Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಅರಸುಗಳು 20:21 - ಕನ್ನಡ ಸಮಕಾಲಿಕ ಅನುವಾದ

21 ಇದಲ್ಲದೆ ಇಸ್ರಾಯೇಲಿನ ಅರಸನು ಹೊರಟು ಕುದುರೆಗಳನ್ನೂ, ರಥಗಳನ್ನೂ ಹೊಡೆದು, ಅರಾಮ್ಯರನ್ನು ಮಹಾ ಸಂಹಾರದಿಂದ ನಾಶಮಾಡಿಬಿಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

21 ಇಸ್ರಾಯೇಲರ ಅರಸನು ಹೊರಟು ಬಂದು ಅರಾಮ್ಯರ ರಥಾಶ್ವಬಲಗಳನ್ನು ಸೋಲಿಸಿ ಮಹಾಸಮೂಹವನ್ನು ಸಂಹರಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

21 ಇಸ್ರಯೇಲರ ಅರಸನು ಹೊರಟುಬಂದು ಸಿರಿಯಾದವರ ರಥಾಶ್ವಬಲಗಳನ್ನು ಸೋಲಿಸಿ, ಮಹಾಸಮೂಹವನ್ನು ಸಂಹರಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

21 ಇಸ್ರಾಯೇಲ್ಯರ ಅರಸನು ಹೊರಟುಬಂದು ಅರಾಮ್ಯರ ರಥಾಶ್ವಬಲಗಳನ್ನು ಸೋಲಿಸಿ ಮಹಾಸಮೂಹವನ್ನು ಸಂಹರಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

21 ರಾಜನಾದ ಅಹಾಬನು ತನ್ನ ಸೈನ್ಯವನ್ನು ಮುನ್ನಡೆಸಿ, ಅರಾಮ್ಯರ ಸೇನೆಯಿಂದ ರಥಗಳನ್ನೂ ಅಶ್ವಸೇನೆಯನ್ನೂ ಸೋಲಿಸಿದನು. ಅರಾಮ್ಯರ ಸೇನೆಯ ಮಹಾ ಅಪಜಯಕ್ಕೆ ರಾಜನಾದ ಅಹಾಬನು ಕಾರಣನಾದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಅರಸುಗಳು 20:21
11 ತಿಳಿವುಗಳ ಹೋಲಿಕೆ  

ಅವರು ಇಸ್ರಾಯೇಲಿನ ದಂಡಿಗೆ ಬಂದಾಗ, ಇಸ್ರಾಯೇಲರು ಎದ್ದು ಮೋವಾಬ್ಯರು ತಮ್ಮ ಮುಂದೆ ಓಡಿಹೋಗುವ ಹಾಗೆ ಅವರನ್ನು ಸೋಲಿಸಿ, ಮೋವಾಬ್ಯರನ್ನು ಅವರ ದೇಶದವರೆಗೂ ಹೊಡೆಯುತ್ತಾ ಬಂದರು.


ಇದಲ್ಲದೆ ಇದು ಯೆಹೋವ ದೇವರ ದೃಷ್ಟಿಗೆ ಅಲ್ಪವಾಗಿರುವುದು. ಅವರು ಮೋವಾಬ್ಯರನ್ನು ನಿಮ್ಮ ಕೈಯಲ್ಲಿ ಒಪ್ಪಿಸಿಕೊಡುವರು.


ಇಸ್ರಾಯೇಲರೂ, ಯೆಹೂದದ ಜನರೂ ಎದ್ದು ಆರ್ಭಟಿಸಿ, ತಗ್ಗಿನ ಮೇರೆಯವರೆಗೂ, ಎಕ್ರೋನಿನ ಬಾಗಿಲಿನವರೆಗೂ ಫಿಲಿಷ್ಟಿಯರನ್ನು ಹಿಂದಟ್ಟಿದರು. ಆದ್ದರಿಂದ ಹತರಾದ ಫಿಲಿಷ್ಟಿಯರು ಶಾರಯಿಮಿನ ಮಾರ್ಗದಲ್ಲಿ ಗತ್ ಎಕ್ರೋನಿನವರೆಗೂ ಬಿದ್ದಿದ್ದರು.


ಅವರಿಗೆ, “ನೀವು ನನ್ನ ಹಿಂದೆ ಬನ್ನಿರಿ. ಏಕೆಂದರೆ ಯೆಹೋವ ದೇವರು ನಿಮ್ಮ ಶತ್ರುಗಳಾದ ಮೋವಾಬ್ಯರನ್ನು ನಿಮ್ಮ ಕೈಯಲ್ಲಿ ಒಪ್ಪಿಸಿಕೊಟ್ಟರು,” ಎಂದನು. ಅವರು ಅವನ ಹಿಂದೆ ಬಂದು, ಮೋವಾಬ್ಯರಿಗೆ ಎದುರಾದ ಯೊರ್ದನ್ ನದಿ ರೇವುಗಳನ್ನು ಹಿಡಿದು, ಒಬ್ಬರನ್ನಾದರೂ ದಾಟಗೊಡದೆ,


ಪ್ರತಿ ಸೈನಿಕನು ತನಗೆ ಎದುರು ಬಿದ್ದವರನ್ನು ಕೊಂದುಹಾಕಿದರು. ಆಗ ಅರಾಮ್ಯರು ಓಡಿಹೋದರು. ಇಸ್ರಾಯೇಲರು ಅವರನ್ನು ಹಿಂದಟ್ಟಿದರು. ಅರಾಮಿನ ಅರಸನಾದ ಬೆನ್ಹದದನು ಕುದುರೆ ಹತ್ತಿಕೊಂಡು ಕುದುರೆ ರಾಹುತರ ಸಂಗಡ ತಪ್ಪಿಸಿಕೊಂಡನು.


ಪ್ರವಾದಿಯು ಇಸ್ರಾಯೇಲಿನ ಅರಸನ ಬಳಿಗೆ ಬಂದು ಅವನಿಗೆ, “ನೀನು ಹೋಗಿ ಬಲಗೊಂಡು, ನೀನು ಏನು ಮಾಡಬೇಕೆಂಬುವುದನ್ನು ಆಲೋಚಿಸು. ಏಕೆಂದರೆ ವಸಂತ ಋತುವಿನಲ್ಲಿ ಅರಾಮಿನ ಅರಸನು ನಿನಗೆ ವಿರೋಧವಾಗಿ ಬರುವನು,” ಎಂದನು.


ಯೆಹೋಶುವನೂ ಇಸ್ರಾಯೇಲರೂ ಅವರನ್ನು ಸಂಪೂರ್ಣವಾಗಿ ಸಂಹರಿಸಿದರು. ಆದರೂ ಅವರಲ್ಲಿ ಉಳಿದವರು ಕೋಟೆಗಳುಳ್ಳ ಪಟ್ಟಣಗಳಲ್ಲಿ ಸೇರಿಕೊಂಡರು.


ಯೆಫ್ತಾಹನು ಅವರನ್ನು ಅರೋಯೇರಿನಿಂದ ಮಿನ್ನೀಥಿನ ದಾರಿಯವರೆಗೆ ಮತ್ತು ಆಬೇಲ್ ಕೆರಾಮೀಮಗೆ ಹೋಗುವವರೆಗೆ ಇರುವ ಇಪ್ಪತ್ತು ಪಟ್ಟಣಗಳನ್ನು ಹಾಳುಮಾಡಿದನು. ಹೀಗೆ ದೊಡ್ಡ ಜಯಹೊಂದಿ, ಅಮ್ಮೋನಿಯರು ಇಸ್ರಾಯೇಲರಿಗೆ ಶರಣಾದರು.


ತಿರುಗಿ ಯುದ್ಧ ಉಂಟಾಯಿತು. ಆಗ ದಾವೀದನು ಹೊರಟು, ಫಿಲಿಷ್ಟಿಯರ ಸಂಗಡ ಯುದ್ಧಮಾಡಿ ಅವರನ್ನು ಸಾಹಸದಿಂದ ಹೊಡೆದನು. ಅವರು ಅವನ ಎದುರಿನಿಂದ ಓಡಿಹೋದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು