Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಹೋಶೇಯ 8:11 - ಕನ್ನಡ ಸತ್ಯವೇದವು J.V. (BSI)

11 ಎಫ್ರಾಯೀಮು ಯಜ್ಞವೇದಿಗಳನ್ನು ಹೆಚ್ಚೆಚ್ಚಾಗಿ ಕಟ್ಟಿ ಪಾಪಮಾಡಿದೆ; ಕಟ್ಟಿದ ಯಜ್ಞವೇದಿಗಳೇ ಅದಕ್ಕೆ ಪಾಪವಾಗಿ ಪರಿಣವಿುಸಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಎಫ್ರಾಯೀಮು ಯಜ್ಞವೇದಿಗಳನ್ನು ಹೆಚ್ಚೆಚ್ಚಾಗಿ ಕಟ್ಟಿ ಪಾಪಮಾಡಿದೆ; ಕಟ್ಟಿದ ಯಜ್ಞವೇದಿಗಳೇ ಅದಕ್ಕೆ ಪಾಪವಾಗಿ ಪರಿಣಮಿಸಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 “ಎಫ್ರಯಿಮ್ ಪಾಪಪರಿಹಾರಕ್ಕಾಗಿ ಬಲಿಪೀಠಗಳನ್ನು ಕಟ್ಟಿದೆ. ಆ ಬಲಿಪೀಠಗಳೇ ಅದರ ಪಾಪಕ್ಕೆ ಕಾರಣವಾಗಿ ಪರಿಣಮಿಸಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 “ಎಫ್ರಾಯೀಮ್ ಹೆಚ್ಚೆಚ್ಚಾಗಿ ಯಜ್ಞವೇದಿಕೆಗಳನ್ನು ಕಟ್ಟಿಸಿದನು. ಅದು ಪಾಪವಾಗಿತ್ತು. ಆ ವೇದಿಕೆಗಳ ಮೇಲೆಯೇ ಅವರು ಪಾಪಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 “ಎಫ್ರಾಯೀಮು ಪಾಪ ಪರಿಹಾರಕ್ಕಾಗಿ ಅನೇಕ ಬಲಿಪೀಠಗಳನ್ನು ಕಟ್ಟಿದ್ದರೂ, ಈ ಬಲಿಪೀಠಗಳೇ ಅವರ ಪಾಪಕ್ಕೆ ಕಾರಣವಾಗಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಹೋಶೇಯ 8:11
8 ತಿಳಿವುಗಳ ಹೋಲಿಕೆ  

ಗಿಲ್ಯಾದು ಅಧರ್ಮಮಯವೋ? ಅದು ಶೂನ್ಯದ ಗತಿಗೆ ಬರುವದು; ಗಿಲ್ಗಾಲಿನಲ್ಲಿ ಗೋಮೇಧವು ನಡೆಯುವದೋ? ಅಲ್ಲಿನ ಯಜ್ಞವೇದಿಗಳು ಹೊಲದ ನೇಗಿಲ ಗೆರೆಗಳಲ್ಲಿ ಕಲ್ಲುಕುಪ್ಪೆಗಳಾಗಿ ಸಿಕ್ಕುವವು.


ಇಸ್ರಾಯೇಲಿಗೆ ಪಾಪಾಸ್ಪದವಾದ ಆವೆನಿನ ಪೂಜಾಸ್ಥಾನಗಳು ನಾಶವಾಗುವವು; ಮುಳ್ಳುಗಿಡಗಳೂ ಕಳೆಗಳೂ ಅಲ್ಲಿನ ಯಜ್ಞವೇದಿಗಳ ಮೇಲೆ ಹುಟ್ಟುವವು; ಅಲ್ಲಿನ ಜನರು - ಬೆಟ್ಟಗಳೇ, ನಮ್ಮನ್ನು ಮುಚ್ಚಿಕೊಳ್ಳಿರಿ, ಗುಡ್ಡಗಳೇ, ನಮ್ಮ ಮೇಲೆ ಬೀಳಿರಿ ಎಂದು ಕೂಗಿಕೊಳ್ಳುವರು.


ನೀವಾಗಲಿ ನಿಮ್ಮ ಪಿತೃಗಳಾಗಲಿ ನೋಡದ ದೇಶಕ್ಕೆ ನಿಮ್ಮನ್ನು ಈ ದೇಶದೊಳಗಿಂದ ಎಸೆದುಬಿಡುವೆನು; ಅಲ್ಲಿ ಹಗಲಿರುಳೂ ಅನ್ಯದೇವತೆಗಳನ್ನು ಸೇವಿಸುವಿರಿ; ನಾನು ನಿಮಗೆ ದಯೆತೋರಿಸೆನು.


ನೀವು ಆ ದೇಶಗಳಲ್ಲಿ ಮನುಷ್ಯರು ಮಾಡಿಕೊಂಡ ದೇವರುಗಳನ್ನು ಅಂದರೆ ಮರದಲ್ಲಾಗಲಿ ಕಲ್ಲಿನಲ್ಲಾಗಲಿ ಕೆತ್ತಲ್ಪಟ್ಟು ನೋಡಲಾರದೆ ಕೇಳಲಾರದೆ ತಿನ್ನಲಾರದೆ ವಾಸನೆ ತಿಳುಕೊಳ್ಳಲಾರದೆ ಇರುವ ದೇವರುಗಳನ್ನು ಪೂಜಿಸುವವರಾಗುವಿರಿ.


ಯೆಹೂದದ ಪಾಪವು ಉಕ್ಕಿನ ಕಂಠದಿಂದಲೂ ವಜ್ರದ ಮೊನೆಯಿಂದಲೂ ಲಿಖಿತವಾಗಿದೆ; ಅವರ ಹೃದಯದ ಹಲಗೆಯಲ್ಲಿಯೂ ಅವರ ಯಜ್ಞವೇದಿಗಳ ಕೊಂಬುಗಳಲ್ಲಿಯೂ ಕೆತ್ತಿದೆ.


ಅವು ತಮ್ಮ ದೇವರ ಕಡೆಗೆ ತಿರುಗಿಕೊಳ್ಳಲು ಅವುಗಳ ದುಷ್ಕೃತ್ಯಗಳು ಬಿಡವು; ವ್ಯಭಿಚಾರ ಸ್ವಭಾವವು ಅವುಗಳಲ್ಲಿ ನೆಲೆಗೊಂಡಿದೆ, ಯೆಹೋವನನ್ನು ಅರಿಯವು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು