1 ಅರಸುಗಳು 13:6 - ಕನ್ನಡ ಸಮಕಾಲಿಕ ಅನುವಾದ6 ಆಗ ಅರಸನು ಉತ್ತರವಾಗಿ ದೇವರ ಮನುಷ್ಯನಿಗೆ, “ನನ್ನ ಕೈ ಗುಣವಾಗುವ ಹಾಗೆ ನೀನು ನಿನ್ನ ದೇವರಾದ ಯೆಹೋವ ದೇವರ ಕಟಾಕ್ಷವನ್ನು ಬೇಡಿಕೊಂಡು, ನನಗೋಸ್ಕರ ಪ್ರಾರ್ಥನೆ ಮಾಡು,” ಎಂದನು. ಆಗ ದೇವರ ಮನುಷ್ಯನು ಯೆಹೋವ ದೇವರ ಕಟಾಕ್ಷವನ್ನು ಬೇಡಿಕೊಂಡದ್ದರಿಂದ ಅರಸನ ಕೈಗುಣವಾಗಿ, ಮುಂಚಿನ ಹಾಗೆ ಆಯಿತು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20196 ಅರಸನು ಆ ಮನುಷ್ಯನಿಗೆ, “ನಿನ್ನ ದೇವರಾದ ಯೆಹೋವನು ಪ್ರಸನನ್ನಾಗುವಂತೆ ಬೇಡಿಕೊಂಡು ನಾನು ನನ್ನ ಕೈಯನ್ನು ಹಿಂತೆಗೆಯುವುದಕ್ಕಾಗುವ ಹಾಗೆ ಆತನನ್ನು ನನಗೋಸ್ಕರ ಪ್ರಾರ್ಥಿಸು” ಎಂದು ಕೇಳಿದನು. ದೇವರ ಮನುಷ್ಯನು ಯೆಹೋವನನ್ನು ಬೇಡಿಕೊಂಡಿದ್ದರಿಂದ ಅರಸನ ಕೈ ವಾಸಿಯಾಗಿ ಮುಂಚಿನಂತೆ ಆಯಿತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)6 ಅರಸನು ಆ ಭಕ್ತನಿಗೆ, “ನಿನ್ನ ದೇವರಾದ ಸರ್ವೇಶ್ವರನು ಪ್ರಸನ್ನನಾಗುವಂತೆ ಬೇಡಿಕೊ; ನಾನು ನನ್ನ ಕೈಯನ್ನು ಹಿಂತೆಗೆಯುವುದಕ್ಕಾಗುವ ಹಾಗೆ ಅವರನ್ನು ನನ್ನ ಪರವಾಗಿ ಪ್ರಾರ್ಥಿಸು,” ಎಂದು ಕೇಳಿದನು. ಅಂತೆಯೇ ಆ ದೈವಭಕ್ತನು ಸರ್ವೇಶ್ವರನನ್ನು ಬೇಡಿಕೊಂಡನು; ಅರಸನ ಕೈ ವಾಸಿಯಾಗಿ ಮೊದಲಿನಂತೆ ಆಯಿತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)6 ಅರಸನು ಆ ಮನುಷ್ಯನಿಗೆ - ನಿನ್ನ ದೇವರಾದ ಯೆಹೋವನು ಪ್ರಸನ್ನನಾಗುವಂತೆ ಬೇಡಿಕೊಂಡು ನಾನು ನನ್ನ ಕೈಯನ್ನು ಹಿಂದೆಗೆಯುವದಕ್ಕಾಗುವ ಹಾಗೆ ಆತನನ್ನು ನನಗೋಸ್ಕರ ಪ್ರಾರ್ಥಿಸು ಎಂದು ಹೇಳಿದನು. ದೇವರ ಮನುಷ್ಯನು ಯೆಹೋವನನ್ನು ಬೇಡಿಕೊಂಡದರಿಂದ ಅರಸನ ಕೈ ವಾಸಿಯಾಗಿ ಮುಂಚಿನಂತೆ ಆಯಿತು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್6 ನಂತರ ರಾಜನಾದ ಯಾರೊಬ್ಬಾಮನು ದೇವಮನುಷ್ಯನಿಗೆ, “ನಿನ್ನ ದೇವರಾದ ಯೆಹೋವನಲ್ಲಿ ನನಗಾಗಿ ಪ್ರಾರ್ಥಿಸು. ನನ್ನ ಕೈಯನ್ನು ಗುಣಪಡಿಸುವಂತೆ ಯೆಹೋವನಲ್ಲಿ ಪ್ರಾರ್ಥಿಸು” ಎಂದನು. ದೇವಮನುಷ್ಯನು ಯೆಹೋವನಿಗೆ ಪ್ರಾರ್ಥಿಸಿದನು. ಆಗ ರಾಜನ ಕೈ ಗುಣವಾಯಿತು. ಅದು ಮತ್ತೆ ಮೊದಲಿನಂತೆ ಆಯಿತು. ಅಧ್ಯಾಯವನ್ನು ನೋಡಿ |