Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಅರಸುಗಳು 1:29 - ಕನ್ನಡ ಸಮಕಾಲಿಕ ಅನುವಾದ

29 ಅರಸನು ಆಕೆಗೆ, “ನಿಶ್ಚಯವಾಗಿ, ನಿನ್ನ ಮಗ ಸೊಲೊಮೋನನು ನನ್ನ ತರುವಾಯ ಆಳುವನೆಂದೂ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

29 ಅರಸನು ಆಕೆಗೆ, “ನನ್ನ ಪ್ರಾಣವನ್ನು ಎಲ್ಲಾ ಇಕ್ಕಟ್ಟುಗಳಿಂದ ಬಿಡಿಸಿ ಕಾಪಾಡಿದ ಯೆಹೋವನಾಣೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

29 “ನನ್ನ ಪ್ರಾಣವನ್ನು ಎಲ್ಲಾ ಇಕ್ಕಟ್ಟುಗಳಿಂದ ಬಿಡಿಸಿ ಕಾಪಾಡಿದ ಸರ್ವೇಶ್ವರನಾಣೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

29 ನನ್ನ ಪ್ರಾಣವನ್ನು ಎಲ್ಲಾ ಇಕ್ಕಟ್ಟುಗಳಿಂದ ಬಿಡಿಸಿ ಕಾಪಾಡಿದ ಯೆಹೋವನಾಣೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

29 ಆಗ ರಾಜನು ಈ ಪ್ರಮಾಣವನ್ನು ಮಾಡಿದನು: “ದೇವರಾದ ಯೆಹೋವನು ನನ್ನನ್ನು ಎಲ್ಲಾ ತೊಂದರೆಗಳಿಂದ ರಕ್ಷಿಸಿದನು. ದೇವರಾಣೆಯಾಗಿಯೂ ನಾನು ನಿನಗೆ ಈ ಪ್ರಮಾಣವನ್ನು ಮಾಡುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಅರಸುಗಳು 1:29
19 ತಿಳಿವುಗಳ ಹೋಲಿಕೆ  

ಆಗ ದಾವೀದನು ಬೇರೋತಿನ ರಿಮ್ಮೋನನ ಮಕ್ಕಳಾದ ರೇಕಾಬನಿಗೂ, ಅವನ ಸಹೋದರ ಬಾಣನಿಗೂ ಉತ್ತರವಾಗಿ, “ಎಲ್ಲಾ ಇಕ್ಕಟ್ಟಿನಿಂದ ನನ್ನ ಪ್ರಾಣವನ್ನು ವಿಮೋಚಿಸಿದ ಯೆಹೋವ ದೇವರ ಜೀವದಾಣೆ,


ನಮ್ಮ ವೈರಿಗಳಿಂದ ನಮ್ಮನ್ನು ಬಿಡಿಸಿದರು; ದೇವರ ಪ್ರೀತಿಯು ಎಂದೆಂದಿಗೂ ಇರುವುದು.


ನಾನು ಕಷ್ಟದ ಮಧ್ಯದಲ್ಲಿ ನಡೆದಾಗ್ಯೂ, ನೀವು ನನ್ನನ್ನು ಬದುಕಿಸಿ, ನನ್ನ ಶತ್ರುಗಳ ಕೋಪಕ್ಕೆ ವಿರೋಧವಾಗಿ ನಿಮ್ಮ ಕೈಯನ್ನು ಚಾಚಿದ್ದೀರಿ; ನಿಮ್ಮ ಬಲಗೈಯಿಂದ ನನ್ನನ್ನು ರಕ್ಷಿಸಿದ್ದೀರಿ.


ಮೋಸ ದಬ್ಬಾಳಿಕೆಯಿಂದ ಜನರನ್ನು ಬಿಡುಗಡೆ ಮಾಡುವನು. ಜನರ ಜೀವವು ಆತನ ದೃಷ್ಟಿಯಲ್ಲಿ ಅಮೂಲ್ಯವಾಗಿರುವುದು.


ದೇವರ ಮನುಷ್ಯನಾದ ಎಲೀಷನ ಸೇವಕನಾಗಿರುವ ಗೇಹಜಿಯು, “ನನ್ನ ಯಜಮಾನನು ಈ ಅರಾಮ್ಯನಾದ ನಾಮಾನನು ತೆಗೆದುಕೊಂಡು ಬಂದದ್ದನ್ನು ಅವನ ಕೈಯಿಂದ ತೆಗೆದುಕೊಳ್ಳದೆ ಸುಮ್ಮನೆ ಕಳುಹಿಸಿದ್ದಾನೆ. ಆದರೆ ಯೆಹೋವ ದೇವರ ಜೀವದಾಣೆ, ನಾನು ಅವನ ಹಿಂದೆ ಓಡಿಹೋಗಿ, ಅವನ ಕೈಯಿಂದ ಏನಾದರೂ ತೆಗೆದುಕೊಳ್ಳುವೆನು,” ಅಂದುಕೊಂಡನು.


ಆದರೆ ಪ್ರವಾದಿಯು, “ನಾನು ಯಾರ ಮುಂದೆ ನಿಲ್ಲುತ್ತೇನೋ ಆ ಯೆಹೋವ ದೇವರ ಜೀವದಾಣೆ, ನಾನು ಏನೂ ತೆಗೆದುಕೊಳ್ಳುವುದಿಲ್ಲ,” ಎಂದನು. ಅವನು ತೆಗೆದುಕೊಳ್ಳಬೇಕೆಂದು ಬಲವಂತ ಮಾಡಿದರೂ, “ಬೇಡ,” ಎಂದನು.


ಆದರೆ ಹುಡುಗನ ತಾಯಿಯು, “ಯೆಹೋವ ದೇವರ ಜೀವದಾಣೆ, ನಿನ್ನ ಜೀವದಾಣೆ, ನಾನು ನಿನ್ನನ್ನು ಬಿಡುವುದಿಲ್ಲ,” ಎಂದಳು. ಆಗ ಅವನೆದ್ದು ಅವಳ ಹಿಂದೆ ಹೋದನು.


ನಿನ್ನ ದೇವರಾದ ಯೆಹೋವ ದೇವರ ಜೀವದಾಣೆ, ನನ್ನ ಯಜಮಾನನು ನಿನ್ನನ್ನು ಹುಡುಕಲು ಕಳುಹಿಸದ ಜನಾಂಗವೂ, ರಾಜ್ಯವೂ ಒಂದೂ ಇಲ್ಲ. ಅವರು, ‘ಎಲೀಯನು ನಮ್ಮಲ್ಲಿ ಇಲ್ಲ,’ ಎಂದು ಹೇಳಿದಾಗ, ಅಹಾಬನು ಆ ರಾಜ್ಯಕ್ಕೂ, ಜನಾಂಗಕ್ಕೂ ಆಣೆ ಇಡಿಸಿಕೊಂಡನು.


ಗಿಲ್ಯಾದಿನ ಪ್ರವಾಸಿಗಳಲ್ಲಿ ತಿಷ್ಬೀಯ ಊರಿನವನಾದ ಎಲೀಯನು ಅಹಾಬನಿಗೆ, “ನಾನು ಸನ್ನಿಧಿಸೇವೆ ಮಾಡುತ್ತಿರುವ ಇಸ್ರಾಯೇಲ್ ದೇವರಾದ ಯೆಹೋವ ದೇವರ ಜೀವದಾಣೆ, ನನ್ನ ಮಾತಿನ ಪ್ರಕಾರ ಸೂಚಿಸಿದ ಹೊರತು ಇಂದಿನಿಂದ ಕೆಲವು ವರ್ಷಗಳವರೆಗೆ ಮಂಜಾಗಲಿ ಅಥವಾ ಮಳೆಯಾಗಲಿ ಬೀಳುವುದಿಲ್ಲ,” ಎಂದನು.


“ಹಾಗಾದರೆ ನನ್ನನ್ನು ಸ್ಥಿರಪಡಿಸಿ, ನನ್ನ ತಂದೆ ದಾವೀದನ ಸಿಂಹಾಸನದ ಮೇಲೆ ನನ್ನನ್ನು ಕೂಡಿಸಿ, ತಾವು ಮಾತುಕೊಟ್ಟ ಪ್ರಕಾರ ನನಗೆ ಮನೆತನ ಕಟ್ಟಿಸಿದ ಯೆಹೋವ ದೇವರ ಜೀವದಾಣೆ, ಈ ಹೊತ್ತು ಅದೋನೀಯನು ಸಾಯಬೇಕು,” ಎಂದನು.


ಆಗ ದಾವೀದನು ಆ ಮನುಷ್ಯನ ಮೇಲೆ ಬಹಳ ಕೋಪಿಸಿಕೊಂಡು ನಾತಾನನಿಗೆ, “ಯೆಹೋವ ದೇವರ ಜೀವದಾಣೆ, ಇದನ್ನು ಮಾಡಿದ ಆ ಮನುಷ್ಯನು ನಿಜವಾಗಿಯೂ ಸಾಯಬೇಕು.


ಅನಂತರ ಹುಡುಗನನ್ನು ಕಳುಹಿಸಿ, ‘ಆ ಬಾಣಗಳನ್ನು ಹುಡುಕಿಕೊಂಡು ಬಾ,’ ಎಂದು ಹೇಳುವೆನು. ‘ಆ ಬಾಣಗಳು ನಿನಗೆ ಈಚೆ ಬಿದ್ದಿವೆ, ಅವುಗಳನ್ನು ತೆಗೆದುಕೊಂಡು ಬಾ,’ ಎಂದು ನಾನು ಹುಡುಗನಿಗೆ ಹೇಳಿದರೆ, ನೀನು ಬರಬಹುದು. ಏಕೆಂದರೆ ಯೆಹೋವ ದೇವರಾಣೆ, ನಿನಗೆ ಕೇಡಿಲ್ಲದೆ ಸಮಾಧಾನವಿರುವುದು.


ಆಗ ಸೌಲನು ಯೋನಾತಾನನ ಮಾತನ್ನು ಕೇಳಿ, “ಯೆಹೋವ ದೇವರಾಣೆ ಅವನು ಕೊಲೆಯಾಗುವುದಿಲ್ಲ,” ಎಂದನು.


ಆದರೆ ಜನರು ಸೌಲನಿಗೆ, “ಇಸ್ರಾಯೇಲಿನಲ್ಲಿ ಈ ದೊಡ್ಡ ರಕ್ಷಣೆಯನ್ನುಂಟುಮಾಡಿದ ಯೋನಾತಾನನು ಸಾಯಬೇಕೋ? ಎಂದಿಗೂ ಇಲ್ಲ. ಯೆಹೋವ ದೇವರ ಜೀವದಾಣೆ, ಇದನ್ನು ಅವನು ದೇವರ ಸಹಾಯದಿಂದ ಮಾಡಿದ್ದರಿಂದ, ಅವನ ಒಂದು ಕೂದಲು ನೆಲಕ್ಕೆ ಬೀಳಬಾರದು,” ಎಂದು ಹೇಳಿ ಯೋನಾತಾನನು ಸಾಯದ ಹಾಗೆ ಪ್ರಾಯಶ್ಚಿತ್ತವನ್ನು ಮಾಡಿ ಬಿಡಿಸಿಕೊಂಡರು.


ಏಕೆಂದರೆ ನನ್ನ ಪುತ್ರನಾದ ಯೋನಾತಾನನಿಂದಾದರೂ ಉಂಟಾಗಿದ್ದರೆ, ಅವನು ಸತ್ತೇ ಸಾಯುವನೆಂದು ಇಸ್ರಾಯೇಲರನ್ನು ರಕ್ಷಿಸುವ ಯೆಹೋವ ದೇವರ ಮೇಲೆ ಆಣೆ ಇಟ್ಟು ಹೇಳುತ್ತೇನೆ,” ಎಂದನು. ಆದರೆ ಸಮಸ್ತ ಜನರಲ್ಲಿ ಒಬ್ಬನಾದರೂ ಅವನಿಗೆ ಉತ್ತರ ಕೊಡಲಿಲ್ಲ.


ಅದಕ್ಕವನು, “ಅವರು ನನ್ನ ತಾಯಿಯ ಮಕ್ಕಳು, ನನ್ನ ಸಹೋದರರು. ಯೆಹೋವ ದೇವರ ಜೀವದ ಆಣೆ ನೀವು ಅವರನ್ನು ಬದುಕಿಸಿದ್ದರೆ ನಿಮ್ಮನ್ನು ಕೊಲ್ಲುತ್ತಿರಲಿಲ್ಲ,” ಎಂದನು.


ಎಲ್ಲಾ ಕೇಡಿನಿಂದ ನನ್ನನ್ನು ತಪ್ಪಿಸಿದ ಆ ದೇವರ ದೂತ, ಈ ಹುಡುಗರನ್ನು ಆಶೀರ್ವದಿಸಲಿ. ನನ್ನ ಹೆಸರಿನಿಂದಲೂ, ನನ್ನ ಪಿತೃಗಳಾದ ಅಬ್ರಹಾಮ, ಇಸಾಕರ ಹೆಸರಿನಿಂದಲೂ ಅವರು ಮುಂದುವರೆಯಲಿ. ಭೂಮಿಯ ಮೇಲೆ ಸಮೂಹವಾಗಿ ಹೆಚ್ಚಲಿ.”


ಆಗ ಅರಸನಾದ ದಾವೀದನು ಉತ್ತರವಾಗಿ, “ಬತ್ಷೆಬೆಳನ್ನು ನನ್ನ ಬಳಿಗೆ ಕರೆಯಿರಿ,” ಎಂದನು. ಅವಳು ಅರಸನ ಸನ್ನಿಧಾನಕ್ಕೆ ಬಂದು ಅರಸನ ಮುಂದೆ ನಿಂತಳು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು