Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ವಿಮೋಚನಕಾಂಡ 4:3 - ಕನ್ನಡ ಸತ್ಯವೇದವು J.V. (BSI)

3 ಯೆಹೋವನು ಅವನಿಗೆ - ಅದನ್ನು ನೆಲದಲ್ಲಿ ಬೀಸಾಡು ಎಂದು ಹೇಳಿದನು. ನೆಲದಲ್ಲಿ ಬೀಸಾಡುತ್ತಲೇ ಅದು ಹಾವಾಯಿತು; ಮೋಶೆ ಅದಕ್ಕೆ ಭಯಪಟ್ಟು ಓಡಿಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಯೆಹೋವನು ಅವನಿಗೆ, “ಅದನ್ನು ನೆಲದ ಮೇಲೆ ಹಾಕು” ಎಂದನು. ಅವನು ನೆಲದಲ್ಲಿ ಹಾಕುತ್ತಲೇ ಅದು ಹಾವಾಯಿತು! ಮೋಶೆ ಅದಕ್ಕೆ ಭಯಪಟ್ಟು ಓಡಿಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 ಸರ್ವೇಶ್ವರ ಅವನಿಗೆ, “ಅದನ್ನು ನೆಲದಲ್ಲಿ ಬಿಸಾಡು,” ಎಂದರು. ನೆಲದಲ್ಲಿ ಬಿಸಾಡುತ್ತಲೇ ಅದು ಹಾವಾಯಿತು! ಅದನ್ನು ಕಂಡ ಮೋಶೆ ಭಯಪಟ್ಟು ಓಡಿಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ಆಗ ಯೆಹೋವನು, “ನಿನ್ನ ಊರುಗೋಲನ್ನು ನೆಲದ ಮೇಲೆ ಬಿಸಾಡು” ಅಂದನು. ಮೋಶೆ, ತನ್ನ ಊರುಗೋಲನ್ನು ನೆಲದ ಮೇಲೆ ಬಿಸಾಡಿದನು. ಆಗ ಕೋಲು ಹಾವಾಯಿತು. ಮೋಶೆ ಅದರ ಬಳಿಯಿಂದ ಓಡಿಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 ಯೆಹೋವ ದೇವರು ಅವನಿಗೆ, “ಅದನ್ನು ನೆಲದ ಮೇಲೆ ಬಿಸಾಡು,” ಎಂದರು. ಅವನು ಅದನ್ನು ನೆಲದ ಮೇಲೆ ಬಿಸಾಡಿದನು. ಆಗ ಅದು ಸರ್ಪವಾಯಿತು. ಮೋಶೆ ಅಲ್ಲಿಂದ ಓಡಿಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ವಿಮೋಚನಕಾಂಡ 4:3
5 ತಿಳಿವುಗಳ ಹೋಲಿಕೆ  

ಸಿಂಹದ ಕಡೆಯಿಂದ ಓಡಿದವನಿಗೆ ಕರಡಿಯು ಎದುರುಬಿದ್ದಂತಾಗುವದು; ಅವನು ಮನೆಗೆ ಓಡಿಬಂದು ಕೈಯನ್ನು ಗೋಡೆಯ ಮೇಲೆ ಊರಲು ಹಾವು ಕಚ್ಚಿದ ಹಾಗಾಗುವದು.


ಇದಲ್ಲದೆ ಈ ಕೋಲನ್ನು ಕೈಯಲ್ಲಿ ತೆಗೆದುಕೊಂಡು ಹೋಗಬೇಕು; ಇದರಿಂದಲೇ ಆ ಮಹತ್ಕಾರ್ಯಗಳನ್ನು ಮಾಡುವಿ ಅಂದನು.


ಯೆಹೋವನು ಅವನಿಗೆ - ನಿನ್ನ ಕೈಚಾಚಿ ಅದರ ಬಾಲವನ್ನು ಹಿಡಿ ಎಂದು ಹೇಳಿದನು. ಹಿಡಿದಾಗ ಅದು ಕೋಲಾಯಿತು.


ಫರೋಹನು ನಿಮಗೆ - ನಾನು ನಿಮ್ಮ ಮಾತನ್ನು ನಂಬುವಂತೆ ನೀವು ಮಹತ್ಕಾರ್ಯವನ್ನು ನನ್ನ ಮುಂದೆ ಮಾಡಬೇಕೆಂದು ಹೇಳಿದರೆ ಮೋಶೆಯು ಆರೋನನಿಗೆ - ನಿನ್ನ ಕೈಯಲ್ಲಿರುವ ಕೋಲನ್ನು ಫರೋಹನ ಮುಂದೆ ನೆಲದಲ್ಲಿ ಬೀಸಾಡು ಎಂದು ಹೇಳಬೇಕು, ಅದು ಸರ್ಪವಾಗುವದು ಎಂದು ಆಜ್ಞಾಪಿಸಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು