Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಅರಸುಗಳು 1:4 - ಕನ್ನಡ ಸಮಕಾಲಿಕ ಅನುವಾದ

4 ಈ ಸೌಂದರ್ಯವತಿಯಾದ ಹುಡುಗಿಯು ಅರಸನ ಆರೈಕೆ ಮಾಡುತ್ತಾ, ಅವನ ಸೇವೆ ಮಾಡುತ್ತಿದ್ದಳು. ಅರಸನು ಅವಳೊಂದಿಗೆ ಸಂಪರ್ಕ ಮಾಡಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಬಹು ಸುಂದರಿಯಾದ ಈಕೆಯು ಅರಸನನ್ನು ಶುಶ್ರೂಷೆ ಮಾಡುವ ಸೇವಕಿಯಾದಳು. ಆದರೆ ಅರಸನು ಈಕೆಯನ್ನು ಸಂಗಮಿಸಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ಬಹಳ ಚೆಲುವೆ ಆದ ಆಕೆ ಅರಸನನ್ನು ಶುಶ್ರೂಷೆ ಮಾಡುವ ದಾದಿಯಾದಳು. ಆದರೆ ಅರಸ ಅಬೀಷಗಳನ್ನು ಕೂಡಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ಬಹು ಸುಂದರಿಯಾದ ಈಕೆಯು ಅರಸನನ್ನು ಪರಾಂಬರಿಸುವ ಸೇವಕಿಯಾದಳು. ಅರಸನು ಈಕೆಯನ್ನು ಸಂಗವಿುಸಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಆ ಯುವತಿಯು ಬಹಳ ಸೌಂದರ್ಯವತಿಯಾಗಿದ್ದಳು. ಅವಳು ರಾಜನ ಆರೈಕೆಯನ್ನು ಮಾಡಿದಳು ಮತ್ತು ಅವನ ಸೇವೆಯನ್ನೂ ಮಾಡಿದಳು. ರಾಜನಾದ ದಾವೀದನು ಅವಳನ್ನು ಕೂಡಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಅರಸುಗಳು 1:4
6 ತಿಳಿವುಗಳ ಹೋಲಿಕೆ  

ಆದರೆ ಅವಳು ಮಗನನ್ನು ಹೆರುವತನಕ ಯೋಸೇಫನು ಆಕೆಯೊಂದಿಗೆ ದಾಂಪತ್ಯ ಜೀವನ ಮಾಡಲಿಲ್ಲ. ಯೋಸೇಫನು ಆ ಮಗುವಿಗೆ “ಯೇಸು” ಎಂದು ಹೆಸರಿಟ್ಟನು.


ಹಾಗೆಯೇ ಅವರು ಸೌಂದರ್ಯವತಿಯಾದ ಹುಡುಗಿಗೋಸ್ಕರ ಇಸ್ರಾಯೇಲಿನ ಮೇರೆಗಳಲ್ಲೆಲ್ಲಾ ಹುಡುಕಿ, ಶೂನೇಮ್ಯಳಾದ ಅಬೀಷಗ್ ಎಂಬವಳನ್ನು ಕಂಡುಕೊಂಡು, ಅವಳನ್ನು ಅರಸನ ಬಳಿಗೆ ತಂದರು.


ಆಗ ಹಗ್ಗೀತಳ ಮಗನಾದ ಅದೋನೀಯನು ತನ್ನನ್ನು ಹೆಚ್ಚಿಸಿಕೊಂಡು, “ನಾನು ಅರಸನಾಗಿರಬೇಕು,” ಎಂದುಕೊಂಡು, ತನಗೋಸ್ಕರ ರಥಗಳನ್ನೂ, ಸಾರಥಿಯರನ್ನೂ, ತನ್ನ ಮುಂದೆ ಓಡುವುದಕ್ಕೆ ಐವತ್ತು ಮಂದಿ ಪುರುಷರನ್ನೂ ಸಿದ್ಧಮಾಡಿದನು.


ಆಗ ಅವನು, “ನೀನು ದಯಮಾಡಿ ಅರಸನಾದ ಸೊಲೊಮೋನನು ಶೂನೇಮ್ಯಳಾದ ಅಬೀಷಗಳನ್ನು ನನಗೆ ಹೆಂಡತಿಯಾಗಿ ಕೊಡಲು ಅವನನ್ನು ಕೇಳು. ಏಕೆಂದರೆ ಅವನು ನಿನಗೆ ಆಗುವುದಿಲ್ಲವೆಂದು ಹೇಳುವುದಿಲ್ಲ,” ಎಂದನು.


ಅದಕ್ಕವಳು, “ಶೂನೇಮ್ಯಳಾದ ಅಬೀಷಗಳನ್ನು ನಿನ್ನ ಅಣ್ಣ ಅದೋನೀಯನಿಗೆ ಹೆಂಡತಿಯಾಗಲು ಅಪ್ಪಣೆಯಾಗಲಿ,” ಎಂದಳು.


ಅವನು ಈಜಿಪ್ಟನ್ನು ಸಮೀಪಿಸುತ್ತಿದ್ದಾಗ, ತನ್ನ ಹೆಂಡತಿ ಸಾರಯಳಿಗೆ, “ನೀನು ನೋಡುವುದಕ್ಕೆ ರೂಪವತಿಯೆಂದು ನನಗೆ ತಿಳಿದಿದೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು