Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಅರಸುಗಳು 1:35 - ಕನ್ನಡ ಸಮಕಾಲಿಕ ಅನುವಾದ

35 ಆಗ ಅವನು ಬಂದು ನನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳುವ ಹಾಗೆ, ನೀವು ಅವನ ಹಿಂದೆ ಬನ್ನಿರಿ. ಏಕೆಂದರೆ ಅವನು ನನಗೆ ಬದಲಾಗಿ ಅರಸನಾಗಿರುವನು. ಇಸ್ರಾಯೇಲಿನ ಮೇಲೆಯೂ, ಯೆಹೂದದ ಮೇಲೆಯೂ, ನಾಯಕನಾಗಿರಲು ನಾನು ಅವನನ್ನು ನೇಮಿಸಿದ್ದೇನೆ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

35 ಆಮೇಲೆ ನೀವು ಅವನ ಹಿಂದೆ ಬನ್ನಿರಿ. ಅವನು ಅರಮನೆಯನ್ನು ಪ್ರವೇಶಿಸಿ ನನ್ನ ಸಿಂಹಾಸನದ ಮೇಲೆ ಕುಳಿತುಕೊಂಡು ನನಗೆ ಬದಲಾಗಿ ಆಳಬೇಕು. ನಾನು ಇಸ್ರಾಯೇಲರ ಮತ್ತು ಯೆಹೂದ್ಯರನ್ನು ಆಳಲು ಅವನನ್ನೇ ಪ್ರಭುವನ್ನಾಗಿ ನೇಮಿಸಿದ್ದೇನೆ” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

35 ಆಮೇಲೆ ನೀವು ಅವನ ಹಿಂದೆ ಬನ್ನಿ; ಅವನು ಅರಮನೆಯನ್ನು ಪ್ರವೇಶಿಸಿ ನನ್ನ ಸಿಂಹಾಸನದ ಮೇಲೆ ಕುಳಿತುಕೊಂಡು ನನಗೆ ಬದಲಾಗಿ ಆಳಬೇಕು. ನಾನು ಇಸ್ರಯೇಲರ ಮತ್ತು ಯೆಹೂದ್ಯರ ಮೇಲೆ ಅವನನ್ನೇ ಅಧಿಪತಿಯನ್ನಾಗಿ ನೇಮಿಸಿದ್ದೇನೆ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

35 ಆಮೇಲೆ ನೀವು ಅವನ ಹಿಂದೆ ಬನ್ನಿರಿ; ಅವನು ಅರಮನೆಯನ್ನು ಪ್ರವೇಶಿಸಿ ನನ್ನ ಸಿಂಹಾಸನದ ಮೇಲೆ ಕೂತುಕೊಂಡು ನನಗೆ ಬದಲಾಗಿ ಆಳಬೇಕು. ನಾನು ಇಸ್ರಾಯೇಲ್ಯರ ಮತ್ತು ಯೆಹೂದ್ಯರ ಮೇಲೆ ಅವನನ್ನೇ ಪ್ರಭುವನ್ನಾಗಿ ನೇವಿುಸಿದ್ದೇನೆ ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

35 ನಂತರ ಅವನೊಂದಿಗೆ ಹಿಂದಿರುಗಿ ಇಲ್ಲಿಗೆ ಬನ್ನಿ. ಸೊಲೊಮೋನನು ನನ್ನ ಸಿಂಹಾಸನದ ಮೇಲೆ ಕುಳಿತುಕೊಂಡು ಹೊಸ ರಾಜನಾಗಿ ರಾಜ್ಯಭಾರ ಮಾಡಲಿ. ನಾನು ಸೊಲೊಮೋನನನ್ನು ಇಸ್ರೇಲಿನ ಮತ್ತು ಯೆಹೂದದ ರಾಜನನ್ನಾಗಿ ಆರಿಸಿದ್ದೇನೆ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಅರಸುಗಳು 1:35
11 ತಿಳಿವುಗಳ ಹೋಲಿಕೆ  

“ನಾನು ನನ್ನ ಅರಸನನ್ನು ನನ್ನ ಪರಿಶುದ್ಧ ಪರ್ವತವಾದ ಚೀಯೋನಿನ ಮೇಲೆ ಸ್ಥಾಪಿಸಿದ್ದೇನೆ.”


ದಾವೀದನು ಮುದುಕನಾದ ಮೇಲೆ ತನ್ನ ಮಗ ಸೊಲೊಮೋನನನ್ನು ಇಸ್ರಾಯೇಲಿನ ಮೇಲೆ ಅರಸನಾಗಿ ಮಾಡಿದನು.


ಆಗ ಅವನು, “ರಾಜ್ಯವು ನನ್ನದಾಗಿತ್ತೆಂದೂ, ನಾನು ಆಳುವ ಸಮಸ್ತ ಇಸ್ರಾಯೇಲರು ನನ್ನ ಮೇಲೆ ಕಣ್ಣಿಟ್ಟಿದ್ದರೆಂದೂ ನೀನು ಬಲ್ಲೆ. ಆದರೆ ಎಲ್ಲವೂ ಬದಲಾಗಿ, ರಾಜ್ಯವು ನನ್ನ ಸಹೋದರನಿಗೆ ದೊರಕಿತು. ಏಕೆಂದರೆ ಅದು ಅವನಿಗೆ ಯೆಹೋವ ದೇವರಿಂದ ಉಂಟಾಯಿತು.


ಆಗ ಸೊಲೊಮೋನನು ತನ್ನ ತಂದೆಯಾದ ದಾವೀದನ ಸಿಂಹಾಸನದ ಮೇಲೆ ಕುಳಿತನು. ಅವನ ರಾಜ್ಯವು ಬಹು ಸ್ಥಿರವಾಗಿತ್ತು.


ಆಕೆಯು ಅರಸನಿಗೆ, “ನನ್ನ ಒಡೆಯನೇ, ನಿಶ್ಚಯವಾಗಿ ನಿನ್ನ ಮಗ ಸೊಲೊಮೋನನು ಆಳುವನೆಂದೂ, ಅವನು ನಿನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳುವನೆಂದೂ, ನೀವು ನಿನ್ನ ದಾಸಿಗೆ ನಿನ್ನ ದೇವರಾದ ಯೆಹೋವ ದೇವರ ಹೆಸರಿನಲ್ಲಿ ಪ್ರಮಾಣ ಮಾಡಿದಿರಿ.


ನೀನು ಅರಸನಾದ ದಾವೀದನ ಬಳಿಗೆ ಹೋಗಿ ಅವನಿಗೆ, ‘ಅರಸನಾದ ನನ್ನ ಒಡೆಯನೇ, “ನಿಶ್ಚಯವಾಗಿ ನನ್ನ ತರುವಾಯ ನಿನ್ನ ಮಗನಾದ ಸೊಲೊಮೋನನು ಆಳುವನೆಂದೂ, ಅವನು ನನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳುವನೆಂದೂ,” ನೀವು ನಿನ್ನ ದಾಸಿಗೆ ಆಣೆ ಇಟ್ಟು ಹೇಳಲಿಲ್ಲವೋ? ಹೀಗಿರಲಾಗಿ ಅದೋನೀಯನು ಆಳುವುದು ಏಕೆ?’ ಎಂದು ಕೇಳು.


ಅಲ್ಲಿ ಯಾಜಕನಾದ ಚಾದೋಕನೂ, ಪ್ರವಾದಿಯಾದ ನಾತಾನನೂ ಅವನನ್ನು ಇಸ್ರಾಯೇಲಿನ ಮೇಲೆ ಅರಸನಾಗಿರಲು ಅಭಿಷೇಕಿಸಲಿ. ತುತೂರಿಯನ್ನು ಊದಿ, ‘ಅರಸ ಸೊಲೊಮೋನನು ಚಿರಂಜೀವಿಯಾಗಿರಲಿ!’ ಎಂದು ಘೋಷಿಸಿರಿ.


ಯೆಹೋಯಾದಾವನ ಮಗ ಬೆನಾಯನು ಅರಸನಿಗೆ ಉತ್ತರವಾಗಿ, “ಆಮೆನ್, ಅರಸನಾದ ನನ್ನ ಒಡೆಯನ ದೇವರಾದ ಯೆಹೋವ ದೇವರು ಹಾಗೆಯೇ ಹೇಳಲಿ.


ಆಗ ಸೊಲೊಮೋನನು ತನ್ನ ತಂದೆಯಾದ ದಾವೀದನಿಗೆ ಬದಲಾಗಿ ಅರಸನಾಗಿ, ಯೆಹೋವ ದೇವರ ಸಿಂಹಾಸನದ ಮೇಲೆ ಕುಳಿತುಕೊಂಡು, ಸಮೃದ್ಧಿ ಹೊಂದಿದನು. ಸಮಸ್ತ ಇಸ್ರಾಯೇಲರು ಅವನಿಗೆ ವಿಧೇಯರಾದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು