1 ಅರಸುಗಳು 13:7 - ಕನ್ನಡ ಸಮಕಾಲಿಕ ಅನುವಾದ7 ಅರಸನು ದೇವರ ಮನುಷ್ಯನಿಗೆ, “ನೀನು ನನ್ನ ಮನೆಗೆ ಬಂದು ಊಟಮಾಡಿ ವಿಶ್ರಮಿಸಿಕೋ, ನಾನು ನಿನಗೆ ಬಹುಮಾನ ಕೊಡುವೆನು,” ಎಂದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20197 ಆಗ ಅರಸನು ಅವನಿಗೆ, “ನನ್ನ ಮನೆಗೆ ಬಾ, ಸ್ವಲ್ಪ ಊಟ ಮಾಡಿ ವಿಶ್ರಾಂತಿ ಪಡೆದುಕೋ. ನಾನು ನಿನಗೆ ಬಹುಮಾನವನ್ನು ಕೊಡುತ್ತೇನೆ” ಎಂದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)7 ಆಗ ಅರಸನು, “ನನ್ನ ಮನೆಗೆ ಬಾ; ಸ್ವಲ್ಪ ಊಟಮಾಡಿ ಸುಧಾರಿಸಿಕೊ. ನಾನು ನಿನಗೆ ಬಹುಮಾನವನ್ನು ಕೊಡುತ್ತೇನೆ,” ಎಂದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)7 ಆಗ ಅರಸನು ಅವನಿಗೆ - ನನ್ನ ಮನೆಗೆ ಬಾ; ಸ್ವಲ್ಪ ಊಟಮಾಡಿ ಬಲಹೊಂದು; ನಾನು ನಿನಗೆ ಬಹುಮಾನವನ್ನು ಕೊಡುತ್ತೇನೆ ಅನ್ನಲು ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್7 ಆಗ ರಾಜನು ದೇವಮನುಷ್ಯನಿಗೆ, “ದಯವಿಟ್ಟು ನನ್ನೊಡನೆ ಮನೆಗೆ ಬಾ. ನನ್ನೊಡನೆ ಊಟಮಾಡು. ನಾನು ನಿನಗೆ ಒಂದು ಕಾಣಿಕೆಯನ್ನು ಕೊಡುತ್ತೇನೆ” ಎಂದು ಹೇಳಿದನು. ಅಧ್ಯಾಯವನ್ನು ನೋಡಿ |
ಯೆರೆಮೀಯನು ಇನ್ನು ಹಿಂದಿರುಗದೆ ಇರುವಾಗ, ನೆಬೂಜರದಾನನು ಹೇಳಿದ್ದೇನೆಂದರೆ: “ಬಾಬಿಲೋನಿನ ಅರಸನು ಯೆಹೂದದ ಪಟ್ಟಣಗಳ ಮೇಲೆ ಅಧಿಕಾರಿಯಾಗಿ ಇಟ್ಟ ಶಾಫಾನನ ಮೊಮ್ಮಗನೂ ಅಹೀಕಾಮನ ಮಗನೂ ಆದ ಗೆದಲ್ಯನ ಬಳಿಗೆ ತಿರುಗಿಕೋ; ಅವನ ಸಂಗಡ ಜನರೊಳಗೆ ವಾಸಮಾಡು. ಇಲ್ಲವೆ ಎಲ್ಲಿ ಹೋಗುವುದಕ್ಕೆ ನಿನಗೆ ಸರಿಯಾಗಿ ಕಾಣುತ್ತದೋ, ಅಲ್ಲಿಗೆ ಹೋಗು,” ಎಂದು ಹೇಳಿ, ಕಾವಲಿನವರ ಅಧಿಪತಿಯು ಅವನಿಗೆ ಆಹಾರವನ್ನೂ, ಬಹುಮಾನವನ್ನೂ ಕೊಟ್ಟು ಕಳುಹಿಸಿಬಿಟ್ಟನು.