1 ಅರಸುಗಳು 12:33 - ಕನ್ನಡ ಸಮಕಾಲಿಕ ಅನುವಾದ33 ಹೀಗೆ ಅವನು ತನ್ನ ಸ್ವಂತ ಹೃದಯದಲ್ಲಿ ಯೋಚಿಸಿದ ತಿಂಗಳಲ್ಲಿ ಎಂಟನೆಯ ತಿಂಗಳ ಹದಿನೈದನೆಯ ದಿವಸದಲ್ಲಿ ಅವನು ಬೇತೇಲಿನಲ್ಲಿ ಕಟ್ಟಿಸಿದ ಪೀಠದ ಮೇಲೆ ಬಲಿಗಳನ್ನರ್ಪಿಸಿ, ಇಸ್ರಾಯೇಲರಿಗೆ ಹಬ್ಬವನ್ನು ನೇಮಿಸಿದನು. ಇದಲ್ಲದೆ ತಾನೇ ಪೀಠದ ಮೇಲೆ ಬಲಿಗಳನ್ನರ್ಪಿಸಿ ಧೂಪವನ್ನು ಸುಟ್ಟನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201933 ಇಸ್ರಾಯೇಲರು ಎಂಟನೆಯ ತಿಂಗಳ ಹದಿನೈದನೆಯ ದಿನದಲ್ಲಿ ಹಬ್ಬವನ್ನಾಚರಿಸಬೇಕೆಂದು ಯಾರೊಬ್ಬಾಮನು ಸ್ವ ಇಚ್ಛೆಯಿಂದ ಗೊತ್ತುಮಾಡಿ ಆ ಸಮಯಕ್ಕೆ ತಾನೂ ಬೇತೇಲಿನ ಯಜ್ಞವೇದಿಯ ಬಳಿಗೆ ಹೋಗಿ ಧೂಪಹಾಕುವುದಕ್ಕಾಗಿ ಅದರ ಮೆಟ್ಟಲುಗಳನ್ನು ಹತ್ತುತ್ತಿದ್ದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)33 ಎಂಟನೆಯ ತಿಂಗಳ ಹದಿನೈದನೆಯ ದಿನ ಇಸ್ರಯೇಲರು ಹಬ್ಬವನ್ನಾಚರಿಸಬೇಕೆಂದು ಯಾರೊಬ್ಬಾಮನು ಸ್ವೇಚ್ಛೆಯಿಂದ ಗೊತ್ತುಮಾಡಿದನು. ಆ ಸಮಯಕ್ಕೆ ತಾನೂ ಬೇತೇಲಿನ ಬಲಿಪೀಠದ ಬಳಿಗೆ ಹೋಗಿ ಧೂಪಾರತಿ ಎತ್ತಲು ಅದರ ಮೆಟ್ಟಲುಗಳನ್ನು ಹತ್ತುತ್ತಿದ್ದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)33 ಇಸ್ರಾಯೇಲ್ಯರು ಎಂಟನೆಯ ತಿಂಗಳ ಹದಿನೈದನೆಯ ದಿವಸದಲ್ಲಿ ಹಬ್ಬವನ್ನಾಚರಿಸಬೇಕೆಂದು ಯಾರೊಬ್ಬಾಮನು ಸ್ವೇಚ್ಫೆಯಿಂದ ಗೊತ್ತುಮಾಡಿ ಆ ಸಮಯಕ್ಕೆ ತಾನೂ ಬೇತೇಲಿನ ಯಜ್ಞವೇದಿಯ ಬಳಿಗೆ ಹೋಗಿ ಧೂಪಸುಡುವದಕ್ಕಾಗಿ ಅದರ ಮೆಟ್ಲುಗಳನ್ನು ಹತ್ತುತ್ತಿರುವಾಗ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್33 ರಾಜನಾದ ಯಾರೊಬ್ಬಾಮನು ಇಸ್ರೇಲರಿಗೆ ತನ್ನದೇ ಆದ ಹಬ್ಬದ ದಿನವನ್ನು ಆರಿಸಿಕೊಂಡನು. ಅದು ಎಂಟನೆಯ ತಿಂಗಳ ಹದಿನೈದನೆಯ ದಿವಸವಾಗಿತ್ತು. ಆ ಸಮಯದಲ್ಲಿ ಅವನು ತಾನು ನಿರ್ಮಿಸಿದ ಯಜ್ಞವೇದಿಕೆಯ ಮೇಲೆ ಯಜ್ಞಗಳನ್ನು ಮತ್ತು ಧೂಪವನ್ನು ಅರ್ಪಿಸಿದನು. ಇದು ಬೇತೇಲ್ ನಗರದಲ್ಲಿ ನಡೆಯಿತು. ಅಧ್ಯಾಯವನ್ನು ನೋಡಿ |