ಲಿ ಉಳಿದಿದ್ದ ಪುರುಷಗಾಮಿಗಳನ್ನು ಅವನು ದೇಶದಿಂದ ತೆಗೆದುಹಾಕಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

46 ಅವನು ತನ್ನ ತಂದೆಯಾದ ಅಸನ ಕಾಲದಲ್ಲಿ ತಪ್ಪಿಸಕೊಂಡ ದೇವದಾಸದಾಸಿಯರನ್ನು ದೇಶದಿಂದ ತೆಗೆದುಹಾಕಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

46 ಇವನು ತನ್ನ ತಂದೆ ಆಸನ ಕಾಲದಲ್ಲಿ ತಪ್ಪಿಸಿಕೊಂಡ ಹೆಣ್ಣು-ಗಂಡು ವೇಶ್ಯೆಯರನ್ನು ನಾಡಿನಿಂದ ತೆಗೆದುಹಾಕಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

46 ಇವನು ತನ್ನ ತಂದೆಯಾದ ಆಸನ ಕಾಲದಲ್ಲಿ ತಪ್ಪಿಸಿಕೊಂಡ ದೇವದಾಸ ದೇವದಾಸಿಯರನ್ನು ದೇಶದಿಂದ ತೆಗೆದುಹಾಕಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

46 ಲೈಂಗಿಕ ಸಂಬಂಧಕ್ಕಾಗಿ ತಮ್ಮ ದೇಹಗಳನ್ನು ಮಾರಾಟ ಮಾಡುತ್ತಿದ್ದ ಗಂಡಸರನ್ನು ಮತ್ತು ಹೆಂಗಸರನ್ನು, ಯೆಹೋಷಾಫಾಟನು ದೇಶದಿಂದ ಹೊರಗಟ್ಟಿದನು. ಅವನ ತಂದೆಯಾದ ಆಸನು ರಾಜನಾಗಿದ್ದ ಕಾಲದಲ್ಲಿ ಆ ಜನರು ಪೂಜಾಸ್ಥಳಗಳಲ್ಲಿ ಸೇವೆಯನ್ನು ಮಾಡುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಅರಸುಗಳು 22:46
10 ತಿಳಿವುಗಳ ಹೋಲಿಕೆ  

ಅವನು ಪೂಜಾ ಸ್ಥಳದ ಪುರುಷಗಾಮಿಗಳನ್ನು ದೇಶದಲ್ಲಿಂದ ಹೊರಡಿಸಿ, ತನ್ನ ಪಿತೃಗಳು ಮಾಡಿದ ಸಮಸ್ತ ವಿಗ್ರಹಗಳನ್ನು ತೆಗೆದುಹಾಕಿದನು.


ಇದಲ್ಲದೆ ಪೂಜಾಸ್ಥಳಗಳಲ್ಲಿ ಪುರುಷಗಾಮಿಗಳಿದ್ದರು. ಅವರು ಇಸ್ರಾಯೇಲರ ಮುಂದೆ ಯೆಹೋವ ದೇವರು ಹೊರಡಿಸಿದ ಜನಾಂಗಗಳ ಸಕಲ ಅಸಹ್ಯ ಕಾರ್ಯಗಳನ್ನು ಮಾಡುತ್ತಾ ಇದ್ದರು.


ಇಸ್ರಾಯೇಲರಲ್ಲಿ ಯಾವ ಸ್ತ್ರೀಯೂ ಗುಡಿ ವೇಶ್ಯೆಯಾಗಬಾರದು. ಇಸ್ರಾಯೇಲರಲ್ಲಿ ಯಾವ ಪುರುಷನೂ ಅಂಥ ವೇಶ್ಯೆತನಕ್ಕೆ ಇಳಿಯಬಾರದು.


ಸೊದೋಮ ಗೊಮೋರದವರೂ ಹಾಗೆಯೇ ಅವುಗಳ ಸುತ್ತಮುತ್ತಣ ಪಟ್ಟಣಗಳವರೂ ಅದೇ ರೀತಿಯಲ್ಲಿ ತಮ್ಮನ್ನು ಅನೈತಿಕತೆಗೆ ಒಪ್ಪಿಸಿಕೊಟ್ಟರು. ಅವರು ಸ್ವಭಾವಕ್ಕೆ ವಿರುದ್ಧ ಕಾರ್ಯಗಳನ್ನು ಅನುಸರಿಸಿದ್ದರಿಂದ ಅವರು ನಿತ್ಯವಾದ ಅಗ್ನಿಯಲ್ಲಿ ದಂಡನೆಯನ್ನು ಅನುಭವಿಸುತ್ತಾ ಉದಾಹರಣೆಗಾಗಿ ಇಡಲಾಗಿದ್ದಾರೆ.


ಅವರು ಲೋಟನನ್ನು ಕರೆದು, “ಈ ರಾತ್ರಿಯಲ್ಲಿ ನಿನ್ನ ಬಳಿಗೆ ಬಂದ ಮನುಷ್ಯರು ಎಲ್ಲಿ? ಅವರನ್ನು ನಮ್ಮ ಬಳಿಗೆ ಕರೆದುಕೊಂಡು ಬಾ, ಅವರೊಡನೆ ಸಂಭೋಗಿಸಬೇಕು,” ಎಂದು ಹೇಳಿದರು.


ಜಾರರಿಗೆ, ಸಲಿಂಗಕಾಮಿಗಳಿಗೆ, ನರಚೋರರಿಗೆ, ಸುಳ್ಳುಗಾರರಿಗೆ, ಸುಳ್ಳಾಣೆಯಿಡುವವರಿಗೆ, ಸ್ವಸ್ಥಬೋಧನೆಯನ್ನು ವಿರೋಧಿಸುವ ಬೇರೆ ಏನಾದರೂ ಇದ್ದರೆ ಮೋಶೆಯ ನಿಯಮವು ಇಂಥವವರಿಗಾಗಿ ಕೊಡಲಾಗಿದೆ ಎಂದು ನಮಗೆ ತಿಳಿದಿದೆ.


ಅನ್ಯಾಯಗಾರರು ದೇವರ ರಾಜ್ಯಕ್ಕೆ ಬಾಧ್ಯಸ್ಥರಾಗುವುದಿಲ್ಲವೆಂಬುದು ನಿಮಗೆ ತಿಳಿಯದೋ? ಮೋಸಹೋಗಬೇಡಿರಿ: ಜಾರರು, ವಿಗ್ರಹಾರಾಧಕರು, ವ್ಯಭಿಚಾರಿಗಳು, ಸಲಿಂಗಕಾಮಿಗಳು,


ಅವರು ಸಂತೋಷಿಸುತ್ತಿರುವ ವೇಳೆಯಲ್ಲಿ ಆ ಪಟ್ಟಣದ ದುಷ್ಟ ಮನುಷ್ಯರಲ್ಲಿ ಕೆಲವರು ಆ ಮನೆಯನ್ನು ಸುತ್ತಿಕೊಂಡು, ಕದವನ್ನು ಬಡಿದು, ಆ ಮನೆಯ ಯಜಮಾನನಾದ ಮುದುಕನಿಗೆ, “ನಿನ್ನ ಮನೆಗೆ ಬಂದ ಆ ಮನುಷ್ಯನೊಡನೆ ನಮಗೆ ಸಂಗಮವಾಗಬೇಕು, ಹೊರಗೆ ಬಾ,” ಎಂದು ಹೇಳಿದರು.


ರೆಹಬ್ಬಾಮನ ಉಳಿದ ಕಾರ್ಯಗಳೂ, ಅವನು ಮಾಡಿದ ಸಮಸ್ತವೂ ಯೆಹೂದ ಅರಸುಗಳ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು