Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಅರಸುಗಳು 19:5 - ಕನ್ನಡ ಸಮಕಾಲಿಕ ಅನುವಾದ

5 ಅವನು ಜಾಲೀಗಿಡದ ಕೆಳಗೆ ಮಲಗಿಕೊಂಡು ನಿದ್ರೆಮಾಡಿದನು. ಆಗ ಒಬ್ಬ ದೂತನು ಅವನನ್ನು ತಟ್ಟಿ, ಅವನಿಗೆ, “ಎದ್ದು ತಿನ್ನು,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಪಕ್ಕನೆ ಒಬ್ಬ ದೇವದೂತನು ಅವನನ್ನು ತಟ್ಟಿ, “ಎದ್ದು ಊಟ ಮಾಡು” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 ಬಳಿಕ ಅದೇ ಗಿಡದ ಕೆಳಗೆ ಮಲಗಿಕೊಂಡು ನಿದ್ರೆಮಾಡಿದನು. ಕೂಡಲೆ ಒಬ್ಬ ದೇವದೂತನು ಅವನನ್ನು ತಟ್ಟಿ, “ಎದ್ದು ಊಟಮಾಡು,” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ಅದೇ ಗಿಡದ ಕೆಳಗೆ ಮಲಗಿಕೊಂಡು ನಿದ್ರೆಮಾಡಿದನು. ಫಕ್ಕನೆ ಒಬ್ಬ ದೇವದೂತನು ಅವನನ್ನು ತಟ್ಟಿ - ಎದ್ದು ಊಟಮಾಡು ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ನಂತರ ಎಲೀಯನು ಪೊದೆಯ ಕೆಳಗೆ ಮಲಗಿ ನಿದ್ದೆಹೋದನು. ದೂತನೊಬ್ಬನು ಎಲೀಯನ ಹತ್ತಿರಕ್ಕೆ ಬಂದು ಅವನನ್ನು ಸ್ಪರ್ಶಿಸಿ, “ಎದ್ದೇಳು! ಊಟಮಾಡು!” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಅರಸುಗಳು 19:5
12 ತಿಳಿವುಗಳ ಹೋಲಿಕೆ  

ಹಣದಾಶೆಯಿಂದ ನಿಮ್ಮ ಜೀವನ ದೂರವಾಗಿರಲಿ, ನಿಮಗಿರುವವುಗಳಲ್ಲಿ ತೃಪ್ತರಾಗಿರಿ. ಏಕೆಂದರೆ ದೇವರು ಹೀಗೆ ಹೇಳಿದ್ದಾರೆ, “ನಾನು ನಿನ್ನನ್ನು ಎಂದಿಗೂ ಕೈಬಿಡುವುದಿಲ್ಲ, ಎಂದಿಗೂ ತೊರೆಯುವುದಿಲ್ಲ!”


ಈ ದೇವದೂತರೆಲ್ಲರೂ ರಕ್ಷಣೆಯನ್ನು ಬಾಧ್ಯವಾಗಿ ಹೊಂದಬೇಕಾಗಿರುವವರ ಸೇವೆಗೋಸ್ಕರ ಕಳುಹಿಸಲಾದ ಸೇವೆಯ ಆತ್ಮಗಳು ಅಲ್ಲವೇ?


ಫಕ್ಕನೆ ದೇವದೂತನೊಬ್ಬನು ಪ್ರತ್ಯಕ್ಷನಾಗಲು ಕೋಣೆಯೆಲ್ಲಾ ಪ್ರಕಾಶಮಯವಾಯಿತು. ಅವನು ಪೇತ್ರನನ್ನು ತಟ್ಟಿ ಎಬ್ಬಿಸಿ, “ಬೇಗ ಎದ್ದೇಳು!” ಎಂದನು. ಪೇತ್ರನ ಕೈಗಳಿಗೆ ಬಂಧಿಸಿದ್ದ ಸರಪಣಿಗಳು ಕಳಚಿಬಿದ್ದವು.


ನಾನು ಇನ್ನೂ ಪ್ರಾರ್ಥಿಸುತ್ತಿದ್ದಾಗ, ನಾನು ಮೊದಲ ದರ್ಶನದಲ್ಲಿ ಕಂಡಿದ್ದ ಸುಮಾರು ಸಾಯಂಕಾಲದ ನೈವೇದ್ಯವನ್ನು ಅರ್ಪಿಸುವ ಹೊತ್ತಿನಲ್ಲಿ, ನನ್ನ ಬಳಿ ಗಬ್ರಿಯೇಲನು ಬೇಗನೆ ಹಾರಿ ಬಂದು,


ಅವನು, “ದೇವರು ತನ್ನ ಕೋಪವನ್ನು ತೀರಿಸುವ ಮುಂದಿನ ಕಾಲದಲ್ಲಿ ನಡೆಯತಕ್ಕದ್ದನ್ನು ನಿನಗೆ ತಿಳಿಸುತ್ತೇನೆ ಕೇಳು, ಆ ದರ್ಶನವು ನಿಯಮಿತ ಅಂತ್ಯಕಾಲಕ್ಕೆ ಸಂಬಂಧಪಟ್ಟದ್ದು.


ಸಿಂಹಗಳು ಹಸಿದು ಬಳಲಬಹುದು, ಆದರೆ ಯೆಹೋವ ದೇವರನ್ನು ಹುಡುಕುವವರಿಗೆ ಯಾವ ಒಳ್ಳೆಯದರ ಕೊರತೆಯೂ ಇರುವುದಿಲ್ಲ.


ದೇವರಿಗೆ ಭಯಪಡುವವರ ಸುತ್ತಲೂ ಯೆಹೋವ ದೇವರ ದೂತನು ಇಳಿದುಕೊಂಡು ಅವರನ್ನು ಕಾಪಾಡುತ್ತಾನೆ.


ಆದರೆ ಅವನು ಮರುಭೂಮಿಯಲ್ಲಿ ಒಂದು ದಿವಸದ ಪ್ರಯಾಣದಷ್ಟು ಹೋಗಿ, ಒಂದು ಜಾಲೀಗಿಡದ ಕೆಳಗೆ ಕುಳಿತು, ತಾನು ಸಾಯಬೇಕೆಂದು ಅಪೇಕ್ಷಿಸಿ, “ಯೆಹೋವ ದೇವರೇ, ನನಗೆ ಸಾಕಾಯಿತು, ನನ್ನ ಪ್ರಾಣವನ್ನು ತೆಗೆದುಕೋ. ಏಕೆಂದರೆ ನನ್ನ ಪಿತೃಗಳಿಗಿಂತ ನಾನು ಉತ್ತಮನಲ್ಲ,” ಎಂದನು.


ಅವನು ಎದ್ದು ನೋಡಿದಾಗ, ಇಗೋ, ಕೆಂಡದಲ್ಲಿ ಬೇಯಿಸಿದ ರೊಟ್ಟಿಯೂ ಒಂದು ತಂಬಿಗೆ ನೀರೂ ಅವನ ತಲೆಯ ಕಡೆಗೆ ಇತ್ತು. ಆಗ ಅವನು ತಿಂದು, ಕುಡಿದು ತಿರುಗಿ ಮಲಗಿಕೊಂಡನು.


ಆಗ ನನ್ನ ಸಂಗಡ ಮಾತನಾಡಿದ ದೇವದೂತನು ತಿರುಗಿಬಂದು,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು