Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಅರಸುಗಳು 12:20 - ಕನ್ನಡ ಸಮಕಾಲಿಕ ಅನುವಾದ

20 ಇಸ್ರಾಯೇಲರು ಯಾರೊಬ್ಬಾಮನು ತಿರುಗಿ ಬಂದಿದ್ದಾನೆಂದು ಕೇಳಿದಾಗ, ಅವರು ಸಭೆಗೆ ಅವನನ್ನು ಕರೆಕಳುಹಿಸಿ, ಸಮಸ್ತ ಇಸ್ರಾಯೇಲಿನ ಮೇಲೆ ಅವನನ್ನು ಅರಸನನ್ನಾಗಿ ಮಾಡಿದರು. ಯೆಹೂದನ ಗೋತ್ರ ಹೊರತಾಗಿ ದಾವೀದನ ಮನೆಯನ್ನು ಹಿಂಬಾಲಿಸುವವರು ಯಾರೂ ಇರಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 ಯಾರೊಬ್ಬಾಮನು ಹಿಂತಿರುಗಿ ಬಂದಿದ್ದಾನೆಂಬ ವರ್ತಮಾನವು ಇಸ್ರಾಯೇಲರಿಗೆ ತಿಳಿದಾಗ ಅವರೆಲ್ಲರೂ ಅವನನ್ನು ನೆರೆದ ಸಭೆಯ ಮುಂದೆ ಕರೆಯಿಸಿ ತಮ್ಮ ಅರಸನನ್ನಾಗಿ ನೇಮಿಸಿಕೊಂಡರು. ದಾವೀದನ ಕುಟುಂಬದವರನ್ನು ಯೆಹೂದ ಕುಲವೇ ಹೊರತು ಬೇರೆ ಯಾವ ಕುಲವೂ ಹಿಂಬಾಲಿಸಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

20 ಯಾರೊಬ್ಬಾಮನು ಹಿಂದಿರುಗಿ ಬಂದು ಇದ್ದಾನೆಂಬ ಸಮಾಚಾರ ಇಸ್ರಯೇಲರಿಗೆ ಗೊತ್ತಾದಾಗ ಅವರೆಲ್ಲರೂ ಅವನನ್ನು ನೆರೆದ ಸಭೆಯ ಮುಂದೆ ಕರೆಸಿ ತಮ್ಮ ಅರಸನನ್ನಾಗಿ ನೇಮಿಸಿಕೊಂಡರು. ದಾವೀದನ ಕುಟುಂಬದವರನ್ನು ಯೆಹೂದಕುಲವೇ ಹೊರತು ಬೇರೆ ಯಾವ ಕುಲವೂ ಹಿಂಬಾಲಿಸಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

20 ಯಾರೊಬ್ಬಾಮನು ಹಿಂದಿರುಗಿ ಬಂದಿದ್ದಾನೆಂಬ ವರ್ತಮಾನವು ಇಸ್ರಾಯೇಲ್ಯರಿಗೆ ಗೊತ್ತಾದಾಗ ಅವರೆಲ್ಲರೂ ಅವನನ್ನು ನೆರೆದ ಸಭೆಯ ಮುಂದೆ ಕರಿಸಿ ತಮ್ಮ ಅರಸನನ್ನಾಗಿ ನೇವಿುಸಿಕೊಂಡರು. ದಾವೀದನ ಕುಟುಂಬದವರನ್ನು ಯೆಹೂದ ಕುಲವೇ ಹೊರತು ಬೇರೆ ಯಾವ ಕುಲವೂ ಹಿಂಬಾಲಿಸಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

20 ಯಾರೊಬ್ಬಾಮನು ಹಿಂದಿರುಗಿ ಬಂದಿದ್ದಾನೆ ಎಂಬುದು ಇಸ್ರೇಲಿನ ಜನರೆಲ್ಲರಿಗೂ ತಿಳಿಯಿತು. ಅವರು ಅವನನ್ನು ಒಂದು ಸಭೆಗೆ ಕರೆಸಿ, ಅವನನ್ನು ಇಸ್ರೇಲಿನ ರಾಜನನ್ನಾಗಿ ನೇಮಿಸಿದರು. ಯೆಹೂದಕುಲವೊಂದು ಮಾತ್ರ ದಾವೀದನ ಕುಟುಂಬವನ್ನು ಅನುಸರಿಸಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಅರಸುಗಳು 12:20
12 ತಿಳಿವುಗಳ ಹೋಲಿಕೆ  

ಆದರೆ, ನನ್ನ ಸೇವಕ ದಾವೀದನಿಗೋಸ್ಕರವೂ, ಇಸ್ರಾಯೇಲಿನ ಸಮಸ್ತ ಗೋತ್ರಗಳಿಂದ ನಾನು ಆಯ್ದುಕೊಂಡ ಪಟ್ಟಣವಾದ ಯೆರೂಸಲೇಮಿಗೋಸ್ಕರವೂ ಅವನಿಗೆ ಒಂದು ಗೋತ್ರ ಇರುವುದು.


ಇದಲ್ಲದೆ ರಾಜ್ಯವನ್ನೆಲ್ಲಾ ನಾನು ಕಸಿದುಕೊಳ್ಳದೆ ನನ್ನ ಸೇವಕನಾದ ದಾವೀದನಿಗೋಸ್ಕರವಾಗಿಯೂ, ನಾನು ಆಯ್ದುಕೊಂಡ ಯೆರೂಸಲೇಮಿಗೋಸ್ಕರವೂ ನಿನ್ನ ಮಗನಿಗೆ ಒಂದು ಗೋತ್ರವನ್ನು ಕೊಡುವೆನು,” ಎಂದರು.


ಎಫ್ರಾಯೀಮು ಸುಳ್ಳಿನಿಂದ ಮತ್ತು ಇಸ್ರಾಯೇಲಿನ ಮನೆಯವರು ಮೋಸದಿಂದ ನನ್ನನ್ನು ಸುತ್ತಿಕೊಂಡಿದ್ದಾರೆ. ಯೆಹೂದ ಕೂಡ ಪರಿಶುದ್ಧರೂ ನಂಬಿಗಸ್ತರೂ ಆದ ದೇವರ ವಿರುದ್ಧ ಅಶಿಸ್ತಿನಿಂದ ಇದೆ.


ಅವರು ಅರಸರನ್ನು ನೇಮಿಸಿದ್ದಾರೆ. ಆದರೆ ನನ್ನಿಂದಲ್ಲ. ಅವರು ನನ್ನ ಅನುಮತಿಯಿಲ್ಲದೆ ರಾಜಕುಮಾರರನ್ನು ಆಯ್ಕೆ ಮಾಡಿದ್ದಾರೆ. ಅವರು ತಾವು ನಾಶವಾಗುವಂತೆ ತಮ್ಮ ಬೆಳ್ಳಿಯಿಂದಲೂ, ತಮ್ಮ ಬಂಗಾರದಿಂದಲೂ ತಮಗೆ ವಿಗ್ರಹಗಳನ್ನು ಮಾಡಿಕೊಂಡಿದ್ದಾರೆ.


ಆದರೆ ಯೆಹೂದದ ಪಟ್ಟಣಗಳಲ್ಲಿ ವಾಸವಾಗಿರುವ ಇಸ್ರಾಯೇಲರ ಮೇಲೆ ರೆಹಬ್ಬಾಮನು ಆಳಿದನು.


ಅಲ್ಲಿ ನನ್ನ ಹೆಸರನ್ನಿಡಲು ನಾನು ಆದುಕೊಂಡ ಪಟ್ಟಣವಾದ ಯೆರೂಸಲೇಮಿನಲ್ಲಿ ನನ್ನ ಮುಂದೆ ನನ್ನ ಸೇವಕನಾದ ದಾವೀದನಿಗೆ ಎಂದಿಗೂ ಬೆಳಕು ಆರಿಹೋಗದ ಹಾಗೆ, ಅವನ ಮಗನಿಗೆ ಒಂದು ಗೋತ್ರವನ್ನು ಕೊಡುವೆನು.


ಆಗ ಸಮುಯೇಲನು, “ಯೆಹೋವ ದೇವರು ಆಯ್ದುಕೊಂಡವನನ್ನು ನೋಡಿರಿ, ಸಮಸ್ತ ಜನರಿಗೆ ಎಲ್ಲಾ ಜನರಲ್ಲಿ ಇವನಿಗೆ ಸಮಾನವಾದವನು ಯಾವನೂ ಇಲ್ಲವಲ್ಲ,” ಎಂದನು. ಜನರೆಲ್ಲರು ಆರ್ಭಟಿಸಿ, “ಅರಸ ಬಾಳಲಿ,” ಎಂದರು.


ಇದಲ್ಲದೆ, ಅರಸನಾದ ಸೊಲೊಮೋನನಿಗೆ ವಿರೋಧವಾಗಿ ದಂಗೆ ಎದ್ದವರಲ್ಲಿ ಅವನ ಸೇವಕನೂ ಚರೇದ ಪಟ್ಟಣದ ಎಫ್ರಾಯೀಮ್ಯನಾದ ನೆಬಾಟನ ಮಗ ಯಾರೊಬ್ಬಾಮನು ಇದ್ದನು, ಚೆರೂಯಳೆಂಬ ವಿಧವೆಯು ಅವನ ತಾಯಿಯು.


ದೇವರು ಇಸ್ರಾಯೇಲನ್ನು ದಾವೀದನ ಸಂತಾನದಿಂದ ವಿಭಾಗಿಸಿದಾಗ, ಅವರು ನೆಬಾಟನ ಮಗ ಯಾರೊಬ್ಬಾಮನನ್ನು ಅರಸನನ್ನಾಗಿ ಮಾಡಿಕೊಂಡರು. ಆಗ ಯಾರೊಬ್ಬಾಮನು ಇಸ್ರಾಯೇಲನ್ನು ಯೆಹೋವ ದೇವರ ಮಾರ್ಗದಿಂದ ತಪ್ಪಿಸಿ, ಮಹಾ ಪಾಪಮಾಡಲು ಪ್ರೇರೇಪಿಸಿದನು.


ಆಗ ಇಸ್ರಾಯೇಲರೆಲ್ಲರೂ ದಾವೀದನನ್ನು ಬಿಟ್ಟು ಸರಿದು, ಬಿಕ್ರಿಯ ಮಗ ಶೆಬನ ಹಿಂದೆ ಹೋದರು. ಆದರೆ ಯೊರ್ದನಿನಿಂದ ಯೆರೂಸಲೇಮಿನವರೆಗೂ ಇರುವ ಯೆಹೂದ ಜನರು ತಮ್ಮ ಅರಸನನ್ನು ಅಂಟಿಕೊಂಡಿದ್ದರು.


ಆದರೆ ನಾನು ಅವನ ಮಗನ ಕೈಯಿಂದ ರಾಜ್ಯವನ್ನು ತೆಗೆದುಕೊಂಡು, ಅದರಲ್ಲಿ ಹತ್ತು ಗೋತ್ರಗಳನ್ನು ನಿನಗೆ ಕೊಡುವೆನು.


ಇದಲ್ಲದೆ ನಾನು ನಿನ್ನನ್ನು ತೆಗೆದುಕೊಂಡು, ನಿನ್ನ ಪ್ರಾಣವು ಇಚ್ಛಿಸುವುದೆಲ್ಲಾದರಲ್ಲಿ ಅರಸುತನವನ್ನು ನಡೆಸಿ, ಇಸ್ರಾಯೇಲಿನ ಮೇಲೆ ಅರಸನಾಗಿರುವಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು