Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಅರಸುಗಳು 2:33 - ಕನ್ನಡ ಸಮಕಾಲಿಕ ಅನುವಾದ

33 ಆದ್ದರಿಂದ ಅವರ ರಕ್ತಾಪರಾಧವು ಯೋವಾಬನ ತಲೆಯ ಮೇಲೆಯೂ, ಅವನ ಸಂತತಿಯವರ ತಲೆಯ ಮೇಲೆಯೂ ಯುಗಯುಗಕ್ಕೂ ಇರುವುದು. ಆದರೆ ದಾವೀದನ ಮೇಲೆಯೂ, ಅವನ ಸಂತಾನದವರ ಮೇಲೆಯೂ, ಅವನ ಮನೆಯ ಮೇಲೆಯೂ, ಅವನ ಸಿಂಹಾಸನದ ಮೇಲೆಯೂ ಯೆಹೋವ ದೇವರಿಂದ ಸಮಾಧಾನವು ಯುಗಯುಗಾಂತರಕ್ಕೂ ಇರುವುದು,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

33 ಈ ಇಬ್ಬರನ್ನೂ ಕೊಂದ ಪಾಪವು ಯೋವಾಬನ ತಲೆಯ ಮೇಲೆಯೂ ಅವನ ಸಂತಾನದವರ ತಲೆಯ ಮೇಲೆಯೂ ಇರಲಿ. ಆದರೆ ದಾವೀದನಿಗೂ ಅವನ ಸಿಂಹಾಸನ, ಕುಟುಂಬ, ಸಂತಾನದವರಿಗೂ ಯೆಹೋವನಿಂದ ನಿತ್ಯ ಸಮಾಧಾನ ದೊರಕಲಿ” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

33 ಈ ಇಬ್ಬರನ್ನೂ ವಧಿಸಿದ ಪಾಪವು ಯೋವಾಬನ ತಲೆಯ ಮೇಲೂ ಅವನ ಸಂತಾನದವರ ತಲೆಯ ಮೇಲೂ ಇರಲಿ; ಆದರೆ ದಾವೀದನಿಗೂ ಅವನ ಸಿಂಹಾಸನವನ್ನೇರುವ ಸಂತಾನದವರಿಗೂ ಸರ್ವೇಶ್ವರನಿಂದ ನಿತ್ಯಸೌಭಾಗ್ಯ ದೊರಕಲಿ!” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

33 ಈ ಇಬ್ಬರನ್ನೂ ವಧಿಸಿದ ಪಾಪವು ಯೋವಾಬನ ತಲೆಯ ಮೇಲೆಯೂ ಅವನ ಸಂತಾನದವರ ತಲೆಯ ಮೇಲೆಯೂ ಇರಲಿ. ಆದರೆ ದಾವೀದನಿಗೂ ಅವನ ಸಿಂಹಾಸನ ಕುಟುಂಬ ಸಂತಾನಗಳಿಗೂ ಯೆಹೋವನಿಂದ ನಿತ್ಯ ಸೌಭಾಗ್ಯವು ದೊರಕಲಿ ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

33 ಅವರನ್ನು ಕೊಂದ ಅಪರಾಧವು ಯೋವಾಬನ ಮೇಲೆಯೂ ಅವನ ಕುಟುಂಬದ ಮೇಲೆಯೂ ಶಾಶ್ವತವಾಗಿರಲಿ. ಆದರೆ ದಾವೀದನನ್ನೂ ಅವನ ಸಂತತಿಯವರನ್ನೂ ಅವನ ಸಿಂಹಾಸನವನ್ನೂ ಯೆಹೋವನು ಶಾಶ್ವತವಾಗಿ ಆಶೀರ್ವದಿಸಲಿ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಅರಸುಗಳು 2:33
24 ತಿಳಿವುಗಳ ಹೋಲಿಕೆ  

ಅದಕ್ಕೆ ಜನರೆಲ್ಲರೂ ಉತ್ತರವಾಗಿ, “ಆತನ ರಕ್ತವು ನಮ್ಮ ಮೇಲೆಯೂ ನಮ್ಮ ಮಕ್ಕಳ ಮೇಲೆಯೂ ಇರಲಿ,” ಎಂದರು.


ಆಗ ಯೆಹೋವ ದೇವರು ಅವನ ತಲೆಯ ಮೇಲೆ ಅವನ ರಕ್ತಾಪರಾಧವನ್ನು ಬರಮಾಡುವರು. ಏಕೆಂದರೆ ಅವನು ನನ್ನ ತಂದೆ ದಾವೀದನಿಗೆ ತಿಳಿಯದೆ ತನಗಿಂತ ಉತ್ತಮರೂ ನೀತಿವಂತರೂ ಆದ ಇಬ್ಬರು ವ್ಯಕ್ತಿಗಳನ್ನು ಖಡ್ಗದಿಂದ ಕೊಂದನು. ಅವರು ಯಾರೆಂದರೆ, ಇಸ್ರಾಯೇಲಿನ ಸೈನ್ಯಕ್ಕೆ ಅಧಿಪತಿಯೂ ನೇರನ ಮಗನೂ ಆದ ಅಬ್ನೇರನು, ಯೆಹೂದ ಸೈನ್ಯಕ್ಕೆ ಅಧಿಪತಿಯೂ ಯೆತೆರನ ಮಗನೂ ಆದ ಅಮಾಸನು.


“ಮಹೋನ್ನತದಲ್ಲಿ ದೇವರಿಗೆ ಮಹಿಮೆ, ಭೂಲೋಕದಲ್ಲಿ ದೇವರ ಮೆಚ್ಚುಗೆ, ಮಾನವರಿಗೆ ಸಮಾಧಾನ.”


ಅರಸನ ಸನ್ನಿಧಾನದಿಂದ ದುಷ್ಟರನ್ನು ತೆಗೆದುಹಾಕಿದರೆ, ಆಗ ಅವನ ಸಿಂಹಾಸನವು ನೀತಿಯಲ್ಲಿ ಸ್ಥಿರವಾಗುವುದು.


ನಿಮ್ಮ ಮಕ್ಕಳು ನನ್ನ ಶಾಸನಗಳನ್ನೂ ನನ್ನ ಒಡಂಬಡಿಕೆಯನ್ನು ಸನ್ಮಾನಿಸಿ, ಕೈಗೊಂಡರೆ, ಅವರ ಮಕ್ಕಳು ಸಹ ಎಂದೆಂದಿಗೂ ನಿನ್ನ ಸಿಂಹಾಸನದಲ್ಲಿ ಕೂರುವರು.”


ದುಷ್ಟತನ ಮಾಡುವವರೆಲ್ಲರನ್ನು ಪ್ರತಿ ಮುಂಜಾನೆ ನಿಲ್ಲಿಸಿಬಿಡುವೆನು; ಯೆಹೋವ ದೇವರ ಪಟ್ಟಣದೊಳಗಿಂದ ಪ್ರತಿಯೊಬ್ಬ ದುಷ್ಟನನ್ನು ಹೊರಗೆ ಹಾಕುವೆನು.


ಆತನ ಸಂತತಿಯನ್ನು ಸಹ ಎಂದೆಂದಿಗೂ ಆತನ ಸಿಂಹಾಸನವನ್ನು ಆಕಾಶ ಇರುವವರೆಗೂ ಮಾಡುವೆನು.


ನಾಮಾನನ ಕುಷ್ಠರೋಗವು ನಿನಗೂ, ನಿನ್ನ ಸಂತಾನಕ್ಕೂ ನಿತ್ಯವಾಗಿ ಇರುವುದು,” ಎಂದನು. ಆಗ ಗೇಹಜಿಯು ಹಿಮದಂತೆ ಬಿಳುಪಾಗಿ, ಕುಷ್ಠರೋಗಿ ಆಗಿ ಎಲೀಷನಿಂದ ಹೊರಟುಹೋದನು.


ಆದರೆ ಯೆಹೂದ್ಯರು ಪೌಲನನ್ನು ವಿರೋಧಿಸಿ ದೂಷಿಸಿದಾಗ, ಅವನು ಅವರನ್ನು ಪ್ರತಿಭಟಿಸುವಂತೆ ತನ್ನ ಬಟ್ಟೆಗಳನ್ನು ಝಾಡಿಸಿ, “ನಿಮ್ಮ ರಕ್ತವು ನಿಮ್ಮ ತಲೆಯ ಮೇಲೆ ಇರಲಿ. ನಿಮ್ಮ ವಿನಾಶಕ್ಕೆ ನೀವೇ ಹೊಣೆ. ಅದಕ್ಕೆ ನಾನು ಜವಾಬ್ದಾರನಲ್ಲ, ಇಂದಿನಿಂದ ನಾನು ಶುದ್ಧಮನಸ್ಸುಳ್ಳವನಾಗಿ ಯೆಹೂದ್ಯರಲ್ಲದವರ ಬಳಿಗೆ ಹೋಗುತ್ತೇನೆ,” ಎಂದನು.


ಆದರೆ ತೆಕೋವದ ಸ್ತ್ರೀಯು ಅರಸನಿಗೆ, “ಅರಸನಾದ ನನ್ನ ಒಡೆಯನೇ, ಆ ಅಕ್ರಮವು ನನ್ನ ಮೇಲೆಯೂ, ನನ್ನ ತಂದೆಯ ಮನೆಯ ಮೇಲೆಯೂ ಇರಲಿ. ಅರಸನೂ, ಅವನ ಸಿಂಹಾಸನವೂ ನಿರಪರಾಧವಾಗಿರಲಿ,” ಎಂದಳು.


ಆಗ ರೂಬೇನನು ಅವರಿಗೆ ಉತ್ತರವಾಗಿ, “ಹುಡುಗನಿಗೆ ಏನೂ ಕೇಡು ಮಾಡಬೇಡಿರಿ, ಎಂದು ನಾನು ನಿಮಗೆ ಹೇಳಿದರೂ ನೀವು ಕೇಳಲಿಲ್ಲ. ಆದ್ದರಿಂದ ಅವನಿಗಾದ ಪ್ರಾಣಹಾನಿಯ ವಿಷಯದಲ್ಲಿ ಈಗ ನಾವು ಲೆಕ್ಕ ಒಪ್ಪಿಸುತ್ತಿದ್ದೇವೆ,” ಎಂದನು.


“ಆದರೆ ನೀವು ಈ ಪ್ರಕಾರ ಮಾಡದಿದ್ದರೆ ಇಗೋ, ಯೆಹೋವ ದೇವರ ವಿರೋಧವಾಗಿ ಪಾಪಮಾಡಿದವರಾಗುವಿರಿ, ನಿಮ್ಮ ಪಾಪ ನಿಮ್ಮನ್ನು ಹಿಡಿದುಕೊಳ್ಳುವುದೆಂದು ತಿಳಿದುಕೊಳ್ಳಿರಿ.


ಇದರಿಂದ ಯೆರುಬ್ಬಾಳನ ಎಪ್ಪತ್ತು ಮಂದಿ ಮಕ್ಕಳಿಗೆ ಮಾಡಿದ್ದ ಕ್ರೂರತ್ವವು ಬಂದು ಪ್ರಾಪ್ತಿಸುವ ಹಾಗೆಯೂ, ಅವರ ರಕ್ತವು ಅವರನ್ನು ಕೊಂದ ಅವರ ಸಹೋದರನಾದ ಅಬೀಮೆಲೆಕನ ಮೇಲೆಯೂ, ಅವನ ಸಹೋದರರನ್ನು ಕೊಲ್ಲುವುದಕ್ಕೆ ಅವನ ಕೈಗಳನ್ನು ಬಲಪಡಿಸಿದ ಶೆಕೆಮಿನ ಮನುಷ್ಯರ ಮೇಲೆಯೂ ಬರುವ ಹಾಗೆ, ಶೆಕೆಮಿನ ಜನರು ಅಬೀಮೆಲೆಕನಿಗೆ ದ್ರೋಹಮಾಡಿದರು.


ಅರಸನು ಶಿಮ್ಮಿಗೆ, “ನೀನು ನನ್ನ ತಂದೆ ದಾವೀದನಿಗೆ ಮಾಡಿದ ಕೇಡನ್ನು ನಿನ್ನ ಹೃದಯವು ತಿಳಿದಿದೆ. ಯೆಹೋವ ದೇವರು ನಿನ್ನ ಕೆಟ್ಟತನವನ್ನು ನಿನ್ನ ತಲೆಯ ಮೇಲೆ ಬರಮಾಡುವರು.


ನೀವೇ ಆ ಅಪರಾಧಿಯನ್ನು ಖಂಡಿಸಿ ಅವನ ತಪ್ಪನ್ನು ಅವನ ತಲೆಯ ಮೇಲೆಯೇ ಹೊರಿಸಿ, ಅವನು ಅಪರಾಧಿಯೆಂದು ತೋರಿಸಿಕೊಡಿರಿ. ನಿರ್ದೋಷಿಯಾಗಿದ್ದರೆ ಅವನ ನೀತಿಯ ಫಲವನ್ನು ಅನುಗ್ರಹಿಸಿ ಅವನು ನೀತಿವಂತನೆಂದು ತೋರಿಸಿಕೊಡುವ ಹಾಗೆ ಪರಲೋಕದಲ್ಲಿರುವ ನೀವು ಅದನ್ನು ಕೇಳಿ, ನಿಮ್ಮ ಸೇವಕರ ನ್ಯಾಯವನ್ನು ತೀರಿಸಿರಿ.


ಈಗ ನಿಮ್ಮ ಸೇವಕನ ಮನೆಯು ನಿಮ್ಮ ಮುಂದೆ ಶಾಶ್ವತವಾಗಿ ಇರುವ ಹಾಗೆ, ಅದನ್ನು ಆಶೀರ್ವದಿಸಲು ಸಂತೋಷಪಡಿರಿ; ಯೆಹೋವ ದೇವರೇ, ನೀವು ಆಶೀರ್ವದಿಸಿದ್ದೀರಿ, ಅದು ನಿತ್ಯ ಆಶೀರ್ವಾದ ಹೊಂದಿರುವುದು.”


ಜೀವವನ್ನು ಅರಸನು ನಿಮ್ಮಿಂದ ಬೇಡಲು, ನೀವು ಆತನಿಗೆ ಯುಗಯುಗಾಂತರಗಳಿಗೂ ದೀರ್ಘಾಯುಷ್ಯವನ್ನು ಕೊಟ್ಟಿದ್ದೀರಿ.


“ ‘ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನನ್ನ ಜೀವದಾಣೆ ನಿಶ್ಚಯವಾಗಿ ಅವನು ತಿರಸ್ಕರಿಸಿದ ನನ್ನ ಪ್ರಮಾಣವನ್ನೂ, ಅವನು ಮೀರಿದ ಒಡಂಬಡಿಕೆಯನ್ನೂ ಅವನ ತಲೆಯ ಮೇಲೆಯೇ ಹೊರಿಸುವೆನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು