Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಹೋಶೇಯ 4:15 - ಕನ್ನಡ ಸತ್ಯವೇದವು J.V. (BSI)

15 ಇಸ್ರಾಯೇಲೇ, ನೀನು ಸೂಳೆಯಾಗಿ ನಡೆದರೂ ಯೆಹೂದವು ಆ ದೋಷಕ್ಕೆ ಒಳಗಾಗದಿರಲಿ; [ಯೆಹೂದ್ಯರೇ,] ಗಿಲ್ಗಾಲಿಗೆ ನೆರೆಯದಿರಿ, ಬೇತಾವೆನಿಗೆ ಯಾತ್ರೆ ಹೋಗಬೇಡಿರಿ, ಯೆಹೋವನ ಜೀವದಾಣೆ ಎಂದು ಶಪಥಮಾಡಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ಇಸ್ರಾಯೇಲೇ, ನೀನು ವ್ಯಭಿಚಾರಿಯಾಗಿ ನಡೆದರೂ ಯೆಹೂದವು ಆ ದೋಷಕ್ಕೆ ಒಳಗಾಗದಿರಲಿ. ಯೆಹೂದ್ಯರೇ, ಗಿಲ್ಗಾಲಿಗೆ ಸೇರಬೇಡಿರಿ, ಬೇತ್ ಅವೆನಿಗೆ ಯಾತ್ರೆ ಹೋಗಬೇಡಿರಿ, “ಯೆಹೋವನ ಜೀವದಾಣೆ” ಎಂದು ಶಪಥ ಮಾಡಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

15 “ಓ ಇಸ್ರಯೇಲ್ ನೀನು ವೇಶ್ಯೆಯಾಗಿ ನಡೆದರೂ ಜುದೇಯ ನಾಡು ಆ ದೋಷಕ್ಕೆ ಒಳಗಾಗದಿರಲಿ. ಯೆಹೂದ್ಯರೇ, ಗಿಲ್ಗಾಲಿಗೆ ಬರಬೇಡಿ. ಬೇತಾವೆನಿಗೆ ಯಾತ್ರೆ ಹೋಗಬೇಡಿ. ‘ಜೀವಸ್ವರೂಪನಾದ ಸರ್ವೇಶ್ವರನಾಣೆ’ ಎಂದು ಪ್ರಮಾಣಮಾಡಬೇಡಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 “ಇಸ್ರೇಲೇ, ನೀನು ಸೂಳೆಯಂತೆ ವರ್ತಿಸುತ್ತೀ. ಆದರೆ ಯೆಹೂದವನ್ನು ತಪ್ಪಿತಸ್ಥಳನ್ನಾಗಿ ಮಾಡಬೇಡ. ಗಿಲ್ಗಾಲಿಗಾಗಲಿ ಬೇತಾವೆನಿಗಾಗಲಿ ಹೋಗದಿರು. ಯೆಹೋವನ ಮೇಲೆ ಆಣೆ ಇಡಬೇಡ. ‘ಯೆಹೋವನಾಣೆ’ ಎಂದು ಹೇಳಬೇಡ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 “ಇಸ್ರಾಯೇಲೇ, ನೀನು ವ್ಯಭಿಚಾರ ಮಾಡಿದರೂ, ಯೆಹೂದವು ಆ ದೋಷಕ್ಕೆ ಒಳಗಾಗದಿರಲಿ. “ಗಿಲ್ಗಾಲಿಗೆ ಹೋಗದೆ, ಇಲ್ಲವೆ ಬೇತಾವೆನಿಗೆ ಏರದೇ, ‘ಯೆಹೋವ ದೇವರ ಜೀವದಾಣೆ,’ ಎಂದು ಪ್ರಮಾಣ ಮಾಡದೆ ಇರಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಹೋಶೇಯ 4:15
28 ತಿಳಿವುಗಳ ಹೋಲಿಕೆ  

ಗಿಲ್ಯಾದು ಅಧರ್ಮಮಯವೋ? ಅದು ಶೂನ್ಯದ ಗತಿಗೆ ಬರುವದು; ಗಿಲ್ಗಾಲಿನಲ್ಲಿ ಗೋಮೇಧವು ನಡೆಯುವದೋ? ಅಲ್ಲಿನ ಯಜ್ಞವೇದಿಗಳು ಹೊಲದ ನೇಗಿಲ ಗೆರೆಗಳಲ್ಲಿ ಕಲ್ಲುಕುಪ್ಪೆಗಳಾಗಿ ಸಿಕ್ಕುವವು.


ಅವರ ದುಷ್ಟತನವು ಗಿಲ್ಗಾಲಿನಲ್ಲಿ ತುಂಬಿದೆ; ಅಲ್ಲೇ ನನ್ನ ದ್ವೇಷಕ್ಕೆ ಗುರಿಯಾಗಿದ್ದಾರೆ; ಅವರ ದುಷ್ಕೃತ್ಯಗಳ ನಿವಿುತ್ತ ನಾನು ಅವರನ್ನು ನನ್ನ ನಿವಾಸದೊಳಗಿಂದ ಓಡಿಸಿಬಿಡುವೆನು; ಅವರನ್ನು ಇನ್ನು ಪ್ರೀತಿಸೆನು; ಅವರ ಅಧಿಕಾರಿಗಳೆಲ್ಲರೂ ದ್ರೋಹಿಗಳೇ ಸರಿ.


ಬೇತೇಲಿಗೆ ಬಂದು ದ್ರೋಹಮಾಡಿರಿ, ಗಿಲ್ಗಾಲಿನಲ್ಲಿ ನೆರೆದು ದ್ರೋಹವನ್ನು ಇನ್ನೂ ಹೆಚ್ಚಿಸಿರಿ; ಪ್ರತಿದಿನ ಬೆಳಿಗ್ಗೆ ನಿಮ್ಮ ಯಜ್ಞಗಳನ್ನು ಅರ್ಪಿಸಿರಿ, ಮೂರು ದಿನಕ್ಕೆ ಒಂದು ಸಲ ದಶಮಾಂಶವನ್ನು ಸಲ್ಲಿಸಿರಿ,


ದಾನೇ, ನಿನ್ನ ದೇವರ ಜೀವದಾಣೆ ಎಂತಲೂ ಬೇರ್ಷೆಬ ಮಾರ್ಗದ ಜೀವದಾಣೆ ಎಂತಲೂ ಸಮಾರ್ಯದ ಪಾಪಮೂರ್ತಿಯ ಮೇಲೆ ಪ್ರಮಾಣಮಾಡುವವರು ಬಿದ್ದುಹೋಗುವರು, ಮತ್ತೆ ಏಳರು.


ಬೇತೇಲನ್ನು ಆಶ್ರಯಿಸಬೇಡಿರಿ, ಗಿಲ್ಗಾಲನ್ನು ಸೇರಬಾರದು, ಬೇರ್ಷೆಬಕ್ಕೆ ಯಾತ್ರೆಹೋಗದಿರಿ; ಗಿಲ್ಗಾಲು ಗಡೀಪಾರಾಗುವದು, ಬೇತೇಲು ಬೈಲಾಗುವದು.


ಇಸ್ರಾಯೇಲಿಗೆ ಪಾಪಾಸ್ಪದವಾದ ಆವೆನಿನ ಪೂಜಾಸ್ಥಾನಗಳು ನಾಶವಾಗುವವು; ಮುಳ್ಳುಗಿಡಗಳೂ ಕಳೆಗಳೂ ಅಲ್ಲಿನ ಯಜ್ಞವೇದಿಗಳ ಮೇಲೆ ಹುಟ್ಟುವವು; ಅಲ್ಲಿನ ಜನರು - ಬೆಟ್ಟಗಳೇ, ನಮ್ಮನ್ನು ಮುಚ್ಚಿಕೊಳ್ಳಿರಿ, ಗುಡ್ಡಗಳೇ, ನಮ್ಮ ಮೇಲೆ ಬೀಳಿರಿ ಎಂದು ಕೂಗಿಕೊಳ್ಳುವರು.


ಸಮಾರ್ಯದ ನಿವಾಸಿಗಳು ಬೇತಾವೆನಿನ ಬಸವನ ವಿಷಯದಲ್ಲಿ ದಿಗಿಲುಪಡುವರು; ಅದರ ಭಕ್ತಜನರು ಅದಕ್ಕಾಗಿ ಎದೆಬಡಿದುಕೊಳ್ಳುವರು; ಅದರ ಮಹಿಮೆಯು ಅದರಿಂದ ತೊಲಗಿತಲ್ಲಾ ಎಂದು ಅದರ ಪೂಜಾರಿಗಳು ಅದಕ್ಕಾಗಿ ನಡುಗುವರು.


ಗಿಬ್ಯದಲ್ಲಿ ತುತೂರಿಯನ್ನೂದಿರಿ, ರಾಮದಲ್ಲಿ ಕೊಂಬು ಕೂಗಲಿ, ಬೇತಾವೆನಿನಲ್ಲಿ ಆರ್ಭಟಿಸಿರಿ,


ಜನರು ಯೆಹೋವನ ಜೀವದಾಣೆ ಎಂದರೂ ಆ ಆಣೆಯು ಸುಳ್ಳೇ ಸುಳ್ಳು [ಎಂದು ಯೆಹೋವನು ಅನ್ನುತ್ತಾನೆ].


ಕತ್ತಲೆಗೆ ಸಂಬಂಧವಾದ ಕೃತ್ಯಗಳಿಂದ ಯಾವ ಪ್ರಯೋಜನವೂ ಬರಲಾರದು; ಅವುಗಳಲ್ಲಿ ಪಾಲುಗಾರರಾಗಿರದೆ ಅವುಗಳನ್ನು ಬೈಲಿಗೆ ತಂದು ಖಂಡಿಸಿರಿ.


ಸುಡಲು ಬಂದ ದಾಯಾದಿಯು ಒಂದು ಹೆಣವನ್ನು ಮನೆಯೊಳಗಿಂದ ತೆಗೆದುಕೊಂಡು ಹೋಗಬೇಕೆಂದು ಅದನ್ನೆತ್ತಿ - ನಿನ್ನ ಹತ್ತಿರ ಇನ್ನು ಯಾರಾದರೂ ಇದ್ದಾರೋ ಎಂದು ಒಳಮನೆಯಲ್ಲಿರುವವನನ್ನು ಕೇಳುವಾಗ ಅವನು ಇಲ್ಲವೆನ್ನಲು ಇವನು ಯೆಹೋವನ ಹೆಸರನ್ನು ಎತ್ತಾನೆಂದು ದಾಯಾದಿಯು ಭಯಪಟ್ಟು ಸುಮ್ಮನಿರು ಎಂದು ಅವನನ್ನು ತಡೆಯುವನು.


ಎಫ್ರಾಯೀಮು ಸುಳ್ಳಿನಿಂದಲೂ ಇಸ್ರಾಯೇಲ್ ವಂಶವು ಮೋಸದಿಂದಲೂ ನನ್ನನ್ನು ಮುತ್ತಿಕೊಂಡಿವೆ; ಯೆಹೂದವು ಸತ್ಯಸಂಧನೂ ಸದಮಲಸ್ವಾವಿುಯೂ ಆದ ದೇವರ ಕಡೆಯಿಂದ ಇನ್ನೂ ಅಲೆದಾಡುತ್ತಿದೆ.


ನನ್ನ ಜನರು ತಮ್ಮ ಮರದ ತುಂಡನ್ನು ಪ್ರಶ್ನೆ ಕೇಳುತ್ತಾರೆ, ಅವರ ಕೋಲು ಅವರಿಗೆ ಅರುಹನ್ನು ಉಂಟುಮಾಡುತ್ತದೆ; ವ್ಯಭಿಚಾರ ಗುಣವು ಅವರನ್ನು ಭ್ರಾಂತಿಗೊಳಿಸಿದೆ; ತಮ್ಮ ದೇವರಿಗೆ ಪತಿಭಕ್ತಿಯನ್ನು ಸಲ್ಲಿಸದೆ ದ್ರೋಹಿಗಳಾಗಿದ್ದಾರೆ.


ಇಸ್ರಾಯೇಲ್ ವಂಶದವರೇ, ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ಹೋಗಿರಿ, ನಿಮ್ಮ ಬೊಂಬೆಗಳನ್ನು ಸೇವಿಸಿಕೊಳ್ಳಿರಿ; ಮುಂದಂತು ನನ್ನ ಮಾತನ್ನು ಕೇಳೇ ಕೇಳುವಿರಿ, ಇನ್ನು ಮೇಲೆ ನನ್ನ ಪರಿಶುದ್ಧನಾಮವನ್ನು ನಿಮ್ಮ ಬಲಿಗಳಿಂದಲೂ ಬೊಂಬೆಗಳಿಂದಲೂ ನೀವು ಅಪಕೀರ್ತಿಗೆ ಗುರಿಮಾಡುವದೇ ಇಲ್ಲ.


ಇಸ್ರಾಯೇಲೆಂಬ ಹೆಸರಿನವರೂ ಯೆಹೂದವಂಶೋತ್ಪನ್ನರೂ ಆದ ಯಾಕೋಬನ ಮನೆತನದವರೇ, ನೀವು ಯೆಹೋವನ ನಾಮದ ಮೇಲೆ ಆಣೆಯಿಟ್ಟು ಇಸ್ರಾಯೇಲಿನ ದೇವರನ್ನು ಸ್ಮರಿಸುತ್ತೀರಿ, ನಿಜ, ಆದರೆ ಈ ನಿಮ್ಮ ಕಾರ್ಯಗಳು ಸತ್ಯಕ್ಕೂ ಧರ್ಮಕ್ಕೂ ಅನುಸಾರವಾಗಿಲ್ಲ.


ಐಗುಪ್ತದಲ್ಲಿ ವಾಸವಾಗಿರುವ ಯೆಹೂದ್ಯರೇ, ನೀವೆಲ್ಲರೂ ಯೆಹೋವನ ಮಾತನ್ನು ಕೇಳಿರಿ; ಯೆಹೋವನು ಇಂತೆನ್ನುತ್ತಾನೆ - ಆಹಾ, ಕರ್ತನಾದ ಯೆಹೋವನ ಜೀವದಾಣೆ ಎಂದು ನನ್ನ ಹೆಸರನ್ನು ಬಾಯಿಂದ ಎತ್ತಲಿಕ್ಕೆ ಐಗುಪ್ತದಲ್ಲಿ ಯಾವ ಯೆಹೂದ್ಯನೂ ಇನ್ನಿರನು ಎಂಬದಾಗಿ ನನ್ನ ಮಹಾನಾಮದ ಮೇಲೆ ಆಣೆಯಿಟ್ಟಿದ್ದೇನೆ.


ಯೆಹೋವನು ಯೆಹೋಶುವನಿಗೆ - ನಾನು ಐಗುಪ್ತ್ಯರ ನಿಂದೆಯನ್ನು ಈ ಹೊತ್ತು ನಿಮ್ಮಿಂದ ನಿವಾರಿಸಿಬಿಟ್ಟಿದ್ದೇನೆಂದು ಹೇಳಿದ್ದರಿಂದ ಆ ಸ್ಥಳಕ್ಕೆ ಇಂದಿನವರೆಗೂ ಗಿಲ್ಗಾಲೆಂಬ ಹೆಸರಿರುತ್ತದೆ.


ಯೆಹೋಶುವನು ಜನರನ್ನು ಕರೆದು - ನೀವು ಗಟ್ಟಾ ಹತ್ತಿ ಬೇತೇಲಿನ ಪೂರ್ವಕ್ಕೂ ಬೇತಾವೆನಿನ ಸಮೀಪದಲ್ಲೂ ಇರುವ ಆಯಿ ಎಂಬ ಪ್ರಾಂತವನ್ನು ಸಂಚರಿಸಿ ನೋಡಿರಿ ಎಂದು ಹೇಳಿ ಅವರನ್ನು ಯೆರಿಕೋವಿನಿಂದ ಕಳುಹಿಸಿದನು. ಅವರು ಹೋಗಿ ಆಯಿ ಎಂಬ ಊರನ್ನು ಸಂಚರಿಸಿ ನೋಡಿ


ಇವನು ಇಸ್ರಾಯೇಲ್ಯರಂತೆ ನಡೆಯದೆ ತನ್ನ ತಂದೆಯ ದೇವರ ಭಕ್ತನಾಗಿ ಆತನ ಆಜ್ಞೆಗಳನ್ನು ಅನುಸರಿಸಿದನು.


ಮತ್ತು ಅವನು ಯೆಹೂದದ ಗುಡ್ಡಗಳಲ್ಲಿ ಪೂಜಾಸ್ಥಳಗಳನ್ನು ಏರ್ಪಡಿಸಿ ಯೆರೂಸಲೇವಿುನವರನ್ನು ದೇವದ್ರೋಹಮಾಡುವಂತೆ ಪ್ರೇರಿಸಿ ಯೆಹೂದ್ಯರನ್ನು ಸನ್ಮಾರ್ಗದಿಂದ ತಪ್ಪಿಸಿದನು.


ಎಫ್ರಾಯೀಮು ಮೇಯಿಸುವ ಮಂದೆಯು ಗಾಳಿಯೇ, ಹಿಂದಟ್ಟುವ ಬೇಟೆಯು ಮೂಡಣ ಗಾಳಿಯೇ; ಅದು ಮೋಸವನ್ನೂ ಹಿಂಸೆಯನ್ನೂ ನಿರಂತರ ಹೆಚ್ಚೆಚ್ಚಾಗಿ ನಡಿಸುತ್ತದೆ; ಅಶ್ಶೂರದೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳುತ್ತದೆ; ಐಗುಪ್ತಕ್ಕೆ ಎಣ್ಣೆಯನ್ನು [ಕಾಣಿಕೆಯಾಗಿ] ಕಳುಹಿಸುತ್ತದೆ.


ಯಾಕೋಬನು ಪದ್ದನ್ ಅರಾವಿುಗೆ ಓಡಿಹೋದನು; ಇಸ್ರಾಯೇಲನು ಮದುವೆಗಾಗಿ ಜೀತಮಾಡಿದನು, ಹೆಣ್ಣಿಗೋಸ್ಕರ [ಕುರಿಗಳನ್ನು] ಕಾದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು