Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಅರಸುಗಳು 18:19 - ಕನ್ನಡ ಸಮಕಾಲಿಕ ಅನುವಾದ

19 ಆದ್ದರಿಂದ ನೀನು ಕರ್ಮೆಲು ಬೆಟ್ಟದ ಬಳಿಯಲ್ಲಿ ಸಮಸ್ತ ಇಸ್ರಾಯೇಲನ್ನೂ, ಬಾಳನ ನಾನೂರ ಐವತ್ತು ಮಂದಿ ಪ್ರವಾದಿಗಳನ್ನೂ, ಈಜೆಬೆಲಳ ಮೇಜಿನ ಹತ್ತಿರ ಭೋಜನಮಾಡುವ ಅಶೇರನ ನಾನೂರು ಮಂದಿ ಪ್ರವಾದಿಗಳನ್ನೂ ನನ್ನ ಬಳಿಗೆ ಕೂಡಿಸು,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

19 ನೀನು ಈಗ ಎಲ್ಲಾ ಇಸ್ರಾಯೇಲರನ್ನೂ, ಈಜೆಬೆಲಳಿಂದ ಪೋಷಣೆ ಹೊಂದುವ ಬಾಳನ ನಾನೂರೈವತ್ತು ಪ್ರವಾದಿಗಳನ್ನು ಮತ್ತು ಅಶೇರ ದೇವತೆಯ ನಾನೂರು ಪ್ರವಾದಿಗಳನ್ನು ಕರ್ಮೆಲ್ ಬೆಟ್ಟಕ್ಕೆ ಕರೆಯಿಸು” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

19 ನೀನು ಈಗ ಎಲ್ಲ ಇಸ್ರಯೇಲರನ್ನು, ಈಜೆಬೆಲಳಿಂದ ಪೋಷಣೆ ಹೊಂದುವ ಬಾಳನ ನಾನೂರೈವತ್ತುಮಂದಿ ಪ್ರವಾದಿಗಳನ್ನು ಹಾಗೂ ಅಶೇರದೇವತೆಯ ನಾನೂರೈವತ್ತುಮಂದಿ ಪ್ರವಾದಿಗಳನ್ನು ಕರ್ಮೆಲ್ ಬೆಟ್ಟಕ್ಕೆ ಕರೆಯಿಸು,” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

19 ನೀನು ಈಗ ಎಲ್ಲಾ ಇಸ್ರಾಯೇಲ್ಯರನ್ನೂ ಈಜೆಬೆಲಳಿಂದ ಪೋಷಣೆ ಹೊಂದುವ ಬಾಳನ ನಾನೂರೈವತ್ತು ಮಂದಿ ಪ್ರವಾದಿಗಳನ್ನೂ ಅಶೇರದೇವತೆಯ ನಾನೂರು ಮಂದಿ ಪ್ರವಾದಿಗಳನ್ನೂ ಕರ್ಮೆಲ್‍ಬೆಟ್ಟಕ್ಕೆ ಕರಿಸು ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

19 ಈಗ ಕರ್ಮೆಲ್ ಬೆಟ್ಟದ ಮೇಲೆ ನನ್ನನ್ನು ಭೇಟಿಮಾಡಲು ಎಲ್ಲಾ ಇಸ್ರೇಲರಿಗೆ ತಿಳಿಸು. ಬಾಳನ ನಾನೂರೈವತ್ತು ಮಂದಿ ಪ್ರವಾದಿಗಳನ್ನು ಆ ಸ್ಥಳಕ್ಕೆ ಕರೆದುಕೊಂಡು ಬಾ. ಸುಳ್ಳುದೇವತೆಯಾದ ಅಶೇರಳ ನಾನೂರು ಮಂದಿ ಪ್ರವಾದಿಗಳನ್ನೂ ಕರೆದುಕೊಂಡು ಬಾ. ಆ ಪ್ರವಾದಿಗಳನ್ನು ರಾಣಿಯಾದ ಈಜೆಬೆಲಳು ಪೋಷಣೆ ಮಾಡುತ್ತಿದ್ದಾಳೆ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಅರಸುಗಳು 18:19
23 ತಿಳಿವುಗಳ ಹೋಲಿಕೆ  

ಅಹಾಬನು ಅಶೇರ ವಿಗ್ರಹಸ್ತಂಭಗಳನ್ನು ನಿಲ್ಲಿಸಿದನು. ಹೀಗೆಯೇ ಅಹಾಬನು ಇಸ್ರಾಯೇಲಿನ ದೇವರಾದ ಯೆಹೋವ ದೇವರಿಗೆ ಕೋಪ ಉಕ್ಕುವ ಹಾಗೆ ತನಗೆ ಮುಂಚಿನ ಇಸ್ರಾಯೇಲಿನ ಅರಸುಗಳೆಲ್ಲರಿಗಿಂತ ಅಧಿಕವಾಗಿ ಕೆಟ್ಟತನ ಮಾಡಿದನು.


ಅಲಮ್ಮೆಲೆಕ್, ಅಮಾದ್, ಮಿಷಾಲ್ ಎಂಬ ಪಟ್ಟಣಗಳನ್ನು ಸುತ್ತಿಕೊಂಡು ಅದು ಪಶ್ಚಿಮಕ್ಕೆ ಕರ್ಮೆಲ್, ಶೀಹೋರ್ ಲಿಬ್ನತ್ ಕಡೆ ಹೋಗಿ,


ಅವನು ಆ ಸ್ಥಳವನ್ನು ಬಿಟ್ಟು ಕರ್ಮೆಲ್ ಬೆಟ್ಟಕ್ಕೆ ಹೋದನು. ಅಲ್ಲಿಂದ ಸಮಾರ್ಯಕ್ಕೆ ಇಳಿದು ಹೋದನು.


ಆಗ ಮೃಗವನ್ನು ಸೆರೆಹಿಡಿಯಲಾಯಿತು. ಇದಲ್ಲದೆ ಮೃಗದ ಮುಂದೆ ಮಹತ್ಕಾರ್ಯಗಳನ್ನು ಮಾಡಿ, ಮೃಗದ ಗುರುತು ಹಾಕಿಸಿಕೊಂಡವರನ್ನೂ ಅದರ ವಿಗ್ರಹವನ್ನು ಆರಾಧಿಸಿದವರನ್ನೂ ಮರುಳುಗೊಳಿಸಿದ ಸುಳ್ಳು ಪ್ರವಾದಿ ಸಹ ಅದರ ಜೊತೆಯಲ್ಲಿ ಸೆರೆಸಿಕ್ಕಿದನು. ಇವರಿಬ್ಬರನ್ನೂ ಜೀವಸಹಿತವಾಗಿ ಗಂಧಕದಿಂದ ಉರಿಯುವ ಬೆಂಕಿಯ ಕೆರೆಯಲ್ಲಿ ಹಾಕಲಾಯಿತು.


ಆದರೆ ನಿನ್ನ ಮೇಲೆ ಒಂದು ತಪ್ಪು ಹೊರಿಸಬೇಕಾಗುತ್ತದೆ. ಅದೇನೆಂದರೆ, ಯೆಜೆಬೇಲೆಂಬ ಆ ಹೆಂಗಸು ತನ್ನನ್ನು ಪ್ರವಾದಿನಿಯೆಂದು ಹೇಳಿಕೊಂಡು ವ್ಯಭಿಚಾರ ಮಾಡಬಹುದೆಂದೂ ವಿಗ್ರಹಗಳಿಗೆ ನೈವೇದ್ಯ ಮಾಡಿದ ಪದಾರ್ಥಗಳನ್ನು ತಿನ್ನಬಹುದೆಂದೂ ನನ್ನ ದಾಸರಿಗೆ ಬೋಧಿಸುತ್ತಾ ಅವರನ್ನು ತಪ್ಪಾದ ಮಾರ್ಗದಲ್ಲಿ ನಡೆಸುತ್ತಿದ್ದರೂ ನೀನು ಅವಳನ್ನು ತಡೆಯದೆ ಬಿಟ್ಟಿರುವುದು.


ಆದರೆ ಆ ಕಾಲದಲ್ಲಿ ಸುಳ್ಳು ಪ್ರವಾದಿಗಳು ಸಹ ಜನರಲ್ಲಿ ಕಾಣಿಸಿಕೊಂಡರು. ಅದೇ ಪ್ರಕಾರ ನಿಮ್ಮಲ್ಲಿಯೂ ಈಗ ಸುಳ್ಳು ಬೋಧಕರು ಕಾಣಿಸಿಕೊಳ್ಳುವರು. ಅಂಥವರು ಹಾನಿಕರವಾದ ಸುಳ್ಳು ಬೋಧನೆಗಳನ್ನು ರಹಸ್ಯವಾಗಿ ಸಭೆಯೊಳಗೆ ತರುವರು. ತಮ್ಮನ್ನು ಕೊಂಡುಕೊಂಡ ಸಾರ್ವಭೌಮ ಕರ್ತ ಆಗಿರುವವರನ್ನೇ ಅಲ್ಲಗಳೆಯುವರು. ಹೀಗೆ ಅವರು ತಮ್ಮ ಮೇಲೆ ವಿನಾಶವನ್ನು ತಾವೇ ಬರಮಾಡಿಕೊಳ್ಳುವರು.


ಅವರು ಕರ್ಮೆಲಿನ ಬೆಟ್ಟದ ತುದಿಯಲ್ಲಿ ಅಡಗಿಕೊಂಡರೂ, ನಾನು ಅವರನ್ನು ಹುಡುಕಿ, ಅಲ್ಲಿಂದ ತೆಗೆಯುವೆನು. ಅವರು ನನ್ನ ದೃಷ್ಟಿಗೆ ಮರೆಯಾಗಿ ಸಮುದ್ರದ ತಳದಲ್ಲಿ ಅಡಗಿಕೊಂಡರೂ, ಸರ್ಪಕ್ಕೆ ಅಪ್ಪಣೆಕೊಟ್ಟು, ಅದು ಅವರನ್ನು ಅಲ್ಲೇ ಕಚ್ಚುವಂತೆ ಮಾಡುವೆನು.


ಆಮೋಸನು ಹೇಳಿದ್ದೇನೆಂದರೆ: “ಯೆಹೋವ ದೇವರು ಚೀಯೋನಿನಿಂದ ಗರ್ಜಿಸಿ, ಯೆರೂಸಲೇಮಿನಿಂದ ತಮ್ಮ ಧ್ವನಿ ಗೈಯುವರು. ಕುರುಬರ ಹುಲ್ಲುಗಾವಲುಗಳು ಬಾಡಿ ಹೋಗುತ್ತಿವೆ, ಕರ್ಮೆಲಿನ ತುದಿಯ ಗಿಡಗಳು ಒಣಗಿ ಹೋಗುತ್ತವೆ.”


“ಸೇನಾಧೀಶ್ವರ ಯೆಹೋವ ದೇವರೆಂದು ಹೆಸರುಳ್ಳ ಅರಸನು ಹೇಳುವುದೇನೆಂದರೆ, ‘ನನ್ನ ಜೀವದಾಣೆ,’ ಬೆಟ್ಟಗಳಲ್ಲಿ ತಾಬೋರಿನಂತೆಯೂ, ಸಮುದ್ರದ ಬಳಿಯಲ್ಲಿ ಕರ್ಮೆಲಿನಂತೆಯೂ ನಿಶ್ಚಯವಾಗಿ ಬರುವನು.


ಆದರೆ ಅವರು ಇಸ್ರಾಯೇಲರನ್ನು ಪಾಪಮಾಡಲು ಪ್ರೇರೇಪಿಸಿದ ಯಾರೊಬ್ಬಾಮನ ಮನೆಯ ಪಾಪಗಳನ್ನು ಬಿಟ್ಟುಬಿಡದೆ ಅವುಗಳಲ್ಲಿ ಮುಂದುವರಿದರು. ಇದಲ್ಲದೆ ಸಮಾರ್ಯದಲ್ಲಿ ಅಶೇರ ಸ್ತಂಭ ಇನ್ನೂ ಉಳಿದಿತ್ತು.


ಯೋರಾಮನು ಯೇಹುವನ್ನು ಕಂಡಾಗ, “ಯೇಹುವೇ, ಸಮಾಧಾನದಿಂದ ಬಂದಿರುವೆಯೋ?” ಎಂದನು. ಅದಕ್ಕವನು, “ನಿನ್ನ ತಾಯಿಯಾದ ಈಜೆಬೆಲಳ ಜಾರತ್ವವೂ, ಅವಳ ಮಾಟಮಂತ್ರಗಳೂ ಅಧಿಕವಾಗಿರುವಾಗ ಸಮಾಧಾನವೆಲ್ಲಿ?” ಎಂದನು.


ಆಗ ಇಸ್ರಾಯೇಲಿನ ಅರಸನು ಹೆಚ್ಚು ಕಡಿಮೆ ನಾನೂರು ಮಂದಿ ಪ್ರವಾದಿಗಳನ್ನು ಕೂಡಿಸಿ, ಅವರಿಗೆ, “ನಾನು ಗಿಲ್ಯಾದಿನ ರಾಮೋತಿನ ಮೇಲೆ ಯುದ್ಧಕ್ಕೆ ಹೋಗಬಹುದೋ, ಬೇಡವೋ?” ಎಂದು ಕೇಳಿದನು. ಅದಕ್ಕವರು, “ಹೋಗು, ಯೆಹೋವ ದೇವರು ಅದನ್ನು ಅರಸನ ಕೈಯಲ್ಲಿ ಒಪ್ಪಿಸಿಕೊಡುವರು,” ಎಂದರು.


ಆಗ ಎಲೀಯನು ಜನರಿಗೆ, “ಯೆಹೋವ ದೇವರ ಪ್ರವಾದಿಗಳಲ್ಲಿ ನಾನೊಬ್ಬನೇ ಉಳಿದಿದ್ದೇನೆ. ಆದರೆ ಬಾಳನ ಪ್ರವಾದಿಗಳು ನಾನೂರ ಐವತ್ತು ಮಂದಿಯಿದ್ದಾರೆ.


ಇದಲ್ಲದೆ, ಆಸನು ತನ್ನ ಅಜ್ಜಿ ಮಾಕ ಎಂಬವಳು ಅಶೇರ ದೇವತೆಯ ಒಂದು ಅಸಹ್ಯವಾದ ಮೂರ್ತಿಯನ್ನು ಮಾಡಿಸಿದ್ದರಿಂದ, ಅವಳನ್ನು ರಾಜಮಾತೆಯ ಸ್ಥಾನದಿಂದ ತೆಗೆದುಹಾಕಿದನು. ಆ ಮೂರ್ತಿಯನ್ನು ಕಡಿದುಹಾಕಿ ಕಿದ್ರೋನ್ ಹಳ್ಳದ ಹತ್ತಿರ ಸುಟ್ಟುಬಿಟ್ಟನು.


ಸಮುಯೇಲನು ಉದಯಕಾಲದಲ್ಲೆದ್ದು ಸೌಲನನ್ನು ಎದುರುಗೊಳ್ಳಲು ಹೋದನು. ಆಗ ಅವನಿಗೆ ಹೀಗೆ ಹೇಳಲಾಗಿತ್ತು, “ಸೌಲನು ತನ್ನ ನೆನಪಿಗಾಗಿ ಒಂದು ಸ್ಮಾರಕವನ್ನು ನಿರ್ಮಿಸಲು ಕರ್ಮೆಲಿಗೆ ಹೋಗಿದ್ದಾನೆ. ನಂತರ ಅಲ್ಲಿಂದ ಮುಂದೆ ಹೋಗಿ ಗಿಲ್ಗಾಲಿಗೆ ಹೋಗಿದ್ದಾನೆ.”


ಹೀಗೆ ಅಹಾಬನು ಇಸ್ರಾಯೇಲರೆಲ್ಲರನ್ನೂ ಕರೆಯಿಸಿ, ಕರ್ಮೆಲು ಬೆಟ್ಟದ ಬಳಿಯಲ್ಲಿ ಪ್ರವಾದಿಗಳನ್ನು ಕೂಡಿಸಿದನು.


ಎಲೀಷನು ಇಸ್ರಾಯೇಲಿನ ಅರಸನಿಗೆ, “ನಿನ್ನೊಂದಿಗೆ ನಾನೇನು ಮಾಡಬೇಕು? ನೀನು ನಿನ್ನ ತಂದೆಯ ಪ್ರವಾದಿಗಳ ಬಳಿಗೂ, ನಿನ್ನ ತಾಯಿಯ ಪ್ರವಾದಿಗಳ ಬಳಿಗೂ ಹೋಗು,” ಎಂದನು. ಇಸ್ರಾಯೇಲಿನ ಅರಸನು ಅವನಿಗೆ, “ಇಲ್ಲ, ಯೆಹೋವ ದೇವರು ಈ ಮೂರು ಮಂದಿ ಅರಸರನ್ನು ಮೋವಾಬ್ಯರ ಕೈಯಲ್ಲಿ ಒಪ್ಪಿಸಿಕೊಡುವುದಕ್ಕೆ ಒಟ್ಟಾಗಿ ಕರೆದಿದ್ದಾರಲ್ಲಾ,” ಎಂದನು.


ಆದ್ದರಿಂದ ಬಾಳನ ಸಮಸ್ತ ಪ್ರವಾದಿಗಳನ್ನೂ, ಅವನ ಸಮಸ್ತ ಸೇವಕರನ್ನೂ, ಅವನ ಸಮಸ್ತ ಯಾಜಕರನ್ನೂ ನನ್ನ ಬಳಿಗೆ ಕರೆಯಿರಿ. ಒಬ್ಬನೂ ಬಾರದೆ ಇರಕೂಡದು. ನಾನು ಬಾಳನಿಗೆ ಮಹಾಬಲಿ ಕೊಡಬೇಕಾಗಿದೆ. ಯಾವನಾದರೂ ಬಾರದೆ ಹೋದರೆ ಅವನು ಬದುಕನು,” ಎಂದನು. ಏಕೆಂದರೆ ಯೇಹುವು ಬಾಳನನ್ನು ಸೇವಿಸುವವರನ್ನು ನಾಶಮಾಡುವಂತೆ ಇದನ್ನು ತಂತ್ರದಿಂದ ಮಾಡಿದನು.


ನಮ್ಮ ಸುತ್ತಲೂ ಇರುವ ಜನಾಂಗಗಳಿಂದ ಬಂದವರೂ, ಯೆಹೂದ್ಯರೂ, ಅಧಿಕಾರಿಗಳೂ ನೂರ ಐವತ್ತು ಮಂದಿ ನನ್ನ ಪಂಕ್ತಿಯಲ್ಲೇ ಊಟಮಾಡುತ್ತಿದ್ದರು.


ನನ್ನ ಪ್ರೇಮವೇ, ನೀನು ನಿನ್ನ ಹರ್ಷದಿಂದ ಎಷ್ಟೋ ಸುಂದರಿಯೂ ಎಷ್ಟೋ ಮನೋಹರಳೂ ಆಗಿರುವೆ.


“ಸಮಾರ್ಯದ ಪ್ರವಾದಿಗಳಲ್ಲಿ ಅಸಹ್ಯಕರ ವಿಷಯವನ್ನು ನೋಡಿದ್ದೇನೆ. ಅವರು ಬಾಳನಿಂದ ಪ್ರವಾದನೆಯನ್ನು ಕೇಳಿ, ನನ್ನ ಜನರಾದ ಇಸ್ರಾಯೇಲನ್ನು ತಪ್ಪುವಂತೆ ಮಾಡಿದ್ದಾರೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು