Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಹೋಶೇಯ 9:11 - ಕನ್ನಡ ಸತ್ಯವೇದವು J.V. (BSI)

11 ಎಫ್ರಾಯೀಮ್ಯರ ಮಹಿಮೆಯು ಪಕ್ಷಿಯಂತೆ ಹಾರಿಹೋಗುವದು; ಯಾರೂ ಹೆರರು, ಗರ್ಭಿಣಿಯಾಗಿರರು, ಗರ್ಭಧರಿಸರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಎಫ್ರಾಯೀಮ್ಯರ ಮಹಿಮೆಯು ಪಕ್ಷಿಯಂತೆ ಹಾರಿಹೋಗುವುದು; ಯಾರೂ ಹೆರರು, ಗರ್ಭಿಣಿಯಾಗುವುದಿಲ್ಲ, ಗರ್ಭಧರಿಸರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 ಎಫ್ರಯಿಮರ ಮಹಿಮೆ ಪಕ್ಷಿಯಂತೆ ಹಾರಿಹೋಗುವುದು. ಅಲ್ಲಿ ಯಾರೂ ಮಕ್ಕಳನ್ನು ಹೆರುವುದಿಲ್ಲ; ಯಾರೂ ಗರ್ಭಿಣಿಯಾಗುವುದಿಲ್ಲ; ಯಾರೂ ಗರ್ಭ ಧರಿಸುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 “ಎಫ್ರಾಯೀಮ್ಯರ ಮಹಿಮೆಯು ಪಕ್ಷಿಯಂತೆ ಹಾರಿ ಹೋಗುವದು. ಅವರಲ್ಲಿ ಗರ್ಭಿಣಿಯರು ಇರುವದಿಲ್ಲ. ಹೆರುವದೂ ಇಲ್ಲ. ಶಿಶುಗಳೂ ಇರುವದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 ಎಫ್ರಾಯೀಮ್ ಘನತೆಯು ಪಕ್ಷಿಯಂತೆ ಹಾರಿಹೋಗುವುದು. ಜನನವಿಲ್ಲ, ಗರ್ಭಧಾರಣೆ ಇಲ್ಲ, ಪ್ರಸವವಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಹೋಶೇಯ 9:11
18 ತಿಳಿವುಗಳ ಹೋಲಿಕೆ  

ಸಮಾರ್ಯದ ನಿವಾಸಿಗಳು ಬೇತಾವೆನಿನ ಬಸವನ ವಿಷಯದಲ್ಲಿ ದಿಗಿಲುಪಡುವರು; ಅದರ ಭಕ್ತಜನರು ಅದಕ್ಕಾಗಿ ಎದೆಬಡಿದುಕೊಳ್ಳುವರು; ಅದರ ಮಹಿಮೆಯು ಅದರಿಂದ ತೊಲಗಿತಲ್ಲಾ ಎಂದು ಅದರ ಪೂಜಾರಿಗಳು ಅದಕ್ಕಾಗಿ ನಡುಗುವರು.


(ಯೆಹೋವನೇ, ಅವರಿಗೆ ತಕ್ಕ ಗತಿಯನ್ನು ವಿಧಿಸು; ಏನು ವಿಧಿಸುತ್ತಿಯೋ? ಅವರಿಗೆ ಗರ್ಭಸ್ರಾವವನ್ನು ಮಾಡು, ಮೊಲೆಯನ್ನು ಬತ್ತಿಸು.)


ಅವರು ಹೆಚ್ಚಿದ ಹಾಗೆಲ್ಲಾ ನನಗೆ ಹೆಚ್ಚೆಚ್ಚಾಗಿ ಪಾಪಮಾಡುತ್ತಾ ಬಂದರು; ನಾನು ಅವರ ಮಾನವನ್ನು ಅವಮಾನಕ್ಕೆ ಮಾರ್ಪಡಿಸುವೆನು.


ನಿಮ್ಮ ಸಂತಾನ ವ್ಯವಸಾಯಗಳಿಗೂ ದನಕುರಿಗಳಿಗೂ ಅಶುಭವುಂಟಾಗುವದು.


ಯಾಕಂದರೆ ಬಂಜೆಯರೂ ಬಸುರಾಗದವರೂ ಮೊಲೆಕುಡಿಸದವರೂ ಧನ್ಯರು ಎಂದು ಜನರು ಹೇಳುವ ದಿವಸಗಳು ಬರುತ್ತವೆ.


ಯೆಹೋವನು ಇಂತೆನ್ನುತ್ತಾನೆ - ಅಮ್ಮೋನ್ಯರು ಮೂರು ಹೌದು ನಾಲ್ಕು ದ್ರೋಹಗಳನ್ನು ಮಾಡಿದ್ದರಿಂದ ಅವರಿಗಾಗುವ ದಂಡನೆಯನ್ನು ನಾನು ತಪ್ಪಿಸುವದೇ ಇಲ್ಲ; ಅವರು ತಮ್ಮ ದೇಶವನ್ನು ವಿಸ್ತರಿಸಬೇಕೆಂದು ಗಿಲ್ಯಾದಿನ ಗರ್ಭಿಣಿಯರ ಹೊಟ್ಟೆಯನ್ನು ಸೀಳಿಬಿಟ್ಟರಷ್ಟೆ.


ನೂರಾರು ಮಕ್ಕಳನ್ನು ಪಡೆದು ಮುಪ್ಪಿನ ಮುದುಕನಾಗುವ ತನಕ ಬಹು ವರುಷ ಬದುಕಿದವನಿಗೆ ಸುಖ ತೃಪ್ತಿಯೂ ಉತ್ತರಕ್ರಿಯೆಯೂ ಇಲ್ಲದಿದ್ದರೆ ಇವನಿಗಿಂತಲೂ ಗರ್ಭಸ್ರಾವದ ಪಿಂಡವೇ ಉತ್ತಮ ಅಂದುಕೊಂಡೆನು.


ಒಣಗಿ ಸತ್ತ ಬಸವನಹುಳದಂತೆ ನಿರ್ನಾಮವಾಗಲಿ; ಗರ್ಭವಿಳಿದ ಪಿಂಡದಂತೆ ಸೂರ್ಯನನ್ನು ನೋಡದೆ ಹೋಗಲಿ.


ಹೇಗಾದರೂ ದುಷ್ಟನ ದೀಪವು ಆರುವದು, ಅವನ ಒಲೆಯು ಉರಿಯುವದಿಲ್ಲ.


ಯೋಸೇಫನ ಜ್ಯೇಷ್ಠಸಂತತಿಯವರು ಗೂಳಿಯೋಪಾದಿಯಲ್ಲಿ ಗಾಂಭೀರ್ಯವುಳ್ಳವರು; ಅವರ ಕೊಂಬುಗಳು ಕಾಡುಕೋಣದ ಕೊಂಬುಗಳಷ್ಟು [ಬಲವುಳ್ಳವು]; ಅವುಗಳಿಂದ ಭೂಮಂಡಲದ ಜನಾಂಗಗಳನ್ನೆಲ್ಲಾ ಇರಿದು ಓಡಿಸುವರು. ಎಫ್ರಾಯೀಮ್ ಕುಲದ ಕೋಟ್ಯಾಂತರ ಜನರೂ ಮನಸ್ಸೆಕುಲದ ಲಕ್ಷಾಂತರ ಮಂದಿಯೂ ಇಂಥವರೇ.


ಯೋಸೇಫನು ಬಹುಫಲವನ್ನು ಬಿಡುವ ವೃಕ್ಷಕ್ಕೆ ಸಮಾನನಾಗಿದ್ದಾನೆ, ಒರತೆಯ ಬಳಿಯಲ್ಲಿ ಬೆಳೆದು ರೆಂಬೆಗಳನ್ನು ಗೋಡೆಯ ಆಚೆಗೆ ಚಾಚಿರುವ ಫಲವೃಕ್ಷದಂತಿದ್ದಾನೆ.


ಎರಡನೆಯ ಮಗನು ಹುಟ್ಟಿದಾಗ ಅವನು - ನನಗೆ ಸಂಕಟ ಬಂದ ದೇಶದಲ್ಲೇ ದೇವರು ಅಭಿವೃದ್ಧಿಯನ್ನು ದಯಪಾಲಿಸಿದ್ದಾನೆಂದು ಹೇಳಿ ಆ ಮಗನಿಗೆ ಎಫ್ರಾಯೀಮ್ ಎಂದು ಹೆಸರಿಟ್ಟನು.


ಎಫ್ರಾಯೀವಿುಗೆ ರಕ್ಷಣೆಯಾಗಿರುವ ಕೋಟೆಯೂ ದಮಸ್ಕವು ನಡಿಸುವ ರಾಜ್ಯಾಧಿಕಾರವೂ ಇಲ್ಲವಾಗುವವು; ಅರಾಮ್ಯರಲ್ಲಿ ಉಳಿದವರಿಗೆ ಇಸ್ರಾಯೇಲ್ಯರ ಮಹಿಮೆಯ ಗತಿಯಾಗುವದು ಎಂಬದು ಸೇನಾಧೀಶ್ವರನಾದ ಯೆಹೋವನ ನುಡಿ.


ಬೆನ್ಯಾಮೀನೇ, ಹಿಂದೆ ನೋಡು! ಖಂಡನೆಯ ದಿನದಲ್ಲಿ ಎಫ್ರಾಯೀಮು ಹಾಳಾಗುವದು; ಇಸ್ರಾಯೇಲ್ ಕುಲಗಳ ಭವಿಷ್ಯತ್ತಿನ ನಿಶ್ಚಯವನ್ನು ತಿಳಿಯಪಡಿಸಿದ್ದೇನೆ.


ಸೌಲನ ಮಗಳಾದ ಮೀಕಲಳಿಗೆ ಜೀವದಿಂದಿರುವವರೆಗೂ ಮಕ್ಕಳೇ ಆಗಲಿಲ್ಲ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು