ಹೋಶೇಯ 10:4 - ಕನ್ನಡ ಸತ್ಯವೇದವು J.V. (BSI)4 ಹರಟೆಹರಟುತ್ತಾರೆ, ಸುಳ್ಳಾಣೆಯಿಡುತ್ತಾರೆ, ಸಂಧಾನಮಾಡಿಕೊಳ್ಳುತ್ತಾರೆ; ಅಲ್ಲಿನ ನ್ಯಾಯವು ನೇಗಿಲಗೆರೆಗಳಲ್ಲಿ ಹುಟ್ಟುವ ವಿಷದ ಕಳೆಗಳಂತಿದೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20194 ಹರಟೆಹರಟುತ್ತಾರೆ, ಸುಳ್ಳಾಣೆಯಿಡುತ್ತಾರೆ, ಸಂಧಾನ ಮಾಡಿಕೊಳ್ಳುತ್ತಾರೆ; ಅಲ್ಲಿನ ನ್ಯಾಯವು ನೇಗಿಲಗೆರೆಗಳಲ್ಲಿ ಹುಟ್ಟುವ ವಿಷದ ಕಳೆಗಳಂತಿದೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)4 ಅವರು ಹರಟೆಹೊಡೆಯುತ್ತಾರೆ; ಸುಳ್ಳಾಣೆ ಇಟ್ಟು ಸಂಧಾನಮಾಡಿಕೊಳ್ಳುತ್ತಾರೆ. ಉತ್ತಹೊಲದಲ್ಲಿ ಬೆಳೆಯುವ ವಿಷದ ಕಳೆಗಳಂತೆ ನ್ಯಾಯಸ್ಥಾನಕ್ಕೆ ಬರುವ ಅವರ ವಾದವಿವಾದಗಳು ಹೆಚ್ಚಿಕೊಳ್ಳುತ್ತವೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್4 ಅವರು ವಾಗ್ದಾನ ಮಾಡುತ್ತಾರೆ. ಆದರೆ ಅದು ಕೇವಲ ಸುಳ್ಳು, ಅವರು ಕೊಟ್ಟ ಮಾತನ್ನು ನಡಿಸುವದಿಲ್ಲ. ಬೇರೆ ದೇಶಗಳವರೊಂದಿಗೆ ಅವರು ಒಪ್ಪಂದ ಮಾಡುತ್ತಾರೆ. ದೇವರು ಆ ಒಪ್ಪಂದವನ್ನು ಒಪ್ಪುವುದಿಲ್ಲ. ಅವರ ನ್ಯಾಯಾಧೀಶರು ಉತ್ತ ಹೊಲದಲ್ಲಿ ಬೆಳೆಯುವ ವಿಷದ ಹಣಜಿಯಂತಿದ್ದಾರೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ4 ಅವರು ಮಾತುಗಳನ್ನಾಡಿ ಒಡಂಬಡಿಕೆಯನ್ನು ಮಾಡುವುದಕ್ಕೆ ಸುಳ್ಳು ಪ್ರಮಾಣವನ್ನು ಮಾಡುತ್ತಾರೆ. ಆದ್ದರಿಂದ ನ್ಯಾಯತೀರ್ಪು ವಿಷದ ಕಳೆಯ ಹಾಗೆ ಹೊಲದ ಸಾಲುಗಳಲ್ಲಿ ಮೊಳೆಯುತ್ತದೆ. ಅಧ್ಯಾಯವನ್ನು ನೋಡಿ |