Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಅರಸುಗಳು 11:37 - ಕನ್ನಡ ಸಮಕಾಲಿಕ ಅನುವಾದ

37 ಇದಲ್ಲದೆ ನಾನು ನಿನ್ನನ್ನು ತೆಗೆದುಕೊಂಡು, ನಿನ್ನ ಪ್ರಾಣವು ಇಚ್ಛಿಸುವುದೆಲ್ಲಾದರಲ್ಲಿ ಅರಸುತನವನ್ನು ನಡೆಸಿ, ಇಸ್ರಾಯೇಲಿನ ಮೇಲೆ ಅರಸನಾಗಿರುವಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

37 ನಾನು ನಿನ್ನನ್ನು ಇಸ್ರಾಯೇಲರ ಅರಸನನ್ನಾಗಿ ನೇಮಿಸುವೆನು. ನೀನು ಅವರನ್ನು ನಿನ್ನ ಇಷ್ಟದ ಪ್ರಕಾರ ಆಳಬಹುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

37 ನಾನು ನಿನ್ನನ್ನು ಇಸ್ರಯೇಲರ ಅರಸನನ್ನಾಗಿ ನೇಮಿಸುವೆನು; ನೀನು ಅವರನ್ನು ಇಷ್ಟದ ಪ್ರಕಾರ ಆಳಬಹುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

37 ನಾನು ನಿನ್ನನ್ನು ಇಸ್ರಾಯೇಲ್ಯರ ಅರಸನನ್ನಾಗಿ ನೇವಿುಸುವೆನು; ನೀನು ಅವರನ್ನು ನಿನ್ನ ಇಷ್ಟದ ಪ್ರಕಾರ ಆಳಬಹುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

37 ನಾನು ನಿನ್ನನ್ನು ಇಡೀ ಇಸ್ರೇಲಿಗೆ ರಾಜನನ್ನಾಗಿ ಮಾಡುತ್ತೇನೆ. ನೀನು ನಿನ್ನ ಇಷ್ಟಾನುಸಾರವಾಗಿ ಪ್ರತಿಯೊಂದರ ಮೇಲೆ ದೊರೆತನ ಮಾಡುವಂತೆ ಮಾಡುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಅರಸುಗಳು 11:37
7 ತಿಳಿವುಗಳ ಹೋಲಿಕೆ  

ಆಗ ಅಬ್ನೇರನು ದಾವೀದನಿಗೆ, “ಸಮಸ್ತ ಇಸ್ರಾಯೇಲರು ನಿನ್ನ ಸಂಗಡ ಒಡಂಬಡಿಕೆಯನ್ನು ಮಾಡುವ ಹಾಗೆಯೂ, ನಿನ್ನ ಪ್ರಾಣವು ಇಚ್ಛೈಸುವ ಹಾಗೆ ಎಲ್ಲರ ಮೇಲೆ ಆಳುವ ಹಾಗೆಯೂ ನಾನು ಎದ್ದು ಹೋಗಿ, ಸಮಸ್ತ ಇಸ್ರಾಯೇಲರನ್ನು ಅರಸನಾದ ನನ್ನ ಒಡೆಯನ ಬಳಿಗೆ ಕೂಡಿಸಿಕೊಂಡು ಬರುವೆನು,” ಎಂದನು. ದಾವೀದನು ಅಬ್ನೇರನಿಗೆ ಅಪ್ಪಣೆ ಕೊಟ್ಟದ್ದರಿಂದ ಅವನು ಸಮಾಧಾನವಾಗಿ ಹೋದನು.


ಇದಲ್ಲದೆ, ಅರಸನಾದ ಸೊಲೊಮೋನನಿಗೆ ವಿರೋಧವಾಗಿ ದಂಗೆ ಎದ್ದವರಲ್ಲಿ ಅವನ ಸೇವಕನೂ ಚರೇದ ಪಟ್ಟಣದ ಎಫ್ರಾಯೀಮ್ಯನಾದ ನೆಬಾಟನ ಮಗ ಯಾರೊಬ್ಬಾಮನು ಇದ್ದನು, ಚೆರೂಯಳೆಂಬ ವಿಧವೆಯು ಅವನ ತಾಯಿಯು.


ಅಲ್ಲಿ ನಿಮ್ಮ ಇಷ್ಟಾನುಸಾರ ದನ, ಕುರಿ, ದ್ರಾಕ್ಷಾರಸ, ಮದ್ಯ, ಮೊದಲಾದವುಗಳನ್ನು ಹಣದಿಂದ ಕೊಂಡುಕೊಂಡು ನೀವೂ, ನಿಮ್ಮ ಮನೆಯವರೂ, ನಿಮ್ಮ ಊರಿನ ಲೇವಿಯರೂ ನಿಮ್ಮ ದೇವರಾದ ಯೆಹೋವ ದೇವರ ಸನ್ನಿಧಿಯಲ್ಲಿ ಊಟಮಾಡಿ, ಸಂತೋಷವಾಗಿರಬೇಕು.


ಅಲ್ಲಿ ನನ್ನ ಹೆಸರನ್ನಿಡಲು ನಾನು ಆದುಕೊಂಡ ಪಟ್ಟಣವಾದ ಯೆರೂಸಲೇಮಿನಲ್ಲಿ ನನ್ನ ಮುಂದೆ ನನ್ನ ಸೇವಕನಾದ ದಾವೀದನಿಗೆ ಎಂದಿಗೂ ಬೆಳಕು ಆರಿಹೋಗದ ಹಾಗೆ, ಅವನ ಮಗನಿಗೆ ಒಂದು ಗೋತ್ರವನ್ನು ಕೊಡುವೆನು.


ನಾನು ನಿನಗೆ ಆಜ್ಞಾಪಿಸಿದ್ದೆಲ್ಲಾ ನೀನು ಕೇಳಿ, ನನ್ನ ಮಾರ್ಗಗಳಲ್ಲಿ ನಡೆದು, ನನ್ನ ಸೇವಕನಾದ ದಾವೀದನು ಮಾಡಿದ ಹಾಗೆ, ನನ್ನ ತೀರ್ಪುಗಳನ್ನೂ, ನನ್ನ ಆಜ್ಞೆಗಳನ್ನೂ ಕೈಗೊಂಡು, ನನ್ನ ದೃಷ್ಟಿಗೆ ಯಥಾರ್ಥವಾದದ್ದನ್ನು ಮಾಡಿದರೆ, ನಾನು ನಿನ್ನ ಸಂಗಡ ಇದ್ದು ದಾವೀದನ ಸಂತಾನದಂತೆ ನಿನ್ನ ಸಂತಾನವನ್ನೂ ಸ್ಥಿರಪಡಿಸಿ, ಇಸ್ರಾಯೇಲನ್ನು ನಿನಗೆ ಕೊಡುವೆನು.


ಇಸ್ರಾಯೇಲರು ಯಾರೊಬ್ಬಾಮನು ತಿರುಗಿ ಬಂದಿದ್ದಾನೆಂದು ಕೇಳಿದಾಗ, ಅವರು ಸಭೆಗೆ ಅವನನ್ನು ಕರೆಕಳುಹಿಸಿ, ಸಮಸ್ತ ಇಸ್ರಾಯೇಲಿನ ಮೇಲೆ ಅವನನ್ನು ಅರಸನನ್ನಾಗಿ ಮಾಡಿದರು. ಯೆಹೂದನ ಗೋತ್ರ ಹೊರತಾಗಿ ದಾವೀದನ ಮನೆಯನ್ನು ಹಿಂಬಾಲಿಸುವವರು ಯಾರೂ ಇರಲಿಲ್ಲ.


ನೀನು ಹೋಗಿ ಯಾರೊಬ್ಬಾಮನಿಗೆ ಹೇಳಬೇಕಾದದ್ದು, ಇಸ್ರಾಯೇಲಿನ ದೇವರಾದ ಯೆಹೋವ ದೇವರು ಹೇಳುವುದೇನೆಂದರೆ, ‘ನಾನು ಜನರೊಳಗಿಂದ ತೆಗೆದು ನಿನ್ನನ್ನು ಹೆಚ್ಚಿಸಿ, ನನ್ನ ಜನರಾದ ಇಸ್ರಾಯೇಲರ ಮೇಲೆ ನಾಯಕನಾಗಿ ಮಾಡಿದೆನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು