Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಅರಸುಗಳು 21:9 - ಕನ್ನಡ ಸಮಕಾಲಿಕ ಅನುವಾದ

9 ಅವಳು ಪತ್ರಗಳಲ್ಲಿ, “ನೀವು ಉಪವಾಸವನ್ನು ಪ್ರಕಟಮಾಡಿ ನಾಬೋತನನ್ನು ಜನರೊಳಗೆ ಎತ್ತರದ ಸ್ಥಳದಲ್ಲಿ ಕೂರಿಸಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ಅದರಲ್ಲಿ, “ಎಲ್ಲರೂ ಉಪವಾಸಮಾಡಬೇಕೆಂದು ಪ್ರಕಟಿಸಿ, ನಾಬೋತನನ್ನು ನೆರೆದ ಸಭೆಯ ಮುಂದೆ ನಿಲ್ಲಿಸಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

9 ಅದರಲ್ಲಿ, “ಎಲ್ಲರೂ ಉಪವಾಸ ಮಾಡಬೇಕೆಂದು ಪ್ರಕಟಿಸಿರಿ: ನಾಬೋತನನ್ನು ನೆರೆದ ಸಭೆಯ ಮುಂದೆ ನಿಲ್ಲಿಸಿರಿ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ಅದರಲ್ಲಿ - ಎಲ್ಲರೂ ಉಪವಾಸ ಮಾಡಬೇಕೆಂದು ಪ್ರಕಟಿಸಿ ನಾಬೋತನನ್ನು ನೆರೆದ ಸಭೆಯ ಮುಂದೆ ನಿಲ್ಲಿಸಿ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ಆ ಪತ್ರದಲ್ಲಿ ಹೀಗೆ ಬರೆದಿತ್ತು: “ಉಪವಾಸದ ಒಂದು ದಿನವನ್ನು ಗೊತ್ತುಮಾಡಿ, ಆ ದಿನವನ್ನು ಪ್ರಕಟಿಸಿ, ನಂತರ ಪಟ್ಟಣದ ಜನರನ್ನೆಲ್ಲ ಸಭೆ ಸೇರಿಸಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಅರಸುಗಳು 21:9
8 ತಿಳಿವುಗಳ ಹೋಲಿಕೆ  

ಆಮೇಲೆ ಅವರು ಯೇಸುವನ್ನು ಕಾಯಫನ ಬಳಿಯಿಂದ ರೋಮನ್ ರಾಜ್ಯಪಾಲನ ನಿವಾಸಕ್ಕೆ ಸಾಗಿಸಿಕೊಂಡು ಹೋದರು. ಆಗ ಮುಂಜಾನೆಯಾಗಿತ್ತು. ತಾವು ಅಶುದ್ಧವಾಗದಂತೆ ಪಸ್ಕದ ಊಟಮಾಡುವುದಕ್ಕೆ ಅಡ್ಡಿಯಾದೀತೆಂದು ಅವರು ರಾಜ್ಯಪಾಲನ ನಿವಾಸದ ಒಳಗೆ ಹೋಗಲಿಲ್ಲ.


ಇವರು ವಿಧವೆಯರ ಮನೆಗಳನ್ನು ದೋಚಿ ನಟನೆಗಾಗಿ ಉದ್ದವಾದ ಪ್ರಾರ್ಥನೆಗಳನ್ನು ಮಾಡುತ್ತಾರೆ. ಇಂಥವರು ಹೆಚ್ಚಾದ ದಂಡನೆಯನ್ನು ಹೊಂದುವರು,” ಎಂದರು.


“ಆದರೆ ಕಪಟಿಗಳಾದ ನಿಯಮ ಬೋಧಕರೇ, ಫರಿಸಾಯರೇ, ನಿಮಗೆ ಕಷ್ಟ! ಏಕೆಂದರೆ ನೀವು ಮನುಷ್ಯರ ಮುಂದೆ ಪರಲೋಕ ರಾಜ್ಯವನ್ನು ಮುಚ್ಚುತ್ತೀರಿ. ನೀವೂ ಪ್ರವೇಶಿಸುವುದಿಲ್ಲ, ಪ್ರವೇಶಿಸುವವರನ್ನೂ ನೀವು ಒಳಗೆ ಬಿಡುವುದಿಲ್ಲ.


“ನೀವು ಹೋಗಿ ಆ ಮಗುವಿನ ವಿಷಯ ಜಾಗರೂಕತೆಯಿಂದ ವಿಚಾರಿಸಿ. ಆ ಮಗು ಸಿಕ್ಕಿದ ಮೇಲೆ ನನಗೆ ತಿಳಿಸಿರಿ, ಆಗ ನಾನೂ ಬಂದು ಅದನ್ನು ಆರಾಧಿಸುವೆನು,” ಎಂದು ಹೇಳಿ ಅವರನ್ನು ಬೇತ್ಲೆಹೇಮಿಗೆ ಕಳುಹಿಸಿದನು.


ನಿಮ್ಮ ಉಪವಾಸದ ಪರಿಣಾಮಗಳು ಇಷ್ಟೆ: ವ್ಯಾಜ್ಯ, ಕಲಹ, ಹೊಡೆದಾಟ. ಇಲ್ಲಿಯವರೆಗೆ ನೀವು ಮಾಡಿದಂತೆ ಉಪವಾಸ ಮಾಡಿದರೆ, ನಿಮ್ಮ ಪ್ರಾರ್ಥನೆ ಪರಲೋಕವನ್ನು ಮುಟ್ಟುವುದಿಲ್ಲ.


ಹೀಗೆ ಅವಳು ಅಹಾಬನ ಹೆಸರಿನಲ್ಲಿ ಪತ್ರಗಳನ್ನು ಬರೆದು, ಅವುಗಳಿಗೆ ಅವನ ಮುದ್ರೆಹಾಕಿ, ಆ ಪತ್ರಗಳನ್ನು ನಾಬೋತನ ಸಂಗಡ ಅವನ ಪಟ್ಟಣದಲ್ಲಿ ವಾಸವಾಗಿರುವ ಹಿರಿಯರಿಗೂ, ಗೌರವಸ್ಥರಿಗೂ ಕಳುಹಿಸಿದಳು.


‘ನೀನು ದೇವರನ್ನೂ, ಅರಸನನ್ನೂ ದೂಷಿಸಿದಿ,’ ಎಂದು ಅವನಿಗೆ ವಿರೋಧವಾಗಿ ಸಾಕ್ಷಿ ಹೇಳಲು ಅವನ ಮುಂದೆ ದುಷ್ಟರಾದ ಇಬ್ಬರು ಮನುಷ್ಯರನ್ನು ಕೂರಿಸಿರಿ. ತರುವಾಯ ಅವನನ್ನು ಹೊರಗೆ ತೆಗೆದುಕೊಂಡುಹೋಗಿ ಅವನು ಸಾಯುವ ಹಾಗೆ ಕಲ್ಲೆಸೆಯಿರಿ,” ಎಂದು ಬರೆದಿತ್ತು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು