Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಹೋಶೇಯ 12:12 - ಕನ್ನಡ ಸತ್ಯವೇದವು J.V. (BSI)

12 ಯಾಕೋಬನು ಪದ್ದನ್ ಅರಾವಿುಗೆ ಓಡಿಹೋದನು; ಇಸ್ರಾಯೇಲನು ಮದುವೆಗಾಗಿ ಜೀತಮಾಡಿದನು, ಹೆಣ್ಣಿಗೋಸ್ಕರ [ಕುರಿಗಳನ್ನು] ಕಾದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಯಾಕೋಬನು ಪದ್ದನ್ ಅರಾಮಿಗೆ ಓಡಿಹೋದನು; ಇಸ್ರಾಯೇಲನು ಮದುವೆಗಾಗಿ ಜೀತಮಾಡಿದನು, ಹೆಣ್ಣಿಗೋಸ್ಕರ ಕುರಿಗಳನ್ನು ಕಾದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ಯಕೋಬನು ಮೆಸಪಟೋಮಿಯಕ್ಕೆ ಓಡಿಹೋಗಬೇಕಾಯಿತು. ಅಲ್ಲಿ ಮದುವೆಗೋಸ್ಕರ ಜೀತಮಾಡಿದನು; ವಧುವಿಗೋಸ್ಕರ ಕುರಿ ಕಾಯ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 “ಯಾಕೋಬನು ಅರಾಮ್ ದೇಶಕ್ಕೆ ಓಡಿಹೋದನು. ಅಲ್ಲಿ ಇಸ್ರೇಲನು ಒಬ್ಬ ಹೆಂಡತಿಗಾಗಿ ಸೇವೆ ಮಾಡಿದನು. ಇನ್ನೊಂದು ಹೆಂಡತಿಯನ್ನು ಮಾಡಿಕೊಳ್ಳಲಿಕ್ಕೆ ಕುರಿಗಳನ್ನು ಕಾಯ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ಯಾಕೋಬನು ಸಿರಿಯಾ ದೇಶಕ್ಕೆ ಓಡಿಹೋದನು. ಇಸ್ರಾಯೇಲನು ಹೆಂಡತಿಯ ನಿಮಿತ್ತ ಸೇವೆಮಾಡಿ, ಹೆಂಡತಿಯ ನಿಮಿತ್ತ ಕುರಿಗಳನ್ನು ಕಾದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಹೋಶೇಯ 12:12
9 ತಿಳಿವುಗಳ ಹೋಲಿಕೆ  

ಇಪ್ಪತ್ತು ವರುಷ ನಿನ್ನ ಮನೆಯಲ್ಲಿದ್ದೆನು; ನಿನ್ನಿಬ್ಬರ ಹೆಣ್ಣುಮಕ್ಕಳಿಗಾಗಿ ಹದಿನಾಲ್ಕು ವರುಷವೂ ನಿನ್ನ ಆಡುಕುರಿಗಳಿಗಾಗಿ ಆರು ವರುಷವೂ ಸೇವೆ ಮಾಡಿದೆನು. ನೀನು ಹತ್ತು ಸಾರಿ ನನ್ನ ಸಂಬಳವನ್ನು ಬದಲಾಯಿಸಿದಿ.


ಆದದರಿಂದ ಮಗನೇ, ನನ್ನ ಮಾತನ್ನು ಕೇಳು; ನೀನು ಎದ್ದು ಖಾರಾನ್ ಊರಿನಲ್ಲಿರುವ ನನ್ನಣ್ಣನಾದ ಲಾಬಾನನ ಬಳಿಗೆ ಓಡಿಹೋಗಿ ಕೆಲವು ಕಾಲ,


ನೀವು ನಿಮ್ಮ ದೇವರಾದ ಯೆಹೋವನ ಸನ್ನಿಧಿಯಲ್ಲಿ - ಅರಾಮ್ಯನಾದ ನಮ್ಮ ಮೂಲಪಿತೃವು ಗತಿಯಿಲ್ಲದವನಾಗಿ ಸ್ವಲ್ಪ ಮಂದಿಯೊಡನೆ ಐಗುಪ್ತದೇಶಕ್ಕೆ ಹೋಗಿ ಅಲ್ಲಿ ಇಳಿದುಕೊಂಡನು. ಅಲ್ಲಿ ಅವನ ಸಂತಾನದವರು ಹೆಚ್ಚಿ ಮಹಾಬಲಿಷ್ಠ ಜನಾಂಗವಾದರು.


ನಾನು ಸೇವೆ ಮಾಡಿ ಪಡಕೊಂಡ ಹೆಂಡತಿಯರನ್ನೂ ನನ್ನ ಮಕ್ಕಳನ್ನೂ ನನಗೆ ಒಪ್ಪಿಸು; ನಾನು ಹೋಗುತ್ತೇನೆ. ನಾನು ನಿನಗೆ ಮಾಡಿದ ಸೇವೆ ನಿನಗೆ ತಿಳಿದೇ ಅದೆ ಎಂದು ಹೇಳಲು


ಇಸ್ರಾಯೇಲೇ, ನೀನು ಸೂಳೆಯಾಗಿ ನಡೆದರೂ ಯೆಹೂದವು ಆ ದೋಷಕ್ಕೆ ಒಳಗಾಗದಿರಲಿ; [ಯೆಹೂದ್ಯರೇ,] ಗಿಲ್ಗಾಲಿಗೆ ನೆರೆಯದಿರಿ, ಬೇತಾವೆನಿಗೆ ಯಾತ್ರೆ ಹೋಗಬೇಡಿರಿ, ಯೆಹೋವನ ಜೀವದಾಣೆ ಎಂದು ಶಪಥಮಾಡಬಾರದು.


ಗಿಲ್ಯಾದು ಅಧರ್ಮಿಗಳು ತುಂಬಿದ ಪಟ್ಟಣ, ಅಲ್ಲಿ ಹೆಜ್ಜೆಜಾಡುಗಳು ರಕ್ತಮಯವೇ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು